ನಿಖಿಲ್ ಕುಮಾರಸ್ವಾಮಿ (Nikhil kumarswamy) ಕನ್ನಡ ಚಿತ್ರರಂಗದ ಯುವರಾಜ. ಇದೀಗ ಲೈಕಾ ಪ್ರೊಡಕ್ಷನ್ಸ್ (Lyca production) ನಿರ್ಮಾಣದ ಹೊಸ ಚಿತ್ರದಲ್ಲಿ ನಟಿಸುತ್ತಿರೋ ನಿಖಿಲ್, ಅತ್ತ ಕೃಷಿಕರಾಗಿ, ಇತ್ತ ರಾಜಕಾರಣಿಯಾಗಿ, ಸಿನಿಮಾ ನಟರಾಗಿ ಆಕ್ಟಿವ್ ಆಗಿದ್ದಾರೆ. ಇದೆಲ್ಲದರ ನಡುವೆ ಅಪ್ಪನ ಡ್ಯೂಟಿ ಮರೆಯೋಕಾಗೋದಿಲ್ಲ ಅಲ್ವಾ.. ಫಿಟ್ ನೆಸ್ ಬಿಡೋಕಾಗಲ್ಲ ಅಲ್ವಾ..
ನಿಖಿಲ್ ಜಿಮ್ʻನಲ್ಲಿ ವರ್ಕೌಟ್ (gym workout) ಶುರು ಮಾಡಿದ್ದು, ಜಿಮ್ನಲ್ಲಿ ಅವರ ಮಗ ಜೂನಿಯರ್ ನಿಖಿಲ್ (junior nikhil) ಸಾಥ್ ನೀಡಿದ್ದಾರೆ.
ಸಿನಿಮಾ ನಟ ನಿಖಿಲ್ ಕುಮಾರಸ್ವಾಮಿ ಫಿಟ್ನೆಸ್ ವಿಚಾರದಲ್ಲೂ ಶಿಸ್ತು ಕಾಪಾಡಿಕೊಂಡು ಬಂದಿದ್ದು, ಇದೀಗ ನಿಖಿಲ್ ತಮ್ಮ ಮಗನ ಜೊತೆ ಜಿಮ್ನಲ್ಲಿ ವರ್ಕೌಟ್ ಮಾಡಿದ್ದಾರೆ. ಅವ್ಯಾನ್ ದೇವ್ (Avyaan Dev) ಜಿಮ್ನಲ್ಲಿ ಅಪ್ಪನಿಗೆ ಸಾಥ್ ನೀಡಿದ್ದಾರೆ. ಡಂಬಲ್ ಹಿಡಿದ ಅಪ್ಪನ ಜೊತೆ ಫೋಟೋಗಳಿಗೆ ಸಖತ್ತಾಗಿ ಪೋಸ್ ಕೊಟ್ಟಿದ್ದಾರೆ.
ಮಗನ ಜೊತೆ ಜಿಮ್ನಲ್ಲಿ ಕಾಲ ಕಳೆದ ಫೋಟೋಗಳನ್ನು ನಟ ನಿಖಿಲ್ ಕುಮಾರಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಫೋಟೋಗಳು ವೈರಲ್ ಆಗಿದೆ. ಇತ್ತಿಚೆಗಷ್ಟೇ ನಿಖಿಲ್ ಮಗ ಅವ್ಯಾನ್ ದೇವ್ ಮೊದಲ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಅವ್ಯಾನ್ ಅಂದ್ರೆ ವಿಷ್ಣು ದೇವರ ಹೆಸರಾಗಿದೆ. ದೇವ್ ಅಂದ್ರೆ ದೇವೇಗೌಡರು ನನ್ನ ತಾತನ ಹೆಸರು ಇಟ್ಟಿದ್ದೇವೆ ಎಂದು ನಿಖಿಲ್ ಕುಮಾರಸ್ವಾಮಿ ಈ ಹಿಂದೆ ಹೇಳಿದ್ದರು.



