ಒಂದು ಕಡೆ ರಾಜಕೀಯ.. ಇನ್ನೊಂದು ಕಡೆ ಸಿನಿಮಾ. ಎರಡು ದೋಣಿಗಳ ಮೇಲೆ ಕಾಲಿಟ್ಟಿರುವ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಸಿನಿಮಾಗಳು ವಿಳಂಬವಾಗುತ್ತಿವೆ. ಇದೀಗ ನಿಖಿಲ್ ಕುಮಾರಸ್ವಾಮಿಯವರ (Nikhil Kumaraswamy) ಹೊಸ ಸಿನಿಮಾ ಸೆಟ್ಟೇರಲು ಸಿದ್ಧವಾಗಿದೆ. ನಿಖಿಲ್ (Nikhil Kumaraswamy) ಅವರ ಹೊಸ ಸಿನಿಮಾ ಸೆಟ್ಟೇರುತ್ತಿರುವುದು ಲೈಕಾ ಪ್ರೊಡಕ್ಷನ್ಸ್ ನವರ ಬ್ಯಾನರಿನಲ್ಲಿ.
ನಿಖಿಲ್ ಕುಮಾರ್ (Nikhil Kumaraswamy) ನಟನೆಯ ಸಿನಿಮಾ ಮೂಲಕ ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ‘ಲೈಕಾ ಪ್ರೊಡಕ್ಷನ್ಸ್’ (Lyca Productions) ಕಾಲಿಡುತ್ತಿದೆ ಎಂಬುದು ವಿಶೇಷ. ಈ ಚಿತ್ರದ ಶೀರ್ಷಿಕೆ ಏನು? ನಿಖಿಲ್ ಕುಮಾರ್ಗೆ ಆ್ಯಕ್ಷನ್-ಕಟ್ ಹೇಳಲಿರುವ ನಿರ್ದೇಶಕರು ಯಾರು? ಪಾತ್ರವರ್ಗದಲ್ಲಿ ಯಾರೆಲ್ಲ ಇರಲಿದ್ದಾರೆ ಹೀಗೆ ಹಲವು ವಿಷಯಗಳಿಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ.
ರೈಡರ್ ನಂತರ ನಿಖಿಲ್ ಅವರ ಹೊಸ ಸಿನಿಮಾ ಬಂದಿಲ್ಲ. ಹಲವು ಚಿತ್ರಗಳು ಸದ್ದು ಮಾಡಿದವಾದರೂ ಸೆಟ್ಟೇರಲಿಲ್ಲ. ಇದೀಗ ಲೈಕಾ ಪ್ರೊಡಕ್ಷನ್ಸ್‍ನಂತಹ (Lyca Productions) ಬ್ಯಾನರ್ ಸಿನಿಮಾ ಕೈಗೆತ್ತಿಕೊಂಡಿದೆ. 2014ರಲ್ಲಿ ತೆರೆಕಂಡ ‘ಕತ್ತಿ’ (katti) ಮೂಲಕ ಸಿನಿಮಾ ನಿರ್ಮಾಣಕ್ಕೆ ಲೈಕಾ ಪ್ರೊಡಕ್ಷನ್ಸ್ (Lyca Productions) ಎಂಟ್ರಿ ಕೊಟ್ಟಿತು. ಈವರೆಗೂ 20ಕ್ಕೂ ಅಧಿಕ ಸಿನಿಮಾಗಳನ್ನು ನಿರ್ಮಿಸಿದೆ. ಇದರಲ್ಲಿ ಖೈದಿ ನಂ.150 (Khaidi No.150), 2.0 (2.0), ವಡಾ ಚನ್ನೈ (Vadachennai), ದರ್ಬಾರ್ (Darbar), ಡಾನ್ (Don), ಪೊನ್ನಿಯಿನ್ ಸೆಲ್ವನ್ 1 & 2 (Ponnian Selvan) ಥರದ ಬಿಗ್ ಬಜೆಟ್ ಸಿನಿಮಾಗಳಿವೆ. ಸೂಪರ್ ಸ್ಟಾರ್ ರಜನಿಕಾಂತ್ (Rajinikanth), ಕಮಲ್ ಹಾಸನ್(kamal hassan), ‘ಮೆಗಾ ಸ್ಟಾರ್’ ಚಿರಂಜೀವಿ (Megastar Chiranjeevi), ‘ದಳಪತಿ’ ವಿಜಯ್ (Ilaya thalapathi Vijay), ಧನುಷ್ (Dhanush), ಸೂರ್ಯ(Surya), ವಿಕ್ರಮ್(Vikram), ಕಾರ್ತಿ(karthi), ಶಿವಕಾರ್ತಿಕೇಯನ್ (Shivakarthikeyan) ಅವರಂತಹ ಸ್ಟಾರ್ ನಟರು ಲೈಕಾ ಪ್ರೊಡಕ್ಷನ್ಸ್ ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರೆ. ಸದ್ಯ ಈ ಬ್ಯಾನರ್ನಲ್ಲಿ ಇಂಡಿಯನ್ 2(Indian 2), ಚಂದ್ರಮುಖಿ 2 (Chandramukhi 2), ಲಾಲ್ ಸಲಾಮ್(Lal Salam), ವಿಡಮುಯರ್ಚಿ ಥರದ ಬಹುನಿರೀಕ್ಷಿತ ಸಿನಿಮಾಗಳು ತಯಾರಾಗುತ್ತಿವೆ. ಈಗ ನಿಖಿಲ್ ಸಿನಿಮಾ ಕೂಡ ಇದೇ ಬ್ಯಾನರ್ನಲ್ಲೇ ಸೆಟ್ಟೇರುತ್ತಿದೆ.



