Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

ಯಡಿಯೂರಪ್ಪ ಊರಲ್ಲಿ ನಿಖಿಲ್‌ : ಕುಮಾರಸ್ವಾಮಿಯನ್ನು ಮತ್ತೆ ಸಿಎಂ ಮಾಡುವ ಪ್ರತಿಜ್ಞೆ..!

SpeciallU by SpeciallU
July 24, 2025
in News, Politics
Reading Time: 1 min read
0 0
0
ಯಡಿಯೂರಪ್ಪ ಊರಲ್ಲಿ ನಿಖಿಲ್‌ : ಕುಮಾರಸ್ವಾಮಿಯನ್ನು ಮತ್ತೆ ಸಿಎಂ ಮಾಡುವ ಪ್ರತಿಜ್ಞೆ..!

ನಿಖಿಲ್‌ ಕುಮಾರಸ್ವಾಮಿ, ಈಗ ರಾಜ್ಯಾದ್ಯಂತ ಜೆಡಿಎಸ್‌ ಸದಸ್ಯತ್ವ ಅಭಿಯಾನ ನಡೆಸುತ್ತಿದ್ಧಾರೆ. ಆ ಹಾದಿಯಲ್ಲಿ ನಿಖಿಲ್‌, ಈಗ ಯಡಿಯೂರಪ್ಪ ಊರಿಗೂ ಬಂದಿದ್ದಾರೆ. ಅಂದರೆ.. ಶಿವಮೊಗ್ಗಕ್ಕೆ. ಶಿವಮೊಗ್ಗ, ರಾಜ್ಯ ಬಿಜೆಪಿಯ ಹಾರ್ಟು ಎಂದರೆ ತಪ್ಪಾಗಲ್ಲ. ಅದು ರಾಜ್ಯ  ಬಿಜೆಪಿಯ ಬಿಗ್‌ ಬಾಸ್‌ ತವರು. ಯಡಿಯೂರಪ್ಪ, ವಿಜಯೇಂದ್ರ, ರಾಘವೇಂದ್ರ ಅವರ ಕರ್ಮಭೂಮಿ. ಅಲ್ಲಿ ನಿಂತು ಮಾತನಾಡಿರುವ ನಿಖಿಲ್‌ ಕುಮಾರಸ್ವಾಮಿ ಟಾಂಟ್‌ ಕೊಟ್ಟಿರೋದು ಸಿಎಂ ಸಿದ್ಧರಾಮಯ್ಯ ಅವರಿಗೆ.. ಅಷ್ಟೇ ಅಲ್ಲ.. ಅವರ ಇನ್ನೊಂದು ಮಾತು.. ನೇರವಾಗಿ ವಿಜಯೇಂದ್ರ ಅವರಿಗೂ ಟಚ್‌ ಆಗಿದೆ. ಏಕೆಂದರೆ.. ಅದು ಕೇವಲ ಹೇಳಿಕೆ ಅಲ್ಲ.. ಪ್ರತಿಜ್ಞೆ. ಕುಮಾರಸ್ವಾಮಿಯನ್ನು ಮತ್ತೆ ಸಿಎಂ ಮಾಡುವ ಪ್ರತಿಜ್ಞೆ.

ಸಿದ್ಧರಾಮಯ್ಯ ಪದೇ ಪದೇ ಹೇಳುವ ಮಾತು.. ಜೆಡಿಎಸ್‌ ಅತೀ ಹೆಚ್ಚು ಸ್ಥಾನ ಗೆದ್ದಿದ್ದು ತಾವು ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿದ್ದಾಗ. ನಾನು ಜೆಡಿಎಸ್‌ ಬಿಟ್ಟ ಮೇಲೆ ಅದು ಹೀನಾಯ ಪರಿಸ್ಥಿತಿಗೆ ತಲುಪಿದೆ ಎನ್ನುವ ಮಾತು.  58 ಸ್ಥಾನಗಳನ್ನು ಪಡೆದಿದ್ದ ಜೆಡಿಎಸ್, ನಂತರದ ಚುನಾವಣೆಗಳಲ್ಲಿ ಕುಸಿತ ಕಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಹೇಳುತ್ತಲೇ ಇರುತ್ತಾರೆ. ಅದಕ್ಕೆ ನಿಖಿಲ್‌ ಉತ್ತರ ಕೊಟ್ಟಿದ್ದಾರೆ.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಮೈಸೂರಿನಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್‌ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಹೀಗಾಗಿ, 2028ರ ಸಾರ್ವತ್ರಿಕ ಚುನಾವಣೆಯಲ್ಲಿ ಅತಿ ಹೆಚ್ಚು ಜೆಡಿಎಸ್‌ ಶಾಸಕರನ್ನು ಗೆಲ್ಲಿಸುವ ಮೂಲಕ ಸಿದ್ದರಾಮಯ್ಯನವರಿಗೆ ಉತ್ತರ ನೀಡಬೇಕಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಎಂದು ಹೇಳಿದ್ದಾರೆ.

ಶಿವಮೊಗ್ಗದ ದೈವಜ್ಞ ಕಲ್ಯಾಣ ಮಂದಿರದಲ್ಲಿ  ಜೆಡಿಎಸ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿಖಿಲ್‌, ʻʻಹೆಚ್‌.ಡಿ.ಕುಮಾರಸ್ವಾಮಿಯವರು ಕೇಂದ್ರಕ್ಕೆ ಹೋಗಬೇಕೆಂಬುದು ಅವರ ಮನಸ್ಸಿನಲ್ಲಿ ಇರಲಿಲ್ಲ, ಕಾರ್ಯಕರ್ತರ ಮನಸ್ಸಿನಲ್ಲೂ ಇರಲಿಲ್ಲ. ವಿಧಾನಸಭಾ ಕಲಾಪದಲ್ಲಿ ಕುಮಾರಸ್ವಾಮಿಯವರು ಇದ್ದಿದ್ದರೆ ಯಾವ ರೀತಿ ತೊಡೆ ತಟ್ಟಿ ಮಾತನಾಡುತ್ತಿದ್ದರು ಎಂಬುದನ್ನು ನೋಡಿದ್ದೇವೆ. ಸದನದಲ್ಲಿ ಬಹಳಷ್ಟು ಜನ ಕುಮಾರಣ್ಣರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಮುಂದೆ ಕುಮಾರಸ್ವಾಮಿ ಅವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಬೇಕಿದೆ ಎಂದರು.

ಇದೆಲ್ಲವೂ ನಡೆದಿರುವುದು ಶಿವಮೊಗ್ಗದಲ್ಲಿ ಎನ್ನುವುದು ಗಮನಾರ್ಹ. ಕುಮಾರಸ್ವಾಮಿ ಅವರನ್ನು ಮತ್ತೆ ಸಿಎಂ ಮಾಡುವ ಗುರಿ ಇಟ್ಟುಕೊಳ್ಳುವುದು ಜೆಡಿಎಸ್‌ ಪಕ್ಷಕ್ಕೆ ತಪ್ಪೇನಲ್ಲ. ಅದರೆ.. ರಾಜ್ಯದಲ್ಲಿ ಜೆಡಿಎಸ್‌, ಬಿಜೆಪಿ ಜೊತೆ ಮೈತ್ರಿಯಲ್ಲಿದೆ. ಏನೇ ಲೆಕ್ಕಾಚಾರ ಹಾಕಿದರೂ.. ಜೆಡಿಎಸ್‌, ಬಿಜೆಪಿಯೊಂದಿಗೆ 2ನೇ ಪಕ್ಷವೇ ಹೊರತು, ದೊಡ್ಡಣ್ಣನಾಗಲು ಸಾಧ್ಯವಿಲ್ಲ. ಹೀಗಿರುವಾಗ.. ಹಾಲಿ ಬಿಜೆಪಿ ಅಧ್ಯಕ್ಷರ ತವರು ಭೂಮಿಯಲ್ಲಿ ನಿಂತು.. ಇಂಥಾದ್ದೊಂದು ಮಾತು ಹೇಳಿರುವುದು ಹಲವು ಪ್ರಶ್ನೆ ಹುಟ್ಟುಹಾಕಿರುವುದು ಸುಳ್ಳಲ್ಲ.

ಅಂದಹಾಗೆ ದೆಹಲಿ ಮಟ್ಟದಲ್ಲಿ ವಿಜಯೇಂದ್ರ ಅವರ ಬದಲಿಗೆ ಬೇರೊಬ್ಬರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಪ್ರಕ್ರಿಯೆಗೆ ಕುಮಾರಸ್ವಾಮಿ ಒಳಗೊಳಗೇ ಬೆಂಬಲ ನೀಡುತ್ತಿದ್ದಾರೆ. ವಿ ಸೋಮಣ್ಣ ಅವರ ಹೆಸರು ತೇಲಿ ಬರುತ್ತಿರುವುದಕ್ಕೆ ಕಾರಣವೇ ಕುಮಾರಸ್ವಾಮಿ ಎಂಬ ಮಾತುಗಳೂ ದೆಹಲಿ ಮಟ್ಟದಲ್ಲಿ ಜೋರಾಗಿವೆ. ಆರಂಭದಲ್ಲಿ ಅಧ್ಯಕ್ಷ ಪಟ್ಟಕ್ಕೆ ಒಲ್ಲೆ ಎನ್ನುತ್ತಿದ್ದ ಸೋಮಣ್ಣ ಅವರ ಮಾತು, ಈಗ ಮೊದಲಿನಂತೆ ಗಟ್ಟಿಯಾಗಿಲ್ಲ. ಅದಕ್ಕೂ ಕೂಡಾ ಕಾರಣ ಕುಮಾರಸ್ವಾಮಿ ಎನ್ನಲಾಗುತ್ತಿದೆ. ಜೊತೆಗೆ ಯಡಿಯೂರಪ್ಪ ಊರಿನಲ್ಲಿ ನಿಂತೇ.. ಕುಮಾರಸ್ವಾಮಿ ಅವರನ್ನು ಮತ್ತೆ ಸಿಎಂ ಮಾಡುವ ಪ್ರತಿಜ್ಞೆ ಮಾಡಿದ್ದಾರೆ ನಿಖಿಲ್.

Tags: #ಯಡಿಯೂರಪ್ಪ #ಕುಮಾರಸ್ವಾಮಿ #ನಿಖಿಲ್ ಕುಮಾರಸ್ವಾಮಿ #ಶಿವಮೊಗ್ಗ #ದೈವಜ್ಞ ಕಲ್ಯಾಣ ಮಂದಿರ #Yadiyoorappa #Kumaraswamy #Nikhil Kumaraswamy #Shivamogga #Daivajna Kalyana Mandira
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.