ದೇಶದಲ್ಲಿ ಮಹಾರಾಷ್ಟ್ರ, ಜಾರ್ಖಂಡ್‌ನತ್ತ ಎಲ್ಲರ ಕಣ್ಣು ನೆಟ್ಟಿದ್ದರೆ ಕರ್ನಾಟಕದ ಜನ ಕುತೂಹಲಿಗಳಾಗಿರುವುದು 3 ಬೈಎಲೆಕ್ಷನ್ ರಿಸಲ್ಟ್ ಬಗ್ಗೆ. ಕರ್ನಾಟಕ ವಿಧಾನಸಭೆಯ 3 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ 1 ಹಾಗೂ ಎನ್‌ಡಿಎ 2 ಕ್ಷೇತ್ರಗಳಲ್ಲಿ ಜಯಿಸಲಿವೆ ಎಂದು ‘ಪಿ-ಮಾರ್ಕ್’ ಚುನಾವಣೋತ್ತರ ಸಮೀಕ್ಷೆ ಹೇಳಿದೆ. ನ.23ರಂದು ಫಲಿತಾಂಶ ಪ್ರಕಟವಾಗಲಿದ್ದು, ಅದಕ್ಕೂ ಮುನ್ನ ಎಕ್ಸಿಟ್ ಪೋಲ್ ಭವಿಷ್ಯದ ಪ್ರಕಾರ ಚುನಾವಣೆಗೂ ಮುನ್ನ ಯಾವ ಯಾವ ಪಕ್ಷಗಳು, ಯಾವ ಯಾವ ಕ್ಷೇತ್ರದಲ್ಲಿ ಗೆದ್ದಿದ್ದವೋ, ಆ ಕ್ಷೇತ್ರಗಳು ಆ ಪಕ್ಷದಲ್ಲಿಯೇ ಉಳಿದುಕೊಳ್ಳಲಿವೆ.
ಸಂಡೂರು ಕ್ಷೇತ್ರದಲ್ಲಿ ಶಾಸಕರಾಗಿದ್ದವರು ತುಕಾರಾಂ. ಅಲ್ಲಿ ಈ ಬಾರಿ ತುಕಾರಂ ಅವರ ಪತ್ನಿ ಅನ್ನಪೂರ್ಣ ತುಕಾರಾಂ ಅವರೇ ಗೆಲ್ಲಲಿದ್ದಾರೆ ಎನ್ನುತ್ತಿದೆ ಸಮೀಕ್ಷೆ. ಕಾಂಗ್ರೆಸ್ ಹಿಡಿತದಲ್ಲಿದ್ದ ಸಂಡೂರು ಪುನಃ ಕಾಂಗ್ರೆಸ್ ಪಾಲಾಗಲಿದೆ ಎನ್ನುವುದು ಪಿ-ಮಾರ್ಕ್ ಸಮೀಕ್ಷೆ ಹೇಳುತ್ತಿರುವ ವರದಿ.
ಇನ್ನು ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಗೆಲ್ಲಲಿದ್ದಾರೆ ಎಂದು ಹೇಳಲಾಗಿದ. ಶಿಗ್ಗಾಂವಿಯಲ್ಲಿಯೂ ಈ ಹಿಂದೆ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿಯವರೇ ಗೆದ್ದಿದ್ದರು. ಲೋಕಸಭೆಗೆ ಸ್ಪರ್ಧಿಸಿ ಗೆದ್ದ ಬೊಮ್ಮಾಯಿಯವರ ಸ್ಥಾನಕ್ಕೆ ಅವರ ಮಗನೇ ಬರಲಿದ್ದಾರೆ ಎನ್ನುವುದು ಪಿ-ಮಾರ್ಕ್ ಸಮೀಕ್ಷೆಯ ಫಲಿತಾಂಶ.
ಇನ್ನು ಚನ್ನಪಟ್ಟಣದಲ್ಲಿಯೂ ಅಷ್ಟೇ. ಕಾಂಗ್ರೆಸ್‌ನ ಸಿ.ಪಿ.ಯೋಗೇಶ್ವರ್ ಹಾಗೂ ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ಪರಸ್ಪರ ತೊಡೆ ತಟ್ಟಿದ್ದಾರೆ. ಚನ್ನಪಟ್ಟಣವು ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಅವರು ಲೋಕಸಭೆ ಆಯ್ಕೆ ಆಗಿದ್ದರಿಂದ ತೆರವಾಗಿತ್ತು. ಇಲ್ಲಿ ನಿಖಿಲ್ ಅವರೇ ಗೆಲ್ಲಲಿದ್ದು, ಸಿಪಿ ಯೋಗೇಶ್ವರ್ ಹ್ಯಾಟ್ರಿಕ್ ಸೋಲು ಕಾಣಲಿದ್ದಾರೆ ಎನ್ನುತ್ತಿದೆ ಸಮೀಕ್ಷೆ.
ಒಟ್ಟಿನಲ್ಲಿ ಈ ಸಮೀಕ್ಷೆ ನೋಡುತ್ತಿದ್ದರೆ ರಾಜ್ಯ ರಾಜಕೀಯದಲ್ಲಿ ಅದರಲ್ಲೂ ಅಸೆಂಬ್ಲಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಅವರವರ ಕ್ಷೇತ್ರವನ್ನು ಅವರವರೇ ಗೆದ್ದುಕೊಳ್ಳಲಿದ್ದಾರೆ. ಮತ್ತು ಕುಟುಂಬದ ರಾಜಕೀಯ ಕಂಟಿನ್ಯೂ ಆಗಲಿದೆ. ಏಕೆಂದರೆ ಚನ್ನಪಟ್ಟಣ ಹಾಗೂ ಶಿಗ್ಗಾಂವಿಯಲ್ಲಿ ಮಕ್ಕಳು ಗೆಲ್ಲುತ್ತಿದ್ದರೆ, ಸಂಡೂರಿನಲ್ಲಿ ಪತ್ನಿ ಗೆಲ್ಲುವ ಸಾಧತೆ ಇದೆ ಎನ್ನುತ್ತಿವೆ ಸಮೀಕ್ಷೆಗಳು.
ಇನ್ನು ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿ ಮಹಾ ಪೈಪೋಟಿಯ ಪ್ರಚಾರಗಳು ಮತ್ತು ಚುನಾವಣೆಗಳ ನಂತರ, ಈಗ ಎಕ್ಸಿಟ್ ಪೋಲ್‌ಗಳು ಈ ರಾಜ್ಯಗಳ ಬಗ್ಗೆ ನುಡಿದಿರುವ ಭವಿಷ್ಯಗಳು ಪ್ರಕಟವಾಗಿದ್ದು, ಆಡಳಿತಾರೂಢ ಮಹಾಯುತಿ ಮೈತ್ರಿಕೂಟ – ಬಿಜೆಪಿ, ಶಿವಸೇನೆ ಮತ್ತು ಎನ್‌ಸಿಪಿ (ಅಜಿತ್ ಪವಾರ್ ಬಣ) ಗೆಲ್ಲುವ ಸಾಧ್ಯತೆ ಇದೆ ಹೇಳಲಾಗಿದೆ. ಇನ್ನು ಮಹಾವಿಕಾಸ್ ಅಘಾಡಿ ಹೋರಾಟ ನಡೆಸಿ ಸೋಲಲಿದೆ ಎಂದು ಹೇಳಲಾಗಿದೆ.
ಜಾರ್ಖಂಡ್‌ನಲ್ಲಿಯೂ ಅಷ್ಟೇ, 81 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎನ್‌ಡಿಎ 41 ಸ್ಥಾನಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದ್ದು, ಆಡಳಿತಾರೂಢ ಕಾಂಗ್ರೆಸ್ ಸೋಲಲಿದೆ ಎಂದೇ ಹೇಳಲಾಗಿದೆ. ಈ ಎರಡೂ ರಾಜ್ಯಗಳೊಂದಿಗೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಡೆದ ಲೋಕಸಭೆ ಹಾಗೂ ವಿಧಾನಸಭೆಯ ಉಪಚುನಾವಣೆಗಳ ಫಲಿತಾಂಶವನ್ನು ಚುನಾವಣಾ ಆಯೋಗ ನವೆಂಬರ್ 23 ರಂದು ಪ್ರಕಟಿಸಲಿದೆ.



