ಇದು ಹೊಸದೇನಲ್ಲ. ಟಿವಿ ನ್ಯೂಸ್ ಚಾನೆಲ್ಲುಗಳು ಬಿಜೆಪಿ ಪರ ಇದೆ ಎಂಬ ವಾದ ಹೊಸದೂ ಅಲ್ಲ. ಆದರೆ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರೊಬ್ಬರು ಈ ರೀತಿ ಹೇಳಿದ್ದು ಇದೇ ಮೊದಲು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಎಲ್ಲ ನ್ಯೂಸ್ ಚಾನಲ್‌ಗಳು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಲೇಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಪ್ರಜಾಪ್ರಭುತ್ವದ ಸಂಸ್ಥೆಗಳನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ಕಂಟ್ರೋಲ್ ಮಾಡುತ್ತಿವೆ. ಸುದ್ದಿ ಮಾಧ್ಯಮಗಳ ವರದಿಗಾರರು ಕಾಂಗ್ರೆಸ್ ಪರವಾಗಿ ಹೈಪ್ ಕೊಟ್ಟರೆ ಅವರ ಕೆಲಸವೇ ಹೋಗುತ್ತದೆ ಎಂದಿರುವ ಮಲ್ಲಿಕಾರ್ಜುನ ಖರ್ಗೆ ನ್ಯೂಸ್ ಚಾನಲ್‌ಗಳ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೀದರ್‌ನಲ್ಲಿ ಕಾಂಗ್ರೆಸ್ ಪಕ್ಷದ ಸಮಾರಂಭದಲ್ಲಿ ಮಾತನಾಡಿದ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಿಪೋರ್ಟರ್ ಗಳು ನಮ್ಮ ಪರವಾಗಿ ಹೆಚ್ಚು ಹೈಪ್ ಕೊಟ್ಟರೆ ಸುದ್ದಿ ಕೊಟ್ಟ ವರದಿಗಾರನ ಕೆಲಸ ಹೋಗುತ್ತದೆ. ಕಾಂಗ್ರೆಸ್ ಪಕ್ಷದ ನಾಯಕರು ಮಾಡಿದ ಕೆಲಸ ಕಾರ್ಯಗಳ ಬಗ್ಗೆ ನ್ಯೂಸ್ ನಲ್ಲಿ ತೋರಿಸಲ್ಲ. ಬಿಜೆಪಿ, ಆಆರ್‌ಎಸ್ಎಸ್ ಮನುವಾದವನ್ನ ತರಲು ಪ್ರಯತ್ನಿಸುತ್ತಿದಾರೆ. ನಾವು ಮನುವಾದ ಬರದಂತೆ ತಡೆಯುತ್ತಿದ್ದೇವೆ ಎಂದು ಹೇಳಿದ್ದಾರೆ.
ಎಲ್ಲಾ ಚಾನಲ್ ಗಳು ಮೋದಿ ಬಿಜೆಪಿ ಕಾರ್ಯಕ್ರಮಗಳನ್ನು ಮಾತ್ರ ಕವರ್ ಮಾಡುತ್ತಿವೆ. ಇದರಲ್ಲಿ ಮಾಧ್ಯಮಗಳ ವರದಿಗಾರರ ಯಾವುದೇ ತಪ್ಪಿಲ್ಲ. ವರದಿಗಾರರು ಕಾಂಗ್ರೆಸ್ ಮಾಡುವ ಸತ್ಯದ ಸುದ್ದಿಗಳನ್ನು ಹಾಕಿದರೆ, ವರದಿಗಾರರನ್ನ ತೆಗೆದು ಹಾಕುವಂತ ಕೆಲಸ ನಡೆಯುತ್ತಿದೆ. ರಾಜ್ಯದ ಕೆಲವು ಚಾನಲ್ ಗಳು ಸೇರಿದಂತೆ, ಬಹುತೇಕ ಚಾನಲ್‌ಗಳು ಏಕಪಕ್ಷಿಯವಾಗಿ ಕೆಲಸ ಮಾಡುತ್ತಿವೆ ಎಂದು ನೇರವಾಗಿ ಹೇಳಿದ್ಧಾರೆ.
ವಾಸ್ತವ ಏನು?
ರಾಜ್ಯದ ವಿಷಯಕ್ಕೇ ಬಂದರೆ, ಕೆಲವು ಸುದ್ದಿ ವಾಹಿನಿಗಳು ಇವು ಈ ಪಕ್ಷದ ಪರ, ಈ ಪಕ್ಷದ ವಿರುದ್ಧ ಎಂದು ಬಹಿರಂಗವಾಗಿಯೇ ಟೀಕೆ ಮಾಡುವವರಿದ್ದಾರೆ. ಬಿಜೆಪಿ ಪರ ಎಂದು ಬಿಂಬಿತವಾಗಿರುವುದು ಸುವರ್ಣ ನ್ಯೂಸ್, ಪಬ್ಲಿಕ್ ಟಿವಿ ಮತ್ತು ರಿಪಬ್ಲಿಕ್ ಟಿವಿ. ಇನ್ನು ಕಾಂಗ್ರೆಸ್ ಪರ ಎಂದು ಬಿಂಬಿಸಿಕೊಂಡಿರೋದು ರಾಜ್ ನ್ಯೂಸ್, ಟಿವಿ 5. ಇನ್ನು ಟಿವಿ 9, ನ್ಯೂಸ್ 18 ವಿಷಯದಲ್ಲಿಯೂ ಆಗೊಮ್ಮೆ ಈಗೊಮ್ಮೆ ಇಂತಹ ಮಾತುಗಳು ಬರುತ್ತವೆ.
ಆದರೆ ಇದು ಅಭಿಪ್ರಾಯಗಳಷ್ಟೇ. ವಾಸ್ತವದಲ್ಲಿ ಈ ಚಾನೆಲ್ಲುಗಳಲ್ಲಿ ಎಲ್ಲ ಸುದ್ದಿಗಳೂ ಪ್ರಸಾರವಾಗುತ್ತವೆ. ಪರ ವಿರುದ್ಧ ವಿಷಯಗಳ ಪ್ರಸಾರ ಮಾಡುವ ಅವಧಿಯ ವಿಚಾರದಲ್ಲಿ ಈ ಸುದ್ದಿ ವಾಹಿನಿಗಳು ಮಿಸ್ಟೇಕ್ ಏನೂ ಮಾಡಿಲ್ಲ.
ಇನ್ನು ದೇಶದ ಮಟ್ಟಿಗೆ ಬಂದರೆ ಇಂಗ್ಲಿಷ್ ಚಾನೆಲ್ಲುಗಳಲ್ಲಿ ಟೈಮ್ಸ್ ನೌ, ರಿಪಬ್ಲಿಕ್ ಟಿವಿ, ಇಂಡಿಯಾ ಟುಡೇ, ಎನ್ʻಡಿ ಟಿವಿ ಪ್ರಮುಖ ವಾಹಿನಿಗಳು. ಇಂಡಿಯಾ ಟುಡೇ ಲೆಕ್ಕವನ್ನೇ ತೆಗೆದುಕೊಂಡರೆ, ಅಲ್ಲಿ ಎರಡೂ ರೀತಿಯ ಮುಖಗಳಿವೆ. ಕೇವಲ ಆಂಕರ್ ವಿಷಯಕ್ಕೆ ಬಂದರೆ, ಇಂಡಿಯಾ ಟುಡೆಯ ರಾಜ್ʻದೀಪ್ ಸರ್ʻದೇಸಾಯಿ ಎಡಪಂಥೀಯ ಪತ್ರಕರ್ತ. ಆತನ ಪತ್ನಿ ಸಾಗರಿಕಾ ಘೋಷ್ (ಈಕೆಯೂ ಮಾಜಿ ಪತ್ರಕರ್ತೆ) ಇದೀಗ ಟಿಎಂಸಿಯಿಂದ ರಾಜ್ಯಸಭೆ ಸದಸ್ಯೆಯಾಗುತ್ತಿದ್ಧಾರೆ. ಆದರೆ, ಶಿವ್ ಅರೂರ್ ಅಪ್ಪಟ ಬಲಪಂತೀಯ. ಮತ್ತೊಬ್ಬ ರಾಹುಲ್ ಕುನಾಲ್ ಬ್ಯಾಲೆನ್ಸ್ ಮಾಡ್ತಾರೆ. ಸಾಮಾನ್ಯವಾಗಿ ಎಲ್ಲ ಟಿವಿ ಚಾನೆಲ್ಲುಗಳಲ್ಲೂ ಇಂತಹ ಪರಿಸ್ಥಿತಿ ಇದೆ.



