ಯಮಾಹಾ ಆರ್. ಎಕ್ಸ್. 100 ಬೈಕ್ ಇದ್ಯಲ್ಲ, ಅದು ಬೈಕಿನ ಹುಚ್ಚು ಇರೋವ್ರಿಗೆ ಸಿಕ್ಕಾಪಟ್ಟೆ ಅಂದ್ರೆ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟು ಹಾಕಿದ ಬೈಕ್. ಯಮಾಹಾ ಆರ್. ಎಕ್ಸ್. 100 ಬೈಕ್ ಇದ್ದವರು, ಅದನ್ನು ಮಗುವಿನಿಂತೆ ನೋಡಿ ಕೊಳ್ತಾರೆ. ಎಲ್ಲೆಂದರೆ ಅಲ್ಲಿ ಪಾರ್ಕ್ ಕೂಡಾ ಮಾಡಲ್ಲ. ಕದ್ದು ಬಿಟ್ಟರೆ ಅನ್ನೋ ಭಯ. ಎಂಥ ಫ್ರೆಂಡ್ ಆಗಿದ್ದರೂ ಕೊಡೋದಿಲ್ಲ. ಡ್ಯಾಮೇಜ್ ಮಾಡಿಬಿಟ್ಟರೆ ಅನ್ನೋ ಭಯ. ಆರ್. ಎಕ್ಸ್. 100 ಸದ್ದಿಗೆ ಒಂದು ಅಟ್ರ್ಯಾಕ್ಷನ್ ಇದೆ. ಅದೊಂಥರಾ ಟ್ರೆಡಿಷನಲ್ ಹಾಟ್ ಬ್ಯೂಟಿ.
ಯಮಹಾ ಆರ್‌ಎಕ್ಸ್ 100 ಬೈಕ್ ಭಾರತದ ಆಗಿನ ಯುವಕರಿಂದ ಹಿಡಿದು ಇಂದಿನ ಯುವಕರವರೆಗೆ ಎಲ್ಲರಿಗೂ ಇಷ್ಟವಾದ ಬೈಕ್‌ಗಳಲ್ಲಿ ಒಂದು. ಯಮಹಾ ಆರ್‌ಎಕ್ಸ್ 100 (Yamaha RX 100) ಭಾರತೀಯ ಬೈಕಿಂಗ್ ಇತಿಹಾಸದಲ್ಲಿ ಒಂದು ಅವಿಸ್ಮರಣೀಯ ಹೆಗ್ಗುರುತು. 1980 ರ ದಶಕದಲ್ಲಿ ಪರಿಚಯಿಸಲಾದ RX 100, 1990 ರ ದಶಕದಲ್ಲಿ ಸ್ಥಗಿತಗೊಂಡರೂ, RX 100 ಪ್ರೀತಿಯ ಕ್ಲಾಸಿಕ್ ಆಗಿದೆ. ಯಮಹಾ ಆರ್‌ಎಕ್ಸ್ 100 ಮತ್ತೆ ಮರುಪ್ರವೇಶಿಸಲು ಸಿದ್ಧವಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಇತ್ತೀಚಿನ ವರದಿ ಪ್ರಕಾರ ಈ ಯಮಹಾ ಬೈಕ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಮತ್ತೆ ಬರುವ ಸಾಧ್ಯತೆ ಇದೆ. ಹಳೆಯ ಆರ್.ಎಕ್ಸ್.100ನಲ್ಲಿ 98cc, ಟು-ಸ್ಟ್ರೋಕ್ ಎಂಜಿನ್, ಎಂಜಿನ್ನಿಗೆ ಹೋಲಿಸಿದರೆ ಲೈಟ್ ವೇಯ್ಟ್ ಮತ್ತು ವೇಗವಾಗಿ ಸ್ಪೀಡ್ ತೆಗೆದುಕೊಳ್ಳುವುದು, ಡಿಸೈನ್ ಎಲ್ಲವೂ ಬೈಕ್ ಸವಾರರಿಗೆ ಇಷ್ಟವಾಗಿತ್ತು. ಯಮಹಾ ಆರ್‌ಎಕ್ಸ್ 100 ಅನ್ನು ನಿಜವಾಗಿಯೂ ಎದ್ದು ಕಾಣುವಂತೆ ಮಾಡಿದ್ದು ಅದರ ವಿಶ್ವಾಸಾರ್ಹತೆ ಮತ್ತು ಕಡಿಮೆ ನಿರ್ವಹಣೆ. ಅಷ್ಟೇ ಸಿಸಿ ಇರುವ ಬೇರೆ ಬೈಕುಗಳಿಗೆ ಹೋಲಿಸಿದರೆ, ಯಮಾಹಾ ಆರ್.ಎಕ್ಸ್.100 ಮೈಲೇಜ್ ಜಾಸ್ತಿ ಎನ್ನಬೇಕು. ಈಗ ಬರುತ್ತಿರುವ ಹೊಸ ಯಮಾಹಾ ಆರ್. ಎಕ್ಸ್. 100ನಲ್ಲಿ ಹೊಸ ರೀತಿಯ ಟೆಕ್ನಾಲಜಿ ಇರಲಿದೆಯಂತೆ.
ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್ಇಡಿ ಹೆಡ್‌ಲೈಟ್, ಟರ್ನ್-ಬೈ ಇಂಡಿಕೇಟರ್, ಎರಡೂ ಟೈರ್‌ಗಳಲ್ಲಿ ಡಿಸ್ಕ್ ಬ್ರೇಕ್‌ಗಳು, ಅಲಾಯ್ ವೀಲ್ಸ್, ಯುಎಸ್‌ಬಿ ಪೋರ್ಟ್, ಚಾರ್ಜಿಂಗ್ ಪೋರ್ಟ್, ವೈರ್‌ಲೆಸ್ ಚಾರ್ಜಿಂಗ್ ಪೋರ್ಟ್ ಮತ್ತು ಇನ್ನೂ ಅನೇಕ ಆಧುನಿಕ ವೈಶಿಷ್ಟ್ಯಗಳು ಈ ಹೊಸ ಯಮಾಹಾ ಆರ್. ಎಕ್ಸ್. 100ನಲ್ಲಿ ಇರಲಿವೆ.
ಈ ವಾಹನದಲ್ಲಿ, 225 ಸಿಸಿ ಸಾಮರ್ಥ್ಯದ ಎಂಜಿನ್ ಲಭ್ಯವಿರುತ್ತದೆ. ಇದು 18 ಬಿಹೆಚ್‌ಪಿ ಪವರ್ ಮತ್ತು 22 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ವಾಹನದಲ್ಲಿ, ನೀವು 5-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಗಳು ಇರುತ್ತವಂತೆ. ಪೆಟ್ರೋಲ್ ಟ್ಯಾಂಕ್ ಸಾಮರ್ಥ್ಯವೂ ಹೆಚ್ಚು ಇರಲಿದೆಯಂತೆ.
ಇನ್ನು ಮೈಲೇಜ್ ವಿಷಯಕ್ಕೆ ಬಂದರೆ, ಈ ಹೊಸ ಯಮಾಹಾ ಆರ್. ಎಕ್ಸ್. 100ನಲ್ಲಿ 35 ರಿಂದ 40 ಕಿಲೋಮೀಟರ್ ವರೆಗೆ ಸುಲಭವಾಗಿ ಮೈಲೇಜ್ ನೀಡುತ್ತದೆ.
ಇನ್ನು ಬಣ್ಣಗಳ ವಿಷಯದಲ್ಲಿಯೂ ಅಷ್ಟೆ, ಕ್ಲಾಸಿಕ್ ಬ್ಲಾಕ್, ರೆಡ್ ಮತ್ತು ಬ್ಲೂ ಕಲರಿನಲ್ಲಿ ಸಿಗಲಿದೆ. ಅಲ್ಲದೆ ಕಳ್ಳತನ ತಪ್ಪಿಸಲು ಆಂಟಿ ಥೆಫ್ಟ್ ಸಿಸ್ಟಂ ಅಳವಡಿಸುತ್ತಿದ್ದಾರಂತೆ.
ಹೊಸ ಯಮಾಹಾ ಆರ್. ಎಕ್ಸ್. 100ನ ಆರಂಭಿಕ ಬೆಲೆ ಸುಮಾರು ರೂ 1.40 ಲಕ್ಷದಿಂದ 1.50 ಲಕ್ಷದವರೆಗೆ ಇರಲಿದೆ ಎನ್ನಲಾಗುತ್ತಿದೆ. ಈ ಬೈಕ್ 2024 ರ ಅಂತ್ಯದ ವೇಳೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ಹೊರಬಿದ್ದಿದೆ. ಎಲ್ಲವೂ ಪ್ಲಾನ್ ಪ್ರಕಾರವೇ ಆದರೆ, ವರ್ಷದ ಕೊನೆಯಲ್ಲಿ ಯಮಾಹಾ ಆರ್. ಎಕ್ಸ್. 100 ಮಾರುಕಟ್ಟೆಗೆ ರಿಲೀಸ್ ಆಗಬಹುದು.



