ಸ್ಟಾರ್ ಸುವರ್ಣ ಪ್ರೇಕ್ಷಕರಿಗೆ ಹೊಸ ಹೊಸ ರೀತಿಯ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತದೆ. ಬಹುತೇಕ ಚಾನೆಲ್ಲುಗಳು, ಪ್ರೈಂ ಟೈಂ ಮಾತ್ರವೇ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದವು. ಅಂದರೆ ಸಂಜೆ ೬ ಗಂಟೆಯ ನಂತರವಷ್ಟೇ ಹೊಸ ಹೊಸ ಧಾರಾವಾಹಿಗಳು ಬರುತ್ತಿದ್ದವು. ಮನರಂಜನೆ ಸಂಜೆಗಷ್ಟೇ ಸೀಮಿತ ಅಲ್ಲ ಎಂದು ಸಾಬೀತು ಮಾಡಿ, ಮಧ್ಯಾಹ್ನದ ಹೊತ್ತಿಗೂ ಹೊಸ ಹೊಸ ಶೋ, ಧಾರಾವಾಹಿಗಳನ್ನು ಪರಿಚಯಿಸಿದ್ದ ಸ್ಟಾರ್ ಸುವರ್ಣ ಇದೀಗ ಮಧ್ಯಾಹ್ನದ ಮನರಂಜೆನಾಗಿ ಎರಡು ಹೊಸ ಸೀರಿಯಲ್ ಪ್ರಸಾರ ಮಾಡಲು ಸಿದ್ಧವಾಗಿದೆ. ಮಾಡಲು ‘ಸ್ಟಾರ್ ಸುವರ್ಣ’ ಸಜ್ಜಾಗಿದೆ.
ಪ್ರೀತಿಗಾಗಿ : ಒಬ್ಬನ ಮೋಸವನ್ನು ನಿರೂಪಿಸಲು ಮತ್ತಿಬ್ಬರು ಪಡುವ ಪ್ರಯತ್ನ ಮುಂದೆ ಯಾವ ಹೊಸ ಹಾದಿಯನ್ನು ಸೃಷ್ಟಿಸುತ್ತೆ? ಎಂಬ ಕಥಾಹಂದರದ ಹೊಸ ಧಾರಾವಾಹಿ ‘ಪ್ರೀತಿಗಾಗಿ’ ಇದೇ ಸೋಮವಾರದಿಂದ ಮಧ್ಯಾಹ್ನ 1 ಗಂಟೆಗೆ ಪ್ರಸಾರವಾಗಲಿದೆ..
ಪಾಪ ಗಣೇಶ : ಬೇರೆಯವರ ಖುಷಿಯಲ್ಲಿ ತನ್ನ ಸಂತೋಷವನ್ನು ಕಾಣುವ ಮುಗ್ದ ಗಣೇಶನ ಕಥೆ ಪಾಪ ಗಣಪ. ಹೊಸ ಕಥೆ “ಪಾಪ ಗಣೇಶ” ಇದೇ ಸೋಮವಾರದಿಂದ ಮಧ್ಯಾಹ್ನ 2.30 ಕ್ಕೆ ಪ್ರಸಾರವಾಗಲಿದೆ.
ಇನ್ನು ಕೋಪ, ದ್ವೇಷದಿಂದ ಶುರುವಾಗಿ ಪ್ರೀತಿಯ ಮಳೆ ಸುರಿಸುತ್ತಿರೋ ಪ್ರೇಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿ “ಅರಗಿಣಿ-2” ಇದೇ ಸೋಮವಾರದಿಂದ ಬದಲಾದ ಸಮಯದಲ್ಲಿ ಮಧ್ಯಾಹ್ನ 1.30 ಕ್ಕೆ ಪ್ರಸಾರವಾಗಲಿದೆ.
ಇನ್ನು ಮಹಿಳೆಯರ ಹೃದಯ ಗೆದ್ದ ಗೃಹಿಣಿಯ ಕಥೆ “ಅನುಪಮ” ಇದೇ ಸೋಮವಾರದಿಂದ ಬದಲಾದ ಸಮಯದಲ್ಲಿ ಮಧ್ಯಾಹ್ನ 2 ಗಂಟೆಗೆ ಪ್ರಸಾರವಾಗಲಿದೆ.
“ಸುವರ್ಣ ಸಂಜೆ”ಯಲ್ಲಿಯೂ ಒಂದಷ್ಟು ಕಾರ್ಯಕ್ರಮಗಳ ಪ್ರಸಾರ ಸಮಯ ಬದಲಾಗಿದೆ. ಸೂಪರ್ ನ್ಯಾಚುರಲ್ ಕ್ರೈಮ್ ಥ್ರಿಲ್ಲರ್ ಕಥೆಯನ್ನೊಳಗೊಂಡ ಹೊಸ ಶೋ “ಸೂಪರ್ ಕಾಪ್ಸ್ V/S ಸೂಪರ್ ವಿಲನ್ಸ್” ಇದೇ ಸೋಮವಾರದಿಂದ ಸಂಜೆ 4.30 ಕ್ಕೆ ಪ್ರಸಾರವಾಗಲಿದೆ.
ಗೃಹಿಣಿಯರ ಮನಸ್ಸು ಗೆದ್ದ ಧಾರಾವಾಹಿ “ಸುವರ್ಣ ಗೃಹಮಂತ್ರಿ”…ಇದೇ ಸೋಮವಾರದಿಂದ ಸಂಜೆ 5.30 ಕ್ಕೆ ಪ್ರಸಾರವಾಗಲಿದೆ.
ಒಟ್ಟಿನಲ್ಲಿ ಟಿವಿ ಎದುರು ಕುಳಿತವರನ್ನು ಬಿಡದಂತೆ ಹಿಡಿಯುವ ಎಲ್ಲ ಪ್ರಯತ್ನವನ್ನೂ ಸ್ಟಾರ್ ಸುವರ್ಣ ಮಾಡ್ತಾ ಇದೆ.



