ಇಸ್ರೋ. ಭಾರತೀಯ ವಿಜ್ಞಾನ ಸಂಸ್ಥೆ. ಈ ಸಂಸ್ಥೆಯಲ್ಲಿ ಕೆಲಸ ಮಾಡುವವರು ಎಲ್ಲರೂ ವಿಜ್ಞಾನಿಗಳೇ ಅಲ್ಲ. ಸೈಂಟಿಸ್ಟುಗಳನ್ನು ಹೊರತುಪಡಿಸಿಯೂ ಉದ್ಯೋಗಾವಕಾಶಗಳು ಇರುತ್ತವೆ. ಅಂತಹ ನೂರಾರು ಕೆಲಸಗಳಿಗೆ ಈಗ ನೇಮಕಾತಿ ನಡೆಯುತ್ತಿದೆ. ಬೆಂಗಳೂರಿನಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO -Indian Space Research Organisation)ಯ ಹ್ಯೂಮನ್ ಸ್ಪೇಸ್ ಫ್ಲೈಟ್ ಸೆಂಟರ್ (Human Space Flight Centre-HSFC) ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ ಎಸ್ ಎಸ್ ಎಲ್ ಸಿ, ಐಟಿಐ, ಡಿಗ್ರಿ ಪಾಸ್ ಅದವರಿಂದ ಹಿಡಿದು ಎಂಬಿಬಿಎಸ್ ಮಾಡಿದರಿಗೂ ನೇಮಕಾತಿಯನ್ನು ಕರೆಯಲಾಗಿದೆ. ಟೆಕ್ನೀಷಿಯನ್, ಮೆಡಿಕಲ್ ಆಫೀಸರ್ ಸೇರಿ ಒಟ್ಟು 103 ಹುದ್ದೆಗಳಿದ್ದು, 10ನೇ ತರಗತಿ, ಐಟಿಐ, ಪದವಿ ಮುಂತಾದ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು.
ಹುದ್ದೆಗಳು, ವಿದ್ಯಾರ್ಹತೆ ವಿವರಗಳು :
ಮೆಡಿಕಲ್ ಆಫೀಸರ್ : 3 ಹುದ್ದೆಗಳಿವೆ. ವಿದ್ಯಾರ್ಹತೆ: ಎಂಬಿಬಿಎಸ್, ಎಂ.ಡಿ ಆಗಿರಬೇಕು.
ಸೈಂಟಿಸ್ಟ್ ಎಂಜಿನಿಯರ್ : 10 ಹುದ್ದೆಗಳಿವೆ. ವಿದ್ಯಾರ್ಹತೆ : ಬಿ.ಇ ಅಥವಾ ಬಿ.ಟೆಕ್ ಅಥವಾ ಎಂ.ಟೆಕ್ ಆಗಿರಬೇಕು.
ಟೆಕ್ನಿಕಲ್ ಅಸಿಸ್ಟೆಂಟ್ : 28 ಹುದ್ದೆಗಳಿದ್ದು, ವಿದ್ಯಾರ್ಹತೆ: ಡಿಪ್ಲೊಮಾ ಪದವೀಧರರಾಗಿರಬೇಕು.
ಸೈಂಟಿಫಿಕ್ ಅಸಿಸ್ಟೆಂಟ್ : 1 ಹುದ್ದೆ ಖಾಲಿ ಇದೆ. ವಿದ್ಯಾರ್ಹತೆ: ಬಿ.ಎಸ್‌ಸಿ, ಪದವಿ ಆಗಿರಬೇಕು.
ಅಸಿಸ್ಟಂಟ್- (ರಾಜಭಾಷಾ) : 5 ಹುದ್ದೆಗಳಿವೆ. ಇದಕ್ಕೂ ವಿದ್ಯಾರ್ಹತೆ: ಪದವಿ ಆಗಿರಬೇಕು.
ಇವು ಎಂಬಿಬಿಎಸ್, ಎಂಟೆಕ್, ಪದವೀಧರರಿಗೆ ಮೀಸಲಾಗಿರುವ ಹುದ್ದೆಗಳು. ಇನ್ನು ಎಸ್‌ಎಸ್‌ಎಲ್‌ಸಿ, ಐಟಿಐ ಆದವರಿಗೆ ಯಾವ್ಯಾವ ಹುದ್ದೆಗಳಿಗೆ ಕರೆಯಲಾಗಿದೆ ನೋಡೋಣ.
ಟೆಕ್ನೀಷಿಯನ್ ಬಿ (ಫಿಟ್ಟರ್) : 22 ಹುದ್ದೆಗಳಿವೆ. ವಿದ್ಯಾರ್ಹತೆ: 10ನೇ ತರಗತಿ ಮತ್ತು ಐಟಿಐ ಪಾಸ್ ಆಗಿರಬೇಕು.
ಟೆಕ್ನೀಷಿಯನ್-ಬಿ (ಎಲೆಕ್ಟ್ರಾನಿಕ್ ಮೆಕ್ಯಾನಿಕ್) : 12 ಹುದ್ದೆಗಳಿವೆ. ವಿದ್ಯಾರ್ಹತೆ: 10ನೇ ತರಗತಿ, ಐಟಿಐ ಪಾಸ್ ಆಗಿರಬೇಕು.
ಟೆಕ್ನೀಷಿಯನ್-ಬಿ (ಎಸಿ ಮತ್ತು ರೆಫ್ರಿಜರೇಷನ್) : 1 ಹುದ್ದೆಯಿದ್ದು, ವಿದ್ಯಾರ್ಹತೆ: 10ನೇ ತರಗತಿ, ಐಟಿಐ ಪಾಸ್ ಆಗಿರಬೇಕು.
ಟೆಕ್ನೀಷಿಯನ್-ಬಿ- (ವೆಲ್ಡರ್) : 2 ಹುದ್ದೆಗಳಿವೆ. ವಿದ್ಯಾರ್ಹತೆ: 10ನೇ ತರಗತಿ, ಐಟಿಐ ಪಾಸ್ ಆಗಿರಬೇಕು.
ಟೆಕ್ನೀಷಿಯನ್-ಬಿ- (ಮೆಷಿನಿಸ್ಟ್) : 1 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ ಪಾಸ್ ಆಗಿರಬೇಕು.
ಟೆಕ್ನೀಷಿಯನ್-ಬಿ- (ಎಲೆಕ್ಟ್ರಿಕಲ್) : 3 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ ಪಾಸ್ ಆಗಿರಬೇಕು.
ಟೆಕ್ನೀಷಿಯನ್-ಬಿ- (ಟರ್ನರ್) : 1 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ ಪಾಸ್ ಆಗಿರಬೇಕು.
ಟೆಕ್ನೀಷಿಯನ್-ಬಿ- (ಗ್ರೈಂಡರ್) : 1 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ ಪಾಸ್ ಆಗಿರಬೇಕು.
ಡ್ರಾಫ್ಟ್‌ಮ್ಯಾನ್-ಬಿ- (ಮೆಕ್ಯಾನಿಕಲ್) : 9 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ ಪಾಸ್ ಆಗಿರಬೇಕು.
ಡ್ರಾಫ್ಟ್‌ಮ್ಯಾನ್-ಬಿ- (ಸಿವಿಲ್) :4 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐ ಪಾಸ್ ಆಗಿರಬೇಕು.
ವಯಸ್ಸು ಏನಿರಬೇಕು..? ಶುಲ್ಕ ಎಷ್ಟು..?
ಉದ್ಯೋಗಕ್ಕೆ ಅರ್ಜಿ ಹಾಕಲು ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷ ಇರಬೇಕು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇದೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ. ಎಲ್ಲ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 750 ರೂ. ಪಾವತಿಸಬೇಕು. ಅದರಲ್ಲಿ ವ್ಯತ್ಯಾಸವೇನೂ ಇಲ್ಲ.
ಆಯ್ಕೆ ಹೇಗೆ ನಡೆಯುತ್ತದೆ..?
ಆಯ್ಕೆಯಾಗಲು ಬಯಸುವವವರಿಗೆ ಲಿಖಿತ ಪರೀಕ್ಷೆ, ಸ್ಕಿಲ್ ಟೆಸ್ಟ್ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಮೂರೂ ವಿಭಾಗಗಳಲ್ಲಿ ಉತ್ತಮ ಅಂಕ ಗಳಿಸಿದವರಿಗೆ ಉದ್ಯೋಗ ಸಿಗಲಿದೆ.



