ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸಿದ್ದರು. ಹಠಕ್ಕೆ ಬಿದ್ದು ಮನೆಯವರನ್ನು ಒಪ್ಪಿಸಿದ್ದರು. ಮದುವೆಯಾಯ್ತು. ಫಸ್ಟ್ ನೈಟ್ʻಗೆ ಕೆಲವೇ ಗಂಟೆಗಳು ಬಾಕಿ ಇತ್ತು. ಆದರೆ.. ಆಗಿದ್ದೇ ಬೇರೆ.. ಫಸ್ಟ್ ನೈಟ್‌ಗೆ ಕೆಲವು ಗಂಟೆಗಳು ಬಾಕಿ ಇರುವಂತೆಯೇ ಇಬ್ಬರ ನಡುವೆ ಹೊಡೆದಾಡಿಕೊಂಡಿದ್ದಾರೆ. ಗಂಭೀರ ಗಾಯಗೊಂಡ ಮದುಮಗಳು ಮೃತಪಟ್ಟರೆ, ಮದುಮಗನ ಸ್ಥಿತಿ ಗಂಭೀರವಾಗಿದೆ.
ಈ ಘಟನೆ ಕೋಲಾರ ಜಿಲ್ಲೆ ಕೆಜಿಎಫ್ ತಾಲ್ಲೂಕು ಚಂಬರಸನಹಳ್ಳಿ ಗ್ರಾಮದಲ್ಲಿ ನಡೆದಿದೆ. ಚಂಬರಸನಹಳ್ಳಿ ಗ್ರಾಮದಲ್ಲಿ ಲಿಖಿತಶ್ರೀ ಹಾಗೂ ನವೀನ್ ಅವರಿಗೆ ಮದುವೆಯಾಗಿತ್ತು. ಬೆಳಗ್ಗೆ ಮದುವೆಯ ಎಲ್ಲ ರೀತಿ ರಿವಾಜುಗಳನ್ನೂ ಇಬ್ಬರೂ ಸಂತೋಷದಿಂದ ಜೊತೆಯಾಗಿ ನಿರ್ವಹಿಸಿದ್ದಾರೆ. ಜೊತೆಯಾಗಿ ಸಪ್ತಪದಿ ತುಳಿದಿದ್ದಾರೆ, ತಾಳಿ ಕಟ್ಟುವ ಶಾಸ್ತ್ರ ಮುಗಿದಿದೆ, ಅರುಂಧತಿ ನಕ್ಷತ್ರ ನೋಡಿದ್ದಾರೆ.
ಎಲ್ಲ ಸಂದರ್ಭದಲ್ಲೂ ನವದಂಪತಿಯ ನಗುಮುಖವನ್ನು ನೋಡಿದ ಸಂಬಂಧಿಕರು, ಮಿತ್ರರು, ಹಿತೈಷಿಗಳು ಈ ಜೋಡಿ ನೂರ್ಕಾಲ ಚೆನ್ನಾಗಿರಲಿ ಎಂದು ಆಶೀರ್ವಾದ ಮಾಡಿದ್ದರು. ಆದರೆ ಇಂತಹದ್ದೊಂದು ಘಟನೆ ದಿನ ಮುಗಿಯುವುದರೊಳಗೆ ನಡೆಯಬಹುದು ಎಂದು ಅಲ್ಲಿದ್ದ ಯಾರೂ ಅಂದುಕೊಂಡಿರಲಿಲ್ಲ. ಆ ಬಗ್ಗೆ ಒಂದು ಸಣ್ಣ ಸುಳಿವು ಸಹ ಇರಲಿಲ್ಲ. ಎಲ್ಲವೂ ನಡೆದದ್ದು ಮದುವೆ ಮುಗಿದ ಬಳಿಕ ಅವರು ರೂಮಿಗೆ ತೆರಳದ ಬಳಿಕ.
ಮದುವೆಯಾದ ಕೆಲವು ಗಂಟೆಗಳ ನಂತರ ಮನೆಯಲ್ಲಿದ್ದ ಒಂದು ಕೋಣೆಯಲ್ಲಿ ವಧು ವರ ಇಬ್ಬರೂ ಹೋಗಿದ್ದಾರೆ. ರೂಮಿನಲ್ಲಿ ಅದೇನಾಯ್ತೋ ಗೊತ್ತಿಲ್ಲ ಇಬ್ಬರೂ ಪರಸ್ಪರ ರಕ್ತ ಬರುವಂತೆ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದಾರೆ. ಮಚ್ಚು ಹಿಡಿದುಕೊಂಡು ಬಡಿದಾಡಿದ್ದಾರೆ ನೂತನ ವಧು ವರ. ಕೊನೆಗೆ.. ಗಂಭೀರ ಗಾಯಗೊಂಡ ವಧು ಸಾವನ್ನಪ್ಪಿದರೆ, ವರ ಸಾವು ಬದುಕಿನ ಹೋರಾಡುತ್ತಿದ್ದಾನೆ.
ಸ್ಥಳದಲ್ಲಿ ಏನಾಗುತ್ತದೆ ಎಂದು ವಧ ವರರ ಕಡೆಯವರಿಗೆ ಅರ್ಥವೇ ಆಗಿರಲಿಲ್ಲ. ಏಕೆಂದರೆ ಮದುವೆ ಆಗುವವರೆಗೂ ಎಲ್ಲವೂ ಸರಿ ಇತ್ತು. ರೂಮಿಗೆ ಹೋಗಿ ಬಂದ ಮೇಲೆ ಈ ಜಗಳ ಆಗಿದ್ದು ಅಲ್ಲಿದ್ದವರ ಗಮನಕ್ಕೆ ಬಂದಾಗ ಇಬ್ಬರೂ ಗಂಭೀರ ಗಾಯಗೊಂಡಿದ್ದರು.
ಈ ವೇಳೆ ಮನೆಯವರು ಅವರನ್ನು ಬಿಡಿಸಲು ಬಾಗಿಲು ತಟ್ಟಿದರೂ ಬಾಗಿಲು ತೆರೆದಿಲ್ಲ. ಇನ್ನು ಮನೆಯರವು ಬಾಗಿಲು ಮುರಿದು ಇಬ್ಬರ ಜಗಳ ಬಿಡಿಸಿ ರಕ್ತಸ್ರಾವದಿಂದ ಬಳಲುತ್ತಿದ್ದ ನವದಂಪತಿಯನ್ನು ಹತ್ತಿರದ ಕೆಜಿಎಫ್ ಆಸ್ಪತ್ರೆಗೆ ದಾಖಲು ಮಾಡದ್ದಾರೆ. ಆದರೆ, ಗಂಭೀರ ಗಾಯಗೊಂಡಿದ್ದ ನವವಧು ಲಿಖಿತಶ್ರೀ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಇನ್ನು ವರ ನವೀನ್ ಸ್ಥಿತಿ ಕೂಡಾ ಗಂಭೀರವಾಗಿದ್ದು, ಕೆಜಿಎಫ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಕೋಲಾರ ಜಿಲ್ಲೆ ಕೆಜಿಎಫ್ ತಾಲ್ಲೂಕು ಚಂಬರಸನಹಳ್ಳಿ ಗ್ರಾಮದ ನವೀನ್ ಕೆಲವು ವರ್ಷಗಳಿಂದ ಆಂಧ್ರಪ್ರದೇಶ ರಾಜ್ಯದ ಬೈನಪಲ್ಲಿ ಗ್ರಾಮದ ಲಿಖಿತಶ್ರೀಯನ್ನು ಪ್ರೀತಿಸುತ್ತಿದ್ದ. ಇಬ್ಬರೂ ಸೇರಿ ಕಷ್ಟಪಟ್ಟು ಮನೆಯವರನ್ನು ಒಪ್ಪಿಸಿ ಗ್ರಾಮದಲ್ಲಿ ಸರಳವಾಗಿ ಮದುವೆಯನ್ನೂ ಮಾಡಿಕೊಂಡಿದ್ದರು. ಬೆಳಗ್ಗೆ ಮದುವೆಯಾದ ಜೋಡಿ ಎಲ್ಲ ಮದುವೆ ಶಾಸ್ತ್ರಗಳು ಮುಕ್ತಾಯಗೊಂಡ ನಂತರ ಒಂದು ಕೋಣೆಯಲ್ಲಿ ಹೋಗಿದ್ದಾರೆ. ಕೆಲ ಹೊತ್ತಿನ ನಂತರ ಕೊಠಡಿಯಲ್ಲಿದ್ದ ಹುಡುಗ ಹುಡುಗಿ ಹೊಡೆದಾಡಿಕೊಂಡಿದ್ದಾರೆ. ಕಿರುಚಾಟ ಕೇಳಿದ ಮದುವೆ ಮನೆಯವರು ಎಷ್ಟು ಕೇಳಿದರೂ ಬಾಗಿಲು ತೆರೆದಿಲ್ಲ. ಕೊನೆಗೆ ಬಾಗಿಲನ್ನು ಒಡೆದು ಒಳ ಹೋಗಿ ನೋಡಿದಾಗ.. ಇಬ್ಬರೂ ರಕ್ತದ ಮಡುವಿನಲ್ಲಿದ್ದದ್ದು ನೋಡಿ ಶಾಕ್ ಆಗಿದ್ಧಾರೆ. ಮದ್ವೆಯಾಗಿ ಇನ್ನೇನು ಸುಖವಾಗಿ ಸಂಸಾರ ಸಾಗಿಸಬೇಕಿದ್ದ ವಧು ದುರಂತ ಅಂತ್ಯ ಕಂಡಿದ್ದರೆ, ವರ ನವೀನ್ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದಾನೆ.



