Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

ಕಳೆನಾಶಕ ಗ್ಲೈಪೋಸೆಟ್‌ ತಡೆಯಲು ಹೊಸ ಬಿಟಿ ಹತ್ತಿ : ಚೋರ್‌ ಬಿಟಿ ಹತ್ತಿ ಅಧಿಕೃತವಾಗುತ್ತಾ..?

SpeciallU by SpeciallU
October 5, 2024
in News
0 0
0
ಕಳೆನಾಶಕ ಗ್ಲೈಪೋಸೆಟ್‌ ತಡೆಯಲು ಹೊಸ ಬಿಟಿ ಹತ್ತಿ : ಚೋರ್‌ ಬಿಟಿ ಹತ್ತಿ ಅಧಿಕೃತವಾಗುತ್ತಾ..?

ಇದು ಹತ್ತಿ ಬೆಳೆಗಾರರ ವಿಚಾರ. ಭಾರತದಲ್ಲಿ ಹತ್ತಿ ಬೆಳೆಯುವ ದೊಡ್ಡ ಪ್ರದೇಶ ಇದೆ. ಹತ್ತಿಗೆ ದೊಡ್ಡ ಮಾರುಕಟ್ಟೆಯೂ ಇದೆ. ಆದರೆ, ಯಾವ ಹತ್ತಿ ಬೆಳೆಯಬೇಕು.. ಈ ವಿಷಯದಲ್ಲಿ ದೊಡ್ಡ ಚರ್ಚೆಯಂತೂ ನಡೆಯುತ್ತಿದೆ. ಹತ್ತಿ ಬೆಳೆಯಲ್ಲಿ ದೊಡ್ಡ ಸಮಸ್ಯೆ ಎಂದರೆ ಕಳೆ. ಆದರೆ ಆ ಕಳೆಯನ್ನು ನಾಶ ಮಾಡುವುದಕ್ಕೆ ಬಳಸುವ ಕೀಟನಾಶಕ ಅಥವಾ ಕಳೆ ನಾಶಕ ಗ್ಲೈಪೋಸೆಟ್‌  ಆರೋಗ್ಯಕ್ಕೆ ಹಾನಿಕಾರಕ. ಅದಕ್ಕೆ ಪರಿಹಾರ ಎಂದು ಸದ್ಯಕ್ಕೆ ಕಾಣುತ್ತಿರುವುದು ಬಿಟಿ ಹತ್ತಿ. ಹೋಗಲಿ ಈ ಬಿಟಿ ಹತ್ತಿ ಬಂದರೆ, ಕಳೆನಾಶಕದ ಸಮಸ್ಯೆ ಪರಿಹಾರವಾಗುತ್ತಾ ಎಂದರೆ, ಹೌದು. ಆದರೆ ಅದು ಇನ್ನೊಂದು ಹೊಸ ಸಮಸ್ಯೆಗೆ ಮೂಲವಾಗುತ್ತೆ ಎನ್ನುವುದೂ ಅಷ್ಟೇ ನಿಜ.

ನವದೆಹಲಿಯಲ್ಲಿ ಈ ಬಗ್ಗೆ ಇತ್ತೀಚೆಗೆ ಸಭೆ ನಡೆದಿದೆ. ಕೃಷಿ ಆಯುಕ್ತ ಪಿಕೆ ಸಿಂಗ್‌ ಪರಿಸ್ಥಿತಿಯ ಸಂದಿಗ್ಧತೆಯನ್ನು ವಿವರವಾಗಿ ತಿಳಿಸಿದ್ದಾರೆ. ಒಂದು ಕಡೆ ಬೆಳೆಗಳಲ್ಲಿ ಗ್ಲೈಪೋಸೈಟ್‌ ಬಳಕೆಗೆ ಅನುಮತಿ ಎಂಬ ಒತ್ತಡ ಉದ್ಯಮಗಳದ್ದು. ಆದರೆ ಇದು ಪರಿಸರಕ್ಕೆ ಹಾನಿಕಾರಕ. ಇದರ ಬಳಕೆ ತಡೆಯುವುದಕ್ಕೆ ಕಳೆನಾಶಕ ಸಹಿಷ್ಣು ಬಿಸಿ (ಹೆಚ್‌ʻಟಿಬಿಟಿ) ಹತ್ತಿಗೆ ಅನುಮತಿ ನೀಡಬೇಕೇ ಬೇಡವೇ ಅನ್ನೋ ಚರ್ಚೆ ನಡೆಯುತ್ತಿದೆ. ಇದಕ್ಕೆ ಸಾಕಷ್ಟು ಆಕ್ಷೇಪಗಳೂ ಬಂದಿವೆ. ಅಧ್ಯಯನ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಗ್ಲೈಪೋಸೈಟ್‌ ಕಳೆನಾಶಕ್ಕೆ ಮಾತ್ರ ಬಳಸಬೇಕು. ಆದರೆ ಇದನ್ನು ಬೆಳೆಗಳಲ್ಲಿಯೂ ಕಳೆನಾಶಕ್ಕೆ ಬಳಸಲಾಗ್ತಾ ಇದೆ. ಹತ್ತಿ ಬೆಳೆಯಲ್ಲಿನ ಕಳೆ ನಾಶಕ್ಕೆ ಬಳಸುತ್ತಿರುವುದು ಕಾನೂನು ಬಾಹಿರ. ಆದರೆ ಕಳೆ ತೆಗೆಯುವುದಕ್ಕೆ ಆಳುಗಳು ಸಿಗುತ್ತಿಲ್ಲ. ಹೀಗಾಗಿ ಈ ಕೆಮಿಕಲ್‌ ಬಳಸಿದರೆ ಕಳೆನಾಶ ಆಗುತ್ತದೆ ಎಂಬ ಕಾರಣಕ್ಕೆ ರೈತರು ಹೆಚ್ಚು ಹೆಚ್ಚು ಈ ಗ್ಲೈಪೋಸೈಟ್‌ ಮೊರೆ ಹೋಗುತ್ತಿದ್ದಾರೆ. ಮಾಹಿತಿಯ ಪ್ರಕಾರ ಈ ಕೆಮಿಕಲ್‌ ಬಳಕೆ ಹೆಚ್ಚಿರುವುದು ಮಹಾರಾಷ್ಟ್ರದಲ್ಲಿ.ಸಹಜವಾಗಿಯೇ ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿಯೂ ಈ ಕಳೆನಾಶಕವನ್ನು ಬಳಸಲಾಗ್ತಾ ಇದೆ.

ಈಗ ಗ್ಲೈಪೋಸೈಟ್‌ ಕಳೆನಾಶ ಬಳಕೆ ಕಂಟ್ರೋಲ್‌ ಮಾಡುವುದು ಮೊದಲ ಗುರಿ. ಏಕೆಂದರೆ ಗ್ಲೈಪೋಸೈಟ್‌ ಕಳೆನಾಶಕ ಭೂಮಿಗೆ ಸೇರಿ, ಅಂತರ್ಜಲವನ್ನೂ ಸೇರಿ ಮನುಷ್ಯರು ಮತ್ತು ಪ್ರಾಣಿಗಳ ದೈಹಿಕ ಆರೋಗ್ಯದ ಮೇಲೆ ದುಷ್ಟ್ಪರಿಣಾಮ ಬೀರುತ್ತಿವೆ. ಅದು ಗಂಭೀರ ಮಟ್ಟದ ಪರಿಣಾಮವನ್ನೇ ಬೀರುತ್ತಿದೆ. ಆದರೆ ಹೆಚ್‌ಟಿಬಿಟಿ ಹತ್ತಿ ಬಂದರೆ ಗ್ಲೈಪೋಸೈಟ್‌ ಕಳೆನಾಶದ ಬಳಕೆ ಅಗತ್ಯ ಇಲ್ಲ. ಎಷ್ಟೇ ಕಳೆ ಇದ್ದರೂ, ಹತ್ತಿ ಬೆಳೆ ಸೊಂಪಾಗಿರುತ್ತದೆ. ಹೀಗಾಗಿ ಈ ಹೆಚ್‌ಟಿಬಿಟಿ ಹತ್ತಿಗೆ ಅನುಮತಿ ಕೊಡಿ ಎಂಬ ಡಿಮ್ಯಾಂಡ್‌ ಸೃಷ್ಟಿಯಾಗಿದೆ.

ಆದರೆ ಈ ಹೆಚ್‌ಟಿಬಿಟಿ ಹತ್ತಿಯೂ ಅಷ್ಟೇ, ಪರಿಸರಕ್ಕೆ ಮತ್ತು ಆರೋಗ್ಯಕ್ಕೆ ಡೇಂಜರ್.‌ ಗ್ಲೈಪೋಸೈಟ್‌ ಕಳೆನಾಶಕದಷ್ಟೇ ಅಥವಾ ಅದಕ್ಕಿಂತಲೂ ಅಪಾಯಕಾರಿ. ಈ ಹೆಚ್‌ಟಿಬಿಟಿ ಹತ್ತಿಗೆ ಅನುಮತಿ ಕೊಟ್ಟರೆ ದೇಶದ ಬಹುಪಾಲು ಹತ್ತಿ ಬಿತ್ತನೆ ಬೀಜದ ಕಂಪೆನಿಗಳು ದಿವಾಳಿ ಆಗುತ್ತವೆ ಎಂಬ ವಾದಗಳೂ ಇವೆ. ಹೀಗಾಗಿಯೇ ಭಾರತದಲ್ಲಿ ಈ ಹತ್ತಿಗೆ ಅನುಮತಿ ಕೊಟ್ಟಿಲ್ಲ.

ಆದರೆ ಗ್ಲೈಪೋಸೈಟ್‌ ಕಳೆನಾಶ ನಿಯಂತ್ರಣ ಮಾಡಬೇಕು ಎಂದರೆ ಹೆಚ್‌ಟಿಬಿಟಿ ಹತ್ತಿಯೇ ಆಗಬೇಕು ಎಂಬುದು ಮತ್ತೊಂದು ವಾದ. ಇದಕ್ಕಾಗಿ ಜರ್ಮನಿಯ ಬೇಯರ್ಸ್‌ ಕಂಪೆನಿ ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ. ಹಾಗಂತ ಹೆಚ್‌ಟಿಬಿಟಿ ಹತ್ತಿ ಸಿಗುತ್ತಲೇ ಇಲ್ಲ ಎಂದೂ ಅಲ್ಲ. ಕಳ್ಳಮಾರ್ಗದಲ್ಲಿ ಬಂದೂ ಆಗಿದೆ. ವಿಶೇಷವಾಗಿ ಗುಜರಾತ್‌ ಹಾಗೂ ಮಹಾರಾಷ್ಟ್ರದ ರೈತರು ಅಕ್ರಮವಾಗಿ ಹೆಚ್‌ಟಿಬಿಟಿ ಹತ್ತಿ ಬಳಸ್ತಾ ಇದ್ದಾರೆ. ಅದನ್ನ ಆ ರೈತರು ಚೋರ್‌ ಬಿಟಿ ಹತ್ತಿ ಅಂಥಾ ಕರೀತಿದ್ದಾರೆ.

ಸದ್ಯಕ್ಕೆ ಗ್ಲೈಪೋಸೈಟ್‌ ಕಳೆನಾಶಕ ತಡೆಗೆ ಹೆಚ್‌ಟಿಬಿಟಿ ಹತ್ತಿಗೆ ಅನುಮತಿ ನೀಡಬೇಕೋ.. ಬೇಡವೋ ಎಂಬ ಚರ್ಚೆಗಳು ನಡೆಯುತ್ತಿವೆ.

Tags: #ಬಿಟಿಹತ್ತಿ #ಗ್ಲೈಪೋಸೈಟ್‌ #ಕಳೆನಾಶಕ #btcotton #glyposite #weedkiller
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.