ಕಳೆದ ಗುರುವಾರ ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ್ ಎಂಬ ಎಂಸಿಎ ವಿದ್ಯಾರ್ಥಿಯನ್ನು ಫಯಾಜ್ ಎಂಬುವವನು ಕ್ಯಾಂಪಸ್ಸಿನಲ್ಲೇ ಬರ್ಬರವಾಗಿ ಕೊಲೆ ಮಾಡಿದ್ದ. ನಡುರಸ್ತೆಯಲ್ಲೇ.. ಅವರ ಕುಟುಂಬ ಹಾಗೂ ವಿದ್ಯಾರ್ಥಿಗಳ ಎದುರೇ 10 ಬಾರಿ ಚೂರಿಯಿಂದ ಚುಚ್ಚಿ ಚುಚ್ಚಿ ಕೊಂದಿದ್ದ. ಕೊಲೆಯಾದ ಹುಡುಗಿ ಕಾಂಗ್ರೆಸ್ ಕಾರ್ಪೊರೇಟರ್ ಮಗಳು. ನೇಹಾ ಹಿರೇಮಠ್ ಅವರನ್ನು ಕ್ಯಾಂಪಸ್ಸಿನಲ್ಲೇ ಚುಚ್ಚಿ ಚುಚ್ಚಿ ಕೊಂದ ಫಯಾಜ್, ಸದ್ಯಕ್ಕೆ ನ್ಯಾಯಾಂಗ ಬಂಧನದಲ್ಲಿದ್ದಾನೆ. ಆದರೆ.. ಆತನ ಮನಸ್ಥಿತಿ, ಕೊಲೆಯ ಭೀಕರತೆ ಇಡೀ ರಾಜ್ಯವನ್ನು ಎದ್ದು ಕೂರುವಂತೆ ಮಾಡಿದೆ. ಚಿತ್ರರಂಗದವರೂ ಇದಕ್ಕೆ ಹೊರತಲ್ಲ. ಚಿತ್ರರಂಗದ ಎಲ್ಲ ಕಲಾವಿದರು, ತಂತ್ರಜ್ಞರು ಘಟನೆಯ ಬಗ್ಗೆ ಆಕ್ರೋಶ ಹೊರಹಾಕುತ್ತಿದ್ಧಾರೆ.
ಹಂತಕನಿಗೆ ಶಿಕ್ಷೆಯಾಗಬೇಕು ಎಂದು ಮೊದಲು ಟ್ವೀಟ್ ಮಾಡಿದ್ದು ನಟ ಧ್ರುವ ಸರ್ಜಾ. ಅದಾದ ಮೇಲೆ ಶಿವಣ್ಣ ಸೇರಿದಂತೆ ಎಲ್ಲರೂ ಟ್ವೀಟ್ ಮಾಡಿದ್ದಾರೆ. ರಿಯಾಕ್ಷನ್ ಕೊಟ್ಟಿದ್ಧಾರೆ. ಆದರೆ.. ಕೆಲವರು ಮಾತ್ರ ನೋ ರಿಯಾಕ್ಷನ್.
ಚಿತ್ರರಂಗದವರೇ ಆದ.. ಪ್ರತಿಯೊಂದು ಘಟನೆಗೂ ಆಕ್ಟಿವ್ ಆಗಿರುವ ನಟ ಪ್ರಕಾಶ್ ರಾಜ್, ನಟ ಚೇತನ್ ಅವರು ಈ ಘಟನೆ ಬಗ್ಗೆ ಇದುವರೆಗೆ ಪ್ರತಿಕ್ರಿಯೆ ಕೊಟ್ಟಿಲ್ಲ. ಸೋಷಿಯಲ್ ಮೀಡಿಯಾದಲ್ಲೂ ಕಾಣುತ್ತಿಲ್ಲ. ಇದಕ್ಕೆ ರಿಯಾಕ್ಷನ್ ಕೊಡದೆ ಎಲ್ಲಿ ಹೋದಿರಿ.. ಅನ್ನೋ ಪ್ರಶ್ನೆಯನ್ನು ಕೇಳುತ್ತಿರುವುದು ಜನ.
ಶಿವ ರಾಜ್ ಕುಮಾರ್, ನಟ
ಈ ರೀತಿಯ ಅಮಾನುಷ ಘಟನೆ ಮತ್ತೆಂದೂ ಮರುಕಳಿಸದಿರಲಿ. ಮಗಳನ್ನು ಕಳೆದುಕೊಂಡ ಆ ತಂದೆ ತಾಯಿಯ ಆಕ್ರಂದನ ನೋಡಲಾಗದು. ನಮ್ಮ ಸರ್ಕಾರ, ನ್ಯಾಯಾಂಗ ವ್ಯವಸ್ಥೆ, ಹಾಗೂ ಪೊಲೀಸ್ ಆದಷ್ಟು ಬೇಗ ನೇಹಾ ಹಿರೇಮಠ್ ಸಾವಿಗೆ ನ್ಯಾಯ ದೊರಕುವಂತೆ ಮಾಡಲಿ ಎನ್ನುವುದು ನನ್ನ ಕಳಕಳಿಯ ವಿನಂತಿ.
ದರ್ಶನ್, ನಟ
ಪ್ರೀತಿಯ ಹೆಸರಲ್ಲಿ ಇಂತ ಅಮಾನುಷಕರವಾದ ಕೃತ್ಯ ಮಾಡಿರುವವರಿಗೆ ನ್ಯಾಯಾಂಗದ ಅನುಸಾರವಾಗಿ ತಕ್ಕ ಶಿಕ್ಷೆ ಸಿಗಲಿ. ಇನ್ನು ಬಾಳಿ ಬದುಕಬೇಕಿದ್ದ 23 ವಯಸ್ಸಿನ ನೇಹಾ ಹಿರೇಮಠ್ ರವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ.
ರಿಷಬ್ ಶೆಟ್ಟಿ, ನಟ, ನಿರ್ದೇಶಕ
ನೇಹಾ ಹಿರೇಮಠ್ ಅವರ ಘಟನೆ ಅಮಾನವೀಯವಾಗಿದೆ. ಇಂತಹ ಘಟನೆ ಮರುಕಳಿಸದಂತೆ ಕಾನೂನು ಕ್ರಮಗಳನ್ನು ತಪ್ಪಿತಸ್ಥರ ಮೇಲೆ ಕೈಗೊಳ್ಳಬೇಕೆಂದು ವಿನಂತಿಸುತ್ತಾ,ನೇಹಾ ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ದೇವರು ಕೊಡಲಿ ಎಂದು ಪ್ರಾರ್ಥಿಸುತ್ತೇನೆ.
ರಕ್ಷಿತ್ ಶೆಟ್ಟಿ, ನಟ, ನಿರ್ದೇಶಕ
ನೇಹಾ ಹಿರೇಮಠ್ ಅವರ ಘಟನೆ ಅಮಾನವೀಯವಾಗಿದೆ. ಇಂತಹ ಘಟನೆ ಮರುಕಳಿಸದಂತೆ ಕಾನೂನು ಕ್ರಮಗಳನ್ನು ತಪ್ಪಿತಸ್ಥರ ಮೇಲೆ ಕೈಗೊಳ್ಳಬೇಕೆಂದು ವಿನಂತಿಸುತ್ತಾ,ನೇಹಾ ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ದೇವರು ಕೊಡಲಿ ಎಂದು ಪ್ರಾರ್ಥಿಸುತ್ತೇನೆ.
ಅಶ್ವಿನಿ ಪುನೀತ್, ನಿರ್ಮಾಪಕಿ
ನೇಹಾ ಹಿರೇಮಠ ಅವರ ಸಾವಿಗೆ ನ್ಯಾಯ ಸಿಗಲಿ ಎಂಬುದು ನಮ್ಮೆಲ್ಲರ ಆಶಯ. ಕಾನೂನಿನ ಅಡಿಯಲ್ಲಿ ಇಂತಹ ಕಹಿ ಘಟನೆಗಳು ಮರುಕಳಿಸದಂತೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ನೀಡಲಿ
ಅನುಶ್ರೀ, ನಟಿ
ಒಳ್ಳೇ ಬುದ್ದಿ ಹೇಳಿಕೊಡುವ ವಿದ್ಯಾ ದೇಗುಲವೇ ಕಲುಷಿತವಾಯ್ತು. ಸಮಾಜದಲ್ಲಿ ಬಾಳಿ ಬದುಕಬೇಕಾದ ಒಂದು ಹೆಣ್ಣಿನ ಜೀವ ಮಣ್ಣಾಯ್ತು. ಇದಕ್ಕೆ ಉತ್ತರ ಒಂದೇ …. ʻʻನ್ಯಾಯ“. ಆ ಕಣ್ಣಿರಿಗೆ ಉತ್ತರ ʻʻನ್ಯಾಯ ”
ಪವನ್ ಒಡೆಯರ್, ನಿರ್ದೇಶಕ
ಜೊತೆಯಲ್ಲಿ ಹುಟ್ಟಿಲ್ಲ ಬೆಳೆದಿಲ್ಲ, ಆದರೂ ಏನೋ ಸಂಕಟ ಆದ ಅನುಭವ ಸಹೋದರಿ ನೇಹಾ ಹಿರೇಮಠ್ ಸಾವು ಅಕ್ಷಮ್ಯ,ಅತ್ಯಂತ ಭಯಾನಕ ಹಾಗೂ ಕಳವಳಕಾರಿ. ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ಶೀಘ್ರದಲ್ಲೆ ವಿಧಿಸಬೇಕು.
ಥ್ರಿಲ್ಲರ್ ಮಂಜು, ನಟ, ನಿರ್ದೇಶಕ
ಗೋಮುಖ ವ್ಯಾಘ್ರ ಫಯಾಜ್ʻನನ್ನು ಶೀಘ್ರದಲ್ಲೇ ಗಲ್ಲಿಗೇರಿಸಬೇಕು. ಆ ನೀಚನಿಗೆ ಯಾವುದೇ ಕರುಣೆ ತೋರಿಸಬಾರದು.
ಪ್ರಣೀತಾ ಸುಭಾಷ್, ನಟಿ
ನೇಹಾ ಹಿರೇಮಠ್ ಅವರ ಕಥೆ ಹೇಳಿ ಬಹಳ ನೋವಾಯಿತು. ಅವರ ಕುಟುಂಬಕ್ಕೆ ದೇವರ ಶಕ್ತಿ ನೀಡಲಿ. ಜಾತಿ, ಧರ್ಮ, ಕೋಮುವಾದದ ವಿಚಾರಗಳು ಕೇವಲ ಓಟ್ ಬ್ಯಾಂಕ್ ರಾಜಕೀಯ ಆಗಿರುವ ಈ ದೇಶದಲ್ಲಿ ನ್ಯಾಯ ಗೆಲ್ಲುತ್ತದೆ ಎಂದು ಭರವಸೆ ಇಟ್ಟುಕೊಂಡಿದ್ದೇನೆ
ಕಾರುಣ್ಯ ರಾಮ್, ನಟಿ
ಮನಸ್ಸಿನಲ್ಲಿ ಹೆಚ್ಚು ಆತಂಕ. ಹೆಣ್ಣು ಮಕ್ಕಳಿಗೆ ಸುರಕ್ಷತೆ ಇದೆಯಾ? ನೇಹಾ ಹಿರೇಮಠ್ ಅವರ ಹತ್ಯೆ ಪ್ರತಿಯೊಬ್ಬ ಹೆಣ್ಣುಮಗಳಿಗೂ ಹಾಗು ಪೋಷಕರಿಗೆ ಆತಂಕ ಉಂಟು ಮಾಡಿದೆ. ಈ ಹೀನ ಕೃತ್ಯವನ್ನು ಮಾಡಿರುವ ಪಾಪಿ ಫಯಾಜ್ಗೆ ಅತ್ಯಂತ ಕ್ರೂರವಾದ ಶಿಕ್ಷೆಯಾಗಬೇಕು. ನೇಹಾ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ
ರಚಿತಾ ರಾಮ್, ನಟಿ
ರಾಜಕೀಯ ಆಯಾಮದಲ್ಲಿ ಪ್ರಕರಣ ತರಬೇಡಿ. ನೇಹಾಗೆ ನ್ಯಾಯ ಸಿಗಲಿ. ಜಾತಿ ಧರ್ಮ ಯಾವುದೇ ಆಗಿರಲಿ, ಮೊದಲು ನಾವು ಮಾನವರು. ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಹಂತಕನಿಗೆ ಅತ್ಯುಗ್ರ ಶಿಕ್ಷೆಯಾಗಬೇಕು.
ಕಿಶೋರ್, ನಟ
ಹಂತಕರಿಗೆ ಶಿಕ್ಷೆಯಾಗಬೇಕು. ಆದರೆ.. ಕೊಂದವನು ಹಿಂದೂನೋ.. ಮುಸ್ಲಿಮನೋ ಎಂದು ಹುಡುಕುವುದು ಬೇಡ. ಈ ನೋವಿನ ಕ್ಷಣದಲ್ಲೂ ಅದರಲ್ಲಿ ಹಿಂದೂ ಮುಸ್ಲಿಂ ಅಂತ ಮಾತನಾಡುವುದು ಎಷ್ಟು ಸರಿ? ಇಡೀ ಕೋಮಿನ ಮೇಲೆ ಎಪರಾಧ ಹೊರಿಸುವುದು ಎಷ್ಟು ಸರಿ? ದಿನಕ್ಕೆ 78 ಕೊಲೆಗಳಾಗುವ, ಮಹಿಳೆಯರ ವಿರುದ್ಧ ದಿನಕ್ಕೆ 1224 ಅಪರಾಧಗಳಾಗುವ ನಾಡಿನಲ್ಲಿ ಎಷ್ಟು ಹಿಂದೂ? ಎಷ್ಟು ಕ್ರೈಸ್ತ ಅಪರಾಧಿಗಳು? ಹಾಗೆಂದರೆ ಆ ಧರ್ಮದ ನಾವೆಲ್ಲರೂ ಅಪರಾಧಿಗಳೇ? ಹಾಗೆ ನೋಡಿದರೆ ಎಷ್ಟು ಅಂತರ್ಧರ್ಮೀಯ ಜೋಡಿಗಳು ಅನ್ಯೋನ್ಯವಾಗಿ ಬಾಳುತ್ತಿಲ್ಲ? ಅದಕ್ಕೆ ಆ ಧರ್ಮಗಳೂ ಅದರ ಜನರೂ ಜವಾಬ್ದಾರಿಯೇ ? ಹೇಗೆ ?
ಹೀಗೆ ಹಲವರು ರಿಯಾಕ್ಷನ್ ಕೊಟ್ಟಿದ್ದರೆ.. ಮೋದಿಯನ್ನು ಟೀಕೆ ಮಾಡುವ ಯಾವ ವಿಷಯವನ್ನು ಬಿಡದ ನೀವು, ಅದೆಲ್ಲವನ್ನೂ ಜಾಗೃತಿಗಾಗಿ ಎಂದು ಸಮರ್ಥಿಸಿಕೊಳ್ಳುತ್ತೀರಿ. ಈ ವಿಷಯದ ಬಗ್ಗೆ ಮೌನವೇಕೆ ಅನ್ನೋದು ಮೋದಿ ಪರ ನಿಂತವರ ಪ್ರಶ್ನೆ.
ಚಿತ್ರರಂಗದಲ್ಲಿ ಈ ಪ್ರಶ್ನೆ ಎತ್ತಿದ್ದು ಪ್ರಥಮ್. ಹುಬ್ಬಳ್ಳಿಯ ನೇಹಾ ಅವರ ಮನೆಗೇ ಹೋಗಿ ಮಾತನಾಡಿದ್ದ ಪ್ರಥಮ್ ಹಿಂದೂಗಳಲ್ಲಿಯೇ ಹುಡುಗಿಯರು ಬೇಕಾ.. ಮುಸ್ಲಿಮರಲ್ಲಿ ಸಿಗಲ್ವಾ ಎಂದು ವಿವಾದವನ್ನೂ ಹುಟ್ಟು ಹಾಕಿದ್ಧಾರೆ. ಅದಕ್ಕೆ ವಿರೋಧವೂ ವ್ಯಕ್ತವಾಗುತ್ತಿದೆ.



