ಬಿಹಾರದಲ್ಲಿ ಮತದಾರರು ಮತ್ತೆ ಮತ್ತೆ ಕನ್ ಫ್ಯೂಸ್ ಮಾಡ್ತಿದ್ದಾರೆ. ನವೆಂಬರ್ 6ಕ್ಕೆ ಮೊದಲ ಹಂತದ ಮತದಾನ. 11ಕ್ಕೆ ಎರಡನೇ ಹಂತ ನಡೆಯಲಿದೆ. 14ಕ್ಕೆ ರಿಸಲ್ಟ್ ಬರಲಿದೆ. ಈ ವೇಳೆ ಹಲವು ಸಮೀಕ್ಷೆಗಳು ಹೊರಬಿದ್ದಿವೆ. ಆದರೆ ಸಮೀಕ್ಷೆಯ ಫಲಿತಾಂಶ ನೋಡಿದವರು ತಲೆಯನ್ನ ಪರಪರ ಕೆರೆದುಕೊಳ್ಳೋದು ಗ್ಯಾರಂಟಿ. ಏಕೆಂದರೆ ಬಿಹಾರದಲ್ಲಿ ಮತದಾರರ ಸಮೀಕ್ಷೆಯ ಪ್ರಕಾರ ಎನ್‌ಡಿಎ ಗೆಲ್ಲಬೇಕು.. ಅದರೆ ಎನ್‌ಡಿಎ ವಿರೋಧಿ ಅಭ್ಯರ್ಥಿ ತೇಜಸ್ವಿ ಯಾದವ್ ಸಿಎಂ ಆಗಬೇಕು ಅಂತಿವೆ ಸಮೀಕ್ಷೆಗಳು.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ಜನತಾದಳ (ಯುನೈಟೆಡ್) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಅಧಿಕಾರವನ್ನು ಉಳಿಸಿಕೊಳ್ಳಲಿದೆ.. ಇದು ಬಹುತೇಕ ಸಮೀಕ್ಷೆಗಳ ಫಲಿತಾಂಶ. ಲೋಕ್ ಪೋಲ್ ಮೊದಲಾದ ಒಂದೆರಡು ಸಮೀಕ್ಷೆಗಳನ್ನು ಆಚೆ ಗಿಟ್ಟಿರೆ.. ಎಲ್ಲ ಸಮೀಕ್ಷೆಗಳಲ್ಲೂ ಎನ್‌ಡಿಎ ಮುನ್ನಡೆಯಲ್ಲಿದೆ. ವಿರೋಧ ಪಕ್ಷಗಳ ಮಹಾಮೈತ್ರಿಕೂಟವು ಹಿಂದುಳಿದಿರುವಂತೆ ಕಂಡುಬರುತ್ತಿದೆ. ಒಟ್ಟಾರೆಯಾಗಿ, ಅಭಿಪ್ರಾಯ ಸಂಗ್ರಹದ ಮಾಹಿತಿಯು ಇದೀಗ ಅಧಿಕಾರದಲ್ಲಿರುವ ಎನ್‌ಡಿಎ ಪರವಾಗಿ ಕಂಡುಬರುತ್ತಿದೆ. ಆದರೆ ಸಿಎಂ ಆಯ್ಕೆಯಲ್ಲೇ ಎಡವಟ್ಟು ಆಗುತ್ತಿದೆ. ಮುಂದಿನ ಸಿಎಂ ಯಾರಾಗಬೇಕು ಎಂಬ ಪ್ರಶ್ನೆಗೆ ಈಗಲೂ ತೇಜಸ್ವಿ ಯಾದವ್ ಅವರೇ ಮುಂಚೂಣಿಯಲ್ಲಿದ್ಧಾರೆ.
ತೇಜಸ್ವಿ ಯಾದವ್, ಈ ಹಿಂದೆ ಜೆಡಿಯು-ಆರ್‌ಜೆಡಿ ಮೈತ್ರಿ ಸರ್ಕಾರದಲ್ಲಿ ಡಿಸಿಎಂ ಆಗಿದ್ದವರು. ಬಿಹಾರದ ಲಾಲೂ ಪ್ರಸಾದ್ ಯಾದವ್ ಅವರ ದೊಡ್ಡ ಮಗ. ಜಾತಿ ಮತ್ತು ಯಂಗ್ ಎಂಬ ಕಾರಣಕ್ಕೆ ತೇಜಸ್ವಿ ಯಾದವ್ ಅವರ ಪರ ಒಲವು ಕಂಡು ಬರುತ್ತಿದೆ. ಇಲ್ಲಿ ಯಾದವ್ ಕುಟುಂಬದ ಮೇಲಿರುವ ಭ್ರಷ್ಟಾಚಾರದ ಆರೋಪಗಳು, ಈಗಾಗಲೇ ಶಿಕ್ಷೆ ಅನುಭವಿಸುತ್ತಿರುವ ಲಾಲೂ ಅವರ ಭ್ರಷ್ಟಾಚಾರವನ್ನು ಜನ ಮರೆತಿದ್ದಾರೆ.
ವಿಶೇಷ ಅಂದ್ರೆ.. ಭ್ರಷ್ಟಾಚಾರ ಮಾಡೋದ್ರಲ್ಲಿ ತಪ್ಪೇನು.. ಎಲ್ರೂ ಮಾಡೋದೇ ಅಲ್ವಾ.. ಅನ್ನೋದು ಕೆಲವರ ವಾದವಾದರೆ.. ಇನ್ನೂ ಕೆಲವರು ಲಾಲೂ ಕರಪ್ಟ್ ಆಗಿದ್ರೂ.. ನಮಗೋಸ್ಕರಾನೇ ಎಂದು ವಾದ ಮಾಡ್ತಿದ್ದಾರೆ. ಮತ್ತಷ್ಟು ಜನರಿಗೆ ಲಾಲೂ ಯಾವುದೇ ತಪ್ಪು ಮಾಡಿಲ್ಲ. ವಿಚಿತ್ರ ಅಂದ್ರೆ.. ಲಾಲೂ ಆರೋಗ್ಯದ ಕಾರಣ ನೀಡಿ ಪರೋಲ್ ಮೇಲೆ ಇರುವ ವಿಷಯ ಬಹುತೇಕರಿಗೆ ಗೊತ್ತಿಲ್ಲ. ಲಾಲೂ ಅವರಿಗೆ ಶಿಕ್ಷೆಯಾಗಿರುವುದೂ ಗೊತ್ತಿಲ್ಲ.
ಹೀಗಾಗಿ ಸಮೀಕ್ಷೆ ಪ್ರಕಾರ ತೇಜಸ್ವಿ ಯಾದವ್ ಸಿಎಂ ರೇಸಿನಲ್ಲಿ ನಂ.1 ಸ್ಥಾನದಲ್ಲಿದ್ದರೆ, ನಂತರದ ಸ್ಥಾನ ನಿತೀಶ್ ಕುಮಾರ್ ಅವರದ್ದು. ಸಮೀಕ್ಷೆಯ ಫಲಿತಾಂಶಗಳು ಹೀಗಿವೆ.
ಒಟ್ಟಾರೆಯಾಗಿ, ತೇಜಸ್ವಿ ಯಾದವ್ (RJD) ಅವರನ್ನು ಬಹುತೇಕ ಸಮೀಕ್ಷೆಗಳಲ್ಲಿ ಅತಿ ಹೆಚ್ಚು ಜನರು ಸಿಎಂ ಆದಾಗಿ ಬಯಸುತ್ತಿದ್ದಾರೆ. (33-36%).
ನಿತೀಶ್ ಕುಮಾರ್ (JD(U)) ಅವರಿಗೆ 15-42% ಬೆಂಬಲವಿದ್ದರೂ, ಆಡಳಿತ ವಿರೋಧಿ ಅಲೆ ಕಾರಣದಿಂದ ಕೆಲವು ಸಮೀಕ್ಷೆಗಳಲ್ಲಿ ಅವರ ಬೆಂಬಲ ಕಡಿಮೆಯಾಗಿದೆ.
ಪ್ರಶಾಂತ್ ಕಿಶೋರ್ (ಜನ್ ಸೂರ್ಯ) ಅವರ ಬೆಂಬಲವು ಏರಿಕೆಯಾಗುತ್ತಿದ್ದು, 9-23% ಇದೆ.
ಈ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ನಿರೀಕ್ಷೆಯಿದೆ. ಬಿಜೆಪಿ 80ರಿಂದ 85 ಸ್ಥಾನಗಳನ್ನು ಗೆಲ್ಲಬಹುದು. ಜೆಡಿಯು 60ರಿಂದ 65 ಸ್ಥಾನಗಳನ್ನು ಗೆಲ್ಲಬಹುದು. ಜಿತನ್ ರಾಮ್ ಮಾಂಝಿ ಅವರ ಪಕ್ಷ 3ರಿಂದ 6 ಸ್ಥಾನಗಳನ್ನು ಗೆಲ್ಲಬಹುದು. ಚಿರಾಗ್ ಪಾಸ್ವಾನ್ ಅವರ ಪಕ್ಷ 4ರಿಂದ 6 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಎನ್ಡಿಎಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ. ವಿರೋಧ ಪಕ್ಷಗಳಲ್ಲಿ, ಆರ್‌ಜೆಡಿ 60ರಿಂದ 65 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಕಾಂಗ್ರೆಸ್ 7ರಿಂದ 10 ಸ್ಥಾನಗಳನ್ನು ಗೆಲ್ಲಬಹುದು. ಸಿಪಿಐ-ಎಂಎಲ್ 6ರಿಂದ 9 ಸ್ಥಾನಗಳನ್ನು ಗೆಲ್ಲಬಹುದು ಮತ್ತು ಮುಖೇಶ್ ಸಾಹ್ನಿ ಅವರ ಪಕ್ಷ 2ರಿಂದ 4 ಸ್ಥಾನಗಳನ್ನು ಗೆಲ್ಲಬಹುದು. ಮಹಾ ಮೈತ್ರಿಕೂಟದಲ್ಲಿ ಆರ್‌ಜೆಡಿ ಅತಿ ಹೆಚ್ಚು ಸ್ಥಾನ ಪಡೆಯಲಿದೆ.
ಹೊಸ ಪಕ್ಷವಾದ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಸ್ಥಾಪಿಸಿದ ಜನ ಸುರಾಜ್ ಪಕ್ಷವು ಶೇ. 7ರಷ್ಟು ಮತಗಳನ್ನು ಪಡೆದು 2ರಿಂದ 5 ಸ್ಥಾನಗಳನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿದೆ. ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಸೇರಿದಂತೆ ಇತರ ಪಕ್ಷಗಳು ಶೇ. 7ರಷ್ಟು ಮತಗಳನ್ನು ಪಡೆದು 7-10 ಸ್ಥಾನಗಳನ್ನು ಪಡೆಯಲಿವೆ.



