ಡಿಜಿಟಲ್ ಅರೆಸ್ಟ್ ಬಗ್ಗೆ ಜಾಗರೂಕತೆಯಿಂದ ಇರಿ. ಇಂಥಾದ್ದೊಂದು ಮಾತನ್ನು ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಹೇಳಿದ್ದಾರೆ. ದೇಶದ ಪ್ರಧಾನಿಯೇ ಮಾತನಾಡುತ್ತಿರುವ ಡಿಜಿಟಲ್ ಅರೆಸ್ಟ್ ಎಂದರೆ ಏನು? ಮೋದಿ ಇದರ ಬಗ್ಗೆ ಹೇಳಿದ್ದಾದರೂ ಏಕೆ? ಮೋದಿ ಪ್ರಸ್ತಾಪಿಸಿದ ಕರ್ನಾಟಕದ ವಿಜಯಪುರದ ಆ ಪ್ರಕರಣ ಯಾವುದು..? ಎಲ್ಲವನ್ನೂ ಕೂಲಂಕುಷವಾಗಿ ತಿಳಿದುಕೊಳ್ಳೋಣ.
ಮೋದಿ ಪ್ರಸ್ತಾಪ ಮಾಡಿದ ವಿಜಯಪುರದ ಡಿಜಿಟಲ್ ಅರೆಸ್ಟ್ : ಇತ್ತೀಚೆಗೆ ವಿಜಯಪುರದ ಸಂತೋಷ್ ಪಾಟೀಲ್ ಎಂಬ ವ್ಯಕ್ತಿಯನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿತ್ತು. ಸಂತೋಷ್ ಪಾಟೀಲ್ ಅವರಿಗೆ ನಿಮ್ಮ ಮೊಬೈಲ್ ನಂಬರ್ ವಿರುದ್ಧ 17 ಕೇಸ್ ದಾಖಲಾಗಿವೆ. ವಿಚಾರಣೆಗೆ ಹಾಜರಾಗಲು ಮುಂಬೈಗೆ ಬನ್ನಿ ಕರೆ ಮಾಡಲಾಗಿತ್ತು. ಇದರಿಂದ ಹೆದರಿದ ಸಂತೋಷ್ ಪಾಟೀಲ್, ವಂಚಕರು ಹೇಳಿದಂತೆ ಕೇಳಿದ್ದರು. ನಂತರ ವಂಚಕರು ಆಧಾರ್ ನಂಬರ್ ಕೆಲ ಓಟಿಪಿ ಪಡೆಯಲು ವಂಚಕ ಯತ್ನಿಸಿದ್ದರು. ಕ್ರೈಂ ಬ್ಯಾಂಚ್ ಪೊಲೀಸರ ಯೂನಿಫಾರ್ಮ್ ನಲ್ಲಿ ಕಾಲ್ ಮಾಡಿದ್ದ ಎನ್ನಲಾಗಿದ್ದು, ಇದರ ಸಂಪೂರ್ಣ ದೃಶ್ಯವನ್ನ ಸಂತೋಷ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಬಳಿಕ ಈ ಬಗ್ಗೆ ಸಂತೋಷ್ ವಿಜಯಪುರ ಸೆನ್ ಠಾಣೆಗೆ ದೂರು ನೀಡಿದ್ದರು.
ಏನಿದು ಡಿಜಿಟಲ್ ಅರೆಸ್ಟ್..?
ಯಾರಾದರೂ ಪೊಲೀಸರು ಅಥವಾ ಅಪರಾಧ ತನಿಖೆಗೆ ಸಂಬಂಧಪಟ್ಟ ಇಲಾಖೆಯವರು ಫೋನ್ ಮಾಡಿದರೆ, ಬನ್ನಿ, ವಿಚಾರಣೆ ಮಾಡಬೇಕು ಎಂದರೆ ಅದರ ಹಿಂದೂ ಮುಂದು ಗೊತ್ತಿಲ್ಲದವರು ಹೆದರುತ್ತಾರೆ. ಎಷ್ಟೋ ಜನರಿಗೆ ನಾನು ಈ ವರೆಗೂ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿಲ್ಲ ಎಂದು ಹೇಳುವುದು ಒಂದು ರೀತಿಯ ಹೆಮ್ಮೆ. ಅವರಿಗೆ ಪೊಲೀಸ್ ಇಲಾಖೆಯ ಕಾರ್ಯವೈಖರಿ ಹೇಗಿರುತ್ತೆ ಅನ್ನೋದು ಕೂಡಾ ಗೊತ್ತಿರಲ್ಲ. ಅಂತಹವರು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುತ್ತಾರೆ. ಅಂತಹವರನ್ನು ಹುಡುಕುತ್ತಾರೆ. ಯಾರಿಗೋ.. ಯಾವುದಕ್ಕೋ ಮಾಡಿದ ಕಮೆಂಟು, ಯಾವುದೋ ಪೋಸ್ಟು, ಯಾವುದನ್ನೂ ಶೇರ್ ಮಾಡಿದ್ದನ್ನು ಪ್ರಸ್ತಾಪಿಸಿ ವಾಟ್ಸಪ್ ಅಥವಾ ಸ್ಕೈಪ್ ಅಥವಾ ಝೂಮ್ ವಿಡಿಯೋ.. ಹೀಗೆ ಕಾಲ್ ಮಾಡ್ತಾರೆ. ತಾವು ಸೈಬರ್ ಕ್ರೈಂನವರು, ಮುಂಬೈನವರು, ದೆಹಲಿಯವರು.. ಎಂದೆಲ್ಲ ಹೇಳ್ತಾರೆ. ನಿಮಗೇ ಗೊತ್ತಿಲ್ಲದೆ ನಿಮ್ಮ ಮೇಲೆ ಕೇಸ್ ದಾಖಲಾಗಿದೆ. ವಿಚಾರಣೆಗೆ ಬನ್ನಿ ಅಂತಾ ಹೆದರಿಸ್ತಾರೆ.
ವಿಡಿಯೋ ಕಾಲ್ʻನಲ್ಲಿ ವಂಚಕರು ಪೊಲೀಸ್ ಸ್ಟೇಷನ್, ಸಿಬಿಐ ಆಫೀಸ್, ಇನ್ ಕಂ ಟ್ಯಾಕ್ಸ್, ಇಡಿ.. ಅಷ್ಟೇ ಏಕೆ ರಾ, ಇಂಟೆಲಿಜೆನ್ಸ್ ಮಾದರಿಯ ಸೆಟ್ ಕೂಡಾ ಹಾಕ್ಕೊಂಡು ವಿಡಿಯೋ ಕಾಲ್ ಮಾಡ್ತಾರೆ. ಯಾಮಾರಿದವರಿಗೆ ಕೇಸು ಹಾಕ್ತೀವಿ ಅಂತ ಹೆದರಿಸ್ತಾರೆ, ದುಡ್ಡು ಹಾಕಿಸಿಕೊಳ್ತಾರೆ. ಸ್ವಲ್ಪ ನಾಲೆಡ್ಜ್ ಇದೆ ಅನ್ನೋವ್ರಿಗೆ ಏನೂ ಮಾಡಕ್ಕಾಗಲ್ಲ, ಮುಂಬೈಗೋ.. ಮತ್ತೆಲ್ಲಿಗೋ ಬನ್ನಿ ಅಂತಾ ಹೇಳಿ, ಫೋನ್ ಇಡ್ತಾರೆ. ಆಮೇಲೆ ಇನ್ನೊಂದು ಕಾಲ್ ಬರುತ್ತೆ. ಅಲ್ಲಿ ಡೀಲ್ ಮಾಢ್ತೀವಿ, ಖುಲಾಸೆ ಮಾಡ್ತೀವಿ ಅಂತಾರೆ. ದುಡ್ಡು ಕಿತ್ಕೊಳ್ತಾರೆ. ಮೋದಿ ಹೇಳಿದ್ದು ಇಂತಹ ವಂಚಕರ ಬಗ್ಗೆ. ಮನೆಯಲ್ಲೇ ಇರ್ತೀರಿ, ಮೋಸ ಹೋಗ್ತೀರಿ, ಹುಷಾರ್ ಎಂಬ ಬಗ್ಗೆ. ಈ ರೀತಿ ಮಾಡುವುದನ್ನ ಡಿಜಿಟಲ್ ಅರೆಸ್ಟ್ ಅಂತಾರೆ.
ಕರ್ನಾಟಕದಲ್ಲಿಯೇ ಈ ರೀತಿಯ ೨೦ಕ್ಕೂ ಹೆಚ್ಚು ಪ್ರಕರಣಗಳು ಜರುಗಿವೆ. ಕೋಟ್ಯಂತರ ರೂಪಾಯಿ ವಂಚನೆಯಾಗಿವೆ. ಕೆಲವು ಪ್ರಕರಣಗಳು ವರದಿಯೇ ಆಗಿಲ್ಲ. ಇದು ಹನಿಟ್ರಾಪ್ ಅಲ್ಲ. ಕೇವಲ ಡಿಜಿಟಲ್ ಅರೆಸ್ಟ್.
ಮೋದಿ ವಾರ್ನಿಂಗ್ ಏನು..?
ಡಿಜಿಟಲ್ ಅರೆಸ್ಟ್ ದಂಧೆಯಲ್ಲಿ ನಿರತರಾಗಿರುವ ವಂಚಕರು ಜನರ ಖಾಸಗಿ ಮಾಹಿತಿಯನ್ನು ಮೊದಲು ಪಡೆದುಕೊಳ್ಳುತ್ತಾರೆ. ಎರಡನೇ ಹಂತದಲ್ಲಿ ಸರ್ಕಾರಿ ಕಚೇರಿ, ಕಾನೂನಿನ ಸೆಕ್ಷನ್‌ಗಳನ್ನು ಹೇಳಿ ಭಯದ ವಾತಾವರಣ ಸೃಷ್ಟಿಸುತ್ತಾರೆ. ಫೋನ್‌ನಲ್ಲೇ ಹೆದರಿಸುತ್ತಾರೆ. ಅವರ ಜತೆಗಿನ ಸಂಭಾಷಣೆ ವೇಳೆ ನಿಮಗೆ ಯೋಚನೆ ಮಾಡಲಿಕ್ಕೂ ಸಮಯವಾಗುವುದಿಲ್ಲ. ಮೂರನೇ ಹಂತದಲ್ಲಿ ಸಮಯದ ಒತ್ತಡವನ್ನು ಬಳಸಿ ಮೋಸ ಮಾಡುತ್ತಾರೆ. ಹೀಗಾಗಿ.. ಹೆದರಬೇಡಿ. ಮೊದಲು ನೀವು ಕೂಲ್ ಆಗಿರಿ.
ಕರೆ ಬರುತ್ತಿದ್ದಂತೆ ಗಾಬರಿಯಾಗಬೇಡಿ. ಆರಾಮವಾಗಿರಿ, ಆತುರದ ಕ್ರಮಗಳನ್ನು ತೆಗೆದುಕೊಳ್ಳಬೇಡಿ. ಯಾವುದೇ ಕಾರಣಕ್ಕೂ ವೈಯಕ್ತಿಕ ಮಾಹಿತಿಗಳನ್ನು ನೀಡಲು ಹೋಗಬೇಡಿ. ಸಾಧ್ಯವಾದರೆ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಿ. ರೆಕಾರ್ಡ್ ಮಾಡಿಕೊಳ್ಳಿ. ಇದು ಕಾಯಿರಿ ಎಂಬ ಮೊದಲ ಹಂತ.
2ನೇ ಹಂತ- ಯೋಚಿಸಿ. ಯಾವುದೇ ತನಿಖಾ ಸಂಸ್ಥೆ ಕೂಡ ಈ ರೀತಿ ಫೋನ್ ಮಾಡಿ ವಿಚಾರಣೆ ನಡೆಸುವುದಿಲ್ಲ ಅಥವಾ ವಿಡಿಯೋ ಕಾಲ್ ಮೂಲಕ ಹಣಕ್ಕೂ ಬೇಡಿಕೆ ಇಡುವುದಿಲ್ಲ.
ಮೂರನೇ ಹಂತ- ಕ್ರಮ ಜರುಗಿಸಿ. ರಾಷ್ಟ್ರೀಯ ಸೈಬರ್ ಹೆಲ್ಪ್‌ಲೈನ್ 1930ಗೆ ಕರೆ ಮಾಡಿ, ಇಂತಹ ಘಟನೆಗಳ ಕುರಿತು ವರದಿ ಮಾಡಿ. ಕುಟುಂಬ ಸದಸ್ಯರು ಹಾಗೂ ಪೊಲೀಸರಿಗೆ ತಿಳಿಸಿ ಎಂದು ಮೋದಿ ತಿಳಿಸಿದ್ದಾರೆ.



