Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

ನಾಗೇಂದ್ರ, ಭೈರತಿ, ಜಮೀರ್‌, ಲಕ್ಷ್ಮೀ ಹೆಬ್ಬಾಳ್ಕರ್‌, ತಿಮ್ಮಾಪುರ : ಸಿಎಂ ಸಿದ್ದರಾಮಯ್ಯಗೆ ಸಂಕಟ ತಂದ ಸಚಿವರು ಇವರೇ..!

SpeciallU by SpeciallU
November 6, 2024
in News, Politics
Reading Time: 1 min read
0 0
0
ನಾಗೇಂದ್ರ, ಭೈರತಿ, ಜಮೀರ್‌, ಲಕ್ಷ್ಮೀ ಹೆಬ್ಬಾಳ್ಕರ್‌, ತಿಮ್ಮಾಪುರ : ಸಿಎಂ ಸಿದ್ದರಾಮಯ್ಯಗೆ ಸಂಕಟ ತಂದ ಸಚಿವರು ಇವರೇ..!

ಸಿಎಂ ಸಿದ್ದರಾಮಯ್ಯ ಸದ್ಯಕ್ಕೆ ಮುಡಾ ಹಗರಣದಲ್ಲಿ ತಿರುಗುತ್ತಿದ್ದಾರೆ. ಸಿದ್ದರಾಮಯ್ಯ ಅವರ ರಾಜಕೀಯ ಜೀವನದಲ್ಲಿ ಇದೇ ಮೊದಲ ಬಾರಿಗೆ ಲೋಕಾಯುಕ್ತದವರ ಎದುರು ವಿಚಾರಣೆ ಎದುರಿಸುತ್ತಿದ್ದಾರೆ. ಸಿಎಂ ಆಗಿರುವ ವ್ಯಕ್ತಿಯೊಬ್ಬರು ಲೋಕಾಯುಕ್ತದ ಎದುರು ಭ್ರಷ್ಟಾಚಾರ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವುದು ಇತಿಹಾಸದಲ್ಲಿಯೇ ಮೊದಲು. ಆದರೆ ಸಿದ್ದರಾಮಯ್ಯ ೧೪ ಸೈಟುಗಳನ್ನೂ ವಾಪಸ್‌ ಕೊಟ್ಟು, 14 ಸೈಟುಗಳಿಗಾಗಿ ನಾನು ಅಪರಾಧ ಮಾಡುತ್ತೇನೆ ಎಂದರೆ ನಂಬುತ್ತೀರ.. ಸುಳ್ಳು ಕೇಸಿನ ವಿಚಾರಣೆಗೆ ಹಾಜರಾಗುತ್ತಿದ್ದೇನೆ, ನಾನು ಶುದ್ಧ, ದಾರಿ ತಪ್ಪುವವನಲ್ಲ ಎಂದು  ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಇದು ಸಿದ್ದರಾಮಯ್ಯನವರ ಕಥೆಯಾಯಿತು. ಆದರೆ ಸಿದ್ಧರಾಮಯ್ಯ ಅವರು ಸಿಎಂ ಆದ ನಂತರ ಅವರಿಗೆ ಸಂಕಷ್ಟ ತಂದೊಡ್ಡಿರುವ ಸಚಿವರ ಪಟ್ಟಿ ತೆಗೆದು ನೋಡಿದರೆ.. ದೊಡ್ಡ ಪಟ್ಟಿಯೇ ಇದೆ.

ಹೇಳಿಕೆಗಳಿಂದ ತೊಂದರೆ ಸೃಷ್ಟಿಸಿದ ಸಚಿವರು : ಗೃಹ ಸಚಿವ ಪರಮೇಶ್ವರ್‌, ಪ್ರಿಯಾಂಕ್‌ ಖರ್ಗೆ, ಶಿವಾನಂದ ಪಾಟೀಲ್ ಈ ಪಟ್ಟಿಯಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಪರಮೇಶ್ವರ್‌ ಅವರಂತೂ ಹಲವು  ಬಾರಿ ಸಿದ್ದರಾಮಯ್ಯನವರಿಗೆ ಅತ್ತ ಸಮರ್ಥಿಸಿಕೊಳ್ಳಲೂ ಆಗದೆ, ವಿರೋಧಿಸಲೂ ಆಗದಂತಹ ಪರಿಸ್ಥಿತಿ ಸೃಷ್ಟಿಸಿದ್ದಾರೆ. ನಂ.೨ ಸ್ಥಾನದಲ್ಲಿ ಇರುವವರು ಪ್ರಿಯಾಂಕ್‌ ಖರ್ಗೆ. ೩ನೇ ಸ್ಥಾನದಲ್ಲಿ ಶಿವಾನಂದ ಪಾಟೀಲ್‌ ಪೈಪೋಟಿ ಕೊಟ್ಟಿದ್ದಾರೆ.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಮುಜುಗರ ತಂದ ಸಚಿವರಲ್ಲಿ ನಾಗೇಂದ್ರ ನಂ.1

ಹೌದು, ವಾಲ್ಮೀಕಿ ನಿಗಮದ ಹಗರಣವನ್ನು ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಳ್ಳೋಕೆ ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಸಚಿವರಾಗಿದ್ದ ನಾಗೇಂದ್ರ ರಾಜೀನಾಮೆ ಕೊಟ್ಟರೂ, ಹಗರಣದ ಮಸಿಯಂತೂ ಮೆತ್ತಿಕೊಂಡಿತು. ಸಿದ್ದರಾಮಯ್ಯ ಮತ್ತು  ಸರ್ಕಾರದಲ್ಲಿರುವ ಸಚಿವರು ಏನೇ ಹೇಳಲಿ, ಅದು ರಾಜಕೀಯ ಹೇಳಿಕೆಗಳೇ ಹೊರತು, ವಾಸ್ತವದ ಅರಿವೂ ಅವರಿಗೂ ಇದ್ದಂತಿದೆ. ಏಕೆಂದರೆ ಒಬ್ಬ ಅಧಿಕಾರಿಯ ಆತ್ಮಹತ್ಯೆ, ಹಗರಣ ನಡೆದಿರುವುದಂತೂ ಸತ್ಯ ಎಂಬುದನ್ನು ತಿರಸ್ಕರಿಸಲು ಸಾಧ್ಯವಿಲ್ಲ.

ಭೈರತಿ ಸುರೇಶ್‌ ಮಾಡಿದ ಅವಾಂತರ..!

ಮುಡಾ ಹಗರಣದಲ್ಲಿ ಭೈರತಿ ಸುರೇಶ್‌ ಮಾಡಿರುವ ಎಡವಟ್ಟು, ಸಿದ್ದರಾಮಯ್ಯ ಅವರಿಗೆ ಮುಜುಗರ ತಂದಿದ್ದಂತೂ ನಿಜ. ಇದು ಸತ್ಯವಾ.. ಅಲ್ಲವಾ.. ಅದು ಬೇರೆ ಪ್ರಶ್ನೆ. ಏಕೆಂದರೆ ಸಾಕ್ಷಿಗಳೂ ಇಲ್ಲ. ದಾಖಲೆಗಳೂ ಇಲ್ಲ. ಒಂದು ಹಂತದಲ್ಲಿ ಸಿದ್ದರಾಮಯ್ಯ, ತಮ್ಮ ಪರಮಾಪ್ತರಲ್ಲಿ ಒಬ್ಬರಾಗಿದ್ದ ಭೈರತಿ ಅವರನ್ನು ದೂರ ಇಡುವ ಪರಿಸ್ಥಿತಿ ಬಂದಿತ್ತು.

ಅಬಕಾರಿ ಸಚಿವ ತಿಮ್ಮಾಪುರ ವಿರುದ್ಧ  ಲಂಚದ ಆರೋಪ 

ಯಾವುದೇ ಸರ್ಕಾರದಲ್ಲಿ ಅಬಕಾರಿ ಸಚಿವರಾಗುವುದಕ್ಕೆ ದೊಡ್ಡ ಪೈಪೋಟಿ ಇರುತ್ತದೆ. ಅಂತಹ ಖಾತೆಯಲ್ಲಿ ಕುಳಿತಿರುವ, ಸಿದ್ದರಾಮಯ್ಯ ಆಪ್ತರೂ ಆಗಿರುವ ಆರ್.‌ಬಿ.ತಿಮ್ಮಾಪುರ ಅವರ ಮೇಲೆ ಲಂಚಕ್ಕೆ ಡಿಮ್ಯಾಂಡ್‌ ಆರೋಪ ಕೇಳಿಬಂದಿದೆ. ಅದು ಯಾವ ಮಟ್ಟಿಗೆ ಎಂದರೆ ಮದ್ಯ ಮಾರಾಟಗಾರರು ಮದ್ಯ ಮಾರಾಟವನ್ನೇ ಒಂದು ದಿನ ಬಂದ್‌ ಮಾಡಿ ಪ್ರತಿಭಟನೆ ನಡೆಸುವುದಕ್ಕೆ ಸಿದ್ಧರಾಗಿದ್ದಾರೆ. ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ ಎಂಬುದಂತೂ ಸತ್ಯ.

ಲಕ್ಷ್ಮೀ ಹೆಬ್ಬಾಳ್ಕರ್‌ ಕೂಡಾ ನಾಗೇಂದ್ರ ಹಾದಿಯಲ್ಲಿ..!?

ಸಿದ್ದರಾಮಯ್ಯ ಸರ್ಕಾರದ ಅತೀ ಜನಪ್ರಿಯ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯೂ ಒಂದು. ಅಂತಾದ್ದೊಂದು ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿರುವ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಮೇಲೆ ಕೇಳಿ ಬರುತ್ತಿರೋ ಗಂಭೀರ ಆರೋಪವಿದು. ತಹಸೀಲ್ದಾರ್‌ ಆಗಿದ್ದ ರುದ್ರಣ್ಣ ಎಂಬುವವರು ಲಕ್ಷ್ಮೀ ಅವರ ಪಿಎ ಸೇರಿದಂತೆ ಮೂವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿಂದೆ ಇಂತಹುದೇ ಪ್ರಕರಣಗಳಲ್ಲಿ ಸಚಿವರಾಗಿದ್ದ ಜಾರ್ಜ್‌ (ಮೊದಲ ಬಾರಿ ಸಿಎಂ ಆಗಿದ್ದಾಗ) ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ, ಬಿಜೆಪಿಯಲ್ಲಿದ್ದ ಈಶ್ವರಪ್ಪ ಕಾಂಟ್ರಾಕ್ಟರ್‌ ಆತ್ಮಹತ್ಯೆ ಪ್ರಕರಣದಲ್ಲಿ, ಇತ್ತೀಚೆಗೆ ನಾಗೇಂದ್ರ ಅಧಿಕಾರಿಯೊಬ್ಬರ ಆತ್ಮಹತ್ಯೆ ಪ್ರಕರಣದಲ್ಲಿ ರಾಜೀನಾಮೆ ಕೊಟ್ಟಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್‌ ಕೂಡಾ ರಾಜೀನಾಮೆ ಕೊಡಬೇಕಾಗುತ್ತಾ..?

ಜಮೀರ್‌ ಅಹ್ಮದ್‌ ವಕ್ಫ್‌ ವಿವಾದ

ಇನ್ನು ವಕ್ಫ್‌ ಖಾತೆ ಸಚಿವ ಜಮೀರ್‌ ಅಹ್ಮದ್‌ ಅವರಿಗೆ ವಕ್ಫ್‌ ಆಸ್ತಿಗಳನ್ನೆಲ್ಲ ದಾಖಲೆ ಮಾಡಿಕೊಳ್ಳುವ ಅತ್ಯುತ್ಸಾಹ, ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸಿದೆ. ಜಮೀರ್‌ ಮಾಡಿದ್ದು, ಮಾಡುತ್ತಿರುವುದು ತಪ್ಪು, ಸರಿ ಅಲ್ಲ ಎಂದರೆ ಮುಸ್ಲಿಮರ ಮತ ದೂರವಾಗುವ ಭಯ ಕಾಡುತ್ತಿದೆ. ಹಾಗಂತ ಸುಮ್ಮನಿದ್ದರೆ ಕಾಂಗ್ರೆಸ್ಸಿನ ಬಹುತೇಕ ಹಿಂದೂ ಮತದಾರರು ದೂರ ಸರಿಯುವ ಭಯ. ಅಡಕತ್ತರಿಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದೆ ಸಿದ್ದರಾಮಯ್ಯ ಮತ್ತು ಸಿದ್ದರಾಮಯ್ಯ ನೇತೃತ್ವದ ಸರ್ಕಾರ.

Tags: Bar and restaurant‌CM SiddaramaiahExercise deportmentLiquorMinister Bhairathi Sureshminister Lakshmi HebbalkarMinister Priyank KhargeMinister RB Thimmapuraminister Zameer ahmadMRP storesಅಬಕಾರಿ ಸಚಿವಆರ್‌ ಬಿ ತಿಮ್ಮಾಪುರನಾಗೇಂದ್ರಮದ್ಯ ಮಾರಾಟ ಬಂದ್ಸಚಿವ ಜಮೀರ್‌ ಅಹ್ಮದ್‌ಸಚಿವ ಪ್ರಿಯಾಂಕ್‌ ಖರ್ಗೆಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ಸಿಎಂ ಸಿದ್ದರಾಮಯ್ಯ
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.