ಕನ್ನಡ ಚಿತ್ರರಂಗದ ಪ್ರಖ್ಯಾತ ನಿರ್ದೇಶಕ, ನಿರ್ಮಾಪಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಹೆಸರು ಆರ್.ಎಸ್.ಎಸ್.ನವರ ಒಂದು ಆಹ್ವಾನ ಪತ್ರಿಕೆಯಲ್ಲಿ ಮುದ್ರಿತವಾಗಿತ್ತು. ಜುಲೈ 16ರಂದು ನಿಜಗುಣ ಕಲ್ಯಾಣ ಮಂಟಪದಲ್ಲಿ ನಡೆಯಬೇಕಿದ್ದ ಗುರುಪೂಜಾ ಉತ್ಸವದಲ್ಲಿ ನಾಗತಿಹಳ್ಳಿ ಭಾಗಿಯಾಗಬೇಕಿದ್ದ ಕಾರ್ಯಕ್ರಮ ಅದು. ನಾಗತಿಹಳ್ಳಿ ಮೇಷ್ಟ್ರಾಗಿದ್ದ ಕಾರಣ ಇದ್ದರೂ ಇರಬಹುದು ಎಂದುಕೊಂಡವರಿದ್ದರು. ಆದರೆ ಇದು ಎಡಪಂಥೀಯರ ಕೆಂಗಣ್ಣಿಗೆ ಬಿತ್ತು.
ಧರ್ಮ ಸಾಮರಸ್ಯದ ಪರ, ದ್ವೇಷ ರಾಜಕಾರಣದ ವಿರೋಧಿಯಾಗಿ ಗುರುತಿಸಿಕೊಂಡಿರುವ ನಾಗತಿಹಳ್ಳಿ ಚಂದ್ರಶೇಖರ್, ಧರ್ಮ ದ್ವೇಷದ ಮೂಲ ಎಂದು ಆರೋಪಿಸಲಾಗುವ ಆರ್ಎಸ್ಎಸ್ನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಬಗ್ಗೆ ಎಡಪಂಥೀಯರು ಅಕ್ರೋಶಗೊಂಡರು. ನಾಗತಿಹಳ್ಳಿ ಒಳ ಬಲಪಂಥೀಯ ಎಂದು ಟೀಕೆ ಮಾಡಿದ್ರು.
ಆರ್.ಎಸ್.ಎಸ್ ಆಯೋಜಿಸಿರುವ ಶ್ರೀ ಗುರುಪೂಜಾ ಉತ್ಸವ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಳ್ಳುತ್ತಿಲ್ಲ. ಅದನ್ನು ನಾನು ಆಯೋಜಕರಿಗೂ ತಿಳಿಸಿದ್ದೆ. ಆದರೆ, ಆಕಸ್ಮಿಕವಾಗಿ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಮುದ್ರಣವಾಗಿದೆ ಎಂದು ಆಯೋಜಕರು ತಿಳಿಸಿದ್ದು, ಅದಕ್ಕೆ ಕ್ಷಮೆಯನ್ನೂ ಕೋರಿದ್ದಾರೆ. ಕಾರ್ಯಕ್ರಮ ನಡೆಯುವ ದಿನದಂದು ನಾನು ವಿದೇಶದಲ್ಲಿ ಚಲನಚಿತ್ರವೊಂದರ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಟೀಕೆ ಮಾಡಿದವರಿಗೆ ತಪ್ಪು ತಿಳಿಯಲು,ತಪ್ಪು ಹರಡಲು ತುದಿಗಾಲಲ್ಲಿ ನಿಂತವರನ್ನು, ನಿತ್ಯ ಹೊಸ, ಹುಸಿ ರೋಮಾಂಚನ ಬಯಸುವ ಮಹನೀಯರನ್ನು ಮನ್ನಿಸಿ ಮುಂದೆ ಹೋಗೋಣ. ಇಲ್ಲಿ ನಾವೆಲ್ಲ ಮಾಡಲೇಬೇಕಾದ ಜನಪರ ಕೆಲಸಗಳು ಬಹಳಷ್ಟಿವೆ. ಮಾಡೋಣ. ಇನ್ನು ಮಾತು ಸಾಕು ಎಂದಿದ್ದಾರೆ ನಾಗತಿಹಳ್ಳಿ ಚಂದ್ರಶೇಖರ್.
ಹೀಗೆ ಎಡಪಂಥೀಯರ ಆಕ್ರೋಶಕ್ಕೆ ಉತ್ತರ ಕೊಟ್ಟ ನಂತರ ಬಲಪಂಥೀಯರು ಮುಗಿಬಿದ್ದಿದ್ದಾರೆ. ಆರ್.ಎಸ್.ಎಸ್ ಬಗ್ಗೆ ನಿಮ್ಮ ನಿಲುವು ಏನು ಎಂದು ಸ್ಪಷ್ಟನೆ ಕೊಡಿ ಎಂದು ಎಡಪಂಥೀಯರು ಮುಗಿಬಿದ್ದಂತೆಯೇ, ಇಂತಹ ಡ್ರಾಮ ಏಕೆ. ನಿಮ್ಮಂತಹವು ಆರ್.ಎಸ್.ಎಸ್ ಗೆ ಬೇಕಿಲ್ಲ ಎಂದು ಬಲಪಂಥೀಯರು ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಷ್ಟಕ್ಕೂ ಆರ್.ಎಸ್.ಎಸ್. ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸಂಘಟನೆಯಂತೂ ಅಲ್ಲ. ಬದಲಿಗೆ ದೇಶಪ್ರೇಮ, ಸಂಸ್ಕøತಿಯನು ಬೆಂಬಲಿಸುತ್ತಿರುವ ಪ್ರತಿಪಾದಿಸುವ ಸಂಘಟನೆ. ಇಂತಹ ವೇದಿಕೆಯಲ್ಲಿ ಬರುವುದಕ್ಕೆ ಏನು ಸಮಸ್ಯೆ ಎನ್ನುವುದು ಆರ್.ಎಸ್.ಎಸ್. ವಾದಿಗಳ ಪ್ರಶ್ನೆ. ಉತ್ತರ ಕೊಡಬೇಕಾದ ಮೇಷ್ಟು ಅವತ್ತು ದೇಶದಲ್ಲೇ ಇರಲ್ವಂತೆ.



