ವಿಜಯಲಕ್ಷ್ಮಿ (Vijayalakshmi) ಅದ್ಭುತ ಕಲಾವಿದೆ. ನಟಿಸಿದ ಮೊದಲ ಚಿತ್ರ ನಾಗಮಂಡಲದಲ್ಲೇ ಎಲ್ಲರನ್ನೂ ಗಮನ ಸೆಳೆದ ಅಪ್ಪಟ ಕಲಾವಿದೆ. ಕನ್ನಡದಲ್ಲಿ ಶಿವಣ್ಣ, ಜಗ್ಗೇಶ್, ರಮೇಶ್, ಪ್ರಕಾಶ್ ರೈ, ರಾಮ್`ಕುಮಾರ್, ವಿಷ್ಣುವರ್ಧನ್.. ಜೊತೆ ನಟಿಸಿದ್ದ ವಿಜಯಲಕ್ಷ್ಮಿ(Vijayalakshmi), ರವಿಚಂದ್ರನ್ ಅವರ ಆಯ್ಕೆ. ತಮಿಳಿನಲ್ಲೂ ಖ್ಯಾತ ಕಲಾವಿದರ ಜೊತೆ ನಟಿಸಿದ್ದ ಕಲಾವಿದೆ. ಆದರೆ..
ನಟಿ ವಿಜಯಲಕ್ಷ್ಮಿ(Nagamandala Vijayalakshmi), ಸಿನಿಮಾಗಳಿಗಿಂತ ಹೆಚ್ಚು ವಿವಾದಗಳಿಂದ ಸುದ್ದಿಯಾಗಿದ್ದೇ ಹೆಚ್ಚು. ಈ ಬಾರಿಯೂ ಅಷ್ಟೆ, ವಿವಾದದಿಂದಲೇ ಸುದ್ದಿ ಮಾಡಿದ್ದಾರೆ. ವಿಜಯಲಕ್ಷ್ಮಿ ಅವರಿಗೆ ತಮಿಳುನಾಡಿನ ರಾಜಕಾರಣಿಯೊಬ್ಬರು ಮದುವೆಯಾಗಿ ಮೋಸ ಮಾಡಿದ್ದಾರಂತೆ. ಈ ಕುರಿತು ವಿಜಯಲಕ್ಷ್ಮಿ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಆತನನ್ನು ಅರೆಸ್ಟ್ ಮಾಡಲಾಗಿದೆ. ಅಂದಹಾಗೆ ವಿಜಯಲಕ್ಷ್ಮಿ (Vijayalakshmi) ಜೊತೆಗೆ ನಿಂತಿರೋದು ಅಲ್ಲಿನ ತಮಿಳರ್ ಮುನ್ನೇಟ್ರ ಪಡೈ ವ್ಯವಸ್ಥಾಪಕ ಅಧ್ಯಕ್ಷೆ ವೀರಲಕ್ಷ್ಮಿ.
2008ರಲ್ಲಿ ‘ನಾಮ್ ತಮಿಳ್ ಕಚ್ಚಿ’ ಪಕ್ಷದ ಅಧ್ಯಕ್ಷ ಸೀಮಾನ್ ಹಾಗೂ ವಿಜಯಲಕ್ಷ್ಮಿ ಮದುವೆಯಾಗಿದ್ದಾರೆ ಅಂತ ಸುದ್ದಿಯಾಗುತ್ತಿದೆ. 2008ರಲ್ಲಿ ಸೀಮಾನ್ ಮತ್ತು ವಿಜಯಲಕ್ಷ್ಮಿ ಮದುವೆ ಆಗಿದ್ದಾರಂತೆ. ಕೆಲವು ವರ್ಷಗಳಿಂದ ನಾನು ವಿಜಯಲಕ್ಷ್ಮಿ ಪರ ನಿಂತು ಸೀಮಾನ್ ವಿರುದ್ಧ ಹೋರಾಟ ಮಾಡುತ್ತಿದ್ದೇನೆ ಆದರೆ ಯಾರೂ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ನಮ್ಮ ಬಳಿ ಸಾಕ್ಷ್ಯಾಧಾರಗಳಿವೆ ಎಂದಿದ್ದಾರೆ ವೀರಲಕ್ಷ್ಮಿ.
ಚೆನ್ನೈನಲ್ಲಿ ಕಣ್ಣೀರಿಟ್ಟಿರುವ ನಟಿ ವಿಜಯಲಕ್ಷ್ಮಿ ನಾನು ಸೀಮಾನ್ ವಿಷಯಗಳನ್ನು ಹೊರಗೆ ತೆಗೆಯುತ್ತಿರುವೆ ಎಂದು ವೈಯಕ್ತಿಕವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ. ನಾನು ಪಬ್ಲಿಸಿಟಿಗಾಗಿ ಇದನ್ನು ನಾವು ಒಟ್ಟಿಗೆ ಕುಳಿತುಕೊಂಡು ಮಾತನಾಡಿಕೊಂಡು ಸೆಟಲ್ ಮಾಡಿಕೊಳ್ಳಬೇಕಾದ ವಿಷಯಗಳು ದೊಡ್ಡದಾಗಿದೆ. ಭವಿಷ್ಯದಲ್ಲಿ ಎಷ್ಟು ಬೆದರಿಕೆ ಬಂದರೂ ಹಿಂದೆ ಸರಿಯುವದಿಲ್ಲ ಎಂದಿದ್ದಾರೆ ನಟಿ ವಿಜಯಲಕ್ಷ್ಮಿ.
ಸೀಮನ್ ನಾಮ್ ತಮಿಳರ್ ಕಟ್ಚಿ (ಎನ್ಟಿಕೆ) ಪಕ್ಷದ ನಾಯಕ. ಈತ ತಮ್ಮೊಂದಿಗೆ ಸಂಬಂಧ ಹೊಂದಿದ್ದ. ಈತನ ಕುಮ್ಮಕ್ಕಿನ ಮೆಲೆ ಪನನ್ಗಟ್ಟು ಪದೈ ಕಟ್ಚಿ ಪಕ್ಷದ ಹರಿ ನಾಡಾರ್ ಕಿರುಕುಳ ನೀಡಿದ್ದ ಎಂದು ವಿಜಯಲಕ್ಷ್ಮಿ ಈ ಹಿಂದೆ 2020ರಲ್ಲಿ ಆರೋಪಿಸಿದ್ದರು. ಆಗ ಹರಿ ನಾಡಾರ್`ನನ್ನು ಅರೆಸ್ಟ್ ಮಾಡಲಾಗಿತ್ತು. ಈಗ ಮತ್ತೊಮ್ಮೆ ಪ್ರಕರಣ ಸುದ್ದಿಯಾಗಿದೆ.
ವಿಜಯಲಕ್ಷ್ಮಿ ಅವರ ವಿಷಯವನ್ನು ಇತ್ತೀಚೆಗೆ ಯಾರೂ ಸೀರಿಯಸ್ ಆಗಿ ತೆಗೆದುಕೊಳ್ಳುತ್ತಿಲ್ಲ ಎನ್ನುವುದರಲ್ಲೇ ಆಕೆಯ ಸೋಲೂ ಇದೆ. ಏಕೆಂದರೆ ಆಕೆ ಯಾರೊಬ್ಬರನ್ನೂ ಬಿಟ್ಟಿಲ್ಲ. ತಮ್ಮೊಂದಿಗೆ ನಟಿಸಿದವರು, ಸಹಾಯ ಮಾಡಿದವರು, ಬೆಂಬಲ ನೀಡಿದವರು, ಅವಕಾಶ ಕೊಟ್ಟವರು.. ಎಲ್ಲರನ್ನೂ ಆರೋಪಗಳ ಸುಳಿಗೆ ಸಿಲುಕಿಸಿದ್ದಾರೆ. ಹೀಗಾಗಿಯೇ ಈ ಬಾರಿಯೂ ಆರೋಪ ದೊಡ್ಡ ಸುದ್ದಿಯಾಗಿಲ್ಲ.



