ರಾಜ್ಯ ರಾಜಕೀಯದಲ್ಲಿ ಗೇಮ್ ಚೇಂಜ್ ಆಗಿದೆ. ಈಗ ಕಾಂಗ್ರೆಸ್ ಕಾಲ ನಡೆಯುತ್ತಿದೆ. ಅದರಲ್ಲೂ ಡಿಕೆ ಶಿವಕುಮಾರ್ (DK Shivakumar) , ತಮ್ಮ ಎಲ್ಲ ಲೆಕ್ಕವನ್ನೂ ಚುಕ್ತಾ ಮಾಡೋಕೆ ಕುಳಿತಂತಿದ್ದಾರೆ. ಹೀಗಾಗಿಯೇ ರಾಮನಗರ, ಹಾಸನ ಜಿಲ್ಲೆಗಳನ್ನೂ ಕಬ್ಜ ಮಾಡಿಕೊಳ್ಳುತ್ತಿದ್ದಾರೆ. ಮಂಡ್ಯವಂತೂ ಇದೀಗ ಕಾಂಗ್ರೆಸ್ ಕೋಟೆಯಾಗಿದೆ. ಈ ನಡುವೆಯೇ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರಾಜರಾಜೇಶ್ವರಿ ನಗರ (Raja Rajeshwari Nagara) ಕ್ಷೇತ್ರದಲ್ಲೂ ಆಪರೇಷನ್ ಶುರು ಮಾಡಿದ್ದಾರೆ.
ಆಪರೇಷನ್ ರಾಜರಾಜೇಶ್ವರಿ ನಗರದಲ್ಲಿ (Raja Rajeshwari Nagara) ಇತ್ತಿಚಿನವರೆಗೂ ಮುನಿರತ್ನ (Munirthna) ಅವರ ಜೊತೆಯಲ್ಲಿದ್ದ ಕಾರ್ಪೊರೇಟರ್ ವೇಲು ನಾಯ್ಕರ್ (Velu naikar) ಇದೀಗ ಕಾಂಗ್ರೆಸ್ (Congress ) ಸೇರಿದ್ದಾರೆ. ಜೆಪಿ ಪಾರ್ಕಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸೇರಿದ ಬೆನ್ನಲ್ಲೇ ಮುನಿರತ್ನ (Munirthna) ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್ಸಿನಲ್ಲೇ ಇದ್ದ, ಬಿಜೆಪಿ ಸೇರಿ ಸಚಿವರಾಗಿದ್ದ ಮುನಿರತ್ನ (Munirthna) , ಹನಿಟ್ರ್ಯಾಪ್ (Honey Trap) ಮಾಡಿಸುತ್ತಿದ್ದರಂತೆ. ಕಾರ್ಪೊರೇಟರುಗಳನ್ನು ಹೆದರಿಸಿಯೇ ಕೆಲಸ ಮಾಡಿಸುತ್ತಿದ್ದರಂತೆ ಮುನಿರತ್ನ. ಹಾಗಂತ ವೇಲು ನಾಯ್ಕರ್ ಆರೋಪಿಸಿದ್ದಾರೆ.
ನಾವು ಮುನಿರತ್ನ (Munirthna) ಅವರಿಗೆ ಚುನಾವಣೆ ಎದುರಿಸೋದು ಹೇಗೆ ಎಂದು ಕೇಳಿದೆವು. ಅದಕ್ಕೆ ಮುನಿರತ್ನ (Munirthna) ನಿಮ್ಮಗಳದ್ದು ಈಸ್ಟ್ ಮನ್ ಕಲರ್ ಪಿಚ್ಚರ್ ಇದೆ ತೋರಿಸ್ಲಾ ಇಲ್ಲ ಕೆಲಸ ಮಾಡ್ತಿರಾ ಅಂತ ಹೆದರಿಸುತ್ತಿದ್ದರು ಎಂದು ಆರೋಪಿಸಿರುವ ವೇಲು ನಾಯ್ಕರ್, ಹನಿಟ್ರ್ಯಾಪ್ (Honey Trap) ಮಾಡುವುದಕ್ಕೆಂದೇ ಮುನಿರತ್ನ (Munirthna) ಸ್ಟುಡಿಯೋ ಇಟ್ಟುಕೊಂಡಿದ್ದಾರೆ. ಜೆಪಿ ಪಾರ್ಕ್ನಲ್ಲಿ ಸ್ಟುಡಿಯೋ ಇದೆ, ಡಾಲರ್ಸ್ ಕಾಲೊನಿಯಲ್ಲೊಂದು ಸ್ಟುಡಿಯೋ ಇದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಸಿನಿಮಾ ಪ್ರೊಡ್ಯುಸರ್ ಅಲ್ವಾ ಹಂಗಾಗಿ ಹನಿಟ್ರ್ಯಾಪ್ (Honey Trap) ಮಾಡೋದು ಹೆದರಿಸೋದು ಎಂದಿರುವ ವೇಲು, ಅವರು ಪ್ರೊಡ್ಯೂಸ್ ಮಾಡಿದ ಮೊದಲ ಸಿನಿಮಾ ಆಂಟಿ ಪ್ರೀತ್ಸೆ (Aunty Preethse) . ಹಾಗಾಗಿ ಅವರು ವಿಧಾನಸೌಧಕ್ಕೆ ಹೋದಾಗಲೂ ಅಲ್ಲೆಲ್ಲ ಆಂಟಿಯರೇ (Aunty) ತುಂಬ್ಕೊಂಡಿರ್ತಿದ್ರು ಎಂದು ಆರೋಪಿಸಿದ್ದಾರೆ ಕಾಂಗ್ರೆಸ್ ಸೇರಿರುವ ನಾಯಕ ವೇಲು ನಾಯ್ಕರ್(Velu naikar).
ಸಂಸದ ಡಿಕೆ ಸುರೇಶ್ (DK Suresh), ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನ ಎದುರು ಸೋತ ಅಭ್ಯರ್ಥಿ ಕುಸುಮಾ (Kusuma) ಅವರು ವೇಲು ನಾಯ್ಕರ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.



