ಮುಕಳೆಪ್ಪ. ಫೇಮಸ್ ಯೂಟ್ಯೂಬರ್. ಈತನ ಒರಿಜಿನಲ್ ಹೆಸರು ಖ್ವಾಜಾ ಶಿರಹಟ್ಟಿ. ಧರ್ಮ ಮುಸ್ಲಿಂ. ಚೆಂದದ ಕನ್ನಡ ಮಾತನಾಡೋ ಈತ ಮುಕಳೆಪ್ಪ ಎಂದೇ ಫೇಮಸ್. ಈತ ಇತ್ತೀಚೆಗೆ ಗಾಯತ್ರಿ ಎಂಬ ಹುಡುಗಿಯನ್ನು ಮದುವೆಯಾಗಿದ್ದಾನೆ. ಇದು ಲವ್ ಜಿಹಾದ್ ಅನ್ನೋ ಆರೋಪ ಕೇಳಿ ಬರ್ತಿರೋವಾಗ್ಲೇ, ಮುಕಳೆಪ್ಪನನ್ನು ಮದುವೆಯಾಗಿರುವ ಗಾಯತ್ರಿ, ತನ್ನ ತಾಯಿಯ ವಿರುದ್ಧವೇ ತಿರುಗಿ ಬಿದ್ದಿದ್ದಾಳೆ.
ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ, ಹುಬ್ಬಳ್ಳಿಯ ಹಳೇ ಪೊಲೀಸ್ ಠಾಣೆಯಲ್ಲಿ ಉತ್ತರ ಕರ್ನಾಟಕದ ಜನಪ್ರಿಯ ಯುಟ್ಯೂಬರ್ ಕ್ವಾಜಾ ಶಿರಹಟ್ಟಿ ಅಲಿಯಾಸ್ ಮುಕುಳೆಪ್ಪ ವಿರುದ್ಧ ಬಜರಂಗದಳ ಕಾರ್ಯಕರ್ತರು, ಮುಕಳೆಪ್ಪ ಮದುವೆಯಾಗಿರುವ ಗಾಯತ್ರಿ ಅವರ ತಂದೆ ತಾಯಿ ಎಲ್ಲವೂ ಲವ್ ಜಿಹಾದ್ ಆರೋಪದಡಿ ದೂರು ಸಲ್ಲಿಸಿದ್ದರು. ಮುಕಳೆಪ್ಪ ಧಮ್ಕಿ ಹಾಕಿ, ಸುಳ್ಳು ಹೇಳಿ, ಧರ್ಮವನ್ನು ಮುಚ್ಚಿಟ್ಟು ಗಾಯತ್ರಿಯನ್ನು ಮದುವೆಯಾಗಿದ್ದಾನೆ ಎಂದು ದೂರಿದ್ದರು.
ಮುಕಳೆಪ್ಪ ಮೋಸ ಮಾಡಿ ತಮ್ಮ ಮಗಳನ್ನು ಮದುವೆಯಾಗಿದ್ದಾನೆ. ತಮ್ಮ ಮಗಳನ್ನು ವಾಪಸ್ ಕಳಿಸುವಂತೆ ಕೇಳಿದರೆ ಧಮ್ಕಿ ಹಾಕ್ತಿದ್ದಾನೆ ಅಂತ ಯುವತಿ ಹೆತ್ತವರು ಆರೋಪಿಸಿದ್ದರು.
ಇದೀಗ ಆ ಯುವತಿಯೇ ಉಲ್ಟಾ ಹೊಡೆದಿದ್ದಾಳೆ. ಯುವತಿ ಹಾಗೂ ಯುವತಿ ಕುಟುಂಬದವರಿಂದ ದೂರು ಬಂದಿಲ್ಲ. ಇಬ್ಬರು ಮದುವೆ ಆಗಿರೋ ದಾಖಲೆ ನೀಡಿದ್ದಾರೆ. ಹೀಗಾಗಿ ಕ್ವಾಜಾ ಶಿರಹಟ್ಟಿ ವಿರುದ್ಧ ದೂರು ನೀಡಿದರ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಸ್‌ಪಿ ಹೇಳಿದ್ದಾರೆ. ಇತ್ತ ಮಗಳು ಗಾಯತ್ರಿ ಅಲಿಯಾಸ್ ದೀಪಾ ಕರಮಡಿ ತನ್ನ ತಾಯಿಯ ಮೇಲೆನೆ ತಿರುಗಿ ಆರೋಪ ಮಾಡಿದ್ದಾಳೆ. ಗಾಯತ್ರಿಗೆ ಮುಕಳೆಪ್ಪ ಮುಸ್ಲಿಂ ಎಂಬ ವಿಷಯ ಮೊದಲೇ ಗೊತ್ತಿತ್ತಂತೆ. ನನ್ನ ತಾಯಿನೇ ನನಗೆ ಸುಪೋರ್ಟ ಮಾಡಿದ್ಲು ಈಗ ಯಾರ ಮಾತು ಕೇಳಿಕೊಂಡು ಇಷ್ಟೆಲ್ಲಾ ಅವಾಂತರ ಮಾಡುತ್ತಿದ್ದಾಳೋ ಗೊತ್ತಾಗ್ತಿಲ್ಲಾ ನನ್ನ ಹತ್ತಿರ ಎಲ್ಲಾ ಆಧಾರಗಳಿವೆ ಆದಷ್ಟು ಬೇಗ ಅವನ್ನೆಲ್ಲಾ ವಿಡಿಯೋ ಮಾಡಿ ಬಿಡುತ್ತೇನೆ. ನಾವು ಇಬ್ಬರು ಪ್ರೀತಿಸಿ ಮದುವೆಯಾಗಿದ್ದೇವೆ. ನಮ್ಮದು ಲವ್ ಜಿಹಾದ್ ಅಲ್ಲಾ, ಅದು ಸುಳ್ಳು ಎಂದಿದ್ದಾಳೆ.
ನಮ್ಮ ತಾಯಿ ಯಾಕೆ ಹೀಗೆ ಮಾಡ್ತಿದ್ದಾಳೋ ಗೊತ್ತಿಲ್ಲಾ ಅಂತ ದೀಪಾ ಹೇಳಿದ್ದಾಳೆ. ನಮ್ಮ ಹೆತ್ತವರಿಗೆ ಮೈಂಡ್ ವಾಶ್ ಮಾಡಿದ್ದಾರೆ. ಅವರ ಮೂಲಕ ಏನೇನೋ ಸುಳ್ಳು ಹೇಳಿಸುತ್ತಿದ್ದಾರೆ. ನನ್ನ ಮೈಂಡ್ ವಾಶ್ ಮಾಡಿ ಕರೆದುಕೊಂಡು ಹೋಗಿದ್ದಾನೆ ಅಂತ ಹೇಳ್ತಾರೆ. ಆದ್ರೆ ನಾನೇ ಸ್ವ ಇಚ್ಚೆಯಿಂದ ಅವರ ಜೊತೆ ಬಂದಿದ್ದೇನೆ ಎಂದಿದ್ದಾಳೆ.
ಅಂದಹಾಗೆ ಮುಕಳೆಪ್ಪ ಜೂನ್ 5ರಂದು ಮದುವೆಯಾಗಿದ್ದರು. ಮೂರ್ನಾಲ್ಕು ತಿಂಗಳ ನಂತರ ಈಗ ಗೊತ್ತಾಯಿತೇ ಎನ್ನುವುದು ಒಂದು ಪ್ರಶ್ನೆಯಾದರೆ, ಗಾಯತ್ರಿಯ ತಾಯಿಗೆ ಯಾರೋ ಹೇಳಿಕೊಟ್ಟಿರಬಹುದು ಎಂಬುದು ಇನ್ನೊಂದು ಆರೋಪ. ಆದರೆ ಒಂದಂತೂ ಸತ್ಯ. ಮುಕಳೆಪ್ಪ ಮುಸ್ಲಿಂ. ಗಾಯತ್ರಿ ಹಿಂದೂ. ಅವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ಧಾರೆ ಎನ್ನುವುದು ಇಲ್ಲಿಯವರಿಗಿನ ಸತ್ಯ.



