ಡ್ರೈವರ್ ಗೋವಿಂದಣ್ಣ. ಅವರ ವೊರಿಜಿನಲ್ ಹೆಸರು ಗೋವಿಂದ ರಾಜುನಾ.. ಬರೀ ಗೋವಿಂದನಾ.. ಚಿತ್ರರಂಗದಲ್ಲೇ ಇರುವ ಬಹುತೇಕ ಜನರಿಗೆ ಗೊತ್ತಿಲ್ಲ. ಎಲ್ಲರೂ ಆವರನ್ನು ಕರೆಯುವುದು ಗೋವಿಂದಣ್ಣ ಎಂದೇ. 32 ವರ್ಷಗಳಿಂದ ಶಿವಣ್ಣ ಕಾರ್ ಡ್ರೈವರ್ ಆಗಿದ್ದಾರೆ ಗೋವಿಂದಣ್ಣ. ಬರೀ ಡ್ರೈವರ್ ಆಗಿ ಅಷ್ಟೇ ಅಲ್ಲ, ಒಂದು ರೀತಿಯಲ್ಲಿ ದೊಡ್ಮನೆಯ ಸದಸ್ಯನೂ ಆಗಿದ್ದಾರೆ. ಸಹಜವಾಗಿಯೇ ಡ್ರೈವರ್ ಎಂಬ ವೃತ್ತಿಯನ್ನೂ ಮೀರಿದ ಬಾಂಧವ್ಯವೂ ಬೆಳೆದುಬಿಟ್ಟಿದೆ.
ಹೀಗಾಗಿಯೇ ಶಿವಣ್ಣ ಅವರು ಆರೋಗ್ಯವಂತರಾಗಿ, ಗುಣಮುಖರಾಗಿ ಬರಲಿ ಎಂದು ಇಡೀ ಕರ್ನಾಟಕ ಪ್ರಾರ್ಥಿಸುತ್ತಿರುವ ಹೊತ್ತಿನಲ್ಲಿ, ಲಕ್ಷಾಂತರ ಅಭಿಮಾನಿಗಳ ಜೊತೆಗೆ ಡ್ರೈವರ್ ಗೋವಿಂದಣ್ಣ ಶಿವಣ್ಣ ಅವರ ಆರೋಗ್ಯಕ್ಕಾಗಿ ವಿಶೇಷ ಪೂಜೆ, ಮೃತ್ಯುಂಜಯ ಹೋಮ ಮಾಡಿಸಿದ್ದಾರೆ.
ಮಲ್ಲೇಶ್ವರಂನಲ್ಲಿರೋ ಕಾಡು ಮಲ್ಲೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶಿವಣ್ಣ ಮನೆಯಲ್ಲಿ ಪೂಜೆ ಮಾಡುವ ಗಂಗಾಧರ ಸ್ವಾಮಿಗಳಿಂದಲೇ ಹೋಮ ಮಾಡಿದ್ದಾರೆ. ಗೋವಿಂದಣ್ಣ ದಂಪತಿಯಿಂದ ವಿಶೇಷ ಪೂಜೆಗಳು , ಹೋಮಗಳು ನೆರವೇರಿದೆ. ಪತ್ನಿಯ ಜೊತೆ ಇಡೀ ದಿನ ಪೂಜೆಯಲ್ಲಿ ಕುಳಿತಿದ್ದ ಗೋವಿಂದಣ್ಣ ಗಣಪತಿ ಪೂಜೆ ಮತ್ತು ಹೋಮ, ಗುರು ಪ್ರಾರ್ಥನ ಸಂಕಲ್ಪ, ನವಗ್ರಹ ಪೂಜೆ, ಮೃತ್ಯುಂಜಯ ಪೂಜೆ ನೆರವೇರಿಸಿದ್ದಾರೆ, ಹೋಮ, ಸುದರ್ಶನ ಪೂಜೆ ಕೂಡ ಆಗಿದೆ. ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ನಲ್ಲಿ ಶಸ್ತ್ರ ಚಿಕಿತ್ಸೆ ಶಿವಣ್ಣ ನಡೆಯಲಿದೆ. ಡಾ. ಮುರುಗೇಶ್ ರಿಂದ ನಟ ಶಿವರಾಜ್ ಕುಮಾರ್ ಗೆ ಸರ್ಜರಿ ಆಗಲಿದೆ ಎನ್ನಲಾಗಿದೆ.
ಇನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬೇಗ ಗುಣಮುಖರಾಗಲಿ ಎಂದು ಹಾರೈಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ನ ಕಾರ್ಮಿಕ ವಿಭಾಗದವರು ದುರ್ಗಿಗುಡಿಯ ಪಂಚಮುಖಿ ಆಂಜನೇಯ ದೇವಾಲಯದಲ್ಲಿಂದು ವಿಶೇಷ ಪೂಜೆ ನೆರವೇರಿಸಿದರು. ಶಿವಣ್ಣನ ಹೆಸರಿನಲ್ಲಿ ಕುಂಕುಮಾರ್ಚನೆ ಮಾಡಿಸಿದರು.
ಇನ್ನು ಸಚಿವ ಮಧು ಬಂಗಾರಪ್ಪ, ಶಿವಣ್ಣ ಬಾವಮೈದುನ ಸಚಿವ ಮಧು ಬಂಗಾರಪ್ಪ ಅಮೆರಿಕದಿಂದ ವಾಪಸ್ ಆಗಿದ್ದು, ಶ್ವದ ಬೆಸ್ಟ್ ವೈದ್ಯರ ಬಳಿ ಅವರಿಗೆ ಟ್ರೀಟ್ಮೆಂಟ್ ಸಿಗುತ್ತಿದೆ. ಮಿಯಾಮಿಯಲ್ಲಿ ಅವರು ದಾಖಲಾಗಿದ್ದಾರೆ. ಯಾರೂ ಭಯ ಪಡುವ ಅಗತ್ಯವಿಲ್ಲ ಎಂದಿದ್ದಾರೆ. ಅಲ್ಲದೆ ಮತ್ತೆ ಅಮೆರಿಕಕ್ಕೆ ಹೋಗುತ್ತಿರುವ ಮಧು ಬಂಗಾರಪ್ಪ ಆಪರೇಷನ್ ಸಂದರ್ಭದಲ್ಲಿ ಅವರ ಜೊತೆಯಲ್ಲಿಯೇ ಇರುವುದಾಗಿ ತಿಳಿಸಿದ್ದಾರೆ. 10 ದಿನ ಅವರ ಜೊತೆ ತಾವಿದ್ದು, ವಾಪಸಾಗುವುದಾಗಿ ತಿಳಿಸಿದ್ದಾರೆ.
ಒಂದು- ಒಂದೂವರೆ ತಿಂಗಳು ಶಿವಣ್ಣ ಮಿಯಾಮಿಯಲ್ಲಿಯೇ ಇರಲಿದ್ದಾರೆ. ಆಮೇಲೆ ವಾಪಸ್ ಬೆಂಗಳೂರಿಗೆ ಬರಲಿದ್ದಾರೆ. ಶಿವಣ್ಣ ಅವರು ಗುಣಮುಖರಾಗಲಿ ಎಂದು ರಾಜ್ಯಾದ್ಯಂತ ಸಾವಿರಾರು ಅಭಿಮಾನಿಗಳು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಶಿವಣ್ಣ ಅವರಿಗೆ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆ ನಡೆಯುತ್ತಿದ್ದು, ಒಂದು ಆಪರೇಷನ್ ನಂತರ ಸಂಪೂರ್ಣ ಗುಣಮುಖರಾಗಲಿದ್ದಾರೆ ಎನ್ನಲಾಗಿದೆ. ಮಿಯಾಮಿಯಲ್ಲಿರುವ ಆಸ್ಪತ್ರೆ ವಿಶ್ವವಿಖ್ಯಾತ ಆಸ್ಪತ್ರೆಯಾಗಿದ್ದು, ಜಗತ್ತಿನ ತಜ್ಞ ವೈದ್ಯರು ಇಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.



