ಕಳೆದ ವಿಧಾನಸಭೆ ಚುನಾವಣೆಯಲ್ಲಿ ದಯಾನೀಯವಾಗಿ ಸೋಲು ಕಂಡ ದಳಪತಿಗಳಿಗೆ ಸಾಲು ಸಾಲು ಹಿನ್ನಡೆ ಎದುರಾಗುತ್ತಿವೆ. ಜೆಡಿಎಸ್ ಪಕ್ಷ (JDS Party) ಹೊಂದಿದ್ದ ರಾಜ್ಯದ ಏಕೈಕ ಸಂಸತ್ ಸ್ಥಾನವೂ ಕೈತಪ್ಪಿ ಹೋಗುವಂತಾಗಿದೆ. ಚುನಾವಣೆ ವೇಳೆ, ತಮ್ಮ ಪ್ರಮಾಣ ಪತ್ರದಲ್ಲಿ (Affidavit) ಆಸ್ತಿ ವಿವರ ಮುಚ್ಟಿಟ್ಟಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣರ (Prajwal Revanna) ಆಯ್ಕೆಯನ್ನೇ ಹೈಕೋರ್ಟ್ (High court) ಅಸಿಂಧು ಎಂದು ತೀರ್ಪು ನೀಡಿದೆ. ಕೋರ್ಟ್ ತೀರ್ಪಿನಿಂದ ಕಂಗೆಟ್ಟಿರುವ ಪ್ರಜ್ವಲ್ ತಮ್ಮ ವಿರುದ್ಧ ನೀಡಿರುವ ತೀರ್ಪನ್ನ 30 ದಿನ, ಅಂದ್ರೆ ಸುಪ್ರಿಂಕೋರ್ಟ್ನಲ್ಲಿ (Supreme court) ಮೇಲ್ಮನವಿ ಸಲ್ಲಿಸುವವರೆಗೆ ಅಮಾನತಿನಲ್ಲಿಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನೇ ಹೈಕೋರ್ಟ್ ವಜಾ ಮಾಡಿ. ಮತ್ತೊಂದು ಶಾಕ್ ನೀಡಿದೆ. ಅಷ್ಟೇ ಅಲ್ಲ, ಪ್ರಜ್ವಲ್ ರೇವಣ್ಣ (Prajwal Revanna) ಅವರಿಗೆ ಉಳಿದಿರುವ ಆಯ್ಕೆ ಒಂದೇ. ಅದು ಸುಪ್ರೀಂಕೋರ್ಟ್. ಆದರೆ ಸುಪ್ರೀಂಕೋರ್ಟಿನಲ್ಲೂ ತಕ್ಷಣ ತಡೆಯಾಜ್ಞೆ ನೀಡುವ ಸಾಧ್ಯತೆ ಇಲ್ಲ.
ಸಂಸದ ಪ್ರಜ್ವಲ್ ರೇವಣ್ಣ ಮಾಡಬೇಕಾಗಿರುವುದು ಏನು?
ಪ್ರಜ್ವಲ್ ರೇವಣ್ಣ ಪಾಲಿಗೆ ಹೈಕೋರ್ಟ್ ಬಾಗಿಲು ಮುಚ್ಚಿದಂತಾಗಿದ್ದು, ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಬೇಕಿದೆ. ಹೈಕೋರ್ಟ್ ತೀರ್ಪಿಗೆ ತಡೆ ಕೋರಿ ಸುಪ್ರೀಂಕೋರ್ಟ್ನಲ್ಲಿ ಕಾನೂನು ಹೋರಾಟ ಮಾಡುವುದು ಅನಿವಾರ್ಯ. ಅಲ್ಲೂ ಪ್ರಜ್ವಲ್ ರೇವಣ್ಣ ತಡೆಯಾಜ್ಞೆ ಅರ್ಜಿಗೆ ತಕ್ಷಣ ರಿಲೀಫ್ ಸಿಗುವುದು ಕಷ್ಟ ಸಾಧ್ಯ.ಯಾಕಂದರೆ ದೂರುದಾರ ದೇವರಾಜೇಗೌಡ, ಕೇವಿಯಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಹೀಗಾಗಿ ದೂರುದಾರರಿಗೆ ನೋಟೀಸ್ ನೀಡಿ ಅವರಿಂದ ತಕರಾರು ಅರ್ಜಿ ಬಳಿಕವೇ ಡೆಯಾಜ್ಞೆ ಬಗ್ಗೆ ನಿರ್ದಾರ ಮಾಡುವ ಸಾಧ್ಯತೆ ಇದೆ. ಇದರಿಂದ ಪ್ರಜ್ವಲ್ ರೇವಣ್ಣ ವಿರುದ್ಧದ ತೀರ್ಪಿಗೆ ತಡೆ ಸಿಗದ ಸ್ಥಿತಿ ತಲೆದೋರಿದೆ.
ಹೈಕೋರ್ಟಿನಲ್ಲಿ ಪ್ರಜ್ವಲ್ ರೇವಣ್ಣ ಅರ್ಜಿ ವಜಾ ಆಗಿದ್ದೇಕೆ..?
ಸಂಸದ ಪ್ರಜ್ವಲ್ ರೇವಣ್ಣ ಅವರು ಕೋರ್ಟಿನ ತೀರ್ಪಿಗೆ ಅರ್ಥಾತ್ ಶಿಕ್ಷೆಯ ಜಾರಿಗೆ ತಡೆಯಾಜ್ಞೆ ತರುವ ಎಲ್ಲ ಅವಕಾಶಗಳೂ ಮುಕ್ತವಾಗಿದ್ದವು. ಆದರೆ ಪ್ರಜ್ವಲ್ ರೇವಣ್ಣ ಅವರ ವಿಳಂಬ ಧೋರಣೆಯೇ ಅದಕ್ಕೆ ಅಡ್ಡಿಯಾಯ್ತು. ಕಾನೂನಿನ ಪ್ರಕಾರ ಈ ಅರ್ಜಿಯನ್ನು ತೀರ್ಪು ಕೊಟ್ಟ ದಿನವೇ ಸಲ್ಲಿಕೆ ಮಾಡಬೇಕು. ಆದ್ರೆ ತಾಂತ್ರಿಕ ಕಾರಣದ ನೆಪ ಹೇಳಿ ಪ್ರಜ್ವಲ್ ರೇವಣ್ಣ ಪರ ವಕೀಲರು ನಾಲ್ಕು ದಿನಗಳ ಬಳಿಕ ಅರ್ಜಿ ಸಲ್ಲಿಸಿದ್ದರು, ಆದ್ರೆ ನಿಯಮ ಪಾಳಿಸದ ಕಾರಣ ಅರ್ಜಿ ವಜಾ ಆಗಿದೆ. ಒಟ್ಟಿನಲ್ಲಿ ಪ್ರಜ್ವಲ್ ರೇವಣ್ಣ ಸದಸ್ಯತ್ವ ಸುಪ್ರೀಂ ಕೋರ್ಟ್ನಲ್ಲಿ ಮುಂದೇನಾಗುತ್ತೆ ಎನ್ನುವ ಕುತೂಹಲ ಮೂಡಿಸಿದೆ.



