ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಒಟ್ಟಾರೆ ಕಲೆಕ್ಷನ್ ಎಷ್ಟಾಯ್ತು ಎಂದು ಹೇಳ್ತಿಲ್ಲ. ಆದರೆ ಅದೇ ಚಿತ್ರತಂಡದಲ್ಲಿರೋ ಕಾಟೇರ ಚಿತ್ರವನ್ನು ವಿತರಣೆ ಮಾಡಿರೋ ಗುರು ದೇಶಪಾಂಡೆ ಅಧಿಕೃತವಾಗಿ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಹಾಕುತ್ತಲೇ ಇದ್ದಾರೆ. ಆದರೆ ಅವರು ಕೊಡ್ತಾ ಇದ್ದ ಅಪ್ʻಡೇಟ್ 100 ಕೋಟಿ ದಾಟುತ್ತಲೇ ಸ್ಟಾಪ್ ಆಯ್ತು. ಹಾಗಂತ ನಿಲ್ಲಲಿಲ್ಲ.
ಗುರುದೇಶಪಾಂಡೆ ಕೊಡುತ್ತಿದ್ದ ಅಪ್ʻಡೇಟ್ ನಿಲ್ಲುತ್ತಿದ್ದಂತೆಯೇ ಮುಂದಿನ ಹೊಣೆ ಹೊತ್ತಿದ್ದು ಜಡೇಶ್ ಕುಮಾರ್ ಹಂಪಿ. ಕಾಟೇರ ಚಿತ್ರದ ಕಥೆಗಾರ. ಅವರು ಈಗ 200 ಕೋಟಿ ಕಲೆಕ್ಷನ್ ಆಗಿದ್ದನ್ನು ಹಾಗೂ 1 ಕೋಟಿಗೂ ಹೆಚ್ಚು ಟಿಕೆಟ್ ಸೇಲ್ ಆಗಿದ್ದನ್ನು ಹೇಳಿಕೊಂಡಿದ್ಧಾರೆ. ಆದರೆ ರಾಕ್ʻಲೈನ್ ವೆಂಕಟೇಶ್ ಮಾತ್ರ ಮೌನ.
ಕಳೆದ ವರ್ಷ ರಿಲೀಸ್ ಆದ ಕಾಟೇರ ಈ ವರ್ಷದ ಮೊದಲ ಹಿಟ್ ಸಿನಿಮಾನೂ ಹೌದು. ಸೂಪರ್ ಹಿಟ್, ಬ್ಲಾಕ್ ಬಸ್ಟರ್ ಲೆವೆಲ್ಲನ್ನೂ ಮೀರಿ ಗೆದ್ದಿರುವ ಕಾಟೇರ 200 ಕೋಟಿ ಕ್ಲಬ್ ಸೇರಿದೆ. ಚಿತ್ರತಂಡದವರೇ ಈ ವಿಷಯವನ್ನು ಅಧಿಕೃತವಾಗಿ ಪೋಸ್ಟ್ ಮಾಡಿದ್ದು, ಇದುವರೆಗೆ ಸಿನಿಮಾ ನೋಡಿದವರ ಸಂಖ್ಯೆ 1 ಕೋಟಿಯ ಗಡಿ ದಾಟಿದೆ.
ಕಾಟೇರ’ ಸಿನಿಮಾ ಈ ವರೆಗೆ ಕರ್ನಾಟಕದಾದ್ಯಂತ 206 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈವರೆಗೆ ಬರೋಬ್ಬರಿ 1 ಕೋಟಿ ಟಿಕೆಟ್ ಮಾರಾಟ ಆಗಿದೆ. ಹೊಸ ವರ್ಷ, ಸಂಕ್ರಾಂತಿ ಸಂದರ್ಭದಲ್ಲಿ ಕಚೇರಿ ಹಾಗೂ ಶಾಲಾ-ಕಾಲೇಜುಗಳಿಗೆ ರಜೆ ಇದ್ದಿದ್ದು ಚಿತ್ರಕ್ಕೆ ಸಹಕಾರಿ ಆಗಿದೆ. ಈಗಲೂ ಸಿನಿಮಾ ಅನೇಕ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿರುವುದು ಚಿತ್ರದ ಹೆಚ್ಚುಗಾರಿಕೆ. ಇನ್ನೂ ಕೆಲವು ದಿನ ಸಿನಿಮಾದ ಅಬ್ಬರ ಮುಂದುವರಿಯಲಿದೆ.
ಚಿತ್ರದ ಟಿವಿ ಪ್ರಸಾರ ಹಕ್ಕನ್ನು ಜೀ ಕನ್ನಡ ಹಾಗೂ ಒಟಿಟಿ ಹಕ್ಕನ್ನು ಜೀ5 ಪಡೆದುಕೊಂಡಿದೆ. ಥಿಯೇಟರ್ನಲ್ಲಿ ಪ್ರಸಾರ ಪೂರ್ಣಗೊಂಡ ಬಳಿಕ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಅಂದಹಾಗೆ ಇದಿಷ್ಟೂ ಲೆಕ್ಕವನ್ನು ಚಿತ್ರತಂಡದವರೇ ಅಧಿಕೃತವಾಗಿ ಘೋಷಿಸಿದ್ಧಾರೆ. ಆದರೆ ನಿರ್ಮಾಪಕ ರಾಕ್ʻಲೈನ್ ವೆಂಕಟೇಶ್ ಘೋಷಿಸಿಲ್ಲ.
ಇನ್ನೊಂದು ಮೂಲಗಳ ಪ್ರಕಾರ ಕಾಟೇರ ಈಗಿನ್ನೂ 100 ಕೋಟಿ ಗಡಿಯಲ್ಲಿದೆ. ಕಾಟೇರ ಚಿತ್ರದವರು ಅದ್ಯಾಕೆ ಸುಳ್ಳು ಅಂಕಿ ಅಂಶ ಕೊಡುತ್ತಿದ್ಧಾರೋ ಅರ್ಥವಾಗುತ್ತಿಲ್ಲ ಎನ್ನುವವರೂ ಇದ್ಧಾರೆ. ಕಾಟೇರ ಬ್ಲಾಕ್ ಬಸ್ಟರ್ ಅನ್ನೋದ್ರಲ್ಲಿ ಅನುಮಾನ ಇಲ್ಲ. ಆದರೆ ಒಂದನ್ನು ಎರಡು ಮಾಡಿ ಹೇಳೋದ್ರಿಂದ ಸಿಗೋ ಲಾಭ ಏನು ಅನ್ನೋದು ಪ್ರಶ್ನೆ.
ಏಕೆಂದರೆ ಈ ಮೊದಲು ಅಟ್ಟರ್ ಫ್ಲಾಪ್ ಆದ ಕ್ರಾಂತಿ ಚಿತ್ರವೂ 100 ಕೋಟಿ, 200 ಕೋಟಿ ಎಂದೆಲ್ಲ ಕಥೆ ಕಟ್ಟಿ ವೈರಲ್ ಮಾಡಲಾಗಿತ್ತು. ಡ್ಯಾಮೇಜ್ ಆಗಿದ್ದು ದರ್ಶನ್ ಅವರಿಗಿದ್ದ ಸ್ಟಾರ್ʻಗಿರಿಗೆ. ಈಗಲೂ ಅಷ್ಟೇ.. ಗೆದ್ದರೂ ಕೊನೆಗೆ ಡ್ಯಾಮೇಜ್ ಕಟ್ಟಿಟ್ಟ ಬುತ್ತಿ.



