ಐದು ರಾಜ್ಯಗಳ ಎಲೆಕ್ಷನ್ ಮುಗಿದಿದೆ. 3ರಲ್ಲಿ ಬಿಜೆಪಿ, 1ರಲ್ಲಿ ಕಾಂಗ್ರೆಸ್ ಗೆದ್ದಿದೆ. ಕಳೆದ ಬಾರಿ ಕರ್ನಾಟಕ ಗೆದ್ದು ಬೀಗಿದ್ದ ಕಾಂಗ್ರೆಸ್, ಈ ಬಾರಿ ಮಿನಿಮಮ್ 3 ರಾಜ್ಯ ಗೆಲ್ಲೋ ಉತ್ಸಾಹದಲ್ಲಿತ್ತು. ಆದರೆ 3 ರಾಜ್ಯ ಸಿಕ್ಕಿದ್ದು ಬಿಜೆಪಿಗೆ. ಈಗ ಬಿಜೆಪಿ ಅಧಿಕಾರದಲ್ಲಿರೋ ರಾಜ್ಯಗಳ ಸಂಖ್ಯೆ 17ಕ್ಕೇರಿದ್ದರೆ, ಕಾಂಗ್ರೆಸ್ 4 ರಾಜ್ಯಗಳಿಗೆ ಸೀಮಿತವಾಗಿದೆ. ಎಎಪಿ 2 ರಾಜ್ಯಗಳಲ್ಲಿದ್ದರೆ ಪ್ರಾದೇಶಿಕ ಪಕ್ಷಗಳಾದ ಡಿಎಂಕೆ, ಟಿಎಂಸಿ, ಬಿಜೆಡಿ, ಆರ್‌ಜೆಡಿ, ಜೆಡಿಯು, ಸಿಪಿಎಂ, ವೈಎಸ್‌ಆರ್ ಕಾಂಗ್ರೆಸ್ ತಲಾ ಒಂದು ರಾಜ್ಯದಲ್ಲಿ ಅಧಿಕಾರದಲ್ಲಿವೆ. ಇನ್ನು ಶಿವಸೇನೆ, ಜೆಡಿಎಸ್, ಎನ್ʻಸಿಪಿ, ಎಸ್ʻಪಿ, ಬಿಎಸ್ʻಪಿ, ಸಿಪಿಐ, ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ ಮೊದಲಾದ ಪಕ್ಷಗಳಿಗೆ ಯಾವ ರಾಜ್ಯಗಳಲ್ಲಿಯೂ ಅಧಿಕಾರ ಇಲ್ಲ. ಹೀಗಿರುವಾಗಲೇ ಪಂಚರಾಜ್ಯಗಳ ಚುನಾವಣೆ ನಡೆದ ಮೇಲೆ ನಡೆದ ಮೊದಲ ಚುನಾವಣೆ ಸಮೀಕ್ಷೆ ಹೊರಬಿದ್ದಿದೆ.
ಸಮೀಕ್ಷೆಯ ಪ್ರಕಾರ 2024ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು 323 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಭರ್ಜರಿ ಬಹುಮತ ಗಳಿಸಲಿದ್ದು, ಮೂರನೇ ಅವಧಿಗೆ ಕೇಂದ್ರದಲ್ಲಿ ಅಧಿಕಾರಕ್ಕೇರಲಿದೆ. ಇಂಡಿಯಾ’ ಮೈತ್ರಿಕೂಟವು ಕೇವಲ 163 ಸ್ಥಾನಗಳಲ್ಲಿ ಜಯ ಗಳಿಸುವ ಮೂಲಕ ಹೀನಾಯ ಸೋಲು ಕಾಣಲಿದೆ. ಇದು ಟೈಮ್ಸ್ ನೌ-ಇಜಿಟಿ ಸಂಸ್ಥೆ ಹೇಳುತ್ತಿರುವ ಚುನಾವಣಾ ಭವಿಷ್ಯ.
ಇಟಿಜಿ ಸಮೀಕ್ಷೆಯು ಬಿಜೆಪಿ ಏಕಾಂಗಿಯಾಗಿ ಸುಮಾರು 308-328 ಸ್ಥಾನಗಳನ್ನು ಗಳಿಸಬಹುದು ಎಂದು ಹೇಳಿದೆ. ಆದರೆ, ಕಾಂಗ್ರೆಸ್ ಮೂರನೇ ಬಾರಿಗೆ ಹೀನಾಯ ಪ್ರದರ್ಶನ ತೋರಲಿದ್ದು ಕೇವಲ 52-72 ಸ್ಥಾನ ಗಳಿಸಬಹುದು ಎಂದು ತಿಳಿಸಿದೆ.
2019ಕ್ಕೆ ಹೋಲಿಸಿದರೆ ಎನ್‌ಡಿಎ ಮತ್ತು ಬಿಜೆಪಿಯ ಸ್ಥಾನಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು. 2019 ರಲ್ಲಿ, ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಮೈತ್ರಿಕೂಟವು (ಎನ್‌ಡಿಎ) 353 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಿಜೆಪಿ ಶೇ. 37.76ರಷ್ಟು ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿತ್ತು. ಒಟ್ಟಾರೆ ಎನ್‌ಡಿಎಯ ಮತ ಗಳಿಕೆಯು ಶೇ.45ರಷ್ಟಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 52 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು. ಈಗ ನಡೆಯುವ ಚುನಾವಣೆಯಲ್ಲಿ ಹಿಂದಿ ರಾಜ್ಯಗಳಲ್ಲಿ ಬಿಜೆಪಿ ಪ್ರಾಬಲ್ಯ ಮುಂದುವರೆಯಲಿದೆ. ವಿಶೇಷವಾಗಿ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನದಂತಹ ರಾಜ್ಯಗಳು ಬಿಜೆಪಿಯ ಚುನಾವಣಾ ಬಲಕ್ಕೆ ಗಣನೀಯ ಕೊಡುಗೆ ನೀಡಲಿವೆ.
ಟೈಮ್ಸ್ ನೌ ಸಮೀಕ್ಷೆ ಪ್ರಕಾರ..
ಬಿಜೆಪಿ: 308-328
ಎನ್‌ಡಿಎ: 319-339
ಕಾಂಗ್ರೆಸ್: 52-72
ಬಿಜೆಡಿ: 13-15
ವೈಎಸ್‌ಆರ್ ಕಾಂಗ್ರೆಸ್: 24-25
ಟಿಎಂಸಿ: 20-24
ಡಿಎಂಕೆ: 20-24
ಎಎಪಿ: 4-7
ಬಿಆರ್‌ಎಸ್: 3-5
ಇತರರು: 66-76 ಸ್ಥಾನಗಳಿಸಲಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿ ಮತ್ತೆ ನಂ.1 ಪಕ್ಷ
ಈ ಸಮೀಕ್ಷೆ ಪ್ರಕಾರ ಬಿಜೆಪಿ ಸ್ಥಾನ ಗಳಿಕೆ ಕಳೆದ ಬಾರಿಗಿಂತ ಕಡಿಮೆಯಾಗುವುದು ನಿಜ. ಆದರೂ ಬಿಜೆಪಿ ಒಟ್ಟಾರೆ ಸ್ಥಾನಗಳಿಕೆಯಲ್ಲಿ ನಂ.1 ಆಗಿಯೇ ಮುಂದುವರೆಯಲಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ 28 ಕ್ಷೇತ್ರಗಳಲ್ಲಿ 25 ಸ್ಥಾನ ಗೆದ್ದಿತ್ತು. ಈ ಬಾರಿ ಅದು 2ರಿಂದ 3 ಸ್ಥಾನ ಕಳೆದುಕೊಳ್ಳಲಿದೆ. ಇನ್ನು ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ಕಾಂಗ್ರಸ್ ಸದ್ಯದ ಮಟ್ಟಿಗೆ ನಂ.2 ಆಗಬಹುದು ಹಾಗೂ ಒಟ್ಟಾರೆ ಸ್ಥಾನ ಎರಡಂಕಿ ದಾಟಲು ಸಾಧ್ಯ ಇಲ್ಲ.
ಕರ್ನಾಟಕ ಸಮೀಕ್ಷೆ ಪ್ರಕಾರ :
ಬಿಜೆಪಿ: 20-22
ಕಾಂಗ್ರೆಸ್: 6-8
ಜೆಡಿಎಸ್: 0
ಬೇರೆ ಬೇರೆ ರಾಜ್ಯಗಳಲ್ಲಿ ಹೇಗಿದೆ ಮತದಾರರ ಮೂಡ್..?
ತಮಿಳುನಾಡು
ಡಿಎಂಕೆ: 20-24
ಕಾಂಗ್ರೆಸ್: 10-12
ಎಐಎಡಿಎಂಕೆ: 3-5
ತೆಲಂಗಾಣ
ಬಿಜೆಪಿ: 3-5
ಕಾಂಗ್ರೆಸ್: 8-10
ಬಿಆರ್‌ಎಸ್: 3-5
ಆಂಧ್ರ ಪ್ರದೇಶ
ವೈಎಸ್‌ಆರ್ ಕಾಂಗ್ರೆಸ್: 24-25
ಟಿಡಿಪಿ: 0-1
ಕೇರಳ
ಬಿಜೆಪಿ: 0-1
ಕಾಂಗ್ರೆಸ್: 11-13
ಸಿಪಿಎಂ: 3-5
ಐಯುಎಂಎಲ್: 1-2
ಪಶ್ಚಿಮ ಬಂಗಾಳ
ಬಿಜೆಪಿ: 17-19
ಟಿಎಂಸಿ: 20-24
ಸಿಪಿಐಎಂ: 1-2
ಕಾಂಗ್ರೆಸ್: 1-2
ಪಂಜಾಬ್
ಎನ್‌ಡಿಎ: 3-6
ಇಂಡಿಯಾ: 6-10
ಶಿರೋಮಣಿ ಅಕಾಲಿದಳ: 1-2
ಗುಜರಾತ್
ಎನ್‌ಡಿಎ: 26
ಇಂಡಿಯಾ:0
ರಾಜಸ್ಥಾನ
ಎನ್‌ಡಿಎ: 24-25
ಇಂಡಿಯಾ: 0-1
ಛತ್ತೀಸ್‌ಗಢ
ಎನ್‌ಡಿಎ: 10-11
ಇಂಡಿಯಾ: 0-1
ಉತ್ತರ ಪ್ರದೇಶ
ಎನ್‌ಡಿಎ: 70-74
ಇಂಡಿಯಾ: 4-8
ಬಿಎಸ್‌ಪಿ: 0-1
ಇತರ: 1-3
ಮಹಾರಾಷ್ಟ್ರ
ಬಿಜೆಪಿ: 27-31 (48%)
ಕಾಂಗ್ರೆಸ್: 16-20 (41%)



