ಒಂದು ಫೋಟೋ ಬಹಳ ದಿನಗಳಿಂದ ವೈರಲ್ ಆಗುತ್ತಿತ್ತು. ಹಾಗೆ ನೋಡಿದರೆ.. ಒಂದಲ್ಲ.. ಹಲವು ಫೋಟೋಗಳಿವೆ. ಅಸಹ್ಯ ಅಭಿರುಚಿಯ ಆ ಪೋಸ್ಟ್ʻನಲ್ಲಿ ಸ್ಮೃತಿ ಇರಾನಿ, ನರೇಂದ್ರ ಮೋದಿ ಅವರನ್ನು ಅಪ್ಪಿಕೊಂಡಿರುವಂತೆ ಚಿತ್ರಿಸಲಾಗಿದೆ. ಈ ಫೋಟೋ ನೋಡಿದವರು ವಾಟ್ ಈಸ್ ದಿಸ್ ನಾನ್ಸೆನ್ಸ್ ಎಂದು ಪ್ರಶ್ನೆ ಮಾಡ್ತಿದ್ಧಾರೆ.
ಸ್ಮೃತಿ ಇರಾನಿ. ಸಿನಿಮಾ ಕ್ಷೇತ್ರದಿಂದ ರಾಜಕೀಯಕ್ಕೆ ಬಂದಿರುವ ನಾಯಕಿ. ಅಮೇಥಿಯಲ್ಲಿ ರಾಹುಲ್ ಗಾಂಧಿಯಂತಾ ರಾಹುಲ್ ಗಾಂಧಿಯನ್ನೇ ಸೋಲಿಸಿದವರು. ವಯಸ್ಸು 48 ವರ್ಷ. ಇಬ್ಬರು ಮಕ್ಕಳೂ ಇದ್ಧಾರೆ. ಫೈರ್ ಬ್ರಾಂಡ್ ಎಂದೇ ಖ್ಯಾತರಾಗಿರುವ ಸ್ಮೃತಿ ಇರಾನಿ, ಮೋದಿ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆಯೂ ಹೌದು. ಮೋದಿ ಸರ್ಕಾರದಲ್ಲಿರುವ ಸದಾ ಆಕ್ಟಿವ್ ಆಗಿರುವ ನಾಯಕಿಯರಲ್ಲಿ ಒಬ್ಬರು ಸ್ಮೃತಿ ಇರಾನಿ.
ಇನ್ನು ಮೋದಿ ಮದುವೆಯಾಗಿದ್ದರೂ.. ಪತ್ನಿಯಿಂದ ದೂರವಾಗಿ ದಶಕಗಳೇ ಆಗಿವೆ. ಮೋದಿ ಅವರ ಪ್ರಧಾನಿ ನಿವಾಸದಲ್ಲಿ ಅವರ ಕುಟುಂಬದ ಯಾರೊಬ್ಬರೂ ಇಲ್ಲ. ಹೀಗಾಗಿಯೇ ಮೋದಿಗೂ. ಸ್ಮೃತಿ ಇರಾನಿ ಅವರಿಗೂ ಸಂಬಂಧ ಇರುವಂತೆ ಚಿತ್ರಿಸಿ ಈ ರೀತಿಯ ಫೋಟೋ ಹರಿಬಿಡಲಾಗಿದೆ. ಇನ್ನು ಈ ಪೋಸ್ಟ್‌ಗಳಲ್ಲಿ ಇರುವ ಫೋಟೋದ ಅಸಲಿಯತ್ತೇನು? ಈ ಕುರಿತ ಸತ್ಯಾಂಶವೇನು ಎಂಬುದರ ಬೆನ್ನತ್ತಿದಾಗ ಸಿಕ್ಕ ಮಾಹಿತಿಯೇ ಬೇರೆ.
ವೈರಲ್ ಆಗಿರುವ ಈ ಫೋಟೋದ ಸತ್ಯಾಸತ್ಯತೆ ಪರಿಶೀಲಿಸೋಕೆ ಮೊದಲಿಗೆ ರಿವರ್ಸ್ ಇಮೇಜ್ ತಂತ್ರಜ್ಞಾನ ಬಳಕೆ ಮಾಡಿಕೊಳ್ತಾರೆ. ಅದರ ಪ್ರಕಾರ ಹುಡುಕಾಡಿದರೆ.. ಅಸಲಿ ಪೋಟೋ ಫೋಸ್ಟ್ ಮಾಡಿರುವ ಸಾಮಾಜಿಕ ಜಾಲತಾಣ ಲಿಂಕ್ ಸಿಕ್ಕಿದೆ. ಇದು ಖುದ್ದು ಸ್ಮೃತಿ ಇರಾನಿಯವರೇ 2017ರಲ್ಲಿ ಪೋಸ್ಟ್ ಮಾಡಿದ್ದ ಫೋಟೋ. ಆ ಫೋಟೋದಲ್ಲಿ ಸ್ಮೃತಿ ಇರಾನಿ ತಮ್ಮ ಮಗಳನ್ನು ಹಿಂದಿನಿಂದ ತಬ್ಬಿಕೊಂಡು ಬೇಬಿ ಗರ್ಲ್ ಆಗಿದ್ದ ಮಗಳು ತಮಗಿಂತ ಎತ್ತರಕ್ಕೆ ಬೆಳೆದಿದ್ದಾಳೆ ಎಂದು ಖುಷಿ ಹಂಚಿಕೊಂಡಿದ್ದರು.
ಈ ದುಷ್ಟಕೂಟದವರು ಆ ಫೋಟೋವನ್ನ ಇಟ್ಟುಕೊಂಡು ಅದು ಹೇಗೆಲ್ಲ ತಿರುಚಿದ್ಧಾರೆಂದರೆ.. ಮಗಳು ಇದ್ದ ಜಾಗದಲ್ಲಿ ಮೋದಿ ಫೋಟೋ ಇಟ್ಟು.. ವಿಕೃತಿ ಮೆರೆದುಬಿಟ್ಟಿದ್ದಾರೆ.
ಇದೇನೂ ಫಸ್ಟ್ ಟೈಂ ಅಲ್ಲ.. ಸ್ಮೃತಿ ಇರಾನಿ ಇತ್ತೀಚೆಗೆ ಸ್ಲಿಮ್ ಆಗಿದ್ದರು. ಧಾರಾವಾಹಿ, ಸಿನಿಮಾಗಳಲ್ಲಿ ನಟಿಸುತ್ತಿದ್ಧಾಗ ಇದ್ದ ಸ್ಮೃತಿಯೇ ಬೇರೆ.. ರಾಜಕೀಯಕ್ಕೆ ಬಂದು ದಪ್ಪಗಾಗಿದ್ದ ಸ್ಮೃತಿಯೇ ಬೇರೆ. ಅಂತಹ ಸ್ಮೃತಿ ಇರಾನಿ ಇದ್ದಕ್ಕಿದ್ದಂತೆ ಸ್ಲಿಮ್ ಆಗಿದ್ದಕ್ಕೂ.. ಅದೇ ಕಾರಣ ಎಂಬ ವಾದ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡ್ತಾ ಇತ್ತು.
ಸ್ಮೃತಿ ಇರಾನಿಯನ್ನು ಬೆಲ್ಲಿ ಡ್ಯಾನ್ಸರ್ ರೀತಿ ಬಿಂಬಿಸುವ ಪ್ರಯತ್ನವೂ ನಡೆದಿತ್ತು. ಆದರೆ.. ಅದು ಫೇಕ್ ಅನ್ನೋದು ಮೇಲ್ನೋಟಕ್ಕೇ ಗೊತ್ತಾಗ್ತಾ ಇತ್ತು. ಅಲ್ಲದೆ.. ಯಾವುದೋ ಹೋಟೆಲ್ಲಿನಲ್ಲಿ.. ಯಾವುದೋ ಮಾಡೆಲ್ʻನ ಫೋಟೋಗೇ ಸ್ಮೃತಿ ಇರಾನಿ ಅವರ ಮುಖ ಪೇಸ್ಟ್ ಮಾಡಿ, ಅವರ ಇಮೇಜ್ ಹಾಳು ಮಾಡುವ ಸಂಚು ನಡೆದಿತ್ತು.
ಇನ್ನು ಸ್ಮೃತಿ ಇರಾನಿ ಗೆಳತಿಯ ಸಂಸಾರವನ್ನೇ ಒಡೆದವಳು. ಗೆಳತಿಯ ಗಂಡನನ್ನೇ ಬುಟ್ಟಿಗೆ ಹಾಕಿಕೊಂಡು ಮದುವೆಯಾದವಳು ಎಂಬ ಕಥೆಯೂ ಇದೆ. ಆದರೆ..ಸ್ಮೃತಿ ಇರಾನಿ ಮದುವೆಯಾಗಿರುವ ಜುಬಿನ್ ಇರಾನಿಗೆ ಮೊದಲೇ ಮದುವೆಯಾಗಿತ್ತು. ಆಕೆ ಕೂಡಾ ಇವತ್ತಿಗೂ ಸ್ಮೃತಿ ಜೊತೆಯಲ್ಲೇ ಇದ್ಧಾರೆ.
ಆದರೆ.. ಜುಬಿನ್ ಇರಾನಿಯ ಮೊದಲ ಪತ್ನಿ ಸ್ಮೃತಿ ಅವರಿಗಿಂತ 13 ವರ್ಷ ಚಿಕ್ಕವಳು. ಆಕೆ ನನ್ನ ಗೆಳತಿಯೂ ಅಲ್ಲ ಎನ್ನುವ ಮೂಲಕ ಆ ವಿವಾದಗಳಿಗೆ ಫುಲ್ ಸ್ಟಾಪ್ ಇಟ್ಟವರು ಸ್ಮೃತಿ ಇರಾನಿ. ಆದರೆ.. ಇವತ್ತಿಗೂ ಅದೇ ಸತ್ಯ ಎಂದು ನಂಬಿಕೊಂಡವರಿದ್ದಾರೆ.
ಅಷ್ಟೇ ಯಾಕೆ.. ಸ್ಮೃತಿ ಇರಾನಿ ವಿರುದ್ಧ ಎಂತೆಂತಹ ಟೀಕೆಗಳು, ಸುಳ್ಳು ಸುದ್ದಿಗಳು ಬರುತ್ತಿದ್ದವೆಂದರೆ.. ಸ್ಮೃತಿ ಇರಾನಿ, ಗೋವಾದಲ್ಲಿ ಮಗಳ ಹೆಸರಿನಲ್ಲಿ ಬಾರ್ ಮತ್ತು ಗೋಮಾಂಸದ ಬಿಸಿನೆಸ್ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಸುಳ್ಳು ಸುದ್ದಿ ಹಬ್ಬಿಸಿದ್ದರು. ಆ ಸುಳ್ಳು ಸುದ್ದಿಗೆ ಸ್ಮೃತಿ ಇರಾನಿ ಸ್ಪಷ್ಟನೆ ನೀಡಿದರಷ್ಟೇ ಅಲ್ಲ, ಕೋರ್ಟಿಗೆ ಹೋಗಿ 2 ಕೋಟಿ ಮಾನನಷ್ಟದ ಕೇಸು ಹಾಕಿ ಗೆದ್ದರು ಕೂಡಾ.
ಅದಾದ ಮೇಲೆ ಸ್ಮೃತಿ ಇರಾನಿ ತಮ್ಮ ವಿರುದ್ಧ ಫೇಕ್ ನ್ಯೂಸ್, ಮಾರ್ಫ್‌ಡ್ ವಿಡಿಯೋ, ಗ್ರಾಫಿಕ್ಸ್ ವಿಡಿಯೋ ಮಾಡಿ ಮಾನ ಹರಾಜು ಹಾಕುವವರ ವಿರುದ್ಧ ತಿರುಗಿಬಿದ್ದಿದ್ಧಾರೆ.
ಹಾಗೆ ತಿರುಗಿಬಿದ್ದ ನಂತರ ಅವರ ವಿರುದ್ಧ ಫೇಕ್ ನ್ಯೂಸ್ ಕಡಿಮೆ ಆಗಿವೆ. ಕೆಲವರು ಕೋರ್ಟಿನಲ್ಲಿ ದಂಡ ಕಟ್ಟಿದ್ಧಾರೆ. ಕ್ಷಮೆ ಕೇಳಿದ್ಧಾರೆ. ಆದರೆ.. ಸ್ಮೃತಿ ಇರಾನಿ ವಿರುದ್ಧದ ಫೇಕ್ ನ್ಯೂಸ್ ದಾಳಿ ನಿಂತಿಲ್ಲ. ಈಗ ಹೆಸರು , ಊರು, ಮುಖ ಗೊತ್ತಿಲ್ಲದ ಹೆಸರಿಂದ ಫೇಕ್ ಅಟ್ಯಾಕ್ ನಡೆಯುತ್ತಿವೆ.



