ಸಚಿವರು (Cheluvaraya Swamy) ನಮಗೆ ತಲಾ 6ರಿಂದ 8 ಲಕ್ಷಕ್ಕೆ ಡಿಮ್ಯಾಂಡ್ ಇಡುತ್ತಿದ್ದಾರೆ. ಜಂಟಿ ಕೃಷಿ ನಿರ್ದೇಶಕರ (Agriculture joint director) ಮೂಲಕ ಒತ್ತಡ ಹೇರುತ್ತಿದ್ದಾರೆ. ಯಾವುದೇ ಅಧಿಕಾರಿಗಳು ಈಗ ಕರ್ತವ್ಯ ನಿರ್ವಹಿಸುತ್ತಿರುವ ಜಾಗದಲ್ಲೇ ಮುಂದುವರಿಯಬೇಕಿದ್ದರೆ ನಿಗದಿಪಡಿಸಿದಷ್ಟುಹಣವನ್ನು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಪಾವತಿಸಬೇಕು. ಇಂತಹ ಆರೋಪಗಳಿರುವ ಪತ್ರ ನೇರವಾಗಿ ರಾಜ್ಯಪಾಲರ ಕಚೇರಿಗೇ (Governor) ತಲುಪಿದೆ. ಲಂಚ ಕೊಡದಿರುವ ಅಧಿಕಾರಿಗಳನ್ನು ನೀರು ನೆರಳು ಸಿಗದ ಊರಿಗೆ ಹಾಕ್ತಾರಂತೆ. ಸಸ್ಪೆಂಡ್ ಮಾಡ್ತಾರಂತೆ. ಯಾವುದಾದರೂ ಇಷ್ಯೂ ಹುಡುಕಿ ತನಿಖೆ ಮಾಡಿಸ್ತಾರಂತೆ. ಹೀಗೆಲ್ಲ ಆರೋಪ ಹೊರಿಸಿದ್ದ ಅಧಿಕಾರಿಗಳು ಲಂಚ ಕೇಳುವ ಇಂಥ ಅನಿಷ್ಟಪದ್ಧತಿಗೆ ಕಡಿವಾಣ ಹಾಕುವ ಸಂಬಂಧ ಕ್ರಮ ವಹಿಸದಿದ್ದಲ್ಲಿ ಅಧಿಕಾರಿಗಳು ಕುಟುಂಬದ ಸದಸ್ಯರ ಜೊತೆಗೆ ವಿಷ ಕುಡಿಯುವುದಾಗಿಯೂ ಪತ್ರದಲ್ಲಿ ಹೇಳಲಾಗಿತ್ತು. ಅದರಂತೆ ಈ ದೂರಿನ ಕುರಿತು ನಿಯಮಾನುಸಾರ ಪರಿಶೀಲಿಸಿ ಕ್ರಮ ವಹಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರಿಗೆ ರಾಜ್ಯಪಾಲರು (Governor) ಪತ್ರ ಬರೆದಿದ್ದಾರೆ.
ಅಧಿಕಾರಿಗಳೇ ಇಲ್ಲ.. ಪತ್ರವನ್ನೇ ಬರೆದಿಲ್ಲ : ಈ ರೀತಿ ವೈರಲ್ ಪತ್ರದಲ್ಲಿ ಕೆಲವು ಅಧಿಕಾರಿಗಳ ಸಹಿಯೂ ಇತ್ತು. ಹುಡುಕಿದರೆ ಅಂತಹ ಹೆಸರಿನ ಅಧಿಕಾರಿಗಳು ಕಚೇರಿಯಲ್ಲೂ ಇರಲಿಲ್ಲ. ಇಲಾಖೆಯಲ್ಲೂ ಇರಲಿಲ್ಲ. ಹುದ್ದೆಯಲ್ಲೂ ಇರಲಿಲ್ಲ. ಪತ್ರದಲ್ಲಿ ಅಧಿಕಾರಿಗಳು ಉಲ್ಲೇಖಿಸಿರುವ ಜಾಗದಲ್ಲಿ ಇರುವ ಅಧಿಕಾರಿಗಳಿಗೆ ಪತ್ರದ ವಿಷಯವೇ ಗೊತ್ತಿರಲಿಲ್ಲ. ಮಂಡ್ಯ ಜಿಲ್ಲೆಯ (Mandya) ಸಹಾಯಕ ಕೃಷಿ ನಿರ್ದೇಶಕ ಎಸ್.ಅಶೋಕ್ ಅವರು ರಾಜ್ಯಪಾಲರಿಗೆ ಯಾರೂ, ಯಾವ ದೂರನ್ನೂ ನೀಡಿಲ್ಲ. ನಾನು ಈಗಾಗಲೇ ಸಹಾಯಕ ನಿರ್ದೇಶಕರನ್ನು ಗೂಗಲ್ ಮೀಟ್ ಮೂಲಕ ಸಂಪರ್ಕಿಸಿದ್ದೇನೆ. ಸಚಿವರ ವಿರುದ್ಧ ಯಾವುದೇ ಪತ್ರ ಬರೆದಿಲ್ಲವೆಂದು ಅವರು ಹೇಳಿದ್ದಾರೆ. ಹಾಗಾಗಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮೂಲಕ ಈ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಟಾರ್ಗೆಟ್ ಆಗಿದ್ದಾರಾ ಸಚಿವ ಚೆಲುವರಾಯಸ್ವಾಮಿ?
ಸಚಿವ ಚೆಲುವರಾಯ ಸ್ವಾಮಿ (Cheluvaraya Swamy), ಸಚಿವರಾದ ದಿನದಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ವಿವಾದಗಳೂ ಆಗುತ್ತಿವೆ. ಚೆಲುವರಾಯಸ್ವಾಮಿ ಮೂಲತಃ ಕಾಂಗ್ರೆಸ್ಸಿಗರಲ್ಲ. ಕಳೆದ ಬಾರಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಜೆಡಿಎಸ್`ನಿಂದ ಜಿಗಿದು ಕಾಂಗ್ರೆಸ್ಸಿಗೆ ಬಂದವರು (Cheluvaraya Swamy). ಕುಮಾರಸ್ವಾಮಿ ವಿರುದ್ಧ ಕಳೆದ ಚುನಾವಣೆಯಲ್ಲಿ ಸೋಲಿನ ಪೆಟ್ಟು ತಿಂದರಾದರೂ, ಈ ಬಾರಿ ಅದೇ ಮಂಡ್ಯದಲ್ಲಿ 7ಕ್ಕೆ 7 ಸೀಟುಗಳಲ್ಲಿ(Cheluvaraya Swamy) ಕಾಂಗ್ರೆಸ್ ಗೆಲ್ಲಿಸಿದ್ದಾರೆ. ಹೀಗಾಗಿಯೇ ನಾನು ಟಾರ್ಗೆಟ್ ಆಗುತ್ತಿದ್ದೇನೆ ಎನ್ನುವುದು ಚೆಲುವರಾಯಸ್ವಾಮಿ (Cheluvaraya Swamy) ಮಾತು.
ಕೆಲವರು ನನ್ನನ್ನು ಟಾರ್ಗೆಟ್ ಮಾಡಿಕೊಂಡಿದ್ದಾರೆ. ಹುಡುಕಿ ಹುಡುಕಿ ಏನಾದರೂ ಗೊಂದಲ ಸೃಷ್ಟಿಮಾಡಲು ಕಾದಿದ್ದಾರೆ. ಯಾರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೋ ಗೊತ್ತಿಲ್ಲ. ಈ ಕುರಿತು ಜಂಟಿ ಕೃಷಿ ನಿರ್ದೇಶಕರನ್ನು ಕೇಳಿದರೆ ಅದು ನಕಲಿ ಪತ್ರ, ನಮ್ಮಲ್ಲಿ ಯಾರೂ ಆ ರೀತಿಯ ಅಧಿಕಾರಿಗಳಿಲ್ಲ ಎಂದಿದ್ದಾರೆ. ಎಸ್ಪಿಗೆ ತನಿಖೆ ನಡೆಸುವಂತೆ ಸೂಚಿಸಿದ್ದೇನೆ ಎಂದಿದ್ದಾರೆ ಮಂತ್ರಿ ಚೆಲುವರಾಯಸ್ವಾಮಿ(Cheluvaraya Swamy). ಸತ್ಯ ಹೊರಬರಬೇಕಷ್ಟೇ.



