ಬೆಂಗಳೂರಿನಲ್ಲಿ (Bengaluru) ಸಿಕ್ಕಿಬಿದ್ದ ಐವರು ಶಂಕಿತ ಉಗ್ರರಿಂದ ಬೆಂಗಳೂರು (Bengaluru) ಬಚಾವ್ ಆಗಿ ನಿಟ್ಟುಸಿರು ಬಿಟ್ಟಿದೆ. 2008ರಲ್ಲಿ ಭಾರೀ ಪ್ರಮಾಣದಲ್ಲಿ ಹಾಗೂ ಅದಾದ ನಂತರ 2012ರಲ್ಲಿ ಕೂಡಾ ಟೆರರ್ ಅಟ್ಯಾಕ್`ಗೆ ತುತ್ತಾಗಿದ್ದ (Bengaluru) ಬೆಂಗಳೂರು, ಒಂದು ದೊಡ್ಡ ಮಟ್ಟದ ಉಗ್ರದಾಳಿಯಿಂದ ಜಸ್ಟ್ ಮಿಸ್ ಆಗಿದೆ.
ಇವರೆಲ್ಲರೂ ಇಲ್ಲಿಯೇ ಇದ್ದರು. ಸ್ಥಳೀಯರು. ಕುರಿ ವ್ಯಾಪಾರಿ, ಮೆಕ್ಯಾನಿಕ್, ಡ್ರೈವರ್ ವೇಷದಲ್ಲಿದ್ದರು. ಕೊಲೆ ಕೇಸಿನಲ್ಲಿ ಜೈಲಿಗೆ ಹೋದವನು, ಹೊರಬರುವಾಗ ಟೆರರಿಸ್ಟ್ ಆಗಿ ಬದಲಾಗಿದ್ದ ಮಾಸ್ಟರ್ ಮೈಂಡ್ ಜುನೈದ್. ಅಲ್ಲಿ ಆತನಿಗೆ ಕೇರಳದ ರಾಜಕಾರಣಿ ಕಂ ಟೆರರಿಸ್ಟ್ ಮದನಿಯ ಪರಿಚಯವಾಗಿತ್ತಂತೆ. ಈ ಜುನೈದ್ ದುಬೈನಲ್ಲಿದ್ದುಕೊಂಡೇ ಈ ಭಯೋತ್ಪಾದಕರಿಗೆ ದುಡ್ಡು ಮತ್ತು ಪ್ಲಾನ್ ಕೊಟ್ಟಿದ್ದ. (Terrorist) ಶಸ್ತ್ರಾಸ್ತ್ರಗಳನ್ನೂ ಪೂರೈಸಿದ್ದ. ಸದ್ಯಕ್ಕೆ ಜುನೈದ್, ಅಫ್ಘಾನಿಸ್ತಾನದಲ್ಲಿದ್ದಾನೋ.. ದುಬೈನಲ್ಲಿದ್ದಾನೋ.. ಮಾಹಿತಿ ಸಿಕ್ಕಿಲ್ಲ. ಆದರೆ, ಹಾಕಿದ್ದ ಪ್ಲಾನ್ ಮಾತ್ರ ಭಯಂಕರವಾಗಿತ್ತು.
ಜುನೈದ್ ಮೂಲತಃ ಕುರಿ ವ್ಯಾಪಾರಿ. 2017ರಲ್ಲಿ 21 ಜನರ ತಂಡ ಕಟ್ಟಿಕೊಂಡು ಒಂದು ಕೊಲೆ ಮಾಡಿದ್ದ. ಹೆಬ್ಬಾಳದ ಸುಲ್ತಾನ್ ಪಾಳ್ಯದಲ್ಲಿ ತನ್ನ ಕುಟುಂಬ ಜತೆ ಜುನೈದ್ ವಾಸವಾಗಿದ್ದ. ಹಣಕಾಸು ವಿಚಾರವಾಗಿ ಜೆ.ಸಿ.ನಗರದ ನೂರ್ ಅಹಮ್ಮದ್ ಹಾಗೂ ಜುನೈದ್ ಮಧ್ಯೆ ಜಗಳವಾಗಿತ್ತು. ಆಗ ಜುನೈದ್ನ ಮನೆಗೆ ನುಗ್ಗಿ ಆತನ ಪತ್ನಿ ಎದುರಿನಲ್ಲೇ ಅಂಗಿ ತೆಗೆಸಿ ನೂರ್ ಹಲ್ಲೆ ನಡೆಸಿ ಬಂದಿದ್ದ. ತನ್ನ ಪತ್ನಿ ಮುಂದೆ ಹಲ್ಲೆ ಮಾಡಿ ಅವಮಾನಿಸಿದ್ದರಿಂದ ಕೆರಳಿ ಜುನೈದ್ ಪ್ರತೀಕಾರ ತೀರಿಸಲು ನಿರ್ಧರಿಸಿದ್ದ. 2017ರ ಸೆಪ್ಟೆಂಬರ್ 30ರಂದು ತನ್ನ ಸಹಚರರ ಜತೆ ಸೇರಿ ನೂರ್ನನ್ನು ಅಪಹರಿಸಿ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿಗೆ ಕರೆದೊಯ್ದು ಹತ್ಯೆ ಮಾಡಿದ್ದ.
ಅರೆಸ್ಟ್ ಆಗಿರುವ (Terrorist) ಆರೋಪಿಗಳಲ್ಲಿ ನಿಸರ್, ಕೇರಳದವನು. 2008ರ ಬಾಂಬ್ ಬ್ಲಾಸ್ಟ್ ಕೇಸಿನಲ್ಲೂ ಇವನು ಆರೋಪಿ. ಹಲವು ಕೇಸುಗಳಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ನಿಸರ್, ಈಗ ಮತ್ತೊಮ್ಮೆ ಸಿಕ್ಕುಬಿದ್ದಿದ್ದಾನೆ.
ಇನ್ನೊಬ್ಬ ಸೈಯದ್ ಉಮರ್. ಜುನೈದ್ ಮಾಡಿದ್ದ ಕೊಲೆಯಿತ್ತಲ್ಲ, ಆ ಕೊಲೆಯಲ್ಲಿ ಭಾಗಿಯಾಗಿದ್ದ 21 ಜನರಲ್ಲಿ ಇವನೂ ಒಬ್ಬ. ವೃತ್ತಿಯಲ್ಲಿ ಡ್ರೈವರ್.
ಮತ್ತೊಬ್ಬ ಸೈಯದ್ ಸುಹೇಲ್ ಖಾನ್. ಮೆಕ್ಯಾನಿಕ್. ಬೆಂಗಳೂರಿನಲ್ಲಿ ಬ್ಲಾಸ್ಟ್ ಮಾಡಬೇಕು ಎನ್ನುವ ಸಂಚುಗಳಿಗೆ ಇವನಿಗೇ ಲೀಡರ್`ಶಿಪ್ ಕೊಡಲಾಗಿತ್ತು. ಇವನ ಮನೆಯಲ್ಲೇ ಪ್ಲಾನ್ ಮತ್ತು ಸ್ಫೋಟಕಗಳಿದ್ದವು.
ಜಹೀದ್ ತಬ್ರೇಜ್ ಎನ್ನುವವನು ಚಿಲ್ಲರೆ ಕೆಲಸ ಮಾಡಿಕೊಂಡು ಬದುಕುತ್ತಿದ್ದವನು. ಕಳ್ಳತನವನ್ನೇ ಕಸುಬು ಮಾಡಿಕೊಂಡಿದ್ದವನು.
ಮುದಾಸಿರ್ ಪಾಷ ಕೂಡಾ ಒಬ್ಬ ಮೆಕ್ಯಾನಿಕ್ ಆಗಿದ್ದ. ಆರ್.ಟಿ.ನಗರದಲ್ಲಿದ್ದ ಪಾಷಾ, ಜುನೈದ್ ನಡೆಸುತ್ತಿದ್ದ ಎಲ್ಲ ಕೊಲೆ, ದರೋಡೆಗಳಿಗೂ ಸಾಥ್ ಕೊಟ್ಟಿದ್ದ.
ಮುದಾಸಿರ್ ಮೂಲಕ ಸಿಕ್ಕಬಿದ್ದವನೇ ಮಹಮ್ಮದ್ ಫೈಜಲ್ ರುಬ್ಬಾನಿ. ಕೊಲೆ, ಕಳ್ಳತನಗಳನ್ನೇ ಕಸುಬು ಮಾಡಿಕೊಂಡಿದ್ದ.
ಅಂದಹಾಗೆ ಇವರೆಲ್ಲರೂ ಬಿಎಂಟಿಸಿ ಬಸ್ ಸ್ಟಾಂಡ್, ಮಾಲ್`ಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದರು. ಆದರೆ ಆರೋಪಿಗಳ ಬಳಿ ಹೆಚ್ಚಿನ ಸಂಖ್ಯೆಯ ರಿವಾಲ್ವರ್, ಬುಲೆಟ್ಸ್ ಸಿಕ್ಕಿರುವುದನ್ನು ನೋಡಿದ ಪೊಲೀಸರಿಗೆ ಇದು ಸ್ಫೋಟದ ಸಂಚಂತೂ ಅಲ್ಲವೇ ಅಲ್ಲ. (Mumbai attack 26/11) ಮುಂಬೈನಲ್ಲಿ 26/11 ಮಾದರಿಯಲ್ಲಿ ಅಟ್ಯಾಕ್ ನಡೆಸುವ ಸಂಚು ಹೂಡಿದದರು ಎಂಬ ಶಂಕೆ ವ್ಯಕ್ತವಾಗಿದೆ.
ಮುಂಬೈ ಅಟ್ಯಾಕ್`ನಲ್ಲಿ ರಿವಾಲ್ವರ್, ಎಕೆ 47 ಮೂಲಕ ಜನನಿಭಿಡ ಸ್ಥಳಗಳಲ್ಲಿ ಗುಂಡಿನ ದಾಳಿ ನಡೆಸಿ ನೂರಾರು ಮಂದಿಯನ್ನು ಹತ್ಯೆಗೈದಿತ್ತು ಕಸಬ್ & ಗ್ಯಾಂಗ್. ಈ ಅಟ್ಯಾಕ್ ಕೂಡಾ ಅದೇ ಮಾದರಿಯಲ್ಲಿ ಮಾಡುವ ಸಂಚು ಹೂಡಿದ್ದರೇ ಎಂಬ ಅನುಮಾನ ವ್ಯಕ್ತವಾಗಿದೆ. ತನಿಖೆ ನಡೆಯುತ್ತಿದೆ.



