ಜಗತ್ತಿನ ದೊಡ್ಡ ಸೋಷಿಯಲ್ ಮೀಡಿಯಾ ಜಗತ್ತಿನಲ್ಲಿ ಟ್ವಿಟರ್`ಗೆ (Twitter) ತನ್ನದೇ ಆದ ಸ್ಥಾನವಿದೆ. ಆದರೆ ಇತ್ತೀಚೆಗೆ ಟ್ವಿಟರ್ ಕಾಂಟ್ರವರ್ಸಿ ಮಾಡಿಕೊಂಡಿದ್ದೇ ಹೆಚ್ಚು. ಎಲಾನ್ ಮಸ್ಕ್ (ElonMusk) ಟ್ವಿಟರ್ ಖರೀದಿಸಿದ ಬಳಿಕ ಒಂದಲ್ಲ ಒಂದು ನಿರ್ಬಂಧ ವಿಧಿಸಲಾಗುತ್ತಿದೆ. ಇದೀಗ ಟ್ವೀಟ್ ವೀಕ್ಷಣೆಗೂ ಮಿತಿ ಹೇರಲಾಗಿದೆ. ಇಷ್ಟೇ ಅಲ್ಲ ಟ್ವೀಟ್ ವೀಕ್ಷಣೆಗೆ ಲಾಗಿನ್ ಕಡ್ಡಾಯ ಮಾಡಲಾಗಿದೆ. ಟ್ವೀಟ್ ಮಿತಿ ನಿಯಮ ಭಾರಿ ಟೀಕೆಗೆ ಕಾರಣವಾಗಿದೆ. ಟ್ವಿಟರ್ ವಿರುದ್ಧ ಆಕ್ರೋಶ ಹೆಚ್ಚುತ್ತಿರುವ ಬೆನ್ನಲ್ಲೇ ಇದಕ್ಕೆ ಪ್ರತಿಸ್ಪರ್ಧಿಯಾಗಿ ಇನ್ಸ್ಟಾಗ್ರಾಂ ಥ್ರೆಡ್ಸ್ ಆ್ಯಪ್(Instagram Threads) ಬಿಡುಗಡೆ ಮಾಡುತ್ತಿದೆ. ಜುಲೈ 6 ರಿಂದ ನೂತನ ಆ್ಯಪ್ ಬಳೆಕೆಗೆ ಲಭ್ಯವಿದೆ.
ಟ್ವಿಟರ್ಗಿಂತ ಹೆಚ್ಚು ಅಡ್ವಾನ್ಸ್ ಆಗಿರುವ (Instagram Threads)ಇನ್ಸ್ಟಾಗ್ರಾಂ ಥ್ರೆಡ್ಸ್ ಆ್ಯಪ್ ಹೊಸ ಕ್ರಾಂತಿ ಮಾಡಲಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಮೆಟಾ (Meta)ಮಾಲೀಕತ್ವದ ಸಾಮಾಜಿಕ ಮಾಧ್ಯಮ ಬಳಕೆದಾರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಸುಲಭವಾಗಿ ಅತೀ ಹೆಚ್ಚು ಬಳಕೆದಾರರನ್ನು ನೂತನ ಇನ್ಸ್ಟಾಗ್ರಾಂ ಥ್ರೆಡ್ಸ್ ಪಡೆಯಲಿದೆ ಎಂಬ ಚರ್ಚೆ ಶುರುವಾಗಿದೆ.
ಇನ್ಸ್ಟಾಗ್ರಾಂ ಥ್ರೆಡ್ಸ್ ಆ್ಯಪ್, ಟ್ವಿಟರ್ ರೀತಿಯ ಮೆಸೇಜಿಂಗ್ ಪ್ಲಾಟ್ಫಾರ್ಮ್ ಆಗಿದೆ. ಸಂದೇಶ, ವಿಡಿಯೋ, ಇಮೇಜ್, ಪೋಸ್ಟ್, ಪ್ರಮೋಟ್, ನೆಟ್ವರ್ಕ್ ವಿಸ್ತರಣೆ ಸೇರಿದಂತೆ ಹಲವು ಸೇವೆ ನೀಡುತ್ತಿದೆ. ಮೂಲಗಳ ಪ್ರಕಾರ ಟ್ವಿಟರ್ಗಿಂತಲೂ ಹೆಚ್ಚು ಅಡ್ವಾನ್ಸ್ ಆಗಿದೆ. ಇಷ್ಟೇ ಅಲ್ಲ ಇಲ್ಲಿ ಥ್ರೆಡ್ಸ್ ವೀಕ್ಷಣೆಗೆ ಯಾವುದೇ ಮಿತಿಗಳಿರುವುದಿಲ್ಲ.
ಆ್ಯಪಲ್ ಆ್ಯಪ್ ಸ್ಟೋರ್ನಲ್ಲಿ (Apple store) ನೂತನ ಇನ್ಸ್ಟಾಗ್ರಾಂ ಥ್ರೆಡ್ಸ್ ಆ್ಯಪ್ ಲಿಸ್ಟ್ ಆಗಿದೆ. ಜುಲೈ 6 ರಿಂದ ಡೌನ್ಲೋಡ್ಗೆ ಲಭ್ಯವಿದೆ. ಇತ್ತ ಆ್ಯಂಡ್ರಾಯ್ಡ್ ವರ್ಶನ್ ಗೂಗಲ್ ಪ್ಲೇ ಸ್ಟೋರ್ನಲ್ಲೂ (Google Play Store)ಥ್ರೆಡ್ಸ್ ಆ್ಯಪ್ ಲಿಸ್ಟಿಂಗ್ ಆಗಿದೆ. ಜನವರಿ ತಿಂಗಳಿನಿಂದ ಇನ್ಸ್ಟಾಗ್ರಾಂ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.
ಟ್ವಿಟರ್ ಪ್ರತಿಸ್ಪರ್ಧಿಯಾಗಿ ಭಾರತದಲ್ಲಿ ಕೂ ಆ್ಯಪ್ ಹೆಚ್ಚು ಜನಪ್ರಿಯವಾಗುತ್ತಿದೆ. ಟ್ವಿಟರ್ ನಿರ್ಬಂಧಗಳಿಂದ ಕೂ ಆ್ಯಪ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಇದೀಗ ಇನ್ಸ್ಟಾಗ್ರಾಂ ಥ್ರೆಡ್ಸ್ ಹೊಸ ಸಂಚಲನ ಸೃಷ್ಟಿಸಲು ಸಜ್ಜಾಗಿದೆ. ಟ್ವಿಟರ್ಗೆ ಮಾರುಕಟ್ಟೆಯಲ್ಲಿ ಅತೀ ದೊಡ್ಡ ಪ್ರತಿಸ್ಪರ್ಧೆ ಎಂದರೆ ಮೆಟಾ. (Meta)ಮೆಟಾ ಮಾಲೀಕತ್ವದಲ್ಲಿ ಫೇಸ್ಬುಕ್, ಇನ್ಸ್ಟಾಗ್ರಾಂ, ವ್ಯಾಟ್ಸ್ಆ್ಯಪ್ ಪ್ರಮುಖ ಸಾಮಾಜಿಕ ಮಾಧ್ಯಮಗಳನ್ನು ಹೊಂದಿದೆ. ಇದೀಗ ಥ್ರೆಡ್ಸ್ ಸೇರಿಕೊಳ್ಳುತ್ತಿದೆ.



