ಜೊತೆ ಜೊತೆಯಲಿ (Jothe Jotheyali) ಸೀರಿಯಲ್ ಖ್ಯಾತಿಯ ಮೇಘಾ ಶೆಟ್ಟಿಯವರು (Megha Shetty) ಮೂಗು ಚುಚ್ಚಿಸ್ಕೊಂಡ ವಿಡಿಯೋ ಇತ್ತೀಚೆಗೆ ವೈರಲ್ (Viral video) ಆಗಿತ್ತು. ಇಷ್ಟು ವರ್ಷ ಬಿಟ್ಟು, ಈಗ್ಯಾಕೆ ಚುಚ್ಚಿಸ್ಕೊಂಡ್ರು ಅನ್ನೋ ಪ್ರಶ್ನೆಯೂ ಎದ್ದಿತ್ತು. ಕೆಲವರು ಎಂದಿನಂತೆ ಸುದ್ದಿ ನೋಡಿ, ನಮಗೆ ರೈತರ ಸ್ಟೋರಿ ಕೊಡಿ, ಸೈನಿಕರ ಸ್ಟೋರಿ ಅನ್ನೋ ವರಾತ ಹಚ್ಚಿಕೊಂಡಿದ್ದರೆ, ಇನ್ನೂ ಕೆಲವರು ಮೇಘಾ ಶೆಟ್ಟಿಗೆ ಅಯ್ಯೋ ಪಾಪ.. ನೋವಾಯ್ತಾ ಅನು ಅಂತಾ ಕಾಳಜಿ ತೋರಿಸಿದ್ರು. ಆದರೆ ಮೂಗುತಿ ಚುಚ್ಚಿಸಿಕೊಂಡಿದ್ದರ ಗುಟ್ಟು ಇದೀಗ ಬಯಲಾಗಿದೆ.
ಮೇಘಾ ಶೆಟ್ಟಿ (Megha Shetty) ಮತ್ತೊಮ್ಮೆ ಬೆಳ್ಳಿತೆರೆಯಲ್ಲಿ ಮಿನುಗೋಕೆ ಸಿದ್ಧವಾಗಿದ್ದಾರೆ. ಈ ಬಾರಿ ದೊಡ್ಮನೆ ಹುಡುಗ ವಿನಯ್ ರಾಜ್`ಕುಮಾರ್ (Vinay Rajkumar) ಜೊತೆಯಾಗಿದ್ದಾರೆ. ಗ್ರಾಮಾಯಣ (Gramayana) ಚಿತ್ರಕ್ಕೆ ಮೇಘಾ ಶೆಟ್ಟಿ (Megha Shetty) ಹೀರೋಯಿನ್ (Heroine) ಆಗಿದ್ದಾರೆ.
ಈ ಮೊದಲು (Ganesh) ಗಣೇಶ್ ಜೊತೆ ತ್ರಿಬ್ಬಲ್ ರೈಡಿಂಗ್ (Triple riding) ಚಿತ್ರದಲ್ಲಿ ನಟಿಸಿದ್ದ (Actress Megha Shetty) ಮೇಘಾ ಶೆಟ್ಟಿ, ಆಪರೇಷನ್ ಲಂಡನ್ ಕೆಫೆ, ಕೈವ ಚಿತ್ರದಲ್ಲಿಯೂ ನಾಯಕಿಯಾಗಿದ್ದಾರೆ. ಗ್ರಾಮಾಯಣ ಪಕ್ಕಾ ಹಳ್ಳಿ ಸ್ಟೋರಿಯಾಗಿದ್ದು, ಹಳ್ಳಿ ಹುಡುಗಿಯಾಗಿಯೇ ಮೇಘಾ ಶೆಟ್ಟಿ (Megha Shetty) ಮಿಂಚಲಿದ್ದಾರೆ. ಮೇಘಾ ಶೆಟ್ಟಿಯವರು ಮೂಗು ಚುಚ್ಚಿಸಿಕೊಂಡು ಮೂಗುತಿ ಧರಿಸಿದ್ದು ಇದಕ್ಕೇನೇ.
ದೇವನೂರು ಚಂದ್ರು (Devanuru Chandru) ನಿರ್ದೇಶನದ ಚಿತ್ರಕ್ಕೆ ಇದೀಗ ಲಹರಿ ಫಿಲಮ್ಸ್ (Lahari films) ಮತ್ತು ವೀನಸ್ ಎಂಟರ್‍ಟೈನ್‍ಮೆಂಟ್ (Venus entertainment) ನಿರ್ಮಾಣದ ಹೊಣೆಗಾರಿಕೆ ಇದೆ. ಚಿತ್ರದ ಚಿತ್ರೀಕರಣ ಅಕ್ಟೋಬರ್ 4 ರಂದು ಪ್ರಾರಂಭವಾಗಲಿದ್ದು, ಮೊದಲ ದಿನದ ಚಿತ್ರೀಕರಣ ಕಡೂರಿನಲ್ಲಿ ನಡೆಯಲಿದೆ. ಚಿತ್ರದಲ್ಲಿ ನಟನಾಗಿ ವಿನಯ್ ರಾಜ್ ಕುಮಾರ್ ಅವರು ನಟಿಸುತ್ತಿರುವುದು ಅಧಿಕೃತವಾಗಿದ್ದು, ನಿರ್ಮಾಪಕರು ಇದೀಗ ಚಿತ್ರದ ನಾಯಕ ನಟಿಯಾಗಿ ಮೇಘಾ ಶೆಟ್ಟಿಯವರನ್ನು (Megha Shetty) ಅಂತಿಮಗೊಳಿಸಿದ್ದಾರೆ.
ಮೇಘಾ ಶೆಟ್ಟಿಗೂ (Megha Shetty) ಮೊದಲು ಈ ಚಿತ್ರಕ್ಕೆ ಅಮೃತಾ ಅಯ್ಯರ್ (Amrutha ayyar) ನಾಯಕಿಯಾಗಿದ್ದರು. ಆದರೆ ಗ್ರಾಮಾಯಣ ಸಿನಿಮಾ, ಕೊರೊನಾ ಹಾಗೂ ನಿರ್ಮಾಪಕರ ಅಕಾಲಿಕ ಸಾವಿನಿಂದಾಗಿ ನಿಂತು ಹೋಗಿತ್ತು. ಈಗ ಮತ್ತೆ ಶುರುವಾಗಿದೆ. ಮೇಘಾ ಶೆಟ್ಟಿ ಅವರೀಗ ಅಮೃತಾ ಪಾತ್ರಕ್ಕೆ ರೀಪ್ಲೇಸ್ ಆಗಿದ್ದಾರಾ..? ಅಥವಾ ಇವರದ್ದೇ ಹೊಸ ಪಾತ್ರವಾ.. ಕುತೂಹಲ ಚಾಲ್ತಿಯಲ್ಲಿದೆ.



