ಸಿನಿಮಾ (TV Cinema) ಕಥೆಯ ಎಳೆಯನ್ನಿಟ್ಟುಕೊಂಡು ಸೀರಿಯಲ್ (TV Serial) ಮಾಡ್ತಾರೆ. ಟೈಟಲ್ ಇಟ್ಟುಕೊಳ್ತಾರೆ. ಹಲವು ಧಾರಾವಾಹಿಗಳು (TV Serial) ಸಕ್ಸಸ್ ಸಿನಿಮಾಗಳ ಟೈಟಲ್ ಇಟ್ಟುಕೊಂಡೇ ಗೆದ್ದಿವೆ. ಆದರೆ ಸೀರಿಯಲ್ಲಿನ ಕಥೆಯನ್ನೇ ಸಿನಿಮಾ ಮಾಡುವ ಸಾಹಸ ಮಾಡಿದವರು ಇಲ್ಲವೇ ಇಲ್ಲ. ಅಂತಹ ಸಾಹಸಕ್ಕೆ ಕೈ ಹಾಕಿದೆ ಸ್ಟಾರ್ ಸುವರ್ಣ ಟೀಂ. ಮಯೂರಿ ಜೊತೆಗೂಡಿ, ಸೀರಿಯಲ್ ಸಿನಿಮಾ (TV Serial) ಮಾಡೋಕೆ ಹೊರಟಿದೆ.
ಮಯೂರಿ (Mayuri) . ಫೇಮಸ್ ಆಗಿದ್ದೇ ಕಿರುತೆರೆಯಿಂದ. ಅಶ್ವಿನಿ ನಕ್ಷತ್ರ (Ashwini Nakshathra) ಧಾರಾವಾಹಿಯ ಮೂಲಕ ಸೆನ್ಸೇಷನ್ ಸೃಷ್ಟಿಸಿ, ಸ್ಟಾರ್ ಆದ ಮಯೂರಿ, ಅದಾದ ನಂತರ ಹಿರಿತೆರೆಗೆ ಸೀಮಿತವಾದರು. ಮೊದಲಿಗೇ ಶಶಾಂಕ್ ಅವರ ಸಿನಿಮಾ ಸಿಕ್ಕು, ಗೆಲುವೂ ಸಿಕ್ಕ ಬಳಿಕ, ಕಿರುತೆರೆಗೆ ಬರಲಿಲ್ಲ. ‘ಕೃಷ್ಣ ಲೀಲಾ’ (Krishna Leela) ಸಿನಿಮಾದಲ್ಲಿ ನಾಯಕಿ ಲೀಲಾ ಆಗಿ ನಟಿಸಿದ್ದ ಮಯೂರಿ (Mayuri), ಅದಾದ ಮೇಲೆ ಇಷ್ಟಕಾಮ್ಯ, ನಟರಾಜ ಸರ್ವೀಸ್, ಕರಿಯಾ 2, ರ್ಯಾಂಬೋ 2, ಜಾನಿ ಜಾನಿ ಯಸ್ ಪಪ್ಪಾ, 8ಒಒ ಬುಲೆಟ್, ರುಸ್ತುಂ, ನನ್ನ ಪ್ರಕಾರ, ಆಟಕ್ಕುಂಟು ಲೆಕ್ಕಕ್ಕಿಲ್ಲ, ಮೌನಂ ಹಾಗೂ ವೀಲ್ ಚೇರ್ ರೋಮಿಯೊ ಸಿನಿಮಾಗಳಲ್ಲಿ ನಟಿಸಿದ್ದರು. ಇದೀಗ ಮತ್ತೊಮ್ಮೆ ಕಿರುತೆರೆಗೆ ಹೋಗಿದ್ದಾರೆ.
ಸ್ಟಾರ್ ಸುವರ್ಣ (Star Suvarna) ಒಂದು ವಿಶಿಷ್ಟ ಪ್ರಯೋಗಕ್ಕೆ ಕೈ ಹಾಕಿದೆ. ತಮ್ಮದೇ ಚಾನೆಲ್ಲಿನ ನಂ.1 ಉದೋ ಉದೋ ಶ್ರೀ ರೇಣುಕಾ ಯಲ್ಲಮ್ಮ ಸೀರಿಯಲ್`ನ್ನು (Udho Udho Shree Renuka yallamma) ಇಟ್ಟುಕೊಂಡು ಮೂರು ಗಂಟೆಗಳ ವಿಶೇಷ ಚಿತ್ರವನ್ನು (Udho Udho Shree Renuka yallamma) ಸಿದ್ಧಪಡಿಸಿದೆ. ಇದರಲ್ಲಿ ನಟಿ ಮಯೂರಿ (Mayuri) ಮಾಟಗಾತಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೆ (Udho Udho Shree Renuka yallamma) ‘ಮಾಟಗಾತಿಯ ಕಾಡಿನಲ್ಲಿ’ (Maatagaathiya kadinalli) ಅಂತ ಉಪಶೀರ್ಷಿಕೆ ಕೊಟ್ಟು ಆಗಸ್ಟ್ 6ರಂದು ಸಂಜೆ 6.30 ರಿಂದ 9.30ರವರೆಗೆ ಪ್ರಸಾರ ಮಾಡುತ್ತಿದೆ. ಈ ಮೂಲಕ ಮಯೂರಿ (Mayuri) ಬಣ್ಣದ ಲೋಕದ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಮಯೂರಿ (Mayuri) ಅವರಿಗೀಗ ಮದುವೆಯಾಗಿ ಒಂದು ಮಗುವಿನ ತಾಯಿಯಾಗಿದ್ದಾರೆ.



