ಈ ಬಾರಿಯ ದಸರಾ ಹಬ್ಬ ಸ್ಟಾರ್ ವಾರ್ ನಡೆಯುವುದಕ್ಕೆ ಸಾಕ್ಷಿಯಾಗುತ್ತಿದೆ. ಹಬ್ಬಗಳ ಟೈಮಲ್ಲಿ ಸ್ಟಾರ್ ಸಿನಿಮಾಗಳು ಕಾಯ್ದುಕೊಂಡು ಬರೋದು ಕಾಮನ್. ಹಬ್ಬಗಳು ಅಂದ್ರೆ ಸುದೀರ್ಘ ರಜೆ ಇರುತ್ತದೆ ಎನ್ನುವುದೂ ಕಾರಣ. ಆದರೆ ಈ ದಸರಾದಲ್ಲಿ ಕನ್ನಡದ ಮಾರ್ಟಿನ್ ಮತ್ತು ತಮಿಳಿನ ವೆಟ್ಟೆಯಾನ್ ಮುಖಾಮುಖಿಯಾಗುತ್ತಿವೆ.
ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಅಕ್ಟೋಬರ್ 11ರಂದು ಬಿಡುಗಡೆ ಕಾಣುತ್ತಿದೆ. 3 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುತ್ತಿದ್ದೇವೆ ಎಂದು ಚಿತ್ರತಂಡ ಘೋಷಣೆಯನ್ನೇನೋ ಮಾಡಿತ್ತು. ಆದರೆ ಅಷ್ಟು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುವ ಸೂಚನೆ ಜಾಹೀರಾತಿನಲ್ಲಿ ಕಾಣ್ತಿಲ್ಲ. ಈ ಚಿತ್ರದ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಎಪಿ ಅರ್ಜುನ್ ನಿರ್ದೇಶನದ ಈ ಚಿತ್ರವನ್ನು ಉದಯ್ ಮೆಹ್ತಾ ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡದ ಜೊತೆಗೆ ಪರಭಾಷೆಯಲ್ಲೂ ಸಿನಿಮಾ ಬಿಡುಗಡೆ ಕಾಣುತ್ತಿದೆ. ಕನ್ನಡದ ಜೊತೆಗೆ ಪರಭಾಷೆಯಲ್ಲೂ ಸಿನಿಮಾ ಬಿಡುಗಡೆ ಕಾಣುತ್ತಿದೆ ಅನ್ನೋದು ವಿಶೇಷ. ‘ಪೊಗರು’ ಬಳಿಕ ಧ್ರುವ ನಟಿಸುತ್ತಿರುವ ಸಿನಿಮಾ ಇದಾಗಿದೆ.
ಧ್ರುವ ಸರ್ಜಾ ಅವರ ಮಾವ ಅರ್ಜುನ್ ಸರ್ಜಾ ಅವರೇ ಕಥೆ ಬರೆದಿದ್ದಾರೆ. ವೈಭವಿ ಶಾಂಡಿಲ್ಯ ನಾಯಕಿಯಾಗಿದ್ದಾರೆ. ಇನ್ನು ಚಿತ್ರದ ಟ್ರೇಲರ್, ಹಾಡುಗಳಿಗಿಂತ ಹೆಚ್ಚಾಗಿ ನಿರ್ಮಾಪಕ ನಿರ್ದೇಶಕರ ಸಮರವೇ ದೊಡ್ಡದಾಗಿ ಸೌಂಡು ಮಾಡ್ತಿದೆ. ಎಪಿ ಅರ್ಜುನ್ ಫಿಲ್ಮ್ ಎಂದೇನೋ ನಿರ್ಮಾಪಕರು ಹಾಕಿದ್ದಾರೆ. ಆದರೆ ಪ್ರಚಾರದಲ್ಲಿ ಎಲ್ಲಿಯೂ ಅರ್ಜುನ್ ಕಾಣಿಸಿಕೊಂಡಿಲ್ಲ. ಅಂದಹಾಗೆ ಮಾರ್ಟಿನ್ ಚಿತ್ರದಲ್ಲಿ ಧ್ರುವ ಸರ್ಜಾ ಹೆಸರು ಅರ್ಜುನ್ ಎಂದೇ.
ಒಟ್ಟಿನಲ್ಲಿ ಚಿತ್ರದ ಕಥೆಗಾರ ಅರ್ಜುನ್ ಸರ್ಜಾ, ನಿರ್ದೇಶಕ ಅರ್ಜುನ್ ಹಾಗೂ ಚಿತ್ರದ ನಾಯಕ ಧ್ರುವ ಸರ್ಜಾ ಹೆಸರೂ ಅರ್ಜುನ್. ಹೀಗಾಗಿ ಅರ್ಜುನ್ ಎಂಬ ಹೆಸರು ಚಿತ್ರದಲ್ಲಿ ಎದ್ದು ಕಾಣ್ತಿದೆ.
ಇವರಿಗೆ ಎದುರಾಗಿ ತಮಿಳಿನಲ್ಲಿ ಸೂಪರ್ಸ್ಟಾರ್ ಎನಿಸಿಕೊಂಡಿರುವ ‘ವೆಟ್ಟೈಯಾನ್’ ಚಿತ್ರವು ಅಕ್ಟೋಬರ್ 10ರಂದು ಬಿಡುಗಡೆ ಆಗುತ್ತಿದೆ. ಈ ಚಿತ್ರದಲ್ಲಿ ರಜನಿಕಾಂತ್ ಜೊತೆಗೆ ಹಿಂದಿಯ ಅಮಿತಾಭ್ ಬಚ್ಚನ್, ಮಾಲಿವುಡ್ನಲ್ಲಿ ಫಹಾದ್ ಫಾಸಿಲ್ ಅವರು ನಟಿಸುತ್ತಿದ್ದಾರೆ. ಈ ಚಿತ್ರವು ಒಳ್ಳೆಯ ಗಳಿಕೆ ಮಾಡುವ ಸಾಧ್ಯತೆ ಇದೆ. ‘ಜೈಲರ್’ ಸಿನಿಮಾದ ಮೂಲಕ ರಜನಿ ದೊಡ್ಡ ಯಶಸ್ಸು ಕಂಡಿದ್ದರು. ಆಕ್ಷನ್ ಪ್ರಿನ್ಸ್ ಎದುರು ತಮಿಳು, ಹಿಂದಿ ಹಾಗೂ ಮಲಯಾಳಂ ಸ್ಟಾರ್ ನಟರು ನಟಿಸಿರುವ ಚಿತ್ರ ವೆಟ್ಟೆಯಾನ್. ಗೆದ್ದರೆ ಧ್ರುವ ಸರ್ಜಾ ಯಾವುದೋ ಲೆವೆಲ್ಲಿಗೆ ಹೋಗಲಿದೆ.
ಮಾರ್ಟಿನ್ ಚಿತ್ರದ ಬಿಡುಗಡೆಗಾಗಿ ಶಿವಣ್ಣ ಕೂಡಾ ಸಹಾಯ ಮಾಡಿದ್ದಾರೆ. ತಮ್ಮದೇ ಭೈರತಿ ರಣಗಲ್ ರಿಲೀಸ್ ಡೇಟ್ ಮುಂದೆ ಹಾಕಿದ್ದಾರೆ. ಆದರೆ ತಮಿಳಿನ ದೊಡ್ಡ ಚಿತ್ರವನ್ನು ಧ್ರುವ ಸರ್ಜಾ ಫೇಸ್ ಮಾಡಬೇಕಿದೆ. ಅಂದಹಾಗೆ ಎರಡೂ ಚಿತ್ರಗಳನ್ನು ಫಸ್ಟ್ ಡೇ.. ಫಸ್ಟ್ ಶೋ. ನೋಡಬೇಕು ಎನ್ನುವವರು ದುಬಾರಿ ದುಡ್ಡು ಕೊಟ್ಟು ಸಿನಿಮಾ ನೋಡಬೇಕು. ಬೇರೆ ಮಾರ್ಗ ಇಲ್ಲ.



