ಪಾಕಿಸ್ತಾನದ ಮೊದಲ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಫ್) ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್, ತಮ್ಮ ಮೂರನೇ ಮಗಳನ್ನು ಅಣ್ಣನ ಮಗನಿಗೆ ಕೊಟ್ಟು ಮದುವೆ ಮಾಡಿಸಿದ್ದಾರೆ. ಅಣ್ಣ, ತಮ್ಮಂದಿರ ಮಕ್ಕಳು ಅಣ್ಣ-ತಂಗಿಯಾಗುವುದಿಲ್ಲವೇ ಎಂದರೆ ಹೌದು. ಆದರೆ, ಅದು ಅವರಲ್ಲಿ ತಪ್ಪಿಲ್ಲ. ಅಸೀಮ್ ಮುನೀರ್ ಅವರು ತಮ್ಮ ಅಣ್ಣನ ಖಾಸಿಂ ಮುನೀರ್ ಅವರ ಪುತ್ರ ಕ್ಯಾ. ಅಬ್ದುಲ್ ರೆಹಮಾನ್ ಜೊತೆ, 3ನೇ ಮಗಳು ಮಹ್ನೂರ್ ಅವರ ಮದುವೆ ಮಾಡಿದ್ದಾರೆ. ಮುಸ್ಲಿಂ ವಿವಾಹ ಪದ್ಧತಿಯಲ್ಲಿ ಇದರಲ್ಲಿ ಯಾವುದೇ ತಪ್ಪಿಲ್ಲ. ಏಕೆಂದರೆ..
ಖುರಾನ್‌ನಲ್ಲಿ ಮದುವೆಗೆ ನಿಷಿದ್ಧವಾದ ಸಂಬಂಧಗಳ ಪಟ್ಟಿಯಲ್ಲಿ ತಾಯಿ, ಮಗಳು, ಸಹೋದರಿ, ಚಿಕ್ಕಮ್ಮ, ದೊಡ್ಡಮ್ಮ ಅಂದರೆ ತಂದೆ-ತಾಯಿಯ ಸಹೋದರಿಯರು, ಸೋದರ ಮಾವನ, ಅತ್ತೆಯರ ಮಗಳನ್ನು ಮದುವೆಯಾಗುವುದಕ್ಕೆ ಅನುಮತಿ ಇಲ್ಲ. ಚಿಕ್ಕಪ್ಪ ಅಥವಾ ಚಿಕ್ಕಮ್ಮನ ಮಗಳನ್ನು ಮದುವೆಯಾಗುವುದಕ್ಕೆ ಅನುಮತಿ ಇದೆ. ಹೀಗಾಗಿ ಅಸೀಮ್ ಮುನೀರ್ ಯಾವುದೇ ತಪ್ಪು ಮಾಡಿಲ್ಲ. ಇಸ್ಲಾಂ ಪ್ರಕಾರ ಹಾಗೆ ಮಾಡುವುದು ಅಪರಾಧ ಅಲ್ಲವೇ ಅಲ್ಲ.
ಅಸೀಮ್ ಮುನೀರ್ ತಮ್ಮ ಮುದ್ದಿನ ಮಗಳು ಮಹ್ನೂರ್ ಅವರನ್ನು ಮದುವೆ ಮಾಡಿಸಿ ಬೀಳ್ಕೊಟ್ಟಿದ್ಧಾರೆ. ರಾವಲ್ಪಿಂಡಿಯಲ್ಲಿರುವ ಪಾಕಿಸ್ತಾನದ ಸೇನಾ ಮುಖ್ಯ ಕಚೇರಿಯಲ್ಲಿ ಕಳೆದ ಡಿ.26ರಂದು ಮದುವೆ ನೆರವೇರಿದೆ. ಅಸೀಮ್ ಮುನೀರ್ ಅಣ್ಣನ ಮಗ ಅಬ್ದುಲ್ ರೆಹಮಾನ್ ಮತ್ತು ಮುನೀರ್ ಅವರ 3ನೇ ಮುದ್ದಿನ ಮಗಳು ಮಹ್ನೂರ್ ಸತಿಪತಿಯರಾಗಿದ್ದಾರೆ. ಸುರಕ್ಷತಾ ದೃಷ್ಟಿಯಿಂದ ಮದುವೆಯನ್ನು ಗುಟ್ಟಾಗಿ ನಡೆಸಲಾಗಿದೆ. ವಿವಾಹದ ಯಾವುದೇ ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿಲ್ಲ. ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ, ಪ್ರಧಾನಿ ಶೆಹಬಾಜ್ ಷರೀಫ್, ಉಪ ಪ್ರಧಾನಿ ಇಶಾಕ್ ದಾರ್, ಐಎಸ್ಐ ಮುಖ್ಯಸ್ಥರು ಮತ್ತು ನಿವೃತ್ತ ಜನರಲ್‌ಗಳು ಸೇರಿದಂತೆ ಪಾಕಿಸ್ತಾನಿ ಸೇನೆಯ ಇತರ ಸದಸ್ಯರು ಭಾಗವಹಿಸಿದ್ದರಂತೆ.
ಅಸಿಮ್ ಮುನೀರ್ ಅವರ ಸೋದರಳಿಯ ಅಬ್ದುಲ್ ರೆಹಮಾನ್ ಕೂಡ ಪಾಕಿಸ್ತಾನಿ ಸೇನೆಯಲ್ಲಿ ಕ್ಯಾಪ್ಟನ್ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದು, ಈಗ ಮಿಲಿಟರಿ ಕೋಟಾದ ಅಡಿಯಲ್ಲಿ ಸಿವಿಲ್ ಸರ್ವಿಸ್‌ಗೆ ಶಿಫ್ಟ್ ಆಗಿದ್ದಾರೆ. ಪಾಕ್ ಮಾಧ್ಯಮಗಳ ವರದಿ ಪ್ರಕಾರ ಮದುವೆಗೆ ಸುಮಾರು 400 ಅತಿಥಿಗಳಿಗೆ ಆಹ್ವಾನ ನೀಡಲಾಗಿತ್ತು. ಆದರೆ ಭದ್ರತಾ ಕಾರಣಗಳಿಂದಾಗಿ ಮದುವೆ ಸಮಾರಂಭವನ್ನು ಸಂಪೂರ್ಣವಾಗಿ ಗೌಪ್ಯವಾಗಿಡಲಾಗಿತ್ತು. ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರಿಗೆ ಒಟ್ಟು ನಾಲ್ಕು ಹೆಣ್ಣು ಮಕ್ಕಳಿದ್ದು, ಪ್ರಸ್ತುತ ಮೂರನೇ ಮಗಳಾದ ಮಹ್ನೂರ್ ಅವರ ವಿವಾಹ ನೆರವೇರಿದೆ.
ಅಣ್ಣ, ತಮ್ಮ, ಅಕ್ಕ, ತಂಗಿಯರ ಮಕ್ಕಳನ್ನು ಮದುವೆಯಾಗುವ ಪದ್ಧತಿ ಇರುವುದು ಮುಸ್ಲಿಂ ಕುಟುಂಬಗಳಲ್ಲಿ ಮಾತ್ರ.



