ಆತನಿಗೆ ಈಗಾಗಲೇ ಮದುವೆಯಾಗಿದೆ. ಪತ್ನಿಯೂ ಇದ್ದಾಳೆ. ಆದರೆ ಆಕೆಯೊಂದಿಗೆ ನೆಟ್ಟಗೆ ಸಂಸಾರ ಮಾಡದೆ, ನಾಟಕ ಮಾಡುತ್ತಲೇ ಇನ್ನೊಬ್ಬ ಯುವತಿಯನ್ನು ಗಾಳಕ್ಕೆ ಹಾಕಿಕೊಂಡಿದ್ದಾನೆ ( Extra marital affair ). ಆತ ಮುಸ್ಲಿಂ. ಪತ್ನಿಗೆ ತಲಾಕ್ ( talaque ) ಕೂಡಾ ಕೊಟ್ಟಿಲ್ಲ. ಹೀಗಿರುವಾಗಲೇ ಆತ ಮತ್ತೊಬ್ಬ ಹಿಂದೂ ಯುವತಿಯನ್ನು ಮದುವೆ ಆಗಿದ್ದಾನೆ. ಇತ್ತ ಹಿಂದೂ ಯುವತಿಯ (Hindu girl) ಬದುಕೂ ಅತಂತ್ರ.. ಅತ್ತ ಮುಸ್ಲಿಂ ಪತ್ನಿಯ (muslim wife) ಬದುಕೂ ಮೂರಾಬಟ್ಟೆ. ಇಂಥಾದ್ದೊಂದು ಘಟನೆ ನಡೆದಿರೋದು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ.
ದಾಂಡೇಲಿಯ Dandeli ವಿಜಯ ನಗರದ ನಿವಾಸಿ ನೂರ್ ಜಹಾನ್ (Noor jahan) ಹಾಗೂ ದಾಂಡೇಲಿಯ ಪಟೇಲ್ ನಗರ ನಿವಾಸಿ ಖಾದರ್ ಅಲಿ ಹಸನ್ ಸಾಬ್ ಶೇಖ್ 7 ವರ್ಷಗಳ ಹಿಂದೆ ಮದುವೆಯಾಗಿದ್ದರು. ಪ್ರೀತಿಸಿಯೇ ಮದುವೆಯಾಗಿದ್ದರು (Love marriage). ಒಂದು ವರ್ಷ ಹೆಂಡತಿಯ ಜೊತೆ ಇದ್ದ ಖಾದರ್, ನಂತರ ಹೆಂಡತಿಯ ಜೊತೆ ಬೇರೆ ಮನೆಗೆ ಶಿಫ್ಟ್ ಆಗಿದ್ದ. ಆತನ ಹೆತ್ತವರು ಟಾರ್ಚರ್ ಕೊಡುತ್ತಿದ್ದರಂತೆ. ಅದಾದ ಮೇಲೆ ಒಂದು ವರ್ಷ ಸಂಸಾರ ಮಾಡಿದ್ದ ಖಾದರ್, ಹೆಂಡತಿ ಜೊತೆ ಜಗಳ ಮಾಡಿಕೊಂಡಿದ್ದ. ಇನ್ನೊಬ್ಬಾಕೆಯೊಂದಿಗೆ ಚಕ್ಕಂದ ನಡೆಸುತ್ತಿದ್ದ.
ಇದನ್ನು ಗಮನಿಸಿದ ಪತ್ನಿ ನೂರ್ ಜಹಾನ್ ಜಮಾತ್ನತ್ತ ನ್ಯಾಯಕ್ಕಾಗಿ ತೆರಳಿದ್ದರೂ ಯಾವುದೇ ನ್ಯಾಯ ದೊರಕಿರಲಿಲ್ಲ. 2019ರಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದ ವೇಳೆ ಪೊಲೀಸ್ ಅಧಿಕಾರಿಯೋರ್ವರು ಇಬ್ಬರ ನಡುವೆ ರಾಜಿ ಮಾಡಿಸಿ ಮತ್ತೆ ಸಂಸಾರ ಮಾಡುವಂತೆ ಜೊತೆಯಾಗಿ ಕಳುಹಿಸಿದ್ದರು. ಆದರೆ, ಆತ ಮಾತ್ರ ತನ್ನ ಚಾಳಿಯನ್ನು ಮುಂದುವರಿಸಿದ್ದ. ಮತ್ತೆ ತನ್ನ ಪತ್ನಿಯನ್ನು ತಾಯಿ ಮನೆಯಲ್ಲಿರಿಸಿ ಪತ್ನಿಗೆ ತಿಳಿಯದಂತೆ ಎರಡು ವರ್ಷಗಳ ಕಾಲ ವಿದೇಶಕ್ಕೆ ತೆರಳಿದ್ದನು. ನಂತರ ವಿದೇಶದಿಂದ ಹಿಂತಿರುಗಿದರೂ ಪತ್ನಿಯ ಖರ್ಚಿಗೆ ಏನೂ ಹಣ ನೀಡುತ್ತಿರಲಿಲ್ಲ. ಇತ್ತ ನಾಟಕವಾಡುತ್ತಲೇ ಅತ್ತ ಹಿಂದೂ ಯುವತಿಯ ಜೊತೆ ಮದುವೆ ಮಾಡಿಕೊಂಡಿದ್ದಾನೆ. ಅದೂ ರಿಜಿಸ್ಟರ್ ಮ್ಯಾರೇಜ್. ಜುಲೈ 13ರಂದು ತನ್ನೂರಿನವಳಾದ ದಾಂಡೇಲಿ ಪಟೇಲ್ ನಗರದ ನಿವಾಸಿ ಹಿಂದೂ ಪರಿಶಿಷ್ಟ ಜಾತಿ ಸಮುದಾಯದ ಐಶ್ವರ್ಯ ರವೀಂದ್ರ ಕಾಂಬ್ಳೆ (23) ಎಂಬಾಕೆಯ ಜೊತೆ ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದಾನೆ. ಅಲ್ಲದೇ, ತನ್ನದು ಮೊದಲ ಮದುವೆ ಎಂಬುದಾಗಿ ಪ್ರತಿಜ್ಞಾ ಪತ್ರದಲ್ಲೂ ಸುಳ್ಳು ಮಾಹಿತಿ ನೀಡಿದ್ದಾನೆ.
ಈ ಮದುವೆಗೆ ಮಾನ್ಯತೆ ನೀಡಬಾರದು ಎಂದು ಆಗ್ರಹಿಸಿರುವ ಮೊದಲ ಪತ್ನಿ ನೂರ್ ಪತಿ ಖಾದರ್ ಹಾಗೂ ಆರೋಪಿಯ ತಾಯಿ ಮುಮ್ತಾಜ್ ಹಸನ್ ಸಾಬ್ (45), ಸಮೀರ್ ಕುಬಸದ್ (36), ಸಮೀರ್ ನಜೀರ್ ಅಹ್ಮದ್ (26), ಹಸನ್ ಸಾಬ್ ಮೊಹ್ಮದ್ (26), ಆರತಿ ಯಮುನಪ್ಪ (59) ವಿರುದ್ಧ ಕಾರವಾರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದ್ದು, ಆರೋಪಿ ಖಾದರ್ ಸೇರಿದಂತೆ ಎಲ್ಲರಿಗೂ ಸ್ಟೇಷನ್ ಬೇಲ್ ಮೇಲೆ ರಿಲೀಸ್ ಮಾಡಿದ್ದಾರೆ.
ನೂರ್ ಸಹಾಯಕ್ಕೆ ನಿಂತಿರುವ ದಾಂಡೇಲಿಯ ಅಂಬೇಡ್ಕರ್ ಸೈನ್ಯ ದಲಿತ ಸಂಘಟನೆ, ನೂರ್ ಜಹಾನ್ರಿಗೆ ನ್ಯಾಯ ದೊರೆಯದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ರೋಪಿಯನ್ನು ಪೊಲೀಸರು ಬಂಧಿಸಿದರೂ ಬೇಲ್ ಮೂಲಕ ಬಿಡುಗಡೆ ಮಾಡಲಾಗಿದೆ. ಇದೇ ವಿಚಾರಕ್ಕೆ ನೂರ್ ಬೇಸರಗೊಂಡಿದ್ದು, ಪೊಲೀಸರು ಕೂಡ ಅಪರಾಧಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಹಿನ್ನಲೆ ಜಿಲ್ಲಾಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಸುತ್ತಲಾರಂಭಿಸಿದ್ದಾರೆ. ಅಲ್ಲದೇ, ತನಗೆ ಅನ್ಯಾಯ ಮಾಡಿದ ತನ್ನ ಪತಿ ಖಾದರ್ ಅಲಿ ಹಸನ್ ಸಾಬ್ ಶೇಖ್, ಆತನ ಕುಟುಂಬಸ್ಥರ ಹಾಗೂ ಮೊದಲ ಪತ್ನಿಯಿದ್ದ ವಿಚಾರ ತಿಳಿದಿದ್ದರೂ ಆತನನ್ನು ಮದುವೆಯಾದ ಐಶ್ವರ್ಯಾ ಎನ್ನುವ ಯುವತಿಯ ವಿರುದ್ಧವೂ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.



