Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

ಮಂಡ್ಯದ ನಾಗಮಂಗಲ ಕೋಮುಗಲಭೆ : ಅರೆಸ್ಟ್‌ ಆದವರ ಕುಟುಂಬದ ಹೆಣ್ಣು ಮಕ್ಕಳಿಂದ ಪೊಲೀಸ್ ಠಾಣೆಗೆ ಮುತ್ತಿಗೆ

SpeciallU by SpeciallU
September 12, 2024
in News
Reading Time: 1 min read
0 0
0
ಮಂಡ್ಯದ ನಾಗಮಂಗಲ ಕೋಮುಗಲಭೆ : ಅರೆಸ್ಟ್‌ ಆದವರ ಕುಟುಂಬದ ಹೆಣ್ಣು ಮಕ್ಕಳಿಂದ ಪೊಲೀಸ್ ಠಾಣೆಗೆ ಮುತ್ತಿಗೆ

ಮಂಡ್ಯ. ಮಂಡ್ಯದವರು ತಮ್ಮನ್ನು ತಾವು ಬುದ್ದಿವಂತರು ಎಂದುಕೊಳ್ತಾರೆ. ತಮ್ಮನ್ನು ತಾವು ರಾಜಕೀಯವಾಗಿ ಪ್ರಜ್ಞಾವಂತರು ಎಂದು ಎದೆ ತಟ್ಟಿಕೊಳ್ತಾರೆ. ಅಂತಹ ಮಂಡ್ಯದಲ್ಲಿ ಕೋಮುಗಲಭೆಗಳು ತೀವ್ರತರ ಮಟ್ಟದಲ್ಲಿ ನಡೆದಿರಲಿಲ್ಲ ಅನ್ನೋದು ಕೂಡಾ ಹೆಮ್ಮೆಯ ವಿಷಯವಾಗಿಯೇ ಇತ್ತು. ಈಗ ಅದಕ್ಕೆ ಬೆಂಕಿ ಬಿದ್ದಿದೆ. ನಾಗಮಂಗಲ ಪಟ್ಟಣದಲ್ಲಿ ಗಣಪತಿ ಮೆರವಣಿಗೆ ವೇಳೆ ಹಿಂದೂ – ಮುಸ್ಲಿಂ ಗಲಾಟೆ ನಡೆದು, ಪೊಲೀಸರು ಲಾಠಿ ಪ್ರಹಾರ ಮಾಡಿದ್ದು, ಇಡೀ ಪಟ್ಟಣ ನೆಮ್ಮದಿ ಕಳೆದುಕೊಂಡಿದೆ.

ಬಟ್ಟೆ ಅಂಗಡಿ ಭಸ್ಮ : ಬೀದಿಗೆ ಬಿದ್ದಿರುವವರ ಸಂಖ್ಯೆ ಕಡಿಮೆಯೇನಲ್ಲ. ಭೀಮ್ ರಾಜ್ ಅನ್ನೋರ ಬಟ್ಟೆ ಶೋ ರೂಮ್ ಸುಟ್ಟು ಭಸ್ಮವಾಗಿದೆ. ಸಾಧನಾ ಟೆಕ್ಸ್​ಸ್ಟೈಲ್ ಎಂಬ ಅಂಗಡಿಗೆ ಬೆಂಕಿ ಬಿದ್ದು, ಒಂದೂವರೆ ಕೋಟಿ ಮೌಲ್ಯದ ಬಟ್ಟೆ ಕಳೆದುಕೊಂಡಿರುವ ಭೀಮ್‌ ರಾಜ್‌ ಅವರಿಗೆ ಕಣ್ಣೀರು ಬಿಟ್ಟರೆ ಬೇರೇನಿಲ್ಲ. ಸುಮಾರು ೨೦೦ ಮಂದಿಯ ಗುಂಪು ಅಂಗಡಿಗೆ ನುಗ್ಗಿ ಅಂಗಡಿ ಸುಟ್ಟು ಹಾಕಿದೆ.‌ ಇನ್ನೂ ಹಲವು ಅಂಗಡಿ, ಮನೆಗಳನ್ನು ಸುಟ್ಟು ಹಾಕಿದ್ದಾರೆ. ಬೈಕುಗಳು, ಕಾರುಗಳು, ಎತ್ತಿನ ಗಾಡಿಗಳಿಗೆ ಬೆಂಕಿ ಹಚ್ಚಿದ್ದಾರೆ.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಅಹಿತಕರ ಘಟನೆ ಸಂಬಂದ ಒಟ್ಟು 46 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಬಂಧನ ಖಂಡಿಸಿ ನಾಗಮಂಗಲ ಟೌನ್ ಠಾಣೆ ಮುಂದೆ ಕುಟುಂಬಸ್ಥರ ಜಮಾವಣೆ ಮಾಡಿ ಹೈಡ್ರಾಮಾ ಸೃಷ್ಟಿಸಿದ್ದಾರೆ. ನಮ್ಮವರು ತಪ್ಪು ಮಾಡಿಲ್ಲ, ಬೇಕಂತಲೇ ಬಂಧಿಸಲಾಗಿದೆ, ಅವರನ್ನು ಬಿಟ್ಟುಬಿಡಿ ಅಂತ ಮಹಿಳೆಯರು ಕಣ್ಣೀರಿಟ್ಟಿದ್ದಾರೆ.

ಇಷ್ಟಕ್ಕೂ ಗಣೇಶ ಮೆರವಣಿಗೆ ನಡೆಯುತ್ತಾ ಬರುತ್ತಿದ್ದಾಗ ದರ್ಗಾ ಎದುರು ಮೆರವಣಿಗೆ ಬಂದ ತಕ್ಷಣ ದರ್ಗಾ ಮುಂದೆ ತಮಟೆ, ಡೊಳ್ಳು ಬಾರಿಸದಂತೆ ಕ್ಯಾತೆ ತೆಗೆದಿದ್ದಾರೆ. ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಮಾರಕಾಸ್ತ್ರಗಳನ್ನು ಝಳಪಿಸಿವೆ. ಪೆಟ್ರೋಲ್ ಬಾಂಬ್ ಕೂಡ ಎಸೆದಿದ್ದಾರೆ. ಮಂಡ್ಯ ವೃತ್ತದಲ್ಲಿ ನಾಲ್ಕೈದು ಬೈಕ್​ಗಳಿಗೆ ಬೆಂಕಿ ಇಟ್ಟು ರಸ್ತೆ ಬದಿಯ 2-3 ಅಂಗಡಿಗಳನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ಮುಸ್ಲಿಂ ಮತ್ತು ಹಿಂದೂ ಹುಡುಗರು ಇಬ್ಬರೂ ಆಕ್ರೋಶಗೊಂಡು ಬೀದಿಗಿಳಿದಾಗ ಪೊಲೀಸರು ಅಸಹಾಯಕರಾಗಿದ್ದಾರೆ. ಕೊನೆಗೆ ಲಾಠಿ ಚಾರ್ಜ್‌ ಮಾಡಿ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ.

ನಾಗಮಂಗಲ ಗಲಭೆ ಕೋಮು ಗಲಭೆ ಅಲ್ಲ : ಪರಮೇಶ್ವರ್‌

ಅದು ಕೋಮು ಗಲಭೆ ಅಲ್ಲ, ಆಕಸ್ಮಿಕವಾಗಿ ನಡೆದಿರುವ ಘಟನೆ. ಒಬ್ಬರಿಗೊಬ್ಬರು ಘರ್ಷಣೆ ಮಾಡಿಕೊಂಡಿದ್ದಾರೆ. ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟ ಆಗಿದೆ.  ಯಾರೋ ಕಲ್ಲು ತೂರಾಟ ಮಾಡಿದ್ದಾರೆ. ಅದಕ್ಕೆ ಈ ಕಡೆಯಿಂದಲೂ ಕಲ್ಲು ತೂರಾಟ ಮಾಡಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಆಗಿಲ್ಲ ಎನ್ನುವುದು ಗೃಹ ಸಚಿವ ಪರಮೇಶ್ವರ್‌ ವಾದ.

ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಇದು ಒಂದು ಕೋಮಿನ ವಿಪರೀತ ತುಷ್ಠಿಕರಣದ ಪರಿಣಾಮ. ರಾಜ್ಯ ಸರ್ಕಾರ ಕಾನೂನು ವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಫಲವಾಗಿದೆ. ಒಂದು ಸಮುದಾಯದವರು ಬೇಕೆಂತಲೇ ಗಲಭೆ ಮಾಡಿದ್ದಾರೆ ಎನ್ನುವುದು ಕೇಂದ್ರ ಸಚಿವ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ ಮೊದಲಾದವರ ಹೇಳಿಕೆ.

ಮಂಡ್ಯದವರೇ ಆದ ಸಚಿವ ಚೆಲುವರಾಯಸ್ವಾಮಿ ಮೊದಲಾದವರ ಪ್ರಕಾರ ಇದು ಆಕಸ್ಮಿಕವಾಗಿ ಆದ ಘಟನೆ. ರಾಜಕೀಯ ಮಾಡಬಾರದು.

ಒಟ್ಟಿನಲ್ಲಿ ಮಂಡ್ಯದಲ್ಲಿ ಕೋಮುಗಲಭೆ ಹೊತ್ತಿಕೊಳ್ಳೋದ್ರ ಮೊದಲ ಕಿಡಿ ಸಿಡಿಯುತ್ತಲೇ ಇತ್ತು. ಟಿಪ್ಪು ಸುಲ್ತಾನ್‌ ವಿರೋಧಿ ಹೋರಾಟ, ಮಂಡ್ಯದ ದೇವಸ್ಥಾನಗಳನ್ನು ಕೆಡವಿ ಮಸೀದಿ ಕಟ್ಟಿದ್ದಾರೆ ಎನ್ನುವ ಆರೋಪ, ಮಂಡ್ಯದ ಕೆರೆಗೋಡಿನಲ್ಲಿ ಕೇಸರಿ ಧ್ವಜ ಕೆಳಗಿಳಿಸಿದ್ದ ಪ್ರಕರಣ.. ಹೀಗೆ ಹಲವು ಘಟನೆಗಳು ನಡೆದಿದ್ದವು. ಆದರೆ ಹೇಗೋ ಕೊನೆಯ ಹಂತರದಲ್ಲಿ ಬಿರುಗಾಳಿ ತಣ್ಣಗಾಗುತ್ತಿತ್ತು. ಈಗ ಧಗಧಗನೆ ಹೊತ್ತಿ ಉರಿದಿದೆ.

Tags: #ನಾಗಮಂಗಲ #ಕೋಮುಗಲಭೆ #ಮಂಡ್ಯ #Nagamangala #communalriots #mandya
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.