ಅದೊಂದೇ ಪಾತ್ರ ಇರಬೇಕು, ಮೂರೂ ಜನ ನಟಿಸಿದ್ದುದು. ಡಾ.ರಾಜ್ (Dr.Rajkumar) , ಶಿವಣ್ಣ (Dr.Shiva Rajkumar) ಮತ್ತು ಅಪ್ಪು (Dr.Puneeth Rajkumar) ಮೂವರೂ ಕಣ್ಣಪ್ಪನ ಪಾತ್ರದಲ್ಲಿ ನಟಿಸಿದ್ದರು. ಅಷ್ಟೇ ಅಲ್ಲ, ಮೂವರೂ ಒಟ್ಟಿಗೇ ನಟಿಸಿದ್ದ ಸಿನಿಮಾ ಒಂದಿದೆ ಎಂದರೆ, ಅದು ಒನ್ & ಓನ್ಲಿ ಶಿವ ಮೆಚ್ಚಿದ ಕಣ್ಣಪ್ಪ (Shiva mechchida Kannappa). ಶಿವ ಮೆಚ್ಚಿದ್ದ ಕಣ್ಣಪ್ಪ ಚಿತ್ರದಲ್ಲಿ ಮಾತ್ರವೇ ಅಪ್ಪನ ಜೊತೆ ಇಬ್ಬರೂ ಮಕ್ಕಳು ನಟಿಸಿದ್ದಾರೆ. ಆ ಲೆಕ್ಕಕ್ಕೆ ನೋಡದರೆ, ಡಾ.ರಾಜ್, ಶಿವಣ್ಣ ಮತ್ತು ಅಪ್ಪು ಮೂವರೂ ಕಣ್ಣಪ್ಪನ ಪಾತ್ರ ಮಾಡಿದ್ದಾರೆ. ಅಪ್ಪು ಬಾಲಕ ಕಣ್ಣಪ್ಪನ ಪಾತ್ರದಲ್ಲಿ ನಟಿಸಿದ್ದಾರೆ.
ಬೇಡರ ಕಣ್ಣಪ್ಪ (Bedara Kannappa). ಕನ್ನಡದ ಮಟ್ಟಿಗೆ ಐತಿಹಾಸಿಕ ಸಿನಿಮಾ. ಡಾ.ರಾಜ್ (Dr.Rajkumar), ನರಸಿಂಹರಾಜು ಎಂಬ ಪ್ರತಿಭೆಗಳು ಚಿತ್ರರಂಗಕ್ಕೆ ಬಂದಿದ್ದೇ ಆ ಚಿತ್ರದಿಂದ. ಕಣ್ಣಪ್ಪ ಎಂಬ ಬೇಡ ಭಕ್ತಿ ಪರವಶನಾಗಿ ಶಿವನಿಗೇ ಕಣ್ಣು ಕತ್ತರಿಸಿ ದೃಷ್ಟಿ ನೀಡುವ ಜಾನಪದ ಕಥೆ. ಶಿವಪ್ಪ ಕಾಯೋ ತಂದೆ ಮೂರು ಲೋಕ ಸ್ವಾಮಿ ದೇವ ಹಾಡು ಇವತ್ತಿಗೂ ಜನಪ್ರಿಯ ಹಾಡುಗಳ ಪಟ್ಟಿಯಲ್ಲಿದೆ. ಈ ಸಿನಿಮಾ ಇದೀಗ ತೆಲುಗಿನಲ್ಲಿ ರೀಮೇಕ್ ಆಗುತ್ತಿದೆ.
1954ರಲ್ಲಿ ಬಂದಿದ್ದ ಬೇಡರ ಕಣ್ಣಪ್ಪ (Bedara Kannappa) ಕನ್ನಡದಲ್ಲಿಯೇ ಶಿವ ಮೆಚ್ಚಿದ ಕಣ್ಣಪ್ಪ ಹೆಸರಿನಲ್ಲಿ ತೆರೆಗೆ ಬಂದಿತ್ತು. ಕನ್ನಡದಿಂದ ಕನ್ನಡಕ್ಕೇ ರೀಮೇಕ್ ಆಗಿದ್ದ ಸಿನಿಮಾ ಅದು. ಬೇಡರ ಕಣ್ಣಪ್ಪದಲ್ಲಿ ಕಣ್ಣಪ್ಪನಾಗಿದ್ದ ಡಾ.ರಾಜ್, ಶಿವ ಮೆಚ್ಚಿದ ಕಣ್ಣಪ್ಪದಲ್ಲಿ ಶಿವನಾಗಿದ್ದರು. ಬಾಲಕ ಕಣ್ಣಪ್ಪನ ಪಾತ್ರದಲ್ಲಿ ಪುನೀತ್ ನಟಿಸಿದ್ದರು. ಕಣ್ಣಪ್ಪನ ಪಾತ್ರದಲ್ಲಿ ಶಿವಣ್ಣ ನಟಿಸಿದ್ದರು. ಶಿವಣ್ಣ ನಟಿಸಿದ್ದ ಮೊದಲ ಪೌರಾಣಿಕ ಸಿನಿಮಾ ಶಿವ ಮೆಚ್ಚಿದ ಕಣ್ಣಪ್ಪ. ಇದೀಗ ಅದೇ ಕಥೆಯನ್ನಿಟ್ಟುಕೊಂಡು ತೆಲುಗಿನಲ್ಲಿ ಸಿನಿಮಾ ಮುಂದಾಗಿದ್ದಾರೆ ಮೋಹನ್ ಬಾಬು.
ಬೇಡರ ಕಣ್ಣಪ್ಪ ಬಹುಕೋಟಿ ವೆಚ್ಚದಲ್ಲಿ ತೆಲಗುವಿನಲ್ಲಿ ‘ಕನ್ನಪ್ಪ’ (Kannappa) ಎನ್ನುವ ಹೆಸರಿನಲ್ಲಿ ತಯಾರಾಗುತ್ತಿದೆ. ಮೋಹನ್ ಬಾಬು (Actor Mohan babu) ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮಂಚು ವಿಷ್ಣು ಚಿತ್ರದಲ್ಲಿ (Actor Manchu Vishnu) ಹೀರೊ ಆಗಿ ನಟಿಸಿದರೆ, ಪ್ರಭಾಸ್ (Actor Prabhas) ಅತಿಥಿ ಪಾತ್ರದಲ್ಲಿ ಅಂದರೆ ಶಿವನಾಗುವುದು ಬಹುತೇಕ ಖಚಿತವಾಗಿದೆ. ನಟಿ ನೂಪೂರು ಸನೂನ್ ಅವರೂ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಕುರಿತು ಇದಾಗಲೇ ಕನ್ಫರ್ಮ್ ಮಾಡಲಾಗಿದೆ. ಬೇಡರ ಕಣ್ಣಪ್ಪ (Bedara Kannappa) ಸಿನಿಮಾ ತಮಿಳಿಗೂ ಡಬ್ ಆಗಿ ರಿಲೀಸ್ ಆಗಿತ್ತು. ಬಳಿಕ ತೆಲುಗಿನಲ್ಲಿ ಕೃಷ್ಣಂರಾಜು ಈ ಚಿತ್ರವನ್ನು ‘ಭಕ್ತ ಕನ್ನಪ್ಪ’ ಹೆಸರಿನಲ್ಲಿ ರೀಮೆಕ್ ಮಾಡಿದ್ದರು. ಅಣ್ಣಾವ್ರು ಮಾಡಿದ್ದ ಪಾತ್ರವನ್ನೇ ಕೃಷ್ಣಂ ರಾಜು (actor Krishnam Raju) ಅವರು ನಟಿಸಿ ಸೈ ಎನಿಸಿಕೊಂಡಿದ್ದರು. ಅವರ ವೃತ್ತಿರಂಗದಲ್ಲಿ ಬಿಗ್ ಬ್ರೇಕ್ ಕೂಡ ಕೊಟ್ಟಿತ್ತು. ಇದೇ ಚಿತ್ರದಲ್ಲಿ ಪ್ರಭಾಸ್ ನಟಿಸಬೇಕು ಎನ್ನುವುದು ಕೃಷ್ಣಂರಾಜು ಆಸೆ ಆಗಿತ್ತು. ಸಾಕಷ್ಟು ಬಾರಿ ಇಂತಾದೊಂದು ಚಿತ್ರಕ್ಕೆ ಪ್ರಯತ್ನ ನಡೀತು. ಆದರೆ ಸಾಧ್ಯವಾಗಿರಲಿಲ್ಲ. ಕಳೆದ ವರ್ಷ ಅವರು ನಿಧನರಾದರು.
ಕಣ್ಣಪ್ಪ ಪಾತ್ರದಲ್ಲಿ ಶಿವಣ್ಣ ನಟಿಸುವುದು ಹೇಗೆ ಡಾ.ರ ರಾಜ್ ಅವರ ಕನಸಾಗಿತ್ತೋ, ಹಾಗೆಯೇ ಅದೇ ಚಿತ್ರದಲ್ಲಿ ಮಗ ಪ್ರಭಾಸ್ ನಟಿಸಬೇಕು ಹಾಗೂ ಶಿವನ ಪಾತ್ರ ಮಾಡಬೇಕು ಅನ್ನೋದು ಕೃಷ್ಣಂರಾಜು ಅವರ ಕನಸಾಗಿತ್ತು. ಮೋಹನ್ ಬಾಬು ಅವರಿಗೂ ಅಷ್ಟೆ, ಬೇಡರ ಕಣ್ಣಪ್ಪ ಚಿತ್ರದಲ್ಲಿ ಮಗ ಮಂಚು ವಿಷ್ಣು ನಟಿಸಬೇಕು ಅನ್ನೋ ಕನಸಿತ್ತು. ಒಟ್ಟಿನಲ್ಲಿ ತಂದೆಯಂದಿರು ತಮ್ಮ ತಮ್ಮ ಮಕ್ಕಳ ಬಗ್ಗೆ ಒಂದೇ ಪಾತ್ರದ ಬಗ್ಗೆ ಕಂಡಿದ್ದ ಕನಸು ಕನ್ನಪ್ಪ.
150 ಕೋಟಿ. ರೂ ಬಜೆಟ್ನಲ್ಲಿ ಸಿನಿಮಾ ಮೂಡಿ ಬರಲಿದೆ. ಇತ್ತೀಚೆಗೆ ಶ್ರೀಕ್ಷೇತ್ರ ಕಾಳಹಸ್ತಿಯಲ್ಲಿ ಪೂಜೆ ಸಲ್ಲಿಸಿ ‘ಕನ್ನಪ್ಪ’ ಚಿತ್ರಕ್ಕೆ ಚಾಲನೆ ಕೊಡಲಾಗಿದೆ. ಚಿತ್ರಕ್ಕೆ ಪರುಚೂರಿ ಗೋಪಾಲಕೃಷ್ಣ, ತೋಟ ಪ್ರಸಾದ್, ತೋಟಪಲ್ಲಿ ಸಾಯಿನಾಥ್ ಮತ್ತು ಬುರ್ರಾ ಸಾಯಿ ಮಾಧವ್ ಚಿತ್ರಕಥೆ ಮತ್ತು ಸಂಭಾಷಣೆ ಸಿದ್ಧಪಡಿಸಿದ್ದು ಮಣಿಶರ್ಮಾ ಮತ್ತು ಸ್ಟೀಫನ್ ದೇವಸ್ಸೆ ಸಂಗೀತ ನೀಡುತ್ತಿದ್ದಾರೆ. ಶೆಲ್ಡನ್ ಶಾ ಅವರ ಛಾಯಾಗ್ರಹಣವಿದ್ದು ಮೋಹನ್ ಬಾಬು ಕೂಡ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ.



