ನಟಿ ಮಾಲಾಶ್ರೀ (Malashree) ಅವರು ತಮ್ಮ ಇಬ್ಬರೂ ಮಕ್ಕಳ ಜೊತೆ ಕೊರಗಜ್ಜನಿಗೆ ಸೇವೆ ಸಲ್ಲಿಸಿದ್ದಾರೆ. ಮಾಲಾಶ್ರೀ ರಾಮು (Malashree Ramu) ನಟಿಸುತ್ತಿರುವ ಚಿತ್ರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆಯ್ದು ಆಯ್ದು ಕೆಲವೇ ಚಿತ್ರಗಳಲ್ಲಿ ನಟಿಸುತ್ತಿರುವ ಮಾಲಾಶ್ರೀ (Malashree) ಅವರಿಗೆ ಮಕ್ಕಳನ್ನು ಒಂದು ಸ್ಥಾನಕ್ಕೆ ಸೇರಿಸುವ ಕನಸಿದ್ದಂತೆ ಇದೆ. ಆ ಹಾದಿಯಲ್ಲಿಯೇ ಸಾಗುತ್ತಿರುವ ಮಾಲಾಶ್ರೀ (Malashree), ಮಕ್ಕಳೊಂದಿಗೆ ಕೊರಗಜ್ಜನಿಗೆ ಸೇವೆ ಸಲ್ಲಿಸಿದ್ದಾರೆ.
ಕೊರಗಜ್ಜನ ಪವಾಡದ (Koragajja) ಕಥೆಗಳನ್ನು ಕೇಳಿಯೇ ಇರುತ್ತೀರಿ. ಕರಾವಳಿಯವರಾದರೆ ಸ್ವತಃ ಅನುಭವಿಸಿರುತ್ತಾರೆ. ಅಂತಹ ಪವಾಡ ಚಿತ್ರ ನಟ, ನಟಿಯರ ಜೀವನದಲ್ಲೂ ಆಗುತ್ತಿದೆ. ಮಾಲಾಶ್ರೀ(Malashree) ಬದುಕಿನಲ್ಲೂ ಕರಾವಳಿಯ ಕಾರ್ಣಿಕ ದೈವ (karnika daive) ಕೊರಗಜ್ಜ ಪವಾಡ (Koragajja) ಮೆರೆದಿದ್ದು, ಬೇಡಿಕೆ ಈಡೇರಿಸಿದ ಕೊರಗಜ್ಜನ (Koragajja) ಕುತ್ತಾರು ಆದಿಸ್ಥಳಕ್ಕೆ ಆಗಮಿಸಿ ನಟಿ ಮಾಲಶ್ರೀ ಹರಕೆ ತೀರಿಸಿದದ್ದಾರೆ.
ಮೂರು ತಿಂಗಳ ಹಿಂದಷ್ಟೇ ಕೊರಗಜ್ಜನ ಕಟ್ಟೆಗೆ (Koragajja) ಬಂದು ಬೇಡಿಕೊಂಡಿದ್ದೆನು. ಎಲ್ಲವೂ ಅಚಾನಕ್ ಎಂಬಂತೆ ನಡೆದು ಹೋಯ್ತು. ಕ್ಷೇತ್ರದ ಶಕ್ತಿಯನ್ನು ಹೇಳತೀರದು. ಬಹಳಷ್ಟು ಪಾಸಿಟಿವ್ ಎನರ್ಜಿ ಕ್ಷೇತ್ರದಲ್ಲಿದೆ. ಒಳಗೆ ಹೋಗುವಾಗಲೇ ಸಾನಿಧ್ಯದ ಶಕ್ತಿ ಭಾಸವಾಗುತ್ತದೆ. ಬೇಡಿಕೆ ಈಡೇರಿದ ಹಾಗೆ ಹರಕೆ ತೀರಿಸಿ ಮತ್ತೆ ಆಶೀರ್ವಾದ ಪಡೆಯುವ ಉದ್ದೇಶದಿಂದ ಕುಟುಂಬ ಹಾಗೂ ಸ್ನೇಹಿತರ ಜೊತೆಗೆ ಬಂದಿದ್ದೇನೆ. ಮುಂದೆಯೂ ಬರುತ್ತಿರುತ್ತೇನೆ ಎಂದಿದ್ದಾರೆ ಮಾಲಾಶ್ರೀ.
ಮಾಲಾಶ್ರೀ ಪೂಜೆ ಸಲ್ಲಿಸಿದ ವೇಳೆ, ಶ್ರೀ ಪಂಜಂದಾಯ ಬಂಟ ವೈದ್ಯನಾಥ ಆದಿ ಕೊರಗತನಿಯ ಸೇವಾ ಟ್ರಸ್ಟ್ನ ಟ್ರಸ್ಟಿಗಳು ನಟಿ ಮಾಲಶ್ರೀ ಹಾಗೂ ಪುತ್ರಿಯನ್ನು ಸನ್ಮಾನಿಸಿ ಹರಸಿದ್ದಾರೆ. ಆದರೆ ಮಾಲಾಶ್ರೀ ಬದುಕಿನಲ್ಲಿ ನಡೆದ ವಿಶೇಷವೇನು? ಪವಾಡವೇನು ಎಂಬುದು ಗೊತ್ತಾಗಿಲ್ಲ.
ಚಿತ್ರನಟರಿಗೆ ಕೊರಗಜ್ಜನ (Koragajja) ದೈವದ ಮೇಲೆ ನಂಬಿಕೆ ಇರುವುದು ಹೊಸದಲ್ಲ. ರಿಷಬ್ ಶೆಟ್ಟಿ (Kanthara)ಯವರ ಕಾಂತಾರದ (Rishab Shetty) ನಂತರವಂತೂ ಇಂತಹ ಹರಕೆಗಳು, ಸೇವೆಗಳು ನಡೆಯುತ್ತಲೇ ಇವೆ. ನಟಿ ಪ್ರೇಮಾ (Prema) , ತಾರಾ ಅನುರಾಧ (Thara Anuradha), ರಚಿತಾ ರಾಮ್ (Rachitha ram) ಮೊದಲಾದವರೆಲ್ಲ ಕೊರಗಜ್ಜನಿಗೆ ಹಾಗೂ ಕರಾವಳಿಯ ದೈವಗಳಿಗೆ ಹರಕೆ ಸಲ್ಲಿಸಿದ್ದಾರೆ. ಅನುಶ್ರೀ, ರಾಧಿಕಾ ಕುಮಾರಸ್ವಾಮಿ, ರಕ್ಷಿತ್ ಶೆಟ್ಟಿ, ರಾಜ್ ಬಿ.ಶೆಟ್ಟಿ ಮೊದಲಾದವರೆಲ್ಲ ಕರಾವಳಿಯವರೇ. ಇವರಿಗೆ ದೈವದ ಸೇವೆ, ಕಾರ್ಣಿಕ ಹೊಸದೇನಲ್ಲ. ಆದರೆ ಮಾಲಾಶ್ರೀ ಹಾಗಲ್ಲ. ಇಷ್ಟಕ್ಕೂ ಮಾಲಾಶ್ರೀ ಕಟ್ಟಿಕೊಂಡಿದ್ದ ಹರಕೆ ಏನು? ಸೇವೆ ಏನು..? ಅದು ಗೊತ್ತಿಲ್ಲ. ಸದ್ಯಕ್ಕೆ ಮಾಲಾಶ್ರೀ ಮಗಳು ಧನ್ಯಾ ರಾಮ್ ಚಿತ್ರವೊಂದರಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.



