ಕನ್ನಡವನ್ನು ಅತ್ಯಂತ ಸ್ವಚ್ಛವಾಗಿ ಮಾತನಾಡಿಯೇ ಫೇಮಸ್ ಆಗಿದ್ದವರು ಅಪರ್ಣ. ವಯಸ್ಸಿನ್ನೂ 57. ಬದುಕಿ ಬಾಳುವುದಕ್ಕೆ ಇನ್ನೂ ಅರ್ಧ ಆಯಸ್ಸು ಇತ್ತು. ಇಷ್ಟು ಬೇಗನೆ ಅವರು ನಮ್ಮನ್ನು ಬಿಟ್ಟು ಹೋಗಲು ಕಾರಣ ಎಂದರೆ ಅದು ಶ್ವಾಸಕೋಶದ ಕ್ಯಾನ್ಸರ್. ದುಶ್ಚಟಗಳೇ ಇರಲಿಲ್ಲ.. ಆದರೂ ಈ ರೋಗ ಬಂದಿದ್ದೇಕೆ ಎಂದರೆ.. ಅದು ವೈದ್ಯರಿಗೂ ಗೊತ್ತಿಲ್ಲ. ಆದರೆ.. ರೋಗ ಏಕಾಏಕಿ ಬರುವುದಿಲ್ಲ. ಎರಡು ವರ್ಷಗಳಿಂದ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರಂತೆ. ಆದರೆ.. ಅದು ಅವರ ಅರಿವಿಗೆ ಬಂದು ವೈದ್ಯರಿಂದ ಗೊತ್ತಾಗುವ ವೇಳೆಗೆ ಅದು ೪ನೇ ಹಂತ ಲುಕೇಮಿಯ ಹಂತಕ್ಕೆ ಬಂದುಬಿಟ್ಟಿತ್ತು.
ವೈದ್ಯರು ಹೇಳುವ ಪ್ರಕಾರ ಕಳೆದ ಮೂರು ದಿನಗಳಿಂದ ಅವರ ಆರೋಗ್ಯ ಬಹಳ ಹದಗೆಟ್ಟಿತ್ತು. ಕ್ಯಾನ್ಸರ್ ಈಗಾಗಲೇ ನಾಲ್ಕನೇ ಸ್ಟೇಜ್ ನಲ್ಲಿತ್ತು ಕ್ಯಾನ್ಸರ್ ಗೆ ಚಿಕಿತ್ಸೆ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಯ್ತು. ಆದರೆ.. ಕೆಲವು ಲಕ್ಷಣಗಳು ಬರುತ್ತವೆ. ಕಾಣಿಸಿಕೊಳ್ಳುತ್ತವೆ. ಎಚ್ಚೆತ್ತುಕೊಂಡರೆ ಅತೀ ಶೀಘ್ರವಾಗಿ ಕ್ಯಾನ್ಸರ್‌ನಿಂದ ಮುಕ್ತರಾಗಬಹುದು. ನಾನು ಸ್ಮೋಕ್ ಮಾಡಲ್ಲ, ಡ್ರಿಂಕ್ಸ್ ಮಾಡಲ್ಲ, ನಂಗೆ ಕ್ಯಾನ್ಸರ್ ಬರಲ್ಲ ಅನ್ನೋ ಭ್ರಮೆ ಬೇಡ. ವೈದ್ಯರೇ ಹೇಳುವ ಪ್ರಕಾರ ಈ ಕೆಲ ಲಕ್ಷಣಗಳು ಕಂಡು ಬಂದರೆ.. ತಕ್ಷಣ ಪರಿಣತ ವೈದ್ಯರನ್ನು ಸಂಪರ್ಕಿಸಿ.
ತೂಕ ಕಡಿಮೆಯಾಗುತ್ತಿದ್ದರೆ..
ಆಹಾರ ಪದ್ಧತಿ ಅಥವಾ ವ್ಯಾಯಾಮದಲ್ಲಿ ಯಾವುದೇ ಬದಲಾವಣೆ ತಂದುಕೊಳ್ಳದೆ ಮಹಿಳೆಯರು ತಮ್ಮ ದೇಹದ ತೂಕ ಕ್ರಮೇಣವಾಗಿ ಕಡಿಮೆಯಾಗುತ್ತಿದ್ದರೆ ತಕ್ಷಣ ವೈದ್ಯರನ್ನು ಕಾಂಟ್ಯಾಕ್ಟ್ ಮಾಡಿ. ಮೊದಲ ಸಂಕೇತ ಅವರ ದೇಹದ ತೂಕ ಕಡಿಮೆಯಾಗುವುದು.
ಪದೇ ಪದೇ ಸುಸ್ತಾಗುತ್ತಿದ್ದರೆ..
ಮಹಿಳೆಯರಲ್ಲಿ ಸುಸ್ತು ಮತ್ತು ಆಯಾಸ ಪದೇ ಪದೇ ಕಂಡು ಬರುತ್ತಿದ್ದರೆ ಅದು ಕ್ಯಾನ್ಸರ್ ಲಕ್ಷಣವಾಗಿರಬಹುದು. ಅಂದ್ರೆ ಪ್ರತಿದಿನದ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಳ್ಳಲು ಕೂಡ ಕಷ್ಟವಾಗುವ ಹಾಗೆ ಅತಿಯಾದ ಸುಸ್ತು ಮತ್ತು ಆಯಾಸ ಇದ್ದರೆ ವೈದ್ಯರಲ್ಲಿಗೆ ಹೋಗುವುದಕ್ಕೆ ಲೇಟ್ ಮಾಡಬೇಡಿ.
ಚರ್ಮವನ್ನು ಗಂಭೀರವಾಗಿ ತೆಗೆದುಕೊಳ್ಳಿ :
ಚರ್ಮದ ಮೇಲೆ ಇದ್ದಕ್ಕಿದ್ದಂತೆ ಕೆಂಪು ಬಣ್ಣದ ದದ್ದುಗಳು, ಚರ್ಮ ಒಡಕು ಬಂದಂತೆ ಕಾಣಿಸುವುದು, ಕೆಲವು ಭಾಗಗಳಲ್ಲಿ ಚರ್ಮ ಗಟ್ಟಿಯಾ ದಂತೆ ಕಾಣಿಸುವುದು, ಇವೆಲ್ಲವೂ ಸಹ ಕ್ಯಾನ್ಸರ್ ಲಕ್ಷಣ ಎಂದು ಹೇಳಲಾಗುತ್ತದೆ. ಮಹಿಳೆಯರು ಚರ್ಮದ ಈ ರೀತಿಯ ಬದಲಾವಣೆ ಗಳನ್ನು ಕಡೆಗಣಿಸಬಾರದು
ವಿಚಿತ್ರ ರೀತಿಯ ನೋವು ಕಂಡು ಬಂದರೆ..
ದೇಹದ ಯಾವುದೇ ಭಾಗದಲ್ಲಿ ನಿರಂತರವಾದ ನೋವು ಇದ್ದರೆ, ಮತ್ತು ಅದು ಚಿಕಿತ್ಸೆ ನೀಡಿದ ನಂತರವೂ ಕಡಿಮೆ ಆಗದಿದ್ದರೆ, ಅದನ್ನು ನಿರ್ಲಕ್ಷ್ಯ ಮಾಡದಂತೆ ಡಾಕ್ಟರ್ ಬಳಿ ತೋರಿಸಿ ಕೊಳ್ಳುವುದು ಉತ್ತಮ. ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಕ್ಯಾನ್ಸರ್‌ನ್ನೂ ಸೋಲಿಸಬಹುದು.
ಅಸಹಜ ರಕ್ತಸ್ರಾವವಾಗುತ್ತಿದ್ದರೆ..
ಮಹಿಳೆಯರಲ್ಲಿ ಪೀರಿಯಡ್ ಸಂದರ್ಭದಲ್ಲಿ ರಕ್ತಸ್ರಾವ ಆಗುವುದು ಸಾಮಾನ್ಯ. ಆದರೆ ಇದಕ್ಕೂ ಹೊರತಾಗಿ ಅಸಹಜ ರಕ್ತಸ್ರಾವ ಕಂಡು ಬಂದರೆ, ಸ್ತ್ರೀರೋಗ ತಜ್ಞರ ಬಳಿ ಆದಷ್ಟು ಬೇಗನೆ ತೋರಿಸಿ ಚಿಕಿತ್ಸೆ ಪಡೆದುಕೊಳ್ಳುವುದು ಬಹಳ ಉತ್ತಮ. ಏಕೆಂದರೆ ಇದು ಕೂಡ ಕ್ಯಾನ್ಸರ್ ಲಕ್ಷಣ ಎಂದು ಹೇಳಲಾಗುತ್ತದೆ.
ಕ್ಯಾನ್ಸರ್ ರೋಗವನ್ನು ಪತ್ತೆ ಹಚ್ಚಿ ಚಿಕಿತ್ಸೆ ಪಡೆದುಕೊಂಡರೆ ಕ್ಯಾನ್ಸರ್ ಗೆಲ್ಲಬಹುದು. ಕ್ಯಾನ್ಸರ್ ಲಕ್ಷಣಗಳನ್ನು ಕಡೆಗಣಿಸಿ ದರೆ, ಆನಂತರದಲ್ಲಿ ಅದನ್ನು ಗುಣಪಡಿಸುವುದು ಕಷ್ಟ ಏಕೆಂದರೆ ದೇಹದ ಒಳಭಾಗದಲ್ಲಿ ಕ್ಯಾನ್ಸರ್ ಬಹುತೇಕ ಆರೋಗ್ಯಕರ ಅಂಗಾಂಗಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿರುತ್ತದೆ.



