ಯಾವುದೇ ಕೊಲೆಯಾಗಲೀ, ಅಪರಾಧವಾಗಲೀ.. ಪೊಲೀಸರಿಗೆ ಒಂದೊಂದು ಕೂಡಾ ಹೊಸ ಅನುಭವವೇ. ಪೊಲೀಸರು ಕ್ರಿಮಿನಲ್ ರೀತಿಯಲ್ಲೇ ಯೋಚನೆ ಮಾಡಬೇಕು. ಆತ ಬಂದ ಹಾದಿಯಲ್ಲೇ ರಿವರ್ಸ್ ಹೋಗಬೇಕು. ಒಂದು ತಿಂಗಳ ಹಿಂದೆ ಜೂನ್ 5ರಂದು ಆಕಾಂಕ್ಷಾ ಬಿದ್ಯಾರಸ ಎಂಬ ಯುವತಿಯ ಕೊಲೆಯಾಗಿತ್ತು. 23 ವರ್ಷದ ಯುವತಿಯ ಹತ್ಯೆ ಪೊಲೀಸರ ನಿದ್ದೆಗೆಡಿಸಿತ್ತು. ಯಾವುದೊಂದು ಕ್ಲೂ ಬಿಡದೆ ಪೊಲೀಸರನ್ನು ಯಾಮಾರಿಸುವ ಪ್ಲಾನ್ ಮಾಡಿದ್ದವನು, ಸಿಕ್ಕಿಬಿದಿದ್ದೇ ರೋಚಕ. ಆಕಾಂಕ್ಷಾರನ್ನು ಕೊಲ್ಲುವ ಅವನ ಪ್ಲಾನ್ ಹೇಗಿತ್ತು..? ಏಕೆ ಕೊಲೆ ಮಾಡಿದ ಎನ್ನುವುದೂ ರೋಚಕವೇ.
ಅನುಮಾನ.. ಬ್ರೇಕಪ್ ಕೊಲೆಗೆ ಕಾರಣ :
ಎರಡು ವರ್ಷಗಳ ಹಿಂದೆ ನಗರದ ಖಾಸಗಿ ಕಂಪನಿಯಲ್ಲಿ ಹೈದರಾಬಾದ್ನ ಆಕಾಂಕ್ಷಾ ಹಾಗೂ ದೆಹಲಿ ಮೂಲದ ಅರ್ಪಿತ್ ಸಹೋದ್ಯೋಗಿಗಳಾಗಿದ್ದರು. ಆಗ ಪರಸ್ಪರ ಆತ್ಮೀಯ ಒಡನಾಟ ಬೆಳೆದು ಪ್ರೇಮಾಂಕುರವಾಗಿತ್ತು. ಆರಂಭದಲ್ಲಿ ಈ ಪ್ರೇಮಿಗಳು ಅನ್ಯೋನ್ಯವಾಗಿಯೇ ಇದ್ದರು. ಇಬ್ಬರು ಒಂದೇ ಪ್ಲಾಟ್ನಲ್ಲಿ ಲಿವಿಂಗ್ ಟೂಗೆದರ್ (Living Together) ರಿಲೇಶನ್ನಲ್ಲಿದ್ದರು. ಈ ವೇಳೆ ಪ್ರೇಯಸಿ ಅಕಾಂಕ್ಷ ಅರ್ಪಿತ್ಗೆ ಮದುವೆಯಾಗುವುದಾಗಿ ಹೇಳಿದ್ದಳಂತೆ.
ಈ ನಡುವೆ ಹೈದರಾಬಾದ್ನ ಕಂಪನಿಗೆ ಅರ್ಪಿತ್ ಕೆಲಸಕ್ಕೆ ಸೇರಿದ್ದ. ಇತ್ತ ಆಕಾಂಕ್ಷಾ ಸಹ ಬೆಂಗಳೂರಿನಲ್ಲೇ ಇದ್ದು ಬೇರೆ ಕಂಪನಿಯಲ್ಲಿ ಉದ್ಯೋಗ ಪಡೆದು ತನ್ನ ಸ್ನೇಹಿತೆ ಜತೆ ಕೋಡಿಹಳ್ಳಿಯಲ್ಲಿ ನೆಲೆಸಿದ್ದರು.
ಇತ್ತೀಚೆಗೆ ಮತ್ತೊಬ್ಬ ಯುವಕನ ಜತೆ ಆಕಾಂಕ್ಷಾ (Akanksha) ಸಲುಗೆಯಿಂದ ಇದ್ದರು. ಈ ಸ್ನೇಹಕ್ಕೆ ಅರ್ಪಿತ್ ಕೆರಳಿದ್ದ. ಅನುಮಾನಗೊಂಡು ಆಕಾಂಕ್ಷಾಗೂ ಹೇಳದಂತೆ ಹೈದರಾಬಾದ್`ನಿಂದ ಬಂದಿದ್ದ. ಅರ್ಪಿತ್, ಪ್ರತಿಯೊಂದಕ್ಕೂ ಅನುಮಾನ ಪಡುವುದು ಆಕಾಂಕ್ಷಾಗೆ(Akanksha) ಸಿಟ್ಟು ತರಿಸಿತ್ತು. ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದ ಅರ್ಪಿತ್ ಅಕಾಂಕ್ಷ ಬ್ರೇಕ್ ಅಪ್ (love break up) ಅಂದಿದ್ದಕ್ಕೆ ಹೌಹಾರಿದ್ದ.
ಇದೇ ವಿಚಾರವಾಗಿ ಮಾತುಕತೆಗೆ ಜೂ.5ರಂದು ಗೆಳತಿಯನ್ನು ಹೈದರಾಬಾದ್ನಿಂದ ಬಂದು ಆತ ಭೇಟಿಯಾಗಿದ್ದ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಆರೋಪಿ, ಪ್ರಿಯತಮೆಯ ಕತ್ತು ಹಿಸುಕಿ ಕೊಂದು ಪರಾರಿಯಾಗಿದ್ದ. ಅನುಮಾನ ಮತ್ತು ಬ್ರೇಕಪ್ ಕೊಲೆಗೆ ಕಾರಣ ಎನ್ನುವುದು ಪೊಲೀಸರ ತನಿಖೆಯ ವಿವರ.
ಕ್ಲೂ ಸಿಗದಂತೆ ಪಕ್ಕಾ ಪ್ಲಾನ್ ಮಾಡಿದ್ದ ಅರ್ಪಿತ್ :
ಅರ್ಪಿತ್ ಜೆಬಿನಗರ ಪೊಲೀಸರ ಕೈಗೆ ಸಿಗದೇ ತಲೆ ಮರೆಸಿಕೊಂಡಿದಿದ್ದು ಬರೋಬ್ಬರಿ 27 ದಿನಗಳು. ಮೊಬೈಲ್ ಬಳಸಿದರೆ ಪೊಲೀಸರಿಗೆ ಸಿಕ್ಕಿಬೀಳುವ ಬಗ್ಗೆ ಅರಿತಿದ್ದ ಆರೋಪಿ ಅರ್ಪಿತ್ ಮೊಬೈಲ್ ಅನ್ನು ಬೆಂಗಳೂರಿಗೆ ಬರುವಾಗ ತಂದಿರಲಿಲ್ಲ. ದೆಹಲಿಯಿಂದ ಬೆಂಗಳೂರಿಗೆ ಹೊರಡುವ ಮುನ್ನ ತನ್ನಿಬ್ಬರು ಸ್ನೇಹಿತರ ಬೆಂಗಳೂರಿಗೆ ಅಕಾಂಕ್ಷಳನ್ನ ಮೀಟ್ ಮಾಡುವುದಾಗಿ ಇನ್ಸ್ ಟಾಗ್ರಾಮ್ ಹೇಳಿದ್ದನ್ನು ಡಿಲೀಟ್ ಮಾಡಿದ್ದ. ಆ ಬಳಿಕ ಪಕ್ಕಾ ಪ್ರೀಪ್ಲಾನ್ ಮಾಡಿಕೊಂಡೆ, ಕೊಲೆ ಬಳಿಕ ಎಸ್ಕೇಪ್ ಆಗಲು ಕೇವಲ 5 ಸಾವಿರ ಹಣ ಮತ್ತು 7-8 ಜೊತೆ ಬಟ್ಟೆಗಳನ್ನ ಪ್ಯಾಕ್ ಮಾಡಿ ವಿಜಯವಾಡದಲ್ಲಿ ಇರಿಸಿ ಬಂದಿದ್ದ. ಬೆಂಗಳೂರಿನ ಜೆಬಿ ನಗರದ ಅಕಾಂಕ್ಷ ಪ್ಲಾಟ್ ತೆರಳುವ ಮಾರ್ಗದಲ್ಲಿ ಇದ್ದ ರಸ್ತೆ ಬದಿ ಹಾಗೂ ಏರಿಯಾದ ಮನೆಗಳ ಸಿಸಿ ಕ್ಯಾಮಾರ ಗಮನಿಸಿ, ವೆಹಿಕಲ್ ಗಳಲ್ಲಿ ಓಡಾಡಿದ್ರೆ ಪೊಲೀಸರಿಗೆ ಸುಳಿವು ಸಿಕ್ಕಿ ಆ ಬಳಿಕ ಸಿಕ್ಕಿಬೀಳಬಹುದೆಂದು ನಡೆದುಕೊಂಡೆ ಪ್ಲಾಟ್ ಗೆ ಬಂದಿದ್ದ, ನಂತರ ಅಕಾಂಕ್ಷಳನ್ನ ಕೊಲೆ ಮಾಡಿ, ಫ್ಲಾಟ್ ನಿಂದ ಹೊರಬಂದವ ಅಕಾಂಕ್ಷಳ ಫ್ಲಾಟ್ ಗೆ ಆಕೆ ಸ್ನೇಹಿತೆ ಬಂದು ಹತ್ಯೆ ವಿಚಾರ ಆಕೆಗೆ ತಿಳಿಯುವ ವರೆಗೂ ಪ್ಲಾಟ್ ಬಳಿಯೇ ಮರೆಯಲ್ಲಿ ನಿಂತು ನೋಡಿ, ಆ ಬಳಿಕ ಬರೋಬ್ಬರಿ 8 ಕಿ.ಮೀ ನಡೆದು ಬಂದು ಬೆಂಗಳೂರಿನಿಂದ ಟ್ರೈನ್ ಮೂಲಕ ಆರೋಪಿ ಅರ್ಪಿತ್ ಹೈದರಾಬಾದ್ ಗೆ ತೆರಳಿದ್ದ.
ಹೈದರಾಬಾದ್ ನಿಂದ ಪ್ಯಾಕ್ ಮಾಡಿ ರೆಡಿ ಇಟ್ಟಿದ್ದ ಬಟ್ಟೆಗಳ ಬ್ಯಾಗ್ ಮತ್ತು ಖರ್ಚಿಗೆ 5 ಸಾವಿರ ಹಣ ತೆಗೆದುಕೊಂಡು ದೆಹಲಿಗೆ ಹೊರಡುವ ಟ್ರೈನ್ ಏರಿದ್ದಾನೆ.
ಈ ನಡುವೆ ಮೊಬೈಲ್ ಇಲ್ಲದ ಕಾರಣ ಇಂಟರ್ ನೆಟ್ ಮೂಲಕ ತನ್ನ ಸ್ನೇಹಿತರನ್ನು ಸಂಪರ್ಕಿಸಲು ಯತ್ನಿಸಿದ್ದಾನೆ. ಅವ್ರ ಸಹಾಯ ಪಡೆಯಲು ಅರ್ಪಿತ್ ನಡೆಸಿದ್ದ ಯತ್ನ ಕೈಗೂಡದೆ ಸ್ನೇಹಿತರಿಂದ ಯಾವುದೇ ರೆಸ್ಪಾನ್ಸ್ ಬಾರದ ಹಿನ್ನಲೆ ತಲೆಮರೆಸಿಕೊಳ್ಳಲು ಯೂಟರ್ನ್ ಹೊಡೆದಿದ್ದಾನೆ.
ಆದ್ರೆ ಹೈದರಾಬಾದ್ ನಿಂದ ದೆಹಲಿಗೆ ತೆರಳದೆ, ಮಾರ್ಗ ಮಧ್ಯೆ ಭೂಪಾಲ್ ನಲ್ಲಿ ಇಳಿದು ಅಸ್ಸಾಂಗೆ ಡೈವರ್ಟ್ ಆಗಿ ಅಲ್ಲಿಯೇ ಕೆಲ ದಿನಗಳ ಕಾಲ ತಂಗಿದ್ದ, ಖರ್ಚಿಗೆ ಹಣವಿಲ್ಲದೇ ಪರದಾಡಿದ್ದ ಅರ್ಪಿತ್ , ಯಾರಿಗೂ ಅನುಮಾನ ಬಾರದಂತೆ ಕೂಲಿ ಕೆಲಸ ಮಾಡುತ್ತಾ, ರಸ್ತೆ ಬದಿ ತರಕಾರಿ ವ್ಯಾಪಾರ ಮಾಡುತ್ತಾ ದಿನಕಳೆದಿದ್ದಾನೆ.
25 ದಿನಗಳ ಕಾಲ ಅಲೆದಾಡಿದ್ದ ಆರೋಪಿ ಅರ್ಪಿತ್ ಗುರ್ಜಾಲ್, ಕೊನೆಗೆ ವಿಜಯವಾಡಕ್ಕೆ ಹಿಂದಿರುಗಿದ್ದ. ವಿಜಯವಾಡದಲ್ಲಿ ಸ್ನೇಹಿತ ಮೋಟಾರ್ ಡ್ರೈವಿಂಗ್ ಸ್ಕೂಲ್ ನಲ್ಲಿ ಶೆಲ್ಟರ್ ಪಡೆದಿದ್ದಾನೆ. ಮೊಬೈಲ್ ಇಲ್ಲದ ಕಾರಣ ಮತ್ತೆ ಸಹಾಯಕ್ಕಾಗಿ ಇಂಟರ್ ನೆಟ್ ಮೂಲಕ ಸಂಪರ್ಕಿಸಿ ಯಾವುದೇ ಸಹಾಯ ಸಿಗದೆ ಸುಮ್ಮನಾಗಿದ್ದ. ಈ ವೇಳೆ ವಿಜಯವಾಡದಲ್ಲಿ ಸ್ನೇಹಿತ ಅರ್ಪಿತ್ ನ ತಾಯಿಗೆ ಕರೆಮಾಡಿ ತಮ್ಮ ಮಗ ವಿಜಯವಾಡದಲ್ಲಿ ಇರುವ ಬಗ್ಗೆ ಮಾಹಿತಿ ನೀಡಿದ್ದಾನೆ.
ಆರೋಪಿ ಅರ್ಪಿತ್ ಬಂಧನಕ್ಕೆ ಬಲೆ ಬೀಸಿ ಹುಡುಕಾಡ್ತಿದ್ದ ಪೊಲೀಸರಿಗೆ ಅರ್ಪಿತ್ ಸ್ನೇಹಿತ ಆತನ ತಾಯಿಗೆ ಕರೆ ಮಾಡ್ತಿದ್ದಂತೆ ಮಹತ್ವದ ಸುಳಿವು ಸಿಕ್ಕಿದ್ದು, ವಿಜಯವಾಡದಲ್ಲಿ ತಲೆಮರೆಸಿಕೊಂಡಿದ್ದ ಅರ್ಪಿತ್ ನ ಚಲನವಲನ ಗಮನಿಸಿ ಕನ್ಫರ್ಮ್ ಆಕ್ತಿದ್ದಂತೆ ಲಾಕ್ ಮಾಡಿ ಬೆಂಗಳೂರಿಗೆ ಕರೆತಂದಿದ್ದಾರೆ



