ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಮದ್ಯಪಾನ ಪ್ರಿಯರಿಗೆ ಇದು 4ನೇ ಬಾರಿಗೆ ಬೆಲೆ ಏರಿಕೆ. ಮದ್ಯದ ಬೆಲೆ ಮತ್ತೆ ಏರಿಕೆಯಾಗಿದೆ. ಒಂದು ಕ್ವಾರ್ಟರ್ ಮೇಲೆ ಸರಾಸರಿ ₹10 ರಿಂದ ₹25 ದರ ಹೆಚ್ಚಳವಾಗಿದೆ. 024-25ನೇ ಹಣಕಾಸು ವರ್ಷದಲ್ಲಿ ಅಬಕಾರಿ ಇಲಾಖೆಗಾಗಿ ನಿಗದಿಪಡಿಸಿರುವ ₹40,000 ಕೋಟಿ ಟಾರ್ಗೆಟ್ ತಲುಪಿಸಲು ಮತ್ತೊಂದು ದರ ಏರಿಕೆಯ ಮಾರ್ಗವನ್ನು ಆರಿಸಿಕೊಂಡಿದೆ ಸರ್ಕಾರ.
ಕೇವಲ ಇಷ್ಟೇ ಅಲ್ಲ, ಮದ್ಯ ಮಾರಾಟಗಾರರಿಗೂ ಶಾಕ್ ಕೊಟ್ಟಿದೆ ರಾಜ್ಯ ಸರ್ಕಾರ. ವಾರ್ಷಿಕ ಪರವಾನಗಿ ನವೀಕರಣ ಶುಲ್ಕಗಳನ್ನು 100% ಹೆಚ್ಚಿಸಲು ಮುಂದಾಗಿದೆ. ಈ ಹೆಚ್ಚಳ ಜುಲೈ 1 ರಿಂದ ಜಾರಿಗೆ ಬರುವ ಸಾಧ್ಯತೆ ಇದೆ. ಇದು ಡಿಸ್ಟಿಲರಿಗಳು, ಬ್ರೂವರಿಗಳು, ಮದ್ಯದ ಅಂಗಡಿಗಳು, ಬಾರ್ʻಗಳು ರೆಸ್ಟೋರೆಂಟ್ʻಗಳು ಮತ್ತು ಕ್ಲಬ್ ಮತ್ತು ಪಬ್‌ಗಳಿಗೂ ಸೇರಿದಂತೆ ಎಲ್ಲ ಮದ್ಯ ಸಂಬಂಧಿತ ವ್ಯಾಪಾರಗಳ ಮೇಲೆ ಪರಿಣಾಮ ಬೀರಲಿದೆ.
ಮದ್ಯ ಮಾರಾಟಗಾರರಿಗೆ..
ಬ್ರೂವರಿಗಳ ವಾರ್ಷಿಕ ಲೈಸೆನ್ಸ್ : 27 ಲಕ್ಷ ರೂ.ನಿಂದ 54 ಲಕ್ಷ ರೂ.ಗಳಿಗೆ ಏರಿಕೆ (100% ಹೆಚ್ಚಳ).
ಡಿಸ್ಟಿಲರಿಗಳ ಲೈಸೆನ್ಸ್ : 45 ಲಕ್ಷದಿಂದ 90 ಲಕ್ಷಕ್ಕೆ ಏರಿಕೆ
ಡಿಸ್ಟಿಲರಿ ಮತ್ತು ಬ್ರೂವರಿ ಬಾಟ್ಲಿಂಗ್ ಘಟಕ ಲೈಸೆನ್ಸ್ : 1 ಲಕ್ಷ ರೂ.ನಿಂದ 2 ಲಕ್ಷ ರೂ.ಗೆ ಏರಿಕೆ
ಬಾರ್, ರೆಸ್ಟೋರೆಂಟ್ಸ್, ಮತ್ತು ಕ್ಲಬ್ ವಾರ್ಷಿಕ ಗುತ್ತಿಗೆ ಶುಲ್ಕ : 1 ಲಕ್ಷದಿಂದ ದ 2 ಲಕ್ಷಕ್ಕೆ ಏರಿಕೆ.
ಬಿಯರ್ ಚಿಲ್ಲರೆ ಮಾರಾಟಗಾರರ ಲೈಸೆನ್ಸ್ : 3 ಲಕ್ಷಕ್ಕೆ ಏರಿಕೆ
ಸಿಎಲ್ ಸನ್ನದು ಶುಲ್ಕ : 10ರಿಂದ 20 ಸಾವಿರಕ್ಕೆ ಏರಿಕೆ
ಸ್ಟಾರ್ ಹೋಟೆಲ್ ಸಿಎಲ್ 7 ಶುಲ್ಕ : 10ರಿಂದ 20 ಲಕ್ಷಕ್ಕೆ ಏರಿಕೆ
ಮಿಲಿಟರಿ ಕ್ಯಾಂಟೀನ್ ಸಿಎಲ್ ಶುಲ್ಕ : 250 ರೂ.ನಿಂದ 500 ರೂ.ಗೆ ಏರಿಕೆ
ಮಿಲಿಟರಿ ಲಿಕ್ಕರ್ ಗೋಡೌನ್ ಶುಲ್ಕ : 1.25ರಿಂದ 2.5 ಲಕ್ಷಕ್ಕೆ ಏರಿಕೆ
ಸಿಎಲ್ 9 ವರ್ಗದ ಶುಲ್ಕ : ಶೇ.100ರಷ್ಟು ಏರಿಕೆ
ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿ : ಶೇ.100ರಷ್ಟು ಏರಿಕೆ
ಹೀಗೆ ಮದ್ಯ ಮಾರಾಟಗಾರರಿಗೆ ಶಾಕ್ ಕೊಟ್ಟಿದೆ ರಾಜ್ಯ ಸರ್ಕಾರ.
ಇನ್ನು ಗ್ರಾಹಕರ ವಿಚಾರಕ್ಕೆ ಬಂದರೆ..
ಅಬಕಾರಿ ಇಲಾಖೆ ಈ ಬಾರಿ 16 ಸ್ಲ್ಯಾಬ್‌ಗಳ ಪೈಕಿ ಪ್ರಾಥಮಿಕ 4 ಸ್ಲ್ಯಾಬ್‌ಗಳ ಮೇಲೆ ದರ ಹೆಚ್ಚಳ ಜಾರಿಗೆ ತಂದಿದೆ:
ಸ್ಯ್ಲಾಬ್ 1:
ಹಳೆಯ ದರ: ₹65 → ನೂತನ ದರ: ₹80 (₹15 ಏರಿಕೆ)
ಸ್ಯ್ಲಾಬ್ 2:
ಹಳೆಯ ದರ: ₹80 → ನೂತನ ದರ: ₹95 (₹15 ಏರಿಕೆ)
ಸ್ಯ್ಲಾಬ್ 3:
ಹಳೆಯ ದರ: ₹120 → ನೂತನ ದರ: ₹130-₹135 (₹10-₹15 ಏರಿಕೆ)
ಸ್ಯ್ಲಾಬ್ 4:
ಹಳೆಯ ದರ: ₹130 → ನೂತನ ದರ: ₹140-₹145 (₹10-₹15 ಏರಿಕೆ)
ಈಗಾಗಲೇ ಬೆಲೆ ಏರಿಕೆಯಿಂದಾಗಿ ಮದ್ಯ ಮಾರಾಟ ಕುಸಿಯುತ್ತಿದೆ. ವ್ಯವಹಾರ ದಾರಿ ತಪ್ಪುತ್ತಿದೆ. ಹೀಗಿರುವಾಗ ಗ್ಯಾರಂಟಿಗಾಗಿ ಪದೇ ಪದೇ ಏರಿಕೆ ಮಾಡಿದರೆ ಉದ್ಯಮಿಗಳು ಹಾಗೂ ಮಾರಾಟಗಾರರು ಎಲ್ಲಿಗೆ ಹೋಗಬೇಕು ಎನ್ನುವುದು ಮದ್ಯ ಮಾರಾಟಗಾರರ ಪ್ರಶ್ನೆ. ಮೇ 21ರಂದು ಮದ್ಯದಂಗಡಿ ಬಂದ್ ಮಾಡಿ ಪ್ರತಿಭಟಿಸಲು ನಿರ್ಧರಿಸಲಾಗಿದೆ. ಆದರೆ ಅದೇ ದಿನ ಸಿಎಂ ಸಭೆಯೂ ಇದೆ. ಮದ್ಯ ಮಾರಾಟಗಾರರ ಬೇಡಿಕೆ ಕುರಿತಂತೆ ಯಾರೂ ಸೀರಿಯಸ್ ಆಗಿ ಯಾಕೆ ತೆಗೆದುಕೊಳ್ಳುತ್ತಿಲ್ಲ ಎಂದರೆ.. ಮದ್ಯ ಮಾರಾಟಗಾರರು ಪ್ರತಿಭಟನೆಯ ಮಾತನ್ನಾಡಿ, ನಂತರ ಅದನ್ನು ಸುದ್ದಿ ಮಾಡಿದ್ದವರದ್ದೇ ತಪ್ಪು ಎನ್ನುವಂತೆ ಆರೋಪಿಸುತ್ತಿದ್ದಾರೆ. ಹೀಗಾಗಿ ಮಾಧ್ಯಮಗಳಲ್ಲೂ ಮದ್ಯ ಮಾರಾಟಗಾರರ ಕೂಗು ಕೇಳುತ್ತಿಲ್ಲ.