Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

ಲಿಂಗಾಯತರೋ.. ಹಿಂದೂಗಳೋ.. : ಸ್ವಾಮೀಜಿಗಳೂ ಇಬ್ಬಾಗ..!

SpeciallU by SpeciallU
September 18, 2025
in News, Politics
Reading Time: 1 min read
0 0
0
ಲಿಂಗಾಯತರೋ.. ಹಿಂದೂಗಳೋ.. : ಸ್ವಾಮೀಜಿಗಳೂ ಇಬ್ಬಾಗ..!

ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರುವ ಜಾತಿ ಸಮೀಕ್ಷೆ ಹಲವು ಸಮುದಾಯಗಳನ್ನು ಒಡೆಯುತ್ತಿದೆ. ವೀರಶೈವ ಲಿಂಗಾಯತರಂತೂ ತಾವು ಏನು ಬರೆಸಬೇಕು ಎಂದೇ ಅರ್ಥವಾಗದೆ ಗೊಂದಲದಲ್ಲಿದ್ದಾರೆ. ಒಬ್ಬೊಬ್ಬರು ಒಂದೊಂದು ಮಾತು ಹೇಳುತ್ತಿದ್ದಾರೆ. ತಾವು ಹಿಂದೂಗಳೋ.. ಲಿಂಗಾಯತರೋ.. ಕೇವಲ ಲಿಂಗಾಯತರೋ…ವೀರಶೈವರು ಹೌದೋ.. ಅಲ್ಲವೋ.. ಅಥವಾ ವೀರಶೈವರು ಹೌದು, ಲಿಂಗಾಯತರಲ್ಲ.. ಈ ಪ್ರಶ್ನೆಗಳಿಗೆ ಉತ್ತರ ಸಿಗುವ ಮುಂಚೆ ಸಮೀಕ್ಷೆ ಮುಗಿದರೂ ಅಚ್ಚರಿ ಇಲ್ಲ. ಈ ನಡುವೆ ವೀರಶೈವ ಲಿಂಗಾಯತ ಮಹಾಸಭಾ, ಜಾಗತಿಕ ಲಿಂಗಾಯತ ಮಹಾಸಭಾ ಡಿವೈಡ್‌ ಆಗಿ ಆಗಿದೆ. ಈಗ ಸ್ವಾಮೀಜಿಗಳ ಸರದಿ.

ವಚನಾನಂದ ಶ್ರೀ. ಹರಿಹರ ಪಂಚಮಸಾಲಿ ಪೀಠ :
ವೀರಶೈವ ಲಿಂಗಾಯತರು ಹಿಂದೂಗಳೇ. ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸಿ. ಜಾತಿ ಕಾಲಂನಲ್ಲಿ ತಮ್ಮ ತಮ್ಮ ಉಪಜಾತಿ ಬರೆಸಿ. ಪಂಚಮಸಾಲಿಗಳು ಲಿಂಗಾಯತ ಪಂಚಮಸಾಲಿ ಎಂದು ಬರೆಸಿ ಎಂದು ಹೇಳಿದ್ದಾರೆ.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಲಿಂಗಾಯತ ಮಠಾಧೀಶರ ಒಕ್ಕೂಟ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ :
ಡಾ.ಬಸವಲಿಂಗ ಪಟ್ಟದೇವರು, ಭಾಲ್ಕಿ
ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ ಆಯ್ಕೆ ಇಲ್ಲ. ಹೀಗಾಗಿ ಜಾತಿ ಕಾಲಂನಲ್ಲಿ ಲಿಂಗಾಯತ ಎಂದು ಬರೆಸಿ. ಇತರೆ ಕಾಲಂನಲ್ಲಿ ಹಾಗೂ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಸಿ ಎಂದು ಕರೆಕೊಟ್ಟಿದ್ದಾರೆ. ಲಿಂಗಾಯತ ಧರ್ಮದಲ್ಲಿ ವೀರಶೈವರೂ ಒಂದು ಉಪಜಾತಿ ಅಷ್ಟೇ ಎನ್ನುವುದು ಇವರ ವಾದ.

ಪಂಡಿತಾರಾಧ್ಯ ಶ್ರೀಗಳು, ಸಾಣೇಹಳ್ಳಿ ಮಠ
ಜಾತಿ ಕಾಲಂನಲ್ಲಿ ಲಿಂಗಾಯತ ಉಪಜಾತಿ ಬರೆಸಿ, ಇತರೆ ಹಾಗೂ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಸಿ ಎಂದಿದ್ದಾರೆ.

ಈಗ ಗೊಂದಲ ಮೂಡಿರುವುದು ಯಾವ ಸ್ವಾಮೀಜಿಗಳ ಮಾತು ಕೇಳಬೇಕು ಎನ್ನುವುದು. ಏನೆಂದರೆ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸ್ವಾಮೀಜಿಗಳು ಹೇಳಿದಂತೆ ಕೇಳಿ ಎಂದಿದ್ದರು. ಈಗ ನೋಡಿದರೆ ಒಬ್ಬೊಬ್ಬ ಸ್ವಾಮೀಜಿಗಳದ್ದೂ ಒಂದೊಂದು ರಾಗ.

ಈ ನಡುವೆ ವೀರಶೈವ ಲಿಂಗಾಯತ ಜಾತಿ/ಉಪಜಾತಿಗಳ ಪಟ್ಟಿಯಲ್ಲಿ ಹಲವಾರು ಗೊಂದಲ ಇರುವುದರಿಂದ ಅವುಗಳನ್ನ ಸರಿಪಡಿಸುವಂತೆ ಅಖಿಲ ಭಾರತ ವೀರಶೈವ ಮಹಾಸಭಾ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ ಪತ್ರದ ಮೂಲಕ ಮನವಿ ಮಾಡಿದೆ.

ಕಾಂತರಾಜ್ ಆಯೋಗವು ವೀರಶೈವ ಲಿಂಗಾಯತಕ್ಕೆ ಸಂಬಂಧಿಸಿದಂತೆ 79 ಜಾತಿ/ಉಪಜಾತಿಗಳನ್ನ ಪ್ರಕಟಣೆ ಮಾಡಿದ್ದರು. ಆದರೆ ಸಮೀಕ್ಷೆ ನಂತರ ನೀಡಿದ ವರದಿಯಲ್ಲಿ 95 ದಾಖಲಾಗಿದ್ದವು. ಈಗ ಮತ್ತೆ ಆಯೋಗವು 84 ಜಾತಿ/ಉಪಜಾತಿಗಳನ್ನ ಪ್ರಕಟಣೆ ಮಾಡಿದೆ. ವೀರಶೈವ ಲಿಂಗಾಯತ ಮಹಾಸಭಾ ಕೇವಲ 32 ಜಾತಿ/ಉಪಜಾತಿಗಳನ್ನ ಸೇರಿಸುವಂತೆ ಹೇಳಿದ ಮೇಲೆ 135 ಜಾತಿ/ಉಪಜಾತಿಗಳನ್ನ ಪ್ರಕಟ ಮಾಡಲಾಗಿದೆ.

ಆದರೆ ಈಗ 40 ಜಾತಿ/ಉಪಜಾತಿಗಳನ್ನ ಸೇರಿಸಲಾಗಿದ್ದು ಇವುಗಳನ್ನ ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ಪುನರವರ್ತಿತ ಮಾಡಲಾಗಿದೆ. ಇದಕ್ಕೆ ಆಯೋಗ ಯಾವ ಮಾನದಂಡ ಅನುಸರಿಸಿದೆ ಎನ್ನುವುದು ಸ್ಪಷ್ಟವಾಗಿಲ್ಲ. ನಮ್ಮ ಸಮಾಜಕ್ಕೆ ಸೇರಿದ ಎಲ್ಲ ಜಾತಿ/ಉಪಜಾತಿಗಳನ್ನ ಒಂದೇ ಕಡೆ ಸೇರಿಸುವಂತೆ ಮನವಿ ಮಾಡಿದ್ದರೂ ಈವರೆಗೂ ಯಾವುದೇ ಪ್ರಯೋಜನಾವಾಗಿಲ್ಲ ಎಂದು ಮಹಾಸಭಾ ಹೇಳಿದೆ.

ಇನ್ನು ಕರಡು ಕೈಪಿಡಿ ತಯಾರಿಸಿ ಸಾರ್ವಜನಿಕರಿಗೆ ನೀಡುವಂತೆ ಕೋರಲಾಗಿತ್ತು. ಗಣತಿ ಮಾಡುವಾಗ ಪಡೆದ ಮಾಹಿತಿ ಗೌಪ್ಯವಾಗಿ ಇಡುತ್ತಾರಾ?, ಜಾತಿ ಪ್ರಮಾಣಪತ್ರವನ್ನು ಸರ್ಕಾರದಿಂದ ನೀಡ್ತಾರಾ, ಇಲ್ಲವೇ? ಎನ್ನುವುದನ್ನ ಈವರೆಗೂ ಸ್ಪಷ್ಟಪಡಿಸಿಲ್ಲ. ಹೀಗಾಗಿ ಆಯೋಗದ ಕೆಲಸದ ಮೇಲೆ ಅನುಮಾನ ಮೂಡುತ್ತದೆ. ಇದರ ಜೊತೆಗೆ ಕೈಪಿಡಿಯಲ್ಲಿ ಸಾಕಷ್ಟು ತಪ್ಪುಗಳಿದ್ದರೂ ಸಮೀಕ್ಷೆಗೆ ಮುಂದಾಗಿರುವುದು ಎಷ್ಟು ಸರಿ? ಇಂತಹ ಗೊಂದಲ, ಅನುಮಾನಗಳಿಗೆ ಅವಕಾಶ ನೀಡದೇ ಪಾರದರ್ಶಕವಾಗಿ ನಡೆದುಕೊಳ್ಳುವಂತೆ ವೀರಶೈವ ಲಿಂಗಾಯತ ಮಹಾಸಭಾ, ಆಯೋಗವನ್ನು ಕೋರಿದೆ.

Tags: #ಲಿಂಗಾಯತ ಪ್ರತ್ಯೇಕ ಧರ್ಮ #ಜಾತಿಗಣತಿ #ವೀರಶೈವ #Lingayat separate religion #Caste census #Veerashaiva
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.