ವೀರಶೈವರೇ ಬೇರೆ.. ಲಿಂಗಾಯತರೇ ಬೇರೆ.. ಇಂತಾದ್ದೊಂದು ಹೋರಾಟ ಸಿಎಂ ಸಿದ್ದರಾಮಯ್ಯನವರ ಬೆಂಬಲಿಗರಿಂದ ಶುರುವಾಗಿತ್ತು. ಸುಮಾರು 13-15 ಸಾವಿರ ಪುಟಗಳ ದಾಖಲೆಯನ್ನು ಕೇವಲ 15 ದಿನಗಳಲ್ಲಿ ಅಧ್ಯಯನ ಮಾಡಿದ್ದ ನ್ಯಾ.ನಾಗಮೋಹನ್ ದಾಸ್ ಕಮಿಟಿ, ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಕೊಡುವುದರಲ್ಲಿ ತಪ್ಪೇನೂ ಇಲ್ಲ ಎಂದು ಸಾವಿರಾರು ಪುಟಗಳ ವರದಿಯನ್ನೂ ಕೊಟ್ಟಿತ್ತು. ಅದಾದ ಮೇಲೆ ಅದು ಆಗಲಿಲ್ಲ. ಸೋಲು ಕೂಡಾ ಅದಕ್ಕೆ ಕಾರಣವಾಯ್ತು. ಆದರೆ, ಆಗ ನಡೆದ ಜಾತಿ ಗಣತಿಯಲ್ಲಿ ಅನುಮಾನಕ್ಕೆ ಆಸ್ಪದವೇ ಇಲ್ಲದಂತೆ ಲಿಂಗಾಯತರೇ ಬೇರೆ.. ವೀರಶೈವರೇ ಬೇರೆ ಎಂದು ಜಾತಿ ಗಣತಿ ಲೆಕ್ಕ ಕೊಡಲಾಗಿದೆ.
ಲೆಕ್ಕದ ಪ್ರಕಾರ ಒಟ್ಟಾರೆ ಜಾತಿ ಗಣತಿಯಲ್ಲಿ ಲಿಂಗಾಯತರ ಸಂಖ್ಯೆ ಉಪಪಂಗಡಗಳೂ ಸೇರಿ 66,35,233. ಈ ಲೆಕ್ಕದಲ್ಲಿ ವೀರಶೈವ ಲಿಂಗಾಯತರು 10,49,706. ಇನ್ನು ಲಿಂಗಾಯತರನ್ನು ಪ್ರತ್ಯೇಕ ಉಪಜಾತಿಗಳಾಗಿಯೇ ಗುರುತಿಸಲಾಗಿದೆ. ದಾಖಲೆಗಳ ಪ್ರಕಾರ ವೀರಶೈವ ಮತ್ತು ಲಿಂಗಾಯತ ಎರಡನ್ನೂ ಒಂದೇ ಎಂದು ಪರಿಗಣಿಸಲು ಅವಕಾಶಗಳಿವೆ. ಅದನ್ನು ಬಿಟ್ಟು, ವೀರಶೈವರೇ.. ಬೇರೆ. ಲಿಂಗಾಯತರೇ.. ಬೇರೆ..ಎಂಬ ಸಂದೇಶ ಕೊಟ್ಟಿತಾ ಜಾತಿ ಗಣತಿ. ಇದು ಮೊದಲ ಅನುಮಾನ.
ಎಸ್‌ಸಿ :1,09,29,347 (ಪ್ರಥಮ)
ಮುಸ್ಲಿಮರು : 75,25,880 (ದ್ವಿತೀಯ)
ಲಿಂಗಾಯತ ಉಪಗುಂಪು- 66,35,233 + ವೀರಶೈವ ಲಿಂಗಾಯತ – 10,49,706 (ಎರಡೂ ಒಟ್ಟಾದರೆ ಮಾತ್ರ ದ್ವಿತೀಯ ಸ್ಥಾನ)
ಒಕ್ಕಲಿಗ ಮತ್ತು ಉಪಜಾತಿ: 61,58,352 (4ನೇ ಸ್ಥಾನ)
ಕುರುಬ, ಉಪಜಾತಿ 43,72,847 (5ನೇ ಸ್ಥಾನ)
ಎಸ್‌ಟಿ 42,81,289 (6ನೇ ಸ್ಥಾನ)
ಕ್ರಿಶ್ಚಿಯನ್ ಮತ್ತು ಉಪಜಾತಿ: 9,47,994
ಉಪ್ಪಾರ 7,58,605
ಗಾಣಿಗ : 6,86,428
ಬೌದ್ಧರು : 6,86,428
ವಿಶ್ವಕರ್ಮ : 6,86,428
ಬಿಲ್ಲವ : 4,85,628
ಗೊಲ್ಲ : 4,42,524
ಬೆಸ್ತ : 3,99,383
ಕಬ್ಬಲಿಗ : 3,88,082
ಈಡಿಗ : 3,50,603
ಕಾಡುಗೊಲ್ಲ : 3,10,393
ಬಂಟ್ : 3,19,113
ಜೈನ ದಿಗಂಬರರು: 1,62,566
ಸವಿತಾ : 33,355
ಭಜಂತ್ರಿ : 1,01,728
ಭಂಡಾರಿ : 41,775
ಹಡಪದ : 94,574
ಭೋವಿ : 64,140
ಯಾದವ : 67,754
ದೇವಾಡಿಗ : 1,04,571
ಪೂಜಾರಿ : 1,15,081
ನಾಮಧಾರಿ : 2,16,619
ದೈವಜ್ಞ ಬ್ರಾಹ್ಮಣ : 80,155
ಬಲಿಜ : 2,03,347
ಬಲಜಿಗ : 1,37,828
ಬಣಜಿಗ : 2,96,411
ನಾಯ್ಡು : 1,50,601
ಇದು ಈಗಿರುವ ಲೆಕ್ಕ. ಈ ಲೆಕ್ಕದ ಪ್ರಕಾರ ಪಂಚಮಸಾಲಿಗಳೂ ಕೂಡಾ ಅವರು ಹೇಳಿಕೊಂಡಂತೆ ದೊಡ್ಡ ಸಂಖ್ಯೆಯಲ್ಲಿ ಇಲ್ಲ. ಒಟ್ಟಿನಲ್ಲಿ ಈ ಗಣತಿ, ನಾಯಕರಿಗೆ ಶಾಕ್ ಕೊಟ್ಟಿರುವುದಂತೂ ಹೌದು.ಆದರೆ ವಿಪರ್ಯಾಸ ಎಂದರೆ ಈ ಜಾತಿ ಗಣತಿಯನ್ನು ಸರ್ಕಾರ ದಾಖಲೆಗಳಲ್ಲಿ ತೋರಿಸುತ್ತಿದೆಯೇ ಹೊರತು, ಮನೆ ಮನೆಗೆ 100% ಹೋಗಿ ಗಣತಿ ಮಾಡಿಲ್ಲ. ನ್ಯೂಸ್ ಚಾನೆಲ್ಲುಗಳಂತೆ ಸ್ಯಾಂಪಲ್ ತೆಗೆದುಕೊಂಡು ಸಮೀಕ್ಷೆ ಮಾಡಿದೆ. ಅಷ್ಟೇ.
ಸದ್ಯಕ್ಕೆ ಯಾವೊಬ್ಬ ನಾಯಕರೂ ಜಾತಿ ಗಣತಿಯನ್ನು ಒಪ್ಪಿಲ್ಲ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಲಿಂಗಾಯತ ನಾಯಕರು ಎಲ್ಲರೂ ವಿರೋಧಿಸುತ್ತಿದ್ದಾರೆ. ಅದರೆ, ಸಿದ್ದರಾಮಯ್ಯ ಹಿಡಿದ ಹಠವನ್ನು ಕೊನೆಗೂ ಸಾಧಿಸಿದರು ಎಂಬ ಮಾತು ಕೇಳಿ ಬರೋಕೆ ಶುರುವಾಗಿದೆ.
ಶಂಕರ್ ಬಿದರಿ, ವೀರಶೈವ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ
ಜಾತಿಗಣತಿ ವರದಿಯನ್ನು ನಮ್ಮ ಸಮುದಾಯ ವಿರೋಧಿಸುತ್ತಿದೆ. ಅದು ಸೋರಿಕೆ ಆಗಿದೆ ಅನ್ನೋದು ಗೊತ್ತಿಲ್ಲ ಆದರೆ ಸರ್ಕಾರದಿಂದ ಇನ್ನೂ ನಮ್ಮ ಮನಗೆ ಬಂದಿಲ್ಲ. ನಮ್ಮನ್ನ ಸರ್ವೇ ಮಾಡಿಲ್ಲ. ಅದರ ಆಧಾರದ ಮೇಲೆ ನಾವು ಕೇಳ್ತಿದ್ದೇವೆ. ಹೀಗಾಗಿ ವೈಜ್ಙಾನಿಕವಾಗಿ ವರದಿಯನ್ನ ಮಾಡಲಿ, ಅದನ್ನು ನಾವು ಒಪ್ಪುತ್ತೇವೆ. ನಮ್ಮ ಮಹಾಸಭಾ ತಾಲೂಕು ಮಟ್ಟದಲ್ಲಿ ಸರ್ವೇ ಮಾಡಿಸುತ್ತದೆ ಎಲ್ಲರ ಗಣತಿ ಮಾಡಿ ನಾವೇ ಸಿಡಿ ಮಾಡಿ ಸರ್ಕಾರಕ್ಕೆ ಕೊಡುತ್ತೇವೆ. ಲಿಂಗಾಯತ ಅನ್ನುವುದು ಒಂದು ಪಂಥ. ನಾವು ಈಗ ಪ್ರತ್ಯೇಕಧರ್ಮ ಅಂತ ಹೇಳಲ್ಲ. ಜಾತಿ ಗಣತಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಅದನ್ನು ಕೇಂದ್ರಕ್ಕೆ ಬಿಟ್ಟಿದೆ. ರಾಜ್ಯ ಸರ್ಕಾರ ಜಾತಿ ಗಣತಿ ಅಂತ ಮಾಡಿಲ್ಲ.



