ಲಿಂಗಾಯತ ಮತ್ತು ಮುಸ್ಲಿಂ ಧರ್ಮಗಳನ್ನು ಒಂದೇ. ಬಸವಣ್ಣನವರ ತತ್ವಗಳನ್ನೇ ಇಸ್ಲಾಂನಲ್ಲೂ ಅಳವಡಿಸಲಾಗಿದೆ ಎಂಬ ವಾದ ಇತ್ತೀಚೆಗೆ ಜೋರಾಗಿತ್ತು. ಸಾಣೆಹಳ್ಳಿ ತರಳಬಾಳು ಮಠದ ಶ್ರೀಗಳು ಸೇರಿದಂತೆ ಕೆಲವು ಲಿಂಗಾಯತ ವಿರಕ್ತ ಮಠದ ಸ್ವಾಮೀಜಿಗಳೇ ಈ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಚನಾನಂದ ಶ್ರೀಗಳು ಲಿಂಗಾಯತ ತತ್ವವೇ ಬೇರೆ, ಮುಸ್ಲಿಂ ಧರ್ಮವೇ ಬೇರೆ. ಜನರಲ್ಲಿ ನಾಸ್ತಿಕವಾದ ಬಿತ್ತಲು ಹೋಗಬೇಡಿ ಎಂದು ಹೇಳಿದ್ದಾರೆ.
ಬಸವಣ್ಣ ಸಾಕಾರ ಮತ್ತು ನಿರಾಕಾರ ಈ ಎರಡೂ ತತ್ವಗಳನ್ನು ಒಪ್ಪಿಕೊಂಡವರು. ತಾವೆಲ್ಲಾ ಹಿಂದೂಗಳೇ. ಯಾವಾಗಲೂ ಕೂಡ ಹಿಂದೂಗಳ ಜೊತೆಗಿದ್ದದ್ದು ಲಿಂಗಾಯತರು. ಮುಸ್ಲಿಂ ಧರ್ಮದ ಜೊತೆ ಲಿಂಗಾಯತ ತತ್ವದ ಹೋಲಿಕೆ ಶುದ್ಧ ತಪ್ಪು. ಲಿಂಗಾಯತರದ್ದು ಅಹಿಂಸಾ ತತ್ವ. ಅದರಲ್ಲಿ ಗೋಮಾಂಸ ಸೇವನೆ ಇಲ್ಲ ಎನ್ನುವುದು ವಚನಾನಂದ ಶ್ರೀಗಳ ಅಭಿಪ್ರಾಯ.
ಬಸವ ಸಂಸ್ಕೃತಿ ಯಾತ್ರೆ ಮೂಲಕ ಸಮಾಜ ಒಡೆಯುವ ಕೆಲಸ ಮಾಡಲಾಗುತ್ತಿದೆ. ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪಿಸುವ ಹುನ್ನಾರ ಇದೆ ಎಂದಿರುವ ಹಲವು ಸ್ವಾಮೀಜಿಗಳು ವಚನಾನಂದ ಶ್ರೀಗಳ ಹೇಳಿಕೆಗೆ ಬೆಂಬಲ ಘೋಷಿಸಿದ್ದಾರೆ. ಬಸವ ಸಂಸ್ಕೃತಿ ಯಾತ್ರೆ ಮೂಲಕ ಸಮಾಜ ಒಡೆಯುವ ಕೆಲಸ ಮಾಡಲಾಗುತ್ತಿದೆ. ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪಿಸುವ ಹುನ್ನಾರ ಇದೆ ಎಂದು ಶಿರಹಟ್ಟಿ ಮಠದ ದಿಂಗಾಲೇಶ್ವರ ಶ್ರೀ, ಮಹಾರಾಷ್ಟ್ರದ ಬೊಮ್ಮಲಿಂಗೇಶ್ವವ ಮಠದ ಶ್ರೀಕಂಠ ಶಿವಾಚಾರ್ಯರು, ಆಂಧ್ರದ ಸೋಮಲಿಂಗ ಶಿವಾಚಾರ್ಯರು, ಸಿಂದಗಿ ಸಾರಂಗ ಮಠದ ಪ್ರಭು ಸಾರಂಗದೇವ ಶಿವಾಚಾರ್ಯರು, ಮುಕ್ತಿಮಂದಿರ ಸ್ವಾಮಿಗಳು, ಹಾವೇರಿ ಹುಕ್ಕೇರಿ ಮಠದ ಶ್ರೀಗಳು ಮೊದಲಾದವರು ಹೇಳಿದ್ದು, ಬಸವ ಸಂಸ್ಕೃತಿ ಯಾತ್ರೆಯನ್ನು ವಿರೋಧಿಸಿದ್ದಾರೆ.
ಸೆಪ್ಟೆಂಬರ್ 19ರಂದು ವೀರಶೈವ ಲಿಂಗಾಯತ ಏಕತಾ ಸಮಾವೇಶ ನಡೆಸಿ, ಅಲ್ಲಿ ವೀರಶೈವ ಮತ್ತು ಲಿಂಗಾಯತ ಒಂದೇ ಎನ್ನುವ ಸಂದೇಶ ಸಾರಲಾಗುವುದು ಎಂದು ಈ ಶ್ರೀಗಳೆಲ್ಲರೂ ನಿರ್ಧರಿಸಿದ್ದಾರೆ. . ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿರುವ ಶ್ರೀಗಳು, ಕಳೆದ ವರ್ಷ ಕೂಡ ಲಿಂಗಾಯ ಮತ್ತು ಮುಸ್ಲಿಂ ಧರ್ಮಗಳ ನಡುವಿರುವ ಸಾಮ್ಯತೆ ಬಗ್ಗೆ ಹೇಳಿದ್ದರು. ಆಗಲೂ ಕೂಡ ಅನೇಕ ಲಿಂಗಾಯತ ಮಠದ ಸ್ವಾಮೀಜಿಗಳು ಆ ಹೇಳಿಕೆಯನ್ನು ವಿರೋಧಿಸಿದ್ದರು.
ಕೆಲವು ಟಿವಿಯಲ್ಲಿ ಬರುವ ಸ್ವಾಮೀಜಿಗಳಂತೂ ಅಲ್ಲಾ ಮತ್ತು ಬಸವಣ್ಣ ಒಬ್ಬನೇ ಎಂಬ ಲೆವೆಲ್ಲಿಗೆ ಹೋಗಿದ್ದರು. ಈ ಎಲ್ಲವನ್ನೂ ನೋಡಿರುವ ಸ್ವಾಮೀಜಿಗಳು ಬಹಿರಂಗವಾಗಿ ಇಂತಹವುಗಳ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ನಮಗೆ ದೇಶ ಮುಖ್ಯ, ಧರ್ಮ ಮುಖ್ಯ. ನಾವು ರಾಷ್ಟ್ರ ಧರ್ಮ ಪಾಲನೆ ಮಾಡಬೇಕು. ದೇಶ ಇದ್ರೆ ಮಾತ್ರ ಮಠ, ಪೀಠ, ದೇವಸ್ಥಾನಗಳು ಎಂದು ಈ ಹಿಂದೆಯೂ ಹೇಳಿದ್ದ ವಚನಾನಂದ ಶ್ರೀಗಳು ಮಠ ಮುಖ್ಯವಲ್ಲ, ಪೀಠ ಮುಖ್ಯವಲ್ಲ. ನನಗೆ ಧರ್ಮ ಮುಖ್ಯ ಎಂದು ಘೋಷಿಸಿದ್ದವರು.



