ಇಂಡಸ್ಟ್ರಿಯಲ್ಲಿ ನಟ ನಟಿಯರ ಮದುವೆ ಸುದ್ದಿಗಳು ಹೊಸದೇನಲ್ಲ. ಕನ್ನಡದಲ್ಲಿಯೂ ಅಂತಹ ಸುಳ್ಳು ಸುದ್ದಿಗಳು ಹಬ್ಬುತ್ತವೆ. ಸಿನಿಮಾ ರಿಲೀಸ್ ಆದ ಮೇಲೆ ಸತ್ತೂ ಹೋಗುತ್ತವೆ. ಗಾಸಿಪ್ಪುಗಳೆಲ್ಲ ನಿಜವಾಗಿದ್ದರೆ ಡಾಲಿ ಧನಂಜಯ-ಅಮೃತಾ ಅಯ್ಯಂಗಾರ್ (Dolly dhananjya-amrutha ayyangar) ಮದುವೆಯಾಗಿ ಯಾವುದೋ ಕಾಲವಾಗಿರುತ್ತಿತ್ತು. ರಕ್ಷಿತ್ ಶೆಟ್ಟಿ (Rakshith Shetty) ತಮ್ಮ ಜೊತೆ ನಟಿಸಿದ ನಾಯಕಿಯರನ್ನೆಲ್ಲ ಮದುವೆಯಾಗಿ ಸಂಸಾರ ಮಾಡಿರಬೇಕಿತ್ತು. ಗಾಸಿಪ್ಪುಗಳೆಲ್ಲ ಸತ್ಯವಾಗಿದ್ದರೆ..
ಬೇರೆ ಚಿತ್ರರಂಗದಲ್ಲಿ ಇಂತಹ ಸುದ್ದಿಗಳು ಇನ್ನೂ ಹೆಚ್ಚು. ನಟರಿಗಿಂತ ಹೆಚ್ಚಾಗಿ ನಟಿಯರ ಸುತ್ತಲೇ ಇಂತಹ ಸುಳ್ಳು ಸುದ್ದಿಗಳು ಹರಡುತ್ತವೆ. ಅನೂಷ್ಕಾ ಶೆಟ್ಟಿ (anushka Shetty), ತ್ರಿಶಾ (Thrisha), ಸಮಂತಾ (samantha) , ನಯನತಾರ (nayanathara), ಕೀರ್ತಿ ಸುರೇಶ್ (keerthi suresh) , ರಶ್ಮಿಕಾ ಮಂದಣ್ಣ (Rashmika mandanna), ಪೂಜಾ ಹೆಗ್ಡೆ (Pooja hegde).. ಒಬ್ಬರನ್ನೂ ಬಿಟ್ಟಿಲ್ಲ. ಗಾಸಿಪ್ಪುಗಳ ಪ್ರಕಾರವೇ ಆಗಿದ್ದರೆ, ಇವರಿಗೆಲ್ಲ ಕನಿಷ್ಠ ಒಂದು ಡಜನ್ನಾದರೂ ಮದುವೆ ಆಗಿರಬೇಕಿತ್ತು.
ನ್ಯಾಚುರಲ್ ಬ್ಯೂಟಿ (natural beauty) ಎಂದೇ ಕರೆಸಿಕೊಳ್ಳೋ ನಟಿ ಸಾಯಿ ಪಲ್ಲವಿ (sai pallavi) ಅವರು ಮದುವೆಯಾಗಿದ್ದಾರೆ. ಹೇಳದೆ ಕೇಳದೆ ಗುಟ್ಟಾಗಿ ಮದುವೆಯಾಗಿದ್ದಾರೆ ಅನ್ನೋ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿವ ವೈರಲ್ ಆಗಿತ್ತು. ಅಧಿಕೃತ ಸುದ್ದಿ ಸಂಸ್ಥೆಗಳು ಅದನ್ನು ಸುದ್ದಿ ಮಾಡದೇ ಹೋದರೂ.. ಸಾಯಿ ಪಲ್ಲವಿ ಟ್ರೋಲರುಗಳ ಹಾಟ್ ಫೇವರಿಟ್ ಆಗಿದ್ದರು. ಇದಕ್ಕೆಲ್ಲ ಖುದ್ದು ಸಾಯಿ ಪಲ್ಲವಿ ಸ್ಪಷ್ಟನೆ ಕೊಟ್ಟಿದ್ದಾರೆ.
ನಿಜ ಹೇಳಬೇಕು ಅಂದ್ರೆ, ನಾನು ವದಂತಿಗಳಿಗೆ ಹೆದರುವುದಿಲ್ಲ. ಆದರೆ ನನ್ನ ಕುಟುಂಬ ಸದಸ್ಯರನ್ನು ಸ್ನೇಹಿತರನ್ನು ಇದರಲ್ಲಿ ಸಿಲುಕಿಸುತ್ತಿರುವುದನ್ನು ನೋಡಿದಮೇಲೆ ಪ್ರತಿಕ್ರಿಯಿಸಲೇಬೇಕಾಗಿದೆ. ನಾನು ಮಾತನಾಡಬೇಕಿದೆ. ನನ್ನ ಮುಂದಿನ ಸಿನಿಮಾ ಮುಹೂರ್ತ ಸಮಾರಂಭದ ಫೋಟೊಗಳನ್ನು ಕ್ರಾಪ್ ಮಾಡಿ ಈ ರೀತಿ ಉದ್ದೇಶಪೂರ್ವಕವಾಗಿ ಹಣ ಕೊಟ್ಟು ಕೆಟ್ಟ ಅರ್ಥ ಬರುವಂತೆ ಮಾಡಿದ್ದಾರೆ. ಇದು ಬಹಳ ಅಹಸ್ಯ. ನನ್ನ ಸಿನಿಮಾ ಅಪ್ಡೇಟ್ಗಾಗಿ ಬಿಟ್ಟ ಫೋಟೊಗಳನ್ನು ಬಳಸಿ ಈ ರೀತಿ ಸುದ್ದಿ ಹಬ್ಬಿಸಿರುವುದು ಬಹಳ ಬೇಸರ ತಂದಿದೆ. ಸಂತೋಷವಾಗಿ ಸಿನಿಮಾ ಶುರು ಮಾಡುವಾಗ ಇಂತದ್ದನ್ನು ಕ್ರಿಯೇಟ್ ಮಾಡುವುದು ನಮ್ಮ ಸಿನಿಮಾ ಮಾಡುವ ಉತ್ಸಾಹವನ್ನೇ ಹಾಳು ಮಾಡುತ್ತದೆ ಎಂದಿದ್ದಾರೆ ಸಾಯಿ ಪಲ್ಲವಿ.
ಇಷ್ಟಕ್ಕೂ ಆಗಿದ್ದೇನಂದ್ರೆ ಸಾಯಿ ಪಲ್ಲವಿ ಅವರ ಹೊಸ ಸಿನಿಮಾ ರಾಜಕುಮಾರ್ ಪೆರಿಯಸ್ವಾಮಿ ಅವರ ನಿರ್ದೇಶನದಲ್ಲಿ ಸೆಟ್ಟೇರಿದೆ. ಆ ಚಿತ್ರದ ಮುಹೂರ್ತದ ವೇಳೆ ಸಾಯಿ ಪಲ್ಲವಿ ಹಾಗೂ ಪೆರಿಯಸ್ವಾಮಿ ಇಬ್ಬರೂ ಹಾರ ಹಾಕಿಕೊಂಡು ನಿಂತಿದ್ದಾರೆ. ಅದೇ ಫೋಟೋ ವೈರಲ್ ಆಗಿದೆ. ಆದರೆ ವೈರಲ್ ಆಗಿರುವ ಫೋಟೋದಲ್ಲಿ ಸಿನಿಮಾ ಕ್ಲಾಪ್ ಬೋರ್ಡ್‍ನ್ನು ಜಾಣತನದಿಂದ ಕಟ್ ಮಾಡಲಾಗಿದೆ.
ಅಂದಹಾಗೆ ಸಾಯಿ ಪಲ್ಲವಿ ನಟಿಸುತ್ತಿರುವ ಹೊಸ ಚಿತ್ರಕ್ಕೆ ಕಮಲ್ ಹಾಸನ್ ನಿರ್ಮಾಪಕ. ಶಿವಕಾರ್ತಿಕೇಯನ್ ಹೀರೋ. ರಾಜ್‍ಕುಮಾರ್ ಪೆರಿಯಾಸ್ವಾಮಿ ಡೈರೆಕ್ಟರ್.



