ಕೋಡಿಮಠಶ್ರೀಗಳು 2024ರ ವರ್ಷ ಭವಿಷ್ಯವನ್ನು ಹೇಳುವಾಗ ಈ ವರ್ಷ ಭಯಾನಕ ಅನುಭವನ್ನು ನೀಡಲಿದೆ ಎಂದಿದ್ದರು. ಈ ವರ್ಷ ಒಂದೆರಡು ಪ್ರಧಾನಿಗಳ ಸಾವಾಗುವ ಲಕ್ಷಣವಿದೆ ಹಾಗೆ ನೋವುಗಳು ಸಂಭವಿಸಬಹುದು ಎಂದಿದ್ದರು. ಇದರ ಜತೆಯಲ್ಲಿ ಮತೀಯ ಸಮಸ್ಯೆಯಿಂದ ಜನರು ದುಃಖ ಅನುಭವಿಸುತ್ತಾರೆ. ಜಗತ್ತಿನ ದೊಡ್ಡ ಸಂತರು ಕೊಲೆಯಾಗುತ್ತಾರೆ. ದೇಶದ ಪ್ರಧಾನಿ ಸ್ಥಾನದಲ್ಲಿರುವವರ ಹತ್ಯೆ ಯತ್ನಗಳು ನಡೆಯಲಿವೆ ಎಂದು ಹೇಳಿದ್ದರು. ಆಗ ಜಪಾನ್ʻನ ಮಾಜಿ ಪ್ರಧಾನಿ ಹತ್ಯೆಯಾಗಿದ್ದರು. ಆದರೆ ಇದಷ್ಟೇ ಅಲ್ಲ, ಇನ್ನೂ ನಡೆಯಲಿವೆ ಎಂದು ಹೇಳಿದ್ದರು.
ಇದೀಗ 60 ವರ್ಷಗಳ ನಂತರ ಅಮೆರಿಕದಲ್ಲಿ ಅಧ್ಯಕ್ಷರಾಗಿದ್ದ ವ್ಯಕ್ತಿಯೊಬ್ಬರ ಹತ್ಯಾ ಯತ್ನ ನಡೆದಿದ್ದು ಕೋಡಿಮಠ ಶ್ರೀಗಳ ಭವಿಷ್ಯ ಮತ್ತೆ ಕುತೂಹಲ ಹುಟ್ಟಿಸಿದೆ. ಜಾನ್ ಎಫ್ ಕೆನಡಿ ಅಧ್ಯಕ್ಷರಾಗಿದ್ದಾಗಲೇ ಅವರನ್ನ ಹತ್ಯೆ ಮಾಡಲಾಗಿತ್ತು. ಇದಾದ ನಂತರ ಅಧ್ಯಕ್ಷ ಅಥವಾ ಮಾಜಿ ಅಧ್ಯಕ್ಷರ ಹತ್ಯಾ ಪ್ರಯತ್ನಗಳು ಅಮೆರಿಕದಲ್ಲಿ ನಡೆದಿರಲಿಲ್ಲ. ಪೆನ್ಸಿಲ್ವೇನಿಯಾದಲ್ಲಿ ಚುನಾವಣಾ ಭಾಷಣ ಮಾಡುತ್ತಿದ್ದಾಗ ಡೊನಾಲ್ಡ್ ಟ್ರಂಪ್ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಲಾಗಿದೆ. ಇದೇ ವರ್ಷದ ನವೆಂಬರ್ ನಲ್ಲಿ ಅಮೆರಿಕದಲ್ಲಿಮ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಇದೆಲ್ಲದರ ಮಧ್ಯೆ ಅಮೆರಿಕದ ಪಾದ್ರಿಯೊಬ್ಬರೂ ಇದೇ ರೀತಿಯ ಭವಿಷ್ಯ ಹೇಳಿದ್ದರು.
ಟ್ರಂಪ್ ಬಗ್ಗೆ ಭವಿಷ್ಯ ಹೇಳಿದ್ದ ಪಾದ್ರಿ ಹೆಸರು ಬ್ರಾಂಡನ್ ಬಿಗ್ಸ್. ಮಾರ್ಚ್ 2024ರಲ್ಲಿ ಅವರ ವಿಡಿಯೋ ಒಂದನ್ನು ಯುಟ್ಯೂಬ್ ನಲ್ಲಿ ಪೋಸ್ಟ್ ಮಾಡಲಾಗಿತ್ತು. ವಿಡಿಯೋದಲ್ಲಿ ಪಾದ್ರಿ, ಭಗವಂತ ನನ್ನ ಜೊತೆ ಮಾತನಾಡಿದ್ದಾನೆ. ಅಮೆರಿಕಾದಲ್ಲಿ ಮುಂದೆ ಏನೆಲ್ಲ ಆಗುತ್ತೆ ಎಂಬುದನ್ನು ಹೇಳಿದ್ದಾನೆ. ಮುಂದಿನ ದಿನಗಳಲ್ಲಿ ಅಮೆರಿಕಾದಲ್ಲಿ ಅನೇಕ ಮಹತ್ವದ ಘಟನೆಗಳು ನಡೆಯಲಿವೆ ಎಂದಿದ್ದರು. ಮಾತು ಮುಂದುವರೆಸಿದ ಬ್ರಾಂಡನ್ ಬಿಗ್ಸ್, ನಾನು ಟ್ರಂಪ್ ಮೇಲೆ ಮಾರಣಾಂತಿಕ ದಾಳಿ ನಡೆಯೋದನ್ನು ನೋಡಿದ್ದೇನೆ. ಗುಂಡು ಟ್ರಂಪ್, ಕಿವಿಯ ಮೂಲಕ ಹಾದು ಹೋಗಿತ್ತು. ಗುಂಡು ಅವರ ತಲೆಯ ಹತ್ತಿರದಿಂದ ಪಾಸ್ ಆಗಿದೆ. ಅವರ ಕಿವಿಯೋಲೆಗಳನ್ನು ಛಿದ್ರಗೊಳಿಸಿತ್ತು. ನಂತ್ರ ಅವರು ನೆಲಕ್ಕೆ ಬೀಳ್ತಾರೆ. ಭಗವಂತನ ಪ್ರಾರ್ಥನೆ ಮಾಡ್ತಾರೆ ಎಂದಿದ್ದ ಬ್ರಾಂಡನ್ ಬಿಗ್ಸ್, ಟ್ರಂಪ್, ರಾಷ್ಟ್ರಪತಿ ಚುನಾವಣೆ ಗೆದ್ದಿದ್ದನ್ನು ಕೂಡ ನಾನು ನೋಡಿದ್ದೇನೆ ಎಂದಿದ್ದರು.
ಅದರಂತೆಯೇ ನಡೆದಿರುವ ಟ್ರಂಪ್ ಮೇಲಿನ ಹತ್ಯಾ ಯತ್ನ, ಅವರು ಸಾವನ್ನು ಗೆದ್ದು ಬಂದಿದ್ದು ಕೂಡಾ ನಡೆದು ಹೋಗಿದೆ. ಇನ್ನು ಒಂದು ವಿಷಯವೆಂದರೆ.. ಆ ಪಾದ್ರಿಯ ಭವಿಷ್ಯದ ಪ್ರಕಾರ ಮುಂದೆ ಟ್ರಂಪ್ ಗೆಲ್ಲಬೇಕು.



