ಭಾರತೀಯ ಜೀವ ವಿಮಾ ನಿಗಮವು (ಎಲ್ಐಸಿ) (Life Insurance of India) ವಿಶೇಷವಾಗಿ ಹೆಣ್ಣು ಮಕ್ಕಳಿಗಾಗಿ ಉಳಿತಾಯ ಯೋಜನೆಯನ್ನು ಪರಿಚಯಿಸಿದೆ. ಎಲ್ಐಸಿಯ ಕನ್ಯಾದಾನ ಪಾಲಿಸಿ. ಎಲ್ಐಸಿ ಕನ್ಯಾದಾನ ಪಾಲಿಸಿಯು ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆಯ ವೆಚ್ಚಗಳಿಗೆ ಹಣಕಾಸಿನ ಉಳಿತಾಯ ಮಾಡಲು ಸಹಾಯ ಮಾಡುವ ಯೋಜನೆ. (Life Insurance of India) ಎಲ್ಐಸಿ ಕನ್ಯಾದಾನ (Kanyadhana policy) ಉಳಿತಾಯ ಯೋಜನೆಯನ್ನು ಹೆಣ್ಣು ಮಗುವಿನ ಪೋಷಕರು ಮಾಡಬೇಕು.
ಈ ಕನ್ಯಾದಾನ (Kanyadhana policy) ಯೋಜನೆಯ ಲಾಭಗಳೂ ಚೆನ್ನಾಗಿವೆ. ನೀವು ಪ್ರತಿ ದಿನ ಎಲ್ಐಸಿಯಲ್ಲಿ 75 ರೂ. ಹಾಕಿದರೆ 14.5 ಲಕ್ಷ ಲಾಭ ಸಿಗಲಿದೆ. 151 ರೂ. ಪ್ರತಿದಿನ ಹೂಡಿಕೆ ಮಾಡಿದರೆ 30 ಲಕ್ಷ ರೂ. ಸಿಗಲಿದೆ. ವಿಮೆಯ ಕನಿಷ್ಠ ಅವಧಿ 13 ವರ್ಷಗಳು, ಗರಿಷ್ಠ 25 ವರ್ಷ. ಹೆಣ್ಣು ಮಗುವಿನ ತಂದೆಯ ವಯಸ್ಸು 18 ರಿಂದ 50 ರ ನಡುವೆ ಇರಬೇಕು.
- ತಂದೆಯು ಹಠಾತ್ ಸಾವಿಗೀಡಾದರೆ, ಯಾವುದೇ ಪ್ರೀಮಿಯಂ ಅನ್ನು ಪಾವತಿ ಮಾಡಬೇಕಾಗಿಲ್ಲ. ಪ್ರೀಮಿಯಂ ಅವಧಿ ಮುಗಿದ ಬಳಿಕ ಸಂಪೂರ್ಣ ಹಣ ದೊರಕುತ್ತದೆ
- ದಿನಕ್ಕೆ 75 ರೂ. ಪ್ರೀಮಿಯಂ ದಾರರು ಆಕಸ್ಮಿಕವಾಗಿ ಮರಣ ಹೊಂದಿದಾಗ ತಕ್ಷಣ 10 ಲಕ್ಷ ರೂಪಾಯಿ ಲಭ್ಯವಾಗುತ್ತದೆ.
- ದಿನಕ್ಕೆ 151 ರೂ. ಪ್ರೀಮಿಯಂ ದಾರರು ಆಕಸ್ಮಿಕವಾಗಿ ಮರಣ ಹೊಂದಿದಲ್ಲಿ ತಕ್ಷಣವೇ 5 ಲಕ್ಷ ರೂಪಾಯಿ ಲಭ್ಯವಾಗುತ್ತದೆ
- ಮೆಚ್ಯೂರಿಟಿವರೆಗೆ ಪ್ರತಿ ವರ್ಷ 50000 ರೂಪಾಯಿ ಪಡೆಯಬಹುದು.
- ಪ್ರತಿ ದಿನ 75 ರೂಪಾಯಿ ಹೂಡಿಕೆ ಮಾಡಿ, ವಿವಾಹದ ಸಂದರ್ಭದಲ್ಲಿ 14.5 ಲಕ್ಷ ರೂಪಾಯಿ ಪಡೆಯಿರಿ.
- ದಿನಕ್ಕೆ 151 ರೂಪಾಯಿ ಉಳಿತಾಯ ಮಾಡಿದರೆ, ನೀವು ವಿವಾಹದ ಸಂದರ್ಭದಲ್ಲಿ 31 ಲಕ್ಷ ರೂಪಾಯಿ ಪಡೆಯಬಹುದಾಗಿದೆ.
ಕನ್ಯಾದಾನ ಯೋಜನೆ ಅಷ್ಟೇ ಅಲ್ಲ, ಹೆಣ್ಣು ಮಕ್ಕಳಿಗಾಗಿ ಹಲವಾರು ಯೋಜನೆಗಳಿವೆ. ಅದರಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಕೂಡಾ ಒಂದು. ಎನ್ಆರ್ಐಗಳು ಸೇರಿದಂತೆ ಯಾವುದೇ ನಾಗರಿಕರು ಈ ಯೋಜನೆಯ ಮೂಲಕ ತಮ್ಮ ಮಗಳ ಮದುವೆಗೆ ಹೂಡಿಕೆ ಮಾಡಬಹುದಾಗಿದೆ. ಯಾವುದೇ ಅಂಚೆ ಕಚೇರಿಗಳು ಅಥವಾ ಬ್ಯಾಂಕ್ ಶಾಖೆಗಳಲ್ಲಿ ಖಾತೆಯನ್ನು ತೆರೆಯಬಹುದು. ಒಂದೇ ಹೆಣ್ಣು ಮಗುವಿಗೆ ಎರಡು ಖಾತೆ ತೆರೆಯಲಾಗುವುದಿಲ್ಲ. 18 ವರ್ಷ ವಯಸ್ಸಿನ ನಂತರ, ಹೆಣ್ಣು ಮಗುವಿನ ವ್ಯಾಸಂಗಕ್ಕೆ ಗರಿಷ್ಠ ಶೇಕಡ 50ರಷ್ಟು ಮೊತ್ತವನ್ನು ವಿತ್ಡ್ರಾ ಮಾಡಿಕೊಳ್ಳಬಹುದು.
10 ವರ್ಷಕ್ಕಿಂತ ಮೊದಲು ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು. ಜನನ ಪ್ರಮಾಣಪತ್ರ, ಹುಡುಗಿ ಮತ್ತು ಪೋಷಕರ ವಿಳಾಸ, ಗುರುತಿನ ಪುರಾವೆಗಳಂತಹ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ಅವುಗಳನ್ನು ಅಂಚೆ ಕಚೇರಿ ಅಥವಾ ಬ್ಯಾಂಕ್ನಲ್ಲಿ ಸಲ್ಲಿಸಬೇಕು. ಕನಿಷ್ಠ 250 ರೂಪಾಯಿ ಹೂಡಿಕೆ ಮಾಡಿ ಖಾತೆ ತೆರೆಯಬಹುದು. ಪ್ರತಿದಿನ 75 ರೂಪಾಯಿ ಹೂಡಿಕೆಯನ್ನು ಮಾಡಿ, ಮಾಸಿಕ ಪ್ರೀಮಿಯಂ ಪಾವತಿಸಿದ 25 ವರ್ಷಗಳ ನಂತರ ನಿಮ್ಮ ಮಗಳ ಮದುವೆಗೆ 14 ಲಕ್ಷ ರೂಪಾಯಿ ಲಭ್ಯವಾಗುತ್ತದೆ.
ಹೆಣ್ಣು ಮಗುವಿನ ಸಾವು ಸಂಭವಿಸಿದರೆ, ಮರಣ ಪ್ರಮಾಣಪತ್ರವನ್ನು ತೋರಿಸಿ ಖಾತೆಯನ್ನು ಮುಚ್ಚಬಹುದು. ಹೂಡಿಕೆ ಮಾಡಿದ ಮೊತ್ತವನ್ನು ಬಡ್ಡಿಯೊಂದಿಗೆ ಪೋಷಕರು ಪಡೆಯಬಹುದಾಗಿದೆ. ಈ ಯೋಜನೆ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ.



