ಕನ್ನಡದಲ್ಲಿ ದಿಗ್ಗಜರು, ಲೇಡಿ ಕಮಿಷನರ್, ಮಾಸ್ತಿ, ಬಾಸ್ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದ ಈ ಮನ್ಸೂರ್ ಅಲಿ ಖಾನ್ ಎಂಬ ವ್ಯಕ್ತಿಗೆ 62 ವರ್ಷ ವಯಸ್ಸು. ಮದುವೆಯಾಗಿರುವ ಮಕ್ಕಳಿದ್ದಾರೆ. ಮೊಮ್ಮಕ್ಕಳಿದ್ಧಾರೆ. ಆದರೆ ಮನಸ್ಸಿನೊಳಗಿನ ಅಸಹ್ಯ ಬಾಯಿಗೆ ಬಂದು, ಛೀಥೂ ಎನಿಸಿಕೊಳ್ಳುತ್ತಿದ್ದಾನೆ ಈತ. ಈತ ಬರೀ ನಟನಷ್ಟೇ ಅಲ್ಲ, ಸಂಗೀತ ನಿರ್ದೇಶಕ, ಕಥೆಗಾರ ಮತ್ತು ನಿರ್ಮಾಪಕನೂ ಹೌದು. ರಾಜಕಾರಣಿಯೂ ಆಗಿರುವ ಮನ್ಸೂರ್ ಅಲಿ ಖಾನ್ ವಿಕೃತಿಯ ಪರಮಾವಧಿ ಮೆರೆದಿದ್ದಾರೆ.
ಈತ ಕನ್ನಡದಲ್ಲೂ ನಟಿಸಿದ್ದ. ವಿಷ್ಣುವರ್ಧನ್ ಅಂಬರೀಷ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ದಿಗ್ಗಜರು ಚಿತ್ರದಲ್ಲಿ ನಟಿ ತಾರಾ ಅವರ ಗಂಡನ ಪಾತ್ರದಲ್ಲಿ ನಟಿಸಿದ್ದ ವ್ಯಕ್ತಿ. ಉಪೇಂದ್ರ ಅಭಿನಯದ ಮಾಸ್ತಿ, ಮಾಲಾಶ್ರೀ ನಟಿಸಿದ್ದ ಲೇಡಿ ಕಮಿಷನರ್, ದರ್ಶನ್ ಅಭಿನಯದ ಬಾಸ್ ಮೊದಲಾದ ಚಿತ್ರಗಳಲ್ಲಿ ನಟಿಸಿರುವ ಈತನೇ ಈಗ ವಿವಾದದ ಕೇಂದ್ರ ಬಿಂದು.
ವಿಜಯ್ ಮತ್ತು ತ್ರಿಷಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಲಿಯೋ ಚಿತ್ರದಲ್ಲಿ ಈತ ವಿಲನ್ ಆಗಿದ್ದ. ನಾನು ತ್ರಿಷಾ ಜೊತೆ ನಟಿಸುತ್ತಿದ್ದೇನೆ ಎಂದು ಗೊತ್ತಾದಾಗ ರೇಪ್ ಸೀನ್ ಇರುತ್ತದೆ. ನನ್ನ ಹಿಂದಿನ ಚಿತ್ರಗಳಲ್ಲಿ ಇತರ ನಟಿಯರನ್ನು ಬೆಡ್ʻರೂಂಗೆ ಎತ್ತಿಕೊಂಡು ಹೋದಂತೆಯೇ ತ್ರಿಷಾಳನ್ನೂ ಬೆಡ್ ರೂಂಗೆ ಎತ್ಕೊಂಡು ಹೋಗಿ ರೇಪ್ ಮಾಡುವ ಸೀನ್ ಇರುತ್ತದೆ ಎಂದು ನಾನು ಭಾವಿಸಿದ್ದೆ. ಅನೇಕ ಚಿತ್ರಗಳಲ್ಲಿ ಅತ್ಯಾಚಾರದ ದೃಶ್ಯಗಳನ್ನು ಮಾಡಿದ್ದೇನೆ. ಇದು ನನಗೆ ಹೊಸದಲ್ಲ. ಆದರೆ ಲಿಯೋ ಸಿನಿಮಾನವರು ತ್ರಿಷಾ ಅವರ ಮುಖವನ್ನು ಸಹ ನನಗೆ ತೋರಿಸಲಿಲ್ಲ ಎಂದು ಮಾತನಾಡಿದ್ದಾರೆ.
ಲಿಯೋ ಇತ್ತೀಚೆಗೆ ರಿಲೀಸ್ ಆಗಿದ್ದ ಸಿನಿಮಾ. ಒಂದು ಲೆವೆಲ್ಲಿಗೆ ಬಾಕ್ಸಾಫೀಸ್ʻನಲ್ಲಿ ಹಿಟ್ ಆಗಿದೆ. ಈತನ ಹೇಳಿಕೆ ವೈರಲ್ ಆಗುತ್ತಿದ್ದಂತೆಯೇ ನಟಿ ತ್ರಿಶಾ ಅಸಹ್ಯವಾಗಿ ಮಾತನಾಡಿರುವ ವಿಡಿಯೊ ಇತ್ತೀಚೆಗೆ ನನ್ನ ಗಮನಕ್ಕೆ ಬಂದು. ಆ ನಟನ ಮಾತುಗಳೇ ಅಸಹ್ಯ. ಸ್ತ್ರೀದ್ವೇಷ, ಕೆಟ್ಟ ಅಭಿರುಚಿ ಹಾಗೂ ವಿಕೃತಿ ಹೊಂದಿರುವ ಆತ ನನ್ನೊಂದಿಗೆ ನಟಿಸಲು ಬಯಸಬಹುದು ಆದರೆ ನಾನಂತೂ ಅಂತಹ ಕೆಟ್ಟ ವ್ಯಕ್ತಿಯೊಂದಿಗೆ ಎಂದಿಗೂ ನಟಿಸುವುದಿಲ್ಲ ಎಂದಿದ್ದಾರೆ. ಈತನ ಹೇಳಿಕೆಗೆ ನಿರ್ದೇಶಕ ಲೋಕೇಶ್ ಕನಗರಾಜ್ ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ನಟ ಮನ್ಸೂರ್ ಅಲಿ ಖಾನ್ ನಾನು ತಮಾಷೆ, ಹಗರುವಾದ ಧಾಟಿಯಲ್ಲಿ ಹೇಳಿರುವ ಮಾತುಗಳನ್ನೇ ಎಡಿಟ್ ಮಾಡಿ ವೈರಲ್ ಮಾಡಲಾಗುತ್ತಿದೆ. ಆ ಕಾಮೆಂಟ್‌ಗಳನ್ನು ಹಗುರವಾದ ಧಾಟಿಯಲ್ಲಿ ಹೇಳಿದೆ. ವಿವಾದ ಸೃಷ್ಟಿಸುವ ರೀತಿಯಲ್ಲಿ ವಿಡಿಯೋವನ್ನು ಟ್ರಿಮ್ ಮಾಡಲಾಗಿದೆ. ಇದಕ್ಕೆಲ್ಲ ನಾನು ಹೆದರೋದಿಲ್ಲ. ನನ್ನ ಜೊತೆ ನಟಿಸಿದ್ದ ನಾಯಕಿಯರು ಈಗ ಎಂಎಲ್ ಎ, ಎಂಪಿ ಆಗಿದ್ದಾರೆ. ಯಶಸ್ವಿ ಉದ್ಯಮಿಗಳನ್ನು ವಿವಾಹವಾಗಿದ್ದಾರೆ. ಲಿಯೋ ಸಿನಿಮಾದ ಪೂಜಾ ಸಮಾರಂಭದಲ್ಲಿ, ನನ್ನ ಮಗಳು ದಿಲ್ರುಬಾ, ತ್ರಿಶಾ ಅಭಿಮಾನಿ ಎಂದು ನಾನು ತ್ರಿಶಾಗೆ ಹೇಳಿದ್ದೆ. ನನ್ನ ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಲು ನಾನು 360ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದೆ. ನಾನು ಯಾವಾಗಲೂ ನನ್ನ ಸಹನಟರನ್ನು ಗೌರವಿಸುವವನು ಎಂದು ಪ್ರತಿಕ್ರಿಯೆ ನೀಡಿದ್ದಾರೆ.



