ಬೆಂಗಳೂರಿನಲ್ಲಿ ಯಾರನ್ನೇ ಕೇಳಿ ನೋಡಿ.. ಕನ್ನಡ ಮತ್ತು ಪರಭಾಷೆ ಚಿತ್ರಗಳ ಮಧ್ಯೆ ನಿಮ್ಮ ಆಯ್ಕೆ ಯಾವುದು ಎಂದರೆ ಕನ್ನಡ ಅಂಥಾರೆ. ಕನ್ನಡವೇ ಸತ್ಯ. ಕನ್ನಡವೇ ನಿತ್ಯ ಅಂತಾರೆ. ಆದರೆ ಸತ್ಯ ಬೇರೆಯದೇ ಇದೆ. ಈ ಕನ್ನಡ ಪರ ಹೇಳಿಕೆಗಳೆಲ್ಲ, ಮಾತುಗಳೆಲ್ಲ ಕೇವಲ ಮಾತಿನಲ್ಲಿ ಅಥವಾ ಸೋಷಿಯಲ್ ಮೀಡಿಯಾದಲ್ಲಿ ಅಷ್ಟೆ. ಏಕೆಂದರೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿಯೇ ಕನ್ನಡ ನಂ.2 ಅಥವಾ ನಂ.3 ಸ್ಥಾನಕ್ಕೆ ಇಳಿದಾಗಿ ಹೋಗಿದೆ. ಅದಕ್ಕೆ ಸಾಕ್ಷಿ ತಮಿಳಿನ ಲಿಯೋ (leo) ಎದುರು ಘೋಸ್ಟ್ (ghost) ರಿಲೀಸ್ ಆಗುತ್ತಿರುವ ವೇಳೆ ಸೃಷ್ಟಿಯಾಗಿರುವ ಈ ದಾಖಲೆ. ಇದು ಕನ್ನಡಿಗರು ಹೆಮ್ಮೆ ಪಡುವ ವಿಷಯವಂತೂ ಅಲ್ಲ.
ಕರ್ನಾಟಕದಲ್ಲಿ ತಮಿಳು ಸಿನಿಮಾಗಳ ಕ್ರೇಜ್ ಜೋರಾಗಿದೆ. ಕನ್ನಡಕ್ಕಿಂತಲೂ ಹೆಚ್ಚಿನ ಮನ್ನಣೆ ತಮಿಳು ಚಿತ್ರಗಳಿಗೆ ಸಿಗ್ತಾ ಇದೆ. ಇದೇ ಗುರುವಾರ ರಿಲೀಸ್ ಆಗ್ತಾ ಇರೋ ತಮಿಳಿನ ಲಿಯೋ (Tamils movie LEO), ಕೆಜಿಎಫ್ (KGF record) ದಾಖಲೆಯನ್ನೂ ಹಿಂದಿಕ್ಕಿದೆ. ತಮಿಳಿನ ಲಿಯೋಗೆ ತಮಿಳುನಾಡಿನಲ್ಲಿ ಭರ್ಜರಿ ಓಪನಿಂಗ್ ಸಿಗೋದು ಕಾಮನ್. ಆದರೆ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಕನ್ನಡ ಸಿನಿಮಾಗಿಂತ ಹೆಚ್ಚು ಶೋಗಳು ತಮಿಳಿನ ಲಿಯೋಗೆ ಸಿಕ್ಕಿವೆ. Tamil movied LEO gets more shows than kannada movie Ghost ತಮಿಳುನಾಡಿನಲ್ಲಿ ಟಿಕೆಟ್ ದರ 200 ರೂ. ದಾಟುವಂತಿಲ್ಲ. ಆದರೆ ತಮಿಳು ಸಿನಿಮಾ ಕರ್ನಾಟಕದಲ್ಲಿ ಸಿಕ್ಕ ಸಿಕ್ಕಂತೆ ಟಿಕೆಟ್ ರೇಟ್ ಜಾಸ್ತಿ ಮಾಡಿದೆ. ಸಿಂಗಲ್ ಸ್ಕ್ರೀನ್ ಥಿಯೇಟರ್ಗಳಲ್ಲೂ ಟಿಕೆಟ್ ದರ 500 ರೂ. 1000 ರೂ. 2000 ರೂ.ಗೆ ಏರಿಕೆಯಾಗಿದ್ದರೂ ಪ್ರೇಕ್ಷಕರು ಬುಕ್ ಮಾಡಿದ್ದಾರೆ. ಸದ್ಯ ವಿಜಯ್ ನಟನೆಯ ‘ಲಿಯೋ’ ಕನ್ನಡದ ‘KGF-2’ ಸಿನಿಮಾ ದಾಖಲೆಯೊಂದನ್ನು ಮುರಿದಿದೆ. ಇದೇ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗ್ತಿದೆ.
6 ದಿನ ಮೊದಲೇ ಕರ್ನಾಟಕದಲ್ಲಿ ‘ಲಿಯೋ’ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ರಾಜ್ಯದ ಪ್ರಮುಖ ಥಿಯೇಟರ್ಗಳಲ್ಲಿ ಮಲ್ಟಿಪ್ಲೆಕ್ಸ್ಗಳಲ್ಲಿ ‘ಲಿಯೋ’ ದರ್ಬಾರ್ ಜೋರಾಗಿದೆ. ಟಿಕೆಟ್ ದರ ಕೂಡ ಹೆಚ್ಚಿಸಿದ್ದರೂ ಕೂಡ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಗುರುವಾರವೇ ಶಿವಣ್ಣನ ನಟನೆಯ ‘ಘೋಸ್ಟ್’ ಸಿನಿಮಾ ರಿಲೀಸ್ ಆಗುತ್ತಿದೆ. ಆದರೂ ಕೂಡ ‘ಲಿಯೋ’ ಚಿತ್ರಕ್ಕೆ ಹೆಚ್ಚು ಶೋಗಳು ಸಿಕ್ಕಿವೆ. ಇನ್ನು ತಮಿಳುನಾಡಿನಲ್ಲಿ Early morning showsಗೆ ಅಲ್ಲಿನ ಸರ್ಕಾರ ಅನುಮತಿ ಕೊಟ್ಟಿಲ್ಲ. 9 ಗಂಟೆ ಬಳಿಕವೇ ಸಿನಿಮಾ ಪ್ರದರ್ಶನ ಮಾಡುವಂತೆ ಆದೇಶ ನೀಡಿದೆ. ಆದರೆ ಕರ್ನಾಟಕದಲ್ಲಿ ಬೆಳ್ಳಂಬೆಳಗ್ಗೆ 4 ಗಂಟೆಗೆ ‘ಲಿಯೋ’ ಫಸ್ಟ್ ಶೋ ಆರಂಭವಾಗುತ್ತಿದೆ.
ಕಳೆದ ವರ್ಷ ಏಪ್ರಿಲ್ 14ರಂದು ‘ಏಉಈ-2’ ಸಿನಿಮಾ ರಿಲೀಸ್ ಆಗಿತ್ತು. ಬೆಳಗ್ಗೆ 9 ಗಂಟೆಗೂ ಮುನ್ನ ಬೆಂಗಳೂರಿನಲ್ಲಿ 215 ಶೋಗಳಲ್ಲಿ ಸಿನಿಮಾ ಪ್ರದರ್ಶನವಾಗಿತ್ತು. ಆದರೆ ‘ಲಿಯೋ’ ಸಿನಿಮಾ 9 ಗಂಟೆಗೂ ಮುನ್ನ 240 ಶೋಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಬೆಳಗ್ಗೆ 4 ಗಂಟೆ ಹಾಗೂ 7 ಗಂಟೆಯ ಬಹುತೇಕ ಶೋಗಳ ಈಗಾಗಲೇ ಸೋಲ್ಡ್ಔಟ್ ಆಗೋಗಿದೆ.
ಆಗಸ್ಟ್ 10ಕ್ಕೆ ರಿಲೀಸ್ ಆಗಿದ್ದ ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ಕೂಡ ಇದೇ ರೀತಿ ಸದ್ದು ಮಾಡಿತ್ತು. ಕರ್ನಾಟಕದಲ್ಲೇ ಸಿನಿಮಾ 50 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಇದೀಗ ‘ಜೈಲರ್’ ಮಾತ್ರವಲ್ಲ ಕನ್ನಡ ಸಿನಿಮಾಗಳನ್ನು ಹಿಂದಿಕ್ಕಿ ‘ಲಿಯೋ’ ಭರ್ಜರಿ ಓಪನಿಂಗ್ ಪಡೆದುಕೊಳ್ಳುತ್ತಿದೆ.



