ತಮಿಳಿನ ವಿಜಯ್ ಅಭಿನಯದ ಲಿಯೋ ಚಿತ್ರ (Tamil vijay movie LeO) ಅಷ್ಟು ಕಲೆಕ್ಷನ್ ಮಾಡಿತಂತೆ.. ಇಷ್ಟು ಕಲೆಕ್ಷನ್ ಮಾಡಿತಂತೆ.. ಎಂಬೆಲ್ಲ ಸುದ್ದಿಗಳು ಹೊರಬಿದ್ದಿದ್ದವು. ಅಧಿಕೃತ ಅಕೌಂಟುಗಳಿಂದಲೇ ಈ ಅಂಕಿ ಅಂಶಗಳು ಹೊರಬಿದ್ದಾಗ.. ಸತ್ಯವೇ ಇರಬೇಕು ಎಂದು ನಂಬಿಕೊಂಡಿದ್ದವರಿಗೆ ನಿಜವಾದ ಶಾಕ್ ಈಗ ಬಂದಿದೆ. ಲಿಯೋ ಕಲೆಕ್ಷನ್, ದಾಖಲೆ ಎಲ್ಲವೂ ಫೇಕ್ (Leo disaster) ಎಂಬ ಮಾಹಿತಿ ಇದೀಗ ಹೊರಬಿದ್ದಿದೆ. ಇದರ ನಡುವೆ ಘೋಸ್ಟ್ ಕನ್ಸಿಸ್ಟೆನ್ಸಿ ಕಲೆಕ್ಷನ್ (Ghost box office colletiion) ಮುಂದುವರೆದಿದೆ. ಅಷ್ಟೇ ಅಲ್ಲ, ಹೆಚ್ಚಾಗಿದೆ.
ಘೋಸ್ಟ್ Ghost ಚಿತ್ರ. ರಿಲೀಸ್ ಆಗಿದ್ದು ಆಕ್ಟೋಬರ್ 19ಕ್ಕೆ. ಮೊದಲ ದಿನ ತಮಿಳಿನ ವಿಜಯ್ ಅಭಿನಯದ ಲಿಯೋ (LEO), ತೆಲುಗಿನ ಬಾಲಕೃಷ್ಣ ಅಭಿನಯದ ಭಗವಂತ ಕೇಸರಿ (Balakrishna actor Bhagavantha kesari), ರವಿತೇಜ (actor Ravitheja) ಅಭಿನಯದ (Tiger nageshwara rao) ಟೈಗರ್ ನಾಗೇಶ್ವರ ರಾವ್.. ಹೀಗೆ ಪರಭಾಷೆಯ ದೊಡ್ಡ ಸ್ಟಾರ್ ನಟರ ಚಿತ್ರಗಳು ಬಂದಿದ್ದವು. ಇದೆಲ್ಲದರ ನಡುವೆಯೂ ಉತ್ತಮ ಕಲೆಕ್ಷನ್ ಮಾಡಿದ್ದ ಘೋಸ್ಟ್ ಕಲೆಕ್ಷನ್ ಹೆಚ್ಚುತ್ತಲೇ ಹೋಗುತ್ತಿದೆ.
ದಸರಾ ಹಬ್ಬಕ್ಕೂ ಮುನ್ನ ಬಂದಿದ್ದ ಘೋಸ್ಟ್ ನಿಜವಾದ ಆರ್ಭಟ ಹಬ್ಬದ ಸಮಯದಲ್ಲಿ ಜೋರಾಗಿದೆ. ದಸರಾ ಸಂಭ್ರಮದಲ್ಲಿ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಲಾಂಚ್ ಫೆಸ್ಟಿನಲ್ ವೀಕೆಂಡ್ ಚಿತ್ರದ ಕಲೆಕ್ಷನ್ಗೆ ಪ್ಲಸ್ ಆಗಿದೆ. ಪ್ರೇಕ್ಷಕರು ಹಬ್ಬ ಮುಗಿಸಿ ‘ಘೋಸ್ಟ್’ ಸಿನಿಮಾ ಕಣ್ತುಂಬಿಕೊಳ್ಳಲು ಮುಗಿಬಿದ್ದಿದ್ದಾರೆ.
ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ‘ಘೋಸ್ಟ್’ ಸಿನಿಮಾ ಮೂಡಿಬಂದಿದೆ. ಶಿವಣ್ಣ ಜೈಲನ್ನು ಹೈಜಾಕ್ ಮಾಡುವುದರೊಂದಿಗೆ ‘ಘೋಸ್ಟ್’ ಸಿನಿಮಾ ಕತೆ ಆರಂಭವಾಗುತ್ತದೆ. 48 ಗಂಟೆಗಳಲ್ಲಿ ನಡೆಯುವ ಕತೆಯನ್ನು ಶ್ರೀನಿ ಇಲ್ಲಿ ಹೇಳಿದ್ದಾರೆ. ಚಿತ್ರದ ಬಹುತೇಕ ಚಿತ್ರೀಕರಣ ಸೆಟ್ಗಳಲ್ಲೇ ನಡೆದಿದೆ. ಇನ್ನು ಮಾಸ್ತಿ ಡೈಲಾಗ್ಸ್ ಚಿತ್ರದ ಮತ್ತೊಂದು ಹೈಲೆಟ್.
ಶಿವಣ್ಣ ಹಾಗೂ ಜಯರಾಂ ಹಾವು ಏಣಿ ಆಟ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಡುತ್ತದೆ. ಆಕ್ಷನ್ ಹಾಗೂ ಡೈಲಾಗ್ಸ್ ಡೆಲಿವರಿ ಮೂಲಕ ಶಿವಣ್ಣ ಪ್ರೇಕ್ಷಕರು ಸೀಟ್ನಿಂದ ಎದ್ದು ನಿಲ್ಲುವಂತೆ ಮಾಡಿದ್ದಾರೆ. ಇನ್ನು ‘ಘೋಸ್ಟ್’ ಸಿನಿಮಾ ಶ್ರೀನಿ ಸಿನಿಮ್ಯಾಟಿಕ್ ಯೂನಿವರ್ಸ್ ಭಾಗವಾಗಿದ್ದು ಮುಂದಿನ ಸಿನಿಮಾಗಳ ಬಗ್ಗೆ ಕುತೂಹಲ ಕೆರಳುವಂತೆ ಮಾಡಿದೆ.
ಭರ್ಜೃರಿ ಓಪನಿಂಗ್ ಪಡೆದ ತಮಿಳಿನ ಲಿಯೋ, ಎರಡನೇ ದಿನದಿಂದಲೇ ಡಲ್ಲು ಹೊಡೆದಿದ್ದು, ಶೋಗಳ ಸಂಖ್ಯೆ ಅರ್ಧಕ್ಕರ್ಧ ಇಳಿದಿದೆ. ಜನ ಬರ್ತಿಲ್ಲ. ಆದರೆ ಘೋಸ್ಟ್ ಚಿತ್ರದ ಕಲೆಕ್ಷನ್ ಮೊದಲ ದಿನಕ್ಕಿಂತಲೂ ಆಮೇಲೆ ಹೆಚ್ಚಿರುವುದು ಶಿವಣ್ಣಗೆ ಗುಡ್ ನ್ಯೂಸ್. ಟ್ರೇಡ್ ಎಕ್ಸ್ಪರ್ಟ್ ಪ್ರಕಾರ ‘ಘೋಸ್ಟ್’ ಮೊದಲ ದಿನ 1.40 ಕೋಟಿ ರೂ. 2ನೇ ದಿನ 2 ಕೋಟಿ ರೂ. 3ನೇ ದಿನ 4.40 ಕೋಟಿ ರೂ. ಸೇರಿ ಅಂದಾಜು 8 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಆದರೆ ಭಾನುವಾರ, ಸೋಮವಾರ, ಮಂಗಳವಾರ ಸಿನಿಮಾ ಕಲೆಕ್ಷನ್ ಹೆಚ್ಚಾಗಿದೆ. 6ನೇ ದಿನ ಸಾಕಷ್ಟು ಥಿಯೇಟರ್ಗಳ ಮುಂದೆ ಹೌಸ್ಫುಲ್ ಬೋರ್ಡ್ ಬಿದ್ದಿದೆ.
ಲಿಯೋ ಫೇಕ್ ರಹಸ್ಯ ಹೊರಬಿದ್ದಿದ್ದು ಹೇಗೆ? Leo disaster secret revealed
ಲೋಕೇಶ್ ಕನಕರಾಜ್ ನಿರ್ದೇಶನದ ‘ಲಿಯೋ’ ಸಿನಿಮಾ ಸೆಟ್ಟೇರಿದ ದಿನದಿಂದಲೂ ಭಾರೀ ಹೈಪ್ ಕ್ರಿಯೇಟ್ ಮಾಡಿತ್ತು. ‘ಖೈದಿ’, ‘ವಿಕ್ರಂ’ ರೀತಿಯ ಸೆನ್ಸೇಷನಲ್ ಸಿನಿಮಾಗಳ ಸರದಾರ ಲೋಕೇಶ್ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎಂದಾಗಲೇ ಕುತೂಹಲ ಮೂಡಿತ್ತು. ಈ ‘ಮಾಸ್ಟರ್’ ಚಿತ್ರದಲ್ಲಿ ವಿಜಯ್- ಲೋಕೇಶ್ ಒಟ್ಟಿಗೆ ಕೆಲಸ ಮಾಡಿದ್ದರು. ಸಿನಿಮಾ ಸಕ್ಸಸ್ ಕಂಡಿತ್ತು. ಹಾಗಾಗಿ ಸಹಜವಾಗಿಯೇ ಈ ಕಾಂಬಿನೇಷನ್ ಬಗ್ಗೆ ನಿರೀಕ್ಷೆ ಇತ್ತು. ನಿರೀಕ್ಷೆಗೆ ತಕ್ಕಂತೆ ಪ್ರೀ ರಿಲೀಸ್ ಬ್ಯುಸಿನೆಸ್ ನಡೆದಿತ್ತು. ಅದಕ್ಕೆ ತಕ್ಕಂತೆ ಲಿಯೋ ಮೊದಲ ದಿನದ ಕಲೆಕ್ಷನ್ 148 ಕೋಟಿ ಎಂದಾಗ ಹುಬ್ಬೇರಿಸಿದ್ದರು ಜನ.
ಕಾರಣ ಇಷ್ಟೆ, ಲಿಯೋ ರಿಲೀಸ್ ಆಗಿದ್ದುದು 4000+ ಸ್ಕ್ರೀನುಗಳಲ್ಲಿ. ಇವುಗಳಲ್ಲಿ ತಮಿಳುನಾಡಿನಲ್ಲಿ ಟಿಕೆಟ್ ರೇಟ್ ಲಿಮಿಟ್ 199 ರೂ. ಇದೆ. ಹೈದರಾಬಾದಿನಲ್ಲಿ 300 ರೂ. ಇದೆ. ಅದಕ್ಕಿಂತ ಹೆಚ್ಚು ದರ ವಿಧಿಸುವ ಹಾಗಿಲ್ಲ. (ಅಷ್ಟೇ ಅಲ್ಲದೆ ತೆಲುಗಿನ ಲಿಯೋ ಕೊನೆಯ ಕ್ಷಣದಲ್ಲಿ ರಿಲೀಸ್ ಕ್ಯಾನ್ಸಲ್ ಆಗಿತ್ತು. ರಿಲೀಸ್ ಆಗಿದ್ದು ತಮಿಳು ವರ್ಷನ್ ಮಾತ್ರ. ) ತಮಿಳು ಚಿತ್ರಕ್ಕೆ ತಮಿಳುನಾಡು, ಪಾಂಡಿಚೆರಿ ಬಿಟ್ಟರೆ, ಬೆಂಗಳೂರು ದೊಡ್ಡ ಮಾರುಕಟ್ಟೆ. ಹಿಂದಿಯಲ್ಲೂ ಅಬ್ಬರ ಇಲ್ಲ. ದೊಡ್ಡ ರೇಟ್ ಟಿಕೆಟ್ ಮಾರೋಕೆ ಸಾಧ್ಯವಾಗಿದ್ದು ಬೆಂಗಳೂರಿನಲ್ಲಿ ಮಾತ್ರ.
ಹೀಗಿರುವಾಗ ಕೇವಲ 4000+ ಸ್ಕ್ರೀನುಗಳಲ್ಲಿ ರಿಲೀಸ್ ಆದ ಲಿಯೋ ಕಲೆಕ್ಷನ್ ಅದು ಹೇಗೆ 140+ ಕೋಟಿ ಪ್ಲಸ್ ಮಾಡೋಕೆ ಸಾಧ್ಯ ಎನ್ನುವ ಪ್ರಶ್ನೆ ಉದ್ಭವವಾಗಿತ್ತು.
ಏಕೆಂದರೆ ಈ ಮಟ್ಟದ ಕಲೆಕ್ಷನ್ ಮಾಡಿದ್ದ ಈ ಹಿಂದಿನ ಕೆಜಿಎಫ್ ಚಾಪ್ಟರ್ 2, ಆರ್.ಆರ್.ಆರ್. ಪಠಾಣ್, ಜವಾನ್, ಜೈಲರ್ ಚಿತ್ರಗಳು 10,000+ ಸ್ಕ್ರೀನುಗಳಲ್ಲಿ ತೆರೆ ಕಂಡಿದ್ದವು. ತಮಿಳು ಸ್ಟಾರ್ ನಟನಾದರೂ ರಜನಿಕಾಂತ್ ಮಾರುಕಟ್ಟೆ ಹಿಂದಿ ಚಿತ್ರಗಳ ಮಾರುಕಟ್ಟೆಗಿಂತ ದೊಡ್ಡದು ಅನ್ನೋದು ಗುಟ್ಟೇನಲ್ಲ.
ಆದರೆ ರಿಯಾಲಿಟಿ ಏನೆಂದರೆ ರಜನಿಕಾಂತ್ ಅವರಿಗಿಂತ ತಾನು ದೊಡ್ಡ ಸ್ಟಾರ್ ಎಂದು ತೋರಿಸಿಕೊಳ್ಳೋಕೆ ವಿಜಯ್ ಹಾಗೂ ವಿಜಯ್ ಅವರ ಫ್ಯಾನ್ಸ್ ಮಾಡಿದ ಹುಚ್ಚಾಟ ಇದು ಎನ್ನಲಾಗುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ, ವಾದ ವಿವಾದಗಳು ನಡೆಯುತ್ತಿವೆ.



