ಬಾಲಿವುಡ್ ಸೀನಿಯರ್ ಆಕ್ಟರ್ ಧರ್ಮೇಂದ್ರ. ಅವರ ವಯಸ್ಸೀಗ 89 ವರ್ಷ. ಅವರ ಪತ್ನಿ ಹೇಮಮಾಲಿನಿಗೆ 77 ವರ್ಷ. ಹೇಮಮಾಲಿನಿ ಒಂದು ಕಾಲದ ಡ್ರೀಂ ಗರ್ಲ್. ಧರ್ಮೇಂದ್ರ ಸೂಪರ್ ಸ್ಟಾರ್. ಇವರಿಬ್ಬರೂ ಮದುವೆಯಾದಾಗ ಇಬ್ಬರ ಮಧ್ಯೆ 11 ವರ್ಷಗಳ ಗ್ಯಾಪ್ ಇತ್ತು. ಧರ್ಮೇಂದ್ರ ಅವರ ಹಿರಿಯ ಮಗ ಸನ್ನಿ ಡಿಯೋಲ್‌ಗೆ ಈಗ 68 ವರ್ಷ. ಹೇಮಮಾಲಿನಿಗಿಂತ 9 ವರ್ಷ ಚಿಕ್ಕವರಷ್ಟೇ. ಇದೆಲ್ಲ ಹೇಗೆ ಸಾಧ್ಯ ಎಂದರೆ.. ಧರ್ಮೇಂದ್ರ ಅವರಿಗೆ ಮೊದಲೇ ಮದುವೆಯಾಗಿತ್ತು. ಹೆಂಡತಿ ಇದ್ದರು. ಈಗಲೂ ಇದ್ದಾರೆ. ನಾಲ್ವರು ಮಕ್ಕಳಿದ್ದರು. ಹೀಗಿರುವಾಗಲೇ ಪ್ರೀತಿಗೆ ಬಿದ್ದ ಧರ್ಮೇಂದ್ರ ಮತ್ತು ಹೇಮಮಾಲಿನಿ 2ನೇ ಮದುವೆಯಾಗಲೂ ಕಾನೂನನ್ನೇ ಯಾಮಾರಿಸಿದ್ದರು. ಧರ್ಮವನ್ನೇ ಬಿಟ್ಟು ಮತಾಂತರವಾಗಿದ್ದರು. ಕಾರಣ.. ಸಿಂಪಲ್. ಹಿಂದೂ ಆಗಿಯೇ ಉಳಿದಿದ್ದರೆ.. 2ನೇ ಮದುವೆಗೆ ಅವಕಾಶ ಇಲ್ಲ. ಆದರೆ.. ಮುಸ್ಲಿಂ ಆದರೆ..
ಧರ್ಮೇಂದ್ರ ಅವರಿಗೆ ಒಟ್ಟು 6 ಮಕ್ಕಳು. ಆದರೆ. ಧರ್ಮೇಂದ್ರ ಮತ್ತು ಹೇಮಮಾಲಿನಿಗೆ ಇಬ್ಬರು ಮಾತ್ರವೇ ಮಕ್ಕಳು. ಉಳಿದ ನಾಲ್ವರು ಮೊದಲನೇ ಪತ್ನಿ ಪ್ರಕಾಶ್ ಕೌರ್ ಅವರ ಮಕ್ಕಳು. ಅವರೇ ಸನ್ನಿ ಡಿಯೋಲ್.. ಬಾಬ್ಬಿ ಡಿಯೋಲ್.. ಅಜೀತಾ..ವಿಜೇತಾ..ಇನ್ನು ಇಶಾ ಡಿಯೋಲ್ ಮತ್ತು ಅಹನಾ ಡಿಯೋಲ್ ಇಬ್ಬರೂ ಹೇಮಮಾಲಿನಿ ಮಕ್ಕಳು. ವಿಚಿತ್ರವೇನು ಗೊತ್ತೇ.. ಪ್ರಕಾಶ್ ಕೌರ್ ಅವರಿಗೆ ಧರ್ಮೇಂದ್ರ ಡಿವೋರ್ಸ್ ನೀಡದೇ ಮದುವೆಯಾದರು. ಕಾರಣ ಇಷ್ಟೇ, ಡಿವೋರ್ಸ್ ಕೊಡುವುದಕ್ಕೆ ಪ್ರಕಾಶ್ ಕೌರ್ ಒಪ್ಪಿರಲಿಲ್ಲ.
ಧರ್ಮೇಂದ್ರ ಅವರ ತಾಯಿಯೂ ಸೊಸೆಯ ಪರವೇ ನಿಂತರು. ಡಿವೋರ್ಸ್ ಪಡೆಯುವುದಕ್ಕೆ ಕೋರ್ಟಿಗೆ ಹೋದರೆ ಕಷ್ಟ ಎಂದು ಗೊತ್ತಾಗುತ್ತಿದ್ದಂತೆಯೇ ಧರ್ಮೇಂದ್ರ ಧರ್ಮವನ್ನೇ ಬಿಟ್ಟರು. ಧರ್ಮೇಂದ್ರ ಜಾಟ್ ಸಮುದಾಯದವರು. ಈ ಸಮುದಾಯ ಸಿಖ್, ಹಿಂದೂ ಮತ್ತು ಮುಸ್ಲಿಂ.. ಮೂರರಲ್ಲಿಯೂ ಇದೆ. ಸಿಖ್ ಧರ್ಮೀಯರಿಗೂ ಹಿಂದೂ ಧರ್ಮದ ಕಾನೂನು ಅನ್ವಯವಾಗುತ್ತವೆ. ಹೀಗಾಗಿ.. ಜಾಟ್ ಆಗಿದ್ದ ಧರ್ಮೇಂದ್ರ ಮುಸ್ಲಿಂ ಆಗಿ ಕನ್ವರ್ಟ್ ಆದರು. ಹೇಮಮಾಲಿನಿ ಕೂಡಾ ಮುಸ್ಲಿಂ ಆಗಿ ಮತಾಂತರ ಆದರು.
ಈ ಕುರಿತು ಆಗ ಅಂದರೆ 1980ರಲ್ಲಿ ದೊಡ್ಡ ಚರ್ಚೆಯೇನೂ ಆಗಲಿಲ್ಲ. ಆದರೆ.. ರಾಜಕೀಯಕ್ಕೆ ಬಂದಾಗ ಇದು ಮತ್ತೆ ಚರ್ಚೆಯಾಯಿತು. ಧರ್ಮೇಂದ್ರ ಅವರು ದಿಲ್ವಾರ್ ಖಾನ್ ಖೆವಾಲ್ ಕ್ರಿಶ್ನ್ ಎಂದು ಹೆಸರಿಟ್ಟುಕೊಂಡು ಮುಸ್ಲಿಂ ಆಗಿದ್ದರು. ಹೇಮಾಮಾಲಿನಿ ಹೆಸರು ಆಯೇಷಾ ಆಗಿ ಚೇಂಜ್ ಆಗಿತ್ತು. ಅವರಿಬ್ಬರೂ 1979ರಲ್ಲಿ ಮಸೀದಿಯೊಂದರಲ್ಲಿ ನಿಖಾ ಆದರು. ಕೊನೆಗೆ ಇದನ್ನು ಸರಿಪಡಿಸಲು ಸಾಧ್ಯ ಇಲ್ಲ ಎಂದಾದಾಗ ಮೊದಲ ಪತ್ನಿ ಪ್ರಕಾಶ್ ಕೌರ್ ಅವರೇ ಗಂಡನಿಂದ ದೂರ ಉಳಿದರು. ಮಕ್ಕಳನ್ನು ಧರ್ಮೇಂದ್ರ ಸುಪರ್ದಿಗೆ ಬಿಡಲು ಆತನ ತಂದೆ ತಾಯಿಯೇ ಒಪ್ಪಲಿಲ್ಲ. ಅವರು ಸೊಸೆಯ ಬೆನ್ನಿಗೆ ಬಲವಾಗಿ ನಿಂತರು.
ಇತ್ತ ಧರ್ಮೇಂದ್ರ, ಹೇಮಮಾಲಿನಿಗೆ ಇಬ್ಬರು ಮಕ್ಕಳಾದರು. ಕೊನೆಗೆ ಇದು ಮತ್ತೆ ಚರ್ಚೆಗೆ ಬಂದಿದ್ದು ಧರ್ಮೇಂದ್ರ ರಾಜಕೀಯಕ್ಕೆ ಬಂದಾಗ. ಅದೆಲ್ಲವೂ ಸುಳ್ಳು ಎಂದು ವಾದಿಸಿದ ಧರ್ಮೇಂದ್ರ ಮತ್ತು ಹೇಮಮಾಲಿನಿ.. ತಾವು ಈಗಲೂ ಹಿಂದೂ. ಆರ್ಯ ಸಮಾಜದ ನೀತಿ ನಿಯಮ ಪಾಲಿಸುತ್ತಿದ್ದೇವೆ ಎಂದು ಹೇಳಿಕೊಂಡರು. ಆದರೆ.. ಒಬ್ಬ ಪತ್ನಿ ಇರುವಾಗಲೇ ಇನ್ನೊಂದು ಮದುವೆಯಾಗುವುದು ಹಿಂದೂ ಧಾರ್ಮಿಕ ಕಾನೂನುಗಳ ಪ್ರಕಾರ ಅಪರಾಧ ಅಲ್ಲವೇ ಎಂಬ ಪ್ರಶ್ನೆಗೆ ಇಬ್ಬರೂ ಉತ್ತರ ಕೊಡಲಿಲ್ಲ.



