ಸದ್ಯಕ್ಕೆ ಇಡೀ ರಾಜ್ಯದ ತುಂಬೆಲ್ಲ ಸದ್ದು ಮಾಡ್ತಿರೋದು ಧರ್ಮಸ್ಥಳ ಫೈಲ್ಸ್, ಧರ್ಮಸ್ಥಳ ಡೈರಿ.. ನೇತ್ರಾವತಿ ತಲೆಬುರುಡೆ ರಹಸ್ಯ.. ಎಂಬ ವಿಚಾರಗಳು. ಇನ್ ಡೈರೆಕ್ಟ್ ಆಗಿ ಧರ್ಮಸ್ಥಳ, ಮಂಜುನಾಥ ಸ್ವಾಮಿ, ಅಣ್ಣಪ್ಪ ದೈವದ ಹೆಸರು ಹೇಳುತ್ತಿರುವವರು ಕ್ಷೇತ್ರದ ಬಗ್ಗೆ ಅಪಪ್ರಚಾರವನ್ನೇನೂ ನಿಲ್ಲಿಸಿಲ್ಲ. ಕೂದಲ ಎಳೆ ಸೀಳಿದಂತೆ ಮಾತನಾಡುತ್ತಿರುವವರು.. ಉದ್ದೇಶವನ್ನಂತೂ ಬಹಿರಂಗ ಮಾಡಿದ್ದಾರೆ. ಈ ನಡುವೆಯೇ ಧರ್ಮಸ್ಥಳದ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಮತ್ತು ಅವರ ಕುಟುಂಬದ ವಿರುದ್ಧ ಅವಹೇಳನಕಾರಿ ಹೇಳಿಕೆ ಹಾಗೂ ವರದಿ ಮಾಡದಂತೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ Gag Order ಹೊರಡಿಸಿದೆ.
Gag Order ಪ್ರಕಾರ ವಾಟ್ಸ್ ಆ್ಯಪ್, ಫೇಸ್ ಬುಕ್, ಇನ್ಸ್ಟಾಗ್ರಾಮ್, ಯೂ–ಟ್ಯೂಬ್, ಟಿ.ವಿ.ಚಾನೆಲ್ ಹಾಗೂ ಇತರೆ ಯಾವುದೇ ರೀತಿಯ ಮಾಧ್ಯಮ ಪ್ರಕಾರಗಳಲ್ಲಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ, ಅವಹೇಳನಕಾರಿ ವರದಿ ಮಾಡುವಂತಿಲ್ಲ ಅಥವಾ ಮಾತನಾಡುವಂತಿಲ್ಲ. ಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅನೇಕ ಸೋಷಿಯಲ್ ಮೀಡಿಯಾಗಳಲ್ಲಿ ಅಪಪ್ರಚಾರ ಮಾಡಿರುವ, 4,140 ಯೂಟ್ಯೂಬ್ ವಿಡಿಯೋಗಳು, 3,584 ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳು, 932 ಫೇಸ್‌ಬುಕ್ ಪೋಸ್ಟ್‌ಗಳು ಮತ್ತು 108 ಸುದ್ದಿ ಲೇಖನಗಳು ಸೇರಿದಂತೆ ಒಟ್ಟು 8,842 ಲಿಂಕ್‌ಗಳನ್ನು ಡಿಲೀಟ್ ಮಾಡಬೇಕು.
Gag Order ಎಂದರೇನು..?
ಗ್ಯಾಗ್ ಆರ್ಡರ್ ಎಂದರೆ, ನ್ಯಾಯಾಲಯವು ಕೆಲವು ವ್ಯಕ್ತಿಗಳಿಗೆ (ವಕೀಲರು, ಸಾಕ್ಷಿಗಳು, ಅಥವಾ ಪ್ರಕರಣದ ಇತರ ಪಕ್ಷಗಳು) ಪ್ರಕರಣದ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದನ್ನು ಅಥವಾ ಮಾಹಿತಿಯನ್ನು ಹಂಚಿಕೊಳ್ಳುವವರ ವಿರುದ್ಧ ಜಾರಿಯಾಗುವ ಕಾನೂನು ಕ್ರಮ. ಅಂದರೆ ಪ್ರಕರಣದ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವಂತಿಲ್ಲ. ಇದನ್ನು ಸಾಮಾನ್ಯವಾಗಿ ಪ್ರಕರಣದ ನ್ಯಾಯಯುತ ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಅಥವಾ ಗೌಪ್ಯತೆಯನ್ನು ಕಾಪಾಡಲು ನೀಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಆ್ಯಪ್, ಫೇಸ್ ಬುಕ್, ಇನ್ಸ್ಟಾಗ್ರಾಮ್, ಯೂ–ಟ್ಯೂಬ್ ಹಾಗೂ ದೃಶ್ಯ ಮಾಧ್ಯಮ ಸೇರಿದಂತೆ ಮತ್ತಿತ್ತರ ಮಾಧ್ಯಮಗಳ ಮೂಲಕ ನೀಡಲಾಗುತ್ತಿರುವ ಅವಹೇಳನಕಾರಿ ಹೇಳಿಕೆ ಮತ್ತು ಅಪಪ್ರಚಾರಕ್ಕೆ ಕಡಿವಾಣ ಹಾಕಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ತೇಜೋವಧೆ ಮಾಡುವುದನ್ನು ತಡೆಯಲು ಈ ಆದೇಶ ಬಹಳ ಪ್ರಮುಖವಾಗಿದೆ.
ಕೋರ್ಟಿಗೆ ಮೇಲ್ಮನವಿ :
ಇನ್ನು ಈ Gag Order ಪ್ರಶ್ನೆ ಮಾಡಿ ಕೆಲವು ಯೂಟ್ಯೂಬರ್ಸ್ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ವೀರೇಂದ್ರ ಹೆಗ್ಗಡೆ, ಧರ್ಮಸ್ಥಳದ ಪರ ನಿಂತ ಲೀಡರ್ಸ್
ಸ್ಪೀಕರ್ ಯುಟಿ ಖಾದರ್, ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್ ಅಶೋಕ್, ಶಾಸಕರಾದ ಸಿಟಿ ರವಿ ಕೆಲವು ಕಾಂಗ್ರೆಸ್ ನಾಯಕರು ಬಹಿರಂಗವಾಗಿ ಧರ್ಮಸ್ಥಳದ ಪರ ನಿಂತಿದ್ಧಾರೆ. ಆದರೆ..ತನಿಖೆಯನ್ನು ವಿರೋಧಿಸಿಲ್ಲ. ಕ್ಷೇತ್ರಕ್ಕೆ ಅಪಚಾರ ಮಾಡಬೇಡಿ ಎಂದಿದ್ದಾರೆ. ಪ್ರಕರಣದ ನೆಪದಲ್ಲಿ ಕ್ಷೇತ್ರದ ನಂಬಿಕೆಗೆ ಘಾಸಿಯಾಗುವುದು ಬೇಡ ಎಂದಿದ್ದಾರೆ.



