ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಜೀವನವನ್ನೇ ಸಿನಿಮಾ ಮಾಡೋಕೆ ಹೊರಟಿದ್ದಾರೆ ಲೀಡರ್ ರಾಮಯ್ಯ (Leader Siddaramaiah) ಟೀಮಿನವರು. ಹುಟ್ಟುಹಬ್ಬದ ದಿನವಾದರೂ ಚಿತ್ರದ ಮುಹೂರ್ತವೋ.. (Muhurtha) ಮತ್ತೊಂದೋ.. ಏನಾದರೊಂದು ಸಂಚಲನ ಸೃಷ್ಟಿಯಾಗಬೇಕಿತ್ತು. ಅದಾಗಿಲ್ಲ. ಈಗಲೂ.. ಅದನ್ನೇ ಹೇಳಲಾಗುತ್ತಿದೆ. ಸಿ.ಎಂ ಸಿದ್ಧರಾಮಯ್ಯ ಬಯೋಪಿಕ್ಗೆ ಕಿಕ್ಸ್ಟಾರ್ಟ್ ಸಿಕ್ಕಿದ್ದು, ಸಿದ್ದರಾಮಯ್ಯ (CM Siddaramaiah) ಅವರ ಜೀವನಾಧಾರಿತ ಚಿತ್ರದ ಕಥೆಯನ್ನು ಕಳೆದ ಏಳು ತಿಂಗಳಿನಿಂದ ಸಿದ್ದಪಡಿಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಯೋಪಿಕ್ಗೆ ‘ಲೀಡರ್ ರಾಮಯ್ಯ’ (Leader Siddaramaiah) ಎಂದು ಟೈಟಲ್ ಇಡಲಾಗಿದೆ. ಸಿದ್ಧರಾಮಯ್ಯ ರೋಲ್ನಲ್ಲಿ ವಿಜಯ್ ಸೇತುಪತಿ (Vijay Sethupathi) ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಯಂಗ್ ಅಂದ್ರೆ ಯುವಕ ಸಿದ್ದು ಪಾತ್ರಧಾರಿಯಾಗಿ ಯಾರಿರ್ತಾರೆ ಎಂಬ ಪ್ರಶ್ನೆಗೆ ನಿರೂಪ್ ಭಂಡಾರಿ (Niroop Bhandari) ಹೆಸರು ಕೇಳಿ ಬಂದಿದೆ. ಯೌವನದ ಪಾತ್ರದಲ್ಲಿ ನಿರೂಪ್, ಸಿದ್ದರಾಮಯ್ಯ ಲಾಯರ್ ಆಗಿದ್ದ ದಿನಗಳ ಪಾತ್ರದಲ್ಲಿ ವಿಜಯ್ ಸೇತುಪತಿ (Vijay Sethupathi) ನಟಿಸಲಿದ್ದಾರೆ ಎನ್ನುವುದು ಸದ್ಯಕ್ಕಿರುವ ಮಾಹಿತಿ. ಈ ಸಿನಿಮಾ ಎರಡು ಭಾಗದಲ್ಲಿ ಮೂಡಿ ಬರಲಿದ್ದು, ಮೊದಲ ಭಾಗದಲ್ಲಿ ನಿರೂಪ್ ಭಂಡಾರಿ (Niroop Bhandari) ನಾಯಕನಾಗಿ ನಟಿಸಿದರೆ, ಎರಡನೇ ಭಾಗದಲ್ಲಿ ಸಿದ್ದರಾಮಯ್ಯನವರ ಪಾತ್ರದಲ್ಲಿ ತಮಿಳಿನ ಹೆಸರಾಂತ ನಟ ವಿಜಯ್ ಸೇತುಪತಿ (Vijay Sethupathi) ಕಾಣಿಸಿಕೊಳ್ಳಲಿದ್ದಾರಂತೆ.
ಸತ್ಯ ರತ್ನಂ ನಿರ್ದೇಶನದಲ್ಲಿ ಈ ಸಿನಿಮಾದಲ್ಲಿ, ನಿರೂಪ್ ಭಂಡಾರಿ (Niroop Bhandari) ಅವರನ್ನು ಯುವ ಸಿದ್ದು ಪಾತ್ರಕ್ಕೆ ಕಾಂಟ್ಯಾಕ್ಟ್ ಮಾಡಲಾಗಿದೆಯಂತೆ. ಇನ್ನೂ ಇಬ್ಬರು ನಟರ ಹೆಸರು ಚಾಲ್ತಿಯಲ್ಲಿದ್ದು, ಚಿತ್ರತಂಡ ಅವರ ಹೆಸರನ್ನು ಖಚಿತ ಪಡಿಸಿಲ್ಲ. ಕ್ಷೇತ್ರಪತಿ ನವೀನ್ ಶಂಕರ್ ಹೆಸರೂ ಕೇಳಿ ಬರ್ತಿದೆ. ಚಿತ್ರೀಕರಣವನ್ನು ಪ್ರಾರಂಭಿಸಲು ನಿರ್ದೇಶಕರು ಸಿದ್ಧತೆಯಲ್ಲಿದ್ದಾರೆ. ಚಿತ್ರತಂಡ ತಮಿಳು ನಟ ವಿಜಯ್ ಸೇತುಪತಿ (Vijay Sethupathi) ಕಾಲ್ ಶೀಟ್ಗಾಗಿ ಕಾಯುತ್ತಿದೆ ಎನ್ನಲಾಗಿದೆ.
ಗಂಗಾವತಿ ಹಯಾತ್ ಪೀರ್ ಸಾಬ್ ಅವರ ನೇತೃತ್ವದ ಎಮ್ಎಸ್ ಕ್ರಿಯೇಷನ್ಸ್ ಬ್ಯಾನರ್ ಅಡಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಹೈ ಬಜೆಟ್ನಲ್ಲಿ 50 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.
ಎಲ್ಲ ಓಕೆ, ಸಿದ್ದರಾಮಯ್ಯನವರ ಬಯೋಪಿಕ್`ನ್ನು ನಿಜಕ್ಕೂ ಮಾಡ್ತಾರಾ..? ನಿಜಕ್ಕೂ ಸಿನಿಮಾ ಆಗಿ ಬರುತ್ತಾ..? ಏಕೆಂದರೆ ಕಳೆದ ಏಳೆಂಟು ತಿಂಗಳಿಂದ ಲೀಡರ್ ರಾಮಯ್ಯ ಸಿನಿಮಾ ತಂಡ ಕಥೆ ಹೇಳುತ್ತಿದೆಯೇ.. ಹೊರತು ಕೆಲಸ ಶುರು ಮಾಡುತ್ತಿಲ್ಲ. ಈಗಲೂ ಅಷ್ಟೆ, ಮಾತನಾಡಿದೆಯೇ ಹೊರತು.. ಕೆಲಸವಾದಂತೆ ಕಾಣುತ್ತಿಲ್ಲ. ಸಿನಿಮಾ ಬರುತ್ತಾ..? ಬರಲ್ವಾ?



