ರಾಜಕೀಯ ಎಂಟ್ರಿ ಕೊಟ್ಟರೆ ಏನ್ ಬೇಕಾದ್ರೂ ಆಗಬಹುದು.. ಕುಟುಂಬಗಳು ದೂರವಾಗಬಹುದು. ಸಂಬಂಧಗಳು ಕೆಟ್ಟು ಹೋಗಬಹುದು. ತಂದೆ ತಾಯಿ ಮಕ್ಕಳನ್ನೂ ದೂರ ಮಾಡಬಲ್ಲ ತಾಕತ್ತು ರಾಜಕೀಯಕ್ಕೆ ಇದೆ. ಬಿಹಾರದಲ್ಲಿ ಮೊನ್ನೆ ನಡೆದ ಎಲೆಕ್ಷನ್ ರಿಸಲ್ಟ್ ಪರಿಣಾಮ ಏನಾಗಿದೆ ಎಂದರೆ.. ಅಪ್ಪ, ಮಕ್ಕಳು ದೂರವಾಗಿದ್ದಾರೆ. ಛಿದ್ರ ಛಿದ್ರವಾಗಿದ್ದಾರೆ. ಲಾಲೂ ಪ್ರಸಾದ್ ಯಾದವ್ʻಗೆ ತನ್ನದೊಂದು ಕಿಡ್ನಿಯನ್ನೇ ದಾನ ಮಾಡಿದ್ದ.. ಅಪ್ಪನನ್ನು ಉಳಿಸಿಕೊಂಡಿದ್ದ ಮಗಳೂ ಈಗ ಜೊತೆಯಲ್ಲಿ ಇಲ್ಲ. ತಂಗಿಗೆ ಚಪ್ಪಲಿ ಎಸೆದು ಆಚೆ ಹಾಕಿದವನು ತೇಜಸ್ವಿ ಯಾದವ್. ಅಂದಹಾಗೆ ಇವರೆಲ್ಲರೂ ದೂರವಾಗುವುದಕ್ಕೆ ಕಾರಣ ಇಬ್ಬರಂತೆ. ಒಬ್ಬನ ಹೆಸರು ರಮೀಜ್ ಖಾನ್. ಇನ್ನೊಬ್ಬನ ಹೆಸರು ಸಂಜಯ್ ಯಾದವ್. ಇವರ ಕಥೆ ಅಚ್ಚರಿ ಹುಟ್ಟಿಸುತ್ತದೆ. ಏಕೆಂದರೆ ಇವರು ಯಾರೂ ರಕ್ತ ಸಂಬಂಧಿಗಳಲ್ಲ. ಆದರೆ.. ಫ್ಯಾಮಿಲಿ ವಿಷಯಕ್ಕೆ ಹೇಗೆ ಬಂದರು..?
ಅಂದಹಾಗೆ ಈಗ ಲಾಲೂ ಮನೆಯಲ್ಲಿರುವುದು ಲಾಲೂ, ಆತನ ಪತ್ನಿ ರಾಬ್ಡಿ ದೇವಿ, ತೇಜಸ್ವಿ ಯಾದವ್ ಮತ್ತವನ ಹೆಂಡತಿ ಮಕ್ಕಳು ಮಾತ್ರ. ಇನ್ನೊಬ್ಬ ಮಗ ತೇಜ್ ಪ್ರತಾಪ್ ಯಾದವ್ ಎಲೆಕ್ಷನ್ ಶುರುವಾಗುವ ಮೊದಲೇ ಮನೆ ಬಿಟ್ಟು ದೂರ ಹೋಗಿದ್ದ. ತನ್ನದೇ ಹೊಸ ಪಕ್ಷ ಸ್ಥಾಪನೆ ಮಾಡಿ ಎಲೆಕ್ಷನ್ನಿಗೆ ನಿಂತಿದ್ದ ತೇಜ್ ಪ್ರತಾಪ್ ಯಾದವ್, 3ನೇ ಸ್ಥಾನ ಪಡೆದು ಸೋತಿದ್ದಾನೆ.
ಈಗ ದೂರವಾಗಿರೋದು ಹೆಣ್ಣು ಮಕ್ಕಳು. ಲಾಲೂಗೆ ಒಟ್ಟು 9 ಮಕ್ಕಳು. ಅವರಲ್ಲಿ ಎರಡು ಗಂಡು. ಉಳಿದವು ಹೆಣ್ಣು. ಮಿಸಾ ಭಾರ್ತಿ, ರೋಹಿಣಿ ಆಚಾರ್ಯ (ಕಿಡ್ನಿ ಕೊಟ್ಟಿದ್ದ ಮಗಳು), ಚಂದಾ ಸಿಂಗ್, ರಾಗಿಣಿ ಯಾದವ್, ಹೇಮಾ ಯಾದವ್, ಅನುಷ್ಕಾ ಧನು ರಾವ್, ರಾಜ ಲಕ್ಷ್ಮಿ ಯಾದವ್ ಮತ್ತು ತೇಜ್ ಪ್ರತಾಪ್ ಯಾದವ್ ಹಾಗೂ ತೇಜಸ್ವಿ ಯಾದವ್.
ಈಗ ಮನೆಯಿಂದ ಆಚೆ ದಬ್ಬಿಸಿಕೊಂಡವಳು ಎರಡನೇ ಮಗಳು ರೋಹಿಣಿ. ಈಕೆ ಎಂಬಿಬಿಎಸ್ ಓದಿದ್ದಾರೆ. ಸಿಂಗಪುರದಲ್ಲಿರೋ ರೋಹಿಣಿಯ ಹೆಸರು ದೇಶಕ್ಕೇ ಗೊತ್ತಾಗಿದ್ದು ಅಪ್ಪ ಲಾಲೂ ಪ್ರಸಾದ್ ಯಾದವ್ʻಗೆ ಕಿಡ್ನಿ ದಾನ ಮಾಡೋದ್ರ ಮೂಲಕ. ಜನ್ಮ ಕೊಟ್ಟಿರೋ ಅಪ್ಪನಿಗೆ ಅಷ್ಟೂ ಮಾಡೋಕ್ ಆಗಲ್ವಾ ಎಂದಿದ್ದರು ರೋಹಿಣಿ. ಆಕೆಯನ್ನ ಚಪ್ಪಲಿಯಲ್ಲಿ ಹೊಡೆದು ಮನೆಯಿಂದ ಹೊರಹಾಕಿದ್ದಾರಂತೆ ತಮ್ಮ ತೇಜಸ್ವಿ ಯಾದವ್.
ಯಾವಾಗ ರೋಹಿಣಿಯನ್ನ ಮನೆಯಿಂದ ಆಚೆ ಹಾಕಿದ್ರೋ.. ಉಳಿದ ಹೆಣ್ಣು ಮಕ್ಕಳೂ ಲಗ್ಗೇಜ್ ತಗೊಂಡು ಮನೆಯಿಂದ ಹೊರಬಂದಿದ್ದಾರೆ. ತೇಜಸ್ವಿ ಯಾದವ್ ಕುತ್ತಿಗೆ ಹಿಡಿದು ಆಚೆ ಹಾಕಿದ ಅಂತ ಅವರು ಹೇಳ್ಕೋತಿಲ್ಲ, ಅಷ್ಟೇ.
ಮಿಸಾ ಭಾರತಿ ಮೊದಲನೇ ಮಗಳು. ಈಕೆಗೆ ಮಿಸಾ ಅಂತಾ ಹೆಸರಿಟ್ಟಿರೋದ್ರ ಹಿಂದೆ ಒಂದ್ ಕಥೆ ಇದೆ. ಮಿಸಾ ಅಂದ್ರೆ MISA ಅಂದ್ರೆ ಮಿಸ್ ಯೂಸ್ ಆಫ್ ಇಂಟರ್ನಲ್ ಸೆಕ್ಯುರಿಟಿ ಆಕ್ಟ್ ಅಂತಾ. ಎಮರ್ಜೆನ್ಸಿ ಟೈಂನಲ್ಲಿ ಲಾಲೂ ಜೈಲು ಸೇರಿದಾಗ ಹುಟ್ಟಿದ ಮಗಳಿಗೆ ಆ ಹೆಸರಿಟ್ಟಿದ್ದ ಲಾಲೂ.
ಚಂದಾ ಸಿಂಗ್ ಅನ್ನೋ ಮಗಳು ಪೈಲಟ್ ಒಬ್ಬರ ಮದುವೆ ಆಗಿದ್ದಾರೆ. ಆಕೆ ರಾಜಕೀಯದಿಂದ ದೂರ ಇದ್ದಾರೆ. 4ನೇ ಮಗಳು ರಾಗಿಣಿ ಯಾದವ್, ಸಮಾಜವಾದಿ ಪಕ್ಷದ ರಾಜಕಾರಣಿಯನ್ನ ಮದುವೆ ಆಗಿದ್ದಾರೆ. 5ನೇ ಮಗಳು ಹೇಮಾ ಯಾದವ್. ಬಿಟೆಕ್ ಮಾಡಿದ್ಧಾರೆ. ಈಕೆ ಕೂಡಾ ಪಾಲಿಟಿಕ್ಸಿಂದ ದೂರ ಇದ್ಧಾರೆ. 6ನೇ ಮಗಳು ಅನುಷ್ಕಾ ಧನು ರಾವ್. ಹರಿಯಾಣದ ರಾಜಕಾರಣಿ ಜೊತೆ ಮದುವೆ ಆಗಿದೆ. ರಾಜ ಲಕ್ಷ್ಮಿ ಅನ್ನೋ ಚಿಕ್ಕ ಮಗಳನ್ನ ಕೂಡಾ ರಾಜಕಾರಣಿಯೊಬ್ಬರಿಗೆ ಮದುವೆ ಮಾಡಿಕೊಟ್ಟಿದ್ದಾರಂತೆ.
ಇಬ್ಬರು ಗಂಡು ಮಕ್ಕಳು. ತೇಜ್ ಪ್ರತಾಪ್ ಯಾದವ್. ಈತ ಮಹಿಳೆಯೊಬ್ಬರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಅಂತಾ ಇವನನ್ನ ಪಕ್ಷದಿಂದ ಹಾಗೂ ಮನೆಯಿಂದ ಆಚೆ ಹಾಕಿರೋದು ಅಪ್ಪ ಲಾಲೂ ಪ್ರಸಾದ್ ಯಾದವ್.
ಚಿಕ್ಕ ಮಗ ತೇಜಸ್ವಿ ಯಾದವ್. ಈತನ ಕೈಗೆ ಪಕ್ಷದ ಸೂತ್ರ ಕೊಟ್ಟಿದ್ಧಾರೆ.
ಈ ತೇಜಸ್ವಿಯಾದವ್‌ನ ಆಪ್ತಮಿತ್ರರೇ ರಮೀಜ್ ಮತ್ತು ಸಂಜಯ್ ಯಾದವ್. ಲಾಲೂ ಕುಟುಂಬ ಛಿದ್ರ ಛಿದ್ರವಾಗೋಕೆ ಇವರಿಬ್ಬರೇ ಕಾರಣ ಅಂತೆ. ಅದರಲ್ಲೂ ರಮೀಜ್ ಅನ್ನೋವ್ನು ಕಾರಣ ಅನ್ನೊ ಮಾತಿದೆ.
ಈ ರಮೀಜ್ ಯಾರು ಅಂತಾ ನೋಡೋದಾದ್ರೆ.. ಒಂದ್ ಕಾಲದಲ್ಲಿ ತೇಜಸ್ವಿ ಜೊತೆ ಕ್ರಿಕೆಟ್ ಆಡ್ತಾ ಇದ್ದ ಹುಡುಗ. ಜಾರ್ಖಂಡ್ ಟೀಂನಲ್ಲಿ ಕ್ಯಾಪ್ಟನ್ ಕೂಡಾ ಆಗಿದ್ನಂತೆ. ಈತನ ಅಪ್ಪ ಒಬ್ಬ ಗೂಂಡಾ. ಗ್ಯಾಂಗ್ ಸ್ಟರ್. ಈ ರಮೀಜ್ ಮೇಲೂ ಕೇಸ್ ಇದಾವೆ. ಈತನ ಹೆಂಡತಿ ನಭಾ ಅನ್ನೋವ್ಳ ಮೇಲೂ ಕ್ರಿಮಿನಲ್ ಕೇಸ್ ಇದಾವೆ. ಕೊಲೆ, ಹಾಫ್ ಮರ್ಡರು ಸೇರಿ ಹತ್ತಾರು ಕ್ರಿಮಿನಲ್ ಕೇಸ್ ಎದುರಿಸ್ತಾ ಇರೋ ಈ ರಮೀಜ್, ಅಕ್ಕ, ತಮ್ಮನ ಮಧ್ಯೆ ಅದೇನ್ ಬೆಂಕಿ ಹಚ್ಚಿದ್ದಾನೋ.. ದೇವರಿಗೇ ಗೊತ್ತು.
ಅಂದಹಾಗೆ ಲಾಲೂ ಪ್ರಸಾದ್ ಯಾದವ್ ವಿರುದ್ಧ ಇರೋ ಇನ್ನೊಂದು ಕಂಪ್ಲೇಂಟ್ ಎಂದರೆ.. ತನಗೆ ತಿರುಗಿಬಿದ್ದವರ ಕುಟುಂಬಗಳನ್ನೇ ಛಿದ್ರ ಛಿದ್ರ ಮಾಡ್ತಿದ್ರು ಅನ್ನೋದು. ಗೂಂಡಾಗಿರಿ ಬಳಸಿ ಸಂಸಾರ ಒಡೀತಿದ್ರು ಅನ್ನೋದು. ಈಗ ಅವರ ಕುಟುಂಬವೇ ಛಿದ್ರ ಛಿದ್ರ ಆಗಿದೆ. ಅದನ್ನೆಲ್ಲ ಮಾಡಿರೋದು ಒಬ್ಬ ಗೂಂಡಾ.



